ಕೊರೊನಾ ಸೋಂಕಿಗೆ ನಿಮ್ಮಲ್ಲೇ ಇದೆ ಮದ್ದು..!

ದೇಶ ಹಾಗು ವಿಶ್ವದಲ್ಲಿ ಚರ್ಚೆ ಆಗ್ತಿರೋ ದೊಡ್ಡ ಸುದ್ದಿ ಎಂದರೆ ಕೋವಿಡ್ 19. ಕೊರೊನಾ ವೈರಾಣು ಮಾನವನ ದೇಹ ಹೊಕ್ಕಿ ಬರೋಬ್ಬರಿ ಒಂದೂವರೆ ವರ್ಷ ಆಗುತ್ತಾ ಬಂದಿದೆ. ಈ ಸೋಂಕನ್ನು ಎದುರಿಸಲು ವಿಜ್ಞಾನಿಗಳು ಸಾಕಷ್ಟು ಸರ್ಕಸ್ ಮಾಡ್ತಿದ್ದಾರೆ. ಈ ಸೋಂಕು ನಿವಾರಣೆಗೆ ದಿನಕ್ಕೆ ಒಂದೊಂದು ಚಿಕಿತ್ಸೆಯನ್ನು ಒಬ್ಬೊಬ್ಬರು ಹೇಳ್ತಾನೇ ಇರ್ತಾರೆ. ಆದ್ರೆ ಈ ರೋಗಕ್ಕೆ ಮದ್ದು ಮಾನವರಲ್ಲೇ ಇದೆ ಎನ್ನುವ ಚರ್ಚೆಗಳು ಶುರುವಾಗಿದೆ. ಈ ಮಾತಿಗೆ ಅಂಕಿ ಅಂಶಗಳು ಕೂಡ ಸಾಥ್ ನೀಡುತ್ತಿವೆ.

ಕೊರೊನಾ ಸೋಂಕಿಗೆ ಮಾನವರ ಹತ್ಯೆ ಶಕ್ತಿ ಇದೆಯಾ..?

ಕೊರೊನಾ ಸೋಂಕು ಒಂದು ಸಾಮಾನ್ಯ ಜ್ವರ ಅಷ್ಟೆ. ಈ ಸೋಂಕು ಮಾನವನ ಹತ್ಯೆ ಮಾಡುವಷ್ಟು ಶಕ್ತಿ ಇರುವುದಿಲ್ಲ ಎನ್ನುವುದು ಸರ್ಕಾರದ ಅಂಕಿ ಅಂಶಗಳು ಸಾರಿ ಹೇಳುತ್ತಿವೆ. ನೂರು ಜನರಿಗೆ ಕೊರೊನಾ ಸೋಂಕು ಬಂದಿದೆ ಎಂದರೆ ಅದರಲ್ಲಿ ಶೇಕಡ 90 ರಷ್ಟು ಜನರಿಗೆ ಆಸ್ಪತ್ರೆ ಸೇರಬೇಕಾದ ಅವಶ್ಯಕತೆಯೇ ಇರುವುದಿಲ್ಲ ಎನ್ನುವುದನ್ನು ವೈದ್ಯರೇ ತಿಳಿಸಿದ್ದಾರೆ. ಅಂದರೆ ಶೇಕಡ 10ರಷ್ಟು ಜನರಿಗೆ ಮಾತ್ರ ಆಸ್ಪತ್ರೆ ಸೇರಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಲ್ಲಿ ಶೇಕಡ 5 ರಿಂದ 8 ರಷ್ಟು ಜನರಿಗೆ ಆಕ್ಸಿಜನ್, ವೆಂಟಿಲೇಟರ್ ಅವಶ್ಯಕತೆ ಬೀಳುತ್ತದೆ ಎನ್ನುವುದು ಅಂಕಿ ಅಂಶಗಳ ಮಾಹಿತಿ.

ಶೇಕಡ 10 ರಷ್ಟು ಸೋಂಕಿತರಿಗೆ ಆಸ್ಪತ್ರೆ ಅವಶ್ಯಕತೆ ಯಾಕೆ..?

ಕೊರೊನಾ ಸೋಂಕಿತರಲ್ಲಿ ಶೇಕಡ 90 ರಷ್ಟು ಜನರು ಸಾಮಾನ್ಯವಾಗಿ ಜ್ವರಕ್ಕೆ ತೆಗೆದುಕೊಳ್ಳುವ ಔಷಧೋಪಾಚಾರ ಮಾಡಿಕೊಂಡರೆ ವಾಸಿಯಾಗುತ್ತದೆ. ಕೆಮ್ಮು, ಮೈಕೈ ನೋವು ಸೇರಿದಂತೆ ಯಾವುದೇ ಸಮಸ್ಯೆ ಎದುರಾದರೂ ಸಾಮಾನ್ಯ ಚಿಕಿತ್ಸೆ ಚೇತರಿಕೆ ಹಾದಿಯನ್ನು ತೋರಿಸುತ್ತದೆ. ಆದರೆ ಸೋಂಕು ಬರುತ್ತಿದ್ದ ಹಾಗೆ ಜನರು ವಿಪರೀತವಾಗಿ ಭಯಕ್ಕೆ ಬೀಳುತ್ತಾರೆ. ಆ ಭಯವೇ ಜನರನ್ನು ಮತ್ತಷ್ಟು ಸಾವಿನ ಸನಿಹಕ್ಕೆ ತಂದು ನಿಲ್ಲಿಸುತ್ತದೆ. ಇದಕ್ಕೆ ಸರಳ ಉದಾಹರಣೆ ಅಂದ್ರೆ, ಹಾವು ಕಚ್ಚುವುದು. ಒಮ್ಮೆ ಹಾವು ಕಚ್ಚಿದ ಕೂಡಲೇ ಯಾವುದೇ ವ್ಯಕ್ತಿಯು ಸಾಯುವುದಿಲ್ಲ. ಹಾವು ಕಚ್ಚಿದ ಕೂಡಲೇ ಭಯದಿಂದ ಹೃದಯಾಘಾತಕ್ಕೆ ಒಳಗಾಗಿ ಸಾವಿನ ಮನೆ ಸೇರುವುವರೇ ಹೆಚ್ಚು ಎನ್ನುವುದು ವೈದ್ಯಕೀಯ ಲೋಕದ ಮಾತು.

ಸಾವಿನ ಸಂಖ್ಯೆ ಹೆಚ್ಚಾಗಲೂ ಭಯವೇ ಕಾರಣವೇ..?

ಸೋಂಕಿತರಲ್ಲಿ ಶೇಕಡ 10 ರಷ್ಟು ಜನರು ಆಸ್ಪತ್ರೆ ಸೇರಿದರೂ ಧೈರ್ಯದಿಂದ ಚಿಕಿತ್ಸೆ ಪಡೆದಾಗ ಬದುಕಿ ಉಳಿಯುವ ಸಾಧ್ಯತೆಯೇ ಹೆಚ್ಚು. ಆದರೆ ಬಹುತೇಕ ಜನರು ಆಸ್ಪತ್ರೆ ಸೇರುತ್ತಿದ್ದ ಹಾಗೆ ಭೀತಿಗೆ ಒಳಗಾಗುತ್ತಾರೆ. ಆ ಭಯದಲ್ಲೇ ಸಾವು ಸಂಭವಿಸುತ್ತದೆ. ಕೊರೊನಾ ಸೋಂಕಿತರ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಇದೊಂದೇ ಕಾರಣದಿಂದ ಕೊರೊನಾ ಸೋಂಕು ಬಂದಿದ್ದ ವ್ಯಕ್ತಿ ಸಾವನ್ನಪ್ಪಿದರೆ ಕೊರೊನಾ ಸೋಂಕಿಗೆ ಸೇರ್ಪಡೆಯಾಗುತ್ತದೆ. ಬೇರೆ ಯಾವುದೇ ಕಾಯಿಲೆ ಬಂದು ಸಾವನ್ನಪ್ಪಿದಾಗ ವೈದ್ಯರು ಕಾರ್ಡಿಯಾಕ್ ಅರೆಸ್ಟ್ ಎಂದು ನಮೂದು ಮಾಡುತ್ತಾರೆ. ಆದರೆ ಕೊರೊನಾ ಸೋಂಕಿತ ಹೃದಯಾಘಾತದಿಂದ ಸಾವನ್ನಪ್ಪಿದರೂ ಅದು ಕೊರೊನಾ ಸೋಂಕಿಗೆ ಸೇರ್ಪಡೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಕೊರೊನಾ ಸೋಂಕು ಗೆಲ್ಲಲು ಯಾರು ಮಾದರಿ..?

ಕೊರೊನಾ ಸೋಂಕನ್ನು ವಯೋವೃದ್ಧರು ಗೆದ್ದಿದ್ದಾರೆ ಅನ್ನೋ ಮಾಹಿತಿಗಳು ಎಲ್ಲಾ ಕಡೆಯೂ ಬರುತ್ತೆ. 105 ವರ್ಷದ ಅಜ್ಜಿ, ಅಜ್ಜನೂ ಕೊರೊನಾ ಸೋಂಕನ್ನು ಗೆದ್ದು ಬದುಕಿ ಬರುತ್ತಾರೆ. 104 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಅವೆರ ಧರ್ಮ ಪತ್ನಿ ಚೆನ್ನಮ್ಮ, ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಸಾಕಷ್ಟು ಮಂದಿ ಹಿರಿಯರು ಕೊರೊನಾ ಸೋಂಕಿಗೆ ಸಡ್ಡು ಹೊಡೆದಿದ್ದಾರೆ. ಇವರೆಲ್ಲರೂ ಚಿಕಿತ್ಸೆಯನ್ನು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಪಡೆದಿದ್ದಾರೆ ಎನ್ನುವುದು ಸತ್ಯವಾದರೂ, ಅವರು ಸೋಂಕನ್ನು ಧೈರ್ಯದಿಂದ ಹೆದುರಿಸಿದ್ದಾರೆ ಎನ್ನುವುದೇ ಪ್ರಮುಖವಾಗುತ್ತದೆ. ನಾವು ಏನನ್ನಾದರೂ ಸಾಧಿಸುತ್ತೇವೆ ಎಂದರೆ ಹಠ ಬಿಡದೆ ಹೇಗೆ ಸಾಧಿಸುತ್ತೇವೋ ಅದೇ ರೀತಿ ಕೊರೊನಾ ಸೋಂಕು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಮೊಂಡುತನ ನಿಮ್ಮನ್ನು ಸೋಂಕಿನಿಂದ ಬಚಾವ್ ಮಾಡುತ್ತದೆ. ಶತಾಯುಷಿಗಳು ಕೊರೊನಾ ಸೋಂಕಿನಿಂದ ಹೊರಬರುವ ಧೈರ್ಯ ಮಾಡುತ್ತಾರೆ ಎನ್ನುವುದಾದರೆ ನಾವು ಅದನ್ನು ಅನುಸರಿಸುವುದಷ್ಟೇ ನಮ್ಮ ಮುಂದಿರುವ ಆಯ್ಕೆ.

Related Posts

Don't Miss it !