ಬೆಂಗಳೂರು ರೇಪ್.. ಬಾಂಗ್ಲಾ ವೈರಲ್.. ಅಸ್ಸಾಂ ಕೇಸ್..!

ಬೆಂಗಳೂರು ವಿಶ್ವಮಟ್ಟದಲ್ಲಿ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ನೀಚ ಕೃತ್ಯಗಳಿಂದಲೂ ಕುಖ್ಯಾತಿ ಪಡೆಯುತ್ತಲೇ ಇದೆ. ಬೆಂಗಳೂರಿನಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಕೇಸ್ ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸದ್ದು ಮಾಡಿದೆ. ದೃಶ್ಯ ನೋಡಿದ ಅಸ್ಸಾಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ದರು. ಅದೀಗ ಮತ್ತೆ ಬೆಂಗಳೂರು ಪೊಲೀಸರ ಹೆಗಲಿಗೆ ಬಂದು ಸುತ್ತಿಕೊಂಡಿದ್ದು, ನೀಚರೀಗ ಕಂಬಿ ಹಿಂದೆ ಸೇರಿದ್ದಾರೆ. ಆದ್ರೆ ಪ್ರಕರಣ ಕೈಗೆತ್ತಿಕೊಂಡ ಅಸ್ಸಾಂ ಪೊಲೀಸರ ನಿರ್ಧಾರ ಮನಮೆಚ್ಚುವಂತಿದೆ.

ಬೆಂಗಳೂರಲ್ಲಿ ನಡೆದಿದ್ದ ಘಟನೆ ಏನು..?

ಬೆಂಗಳೂರಲ್ಲಿ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಕಾಮಚೇಷ್ಟೆಯ ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಕಾಮುಕರ ವಿಕೃತಿ‌ ಮೆರೆದಿದ್ದ ದೃಶ್ಯಾವಳಿಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿದ್ದು ಯುವತಿಯ ತವರೂರು‌ ಬಾಂಗ್ಲಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಖತ್ ವೈರಲ್ ಆಗಿತ್ತು. ನಮ ರಾಜ್ಯದ ಪ್ರಕರಣವಲ್ಲ ಎಂದು ಅಸ್ಸಾಂ ಪೊಲೀಸರು ಸುಮ್ಮನಾಗಿದ್ದರೆ..! ಇಂದು ಆರೋಪಿಗಳ ಕೈಗೆ ಕೋಳ ಬೀಳುತ್ತಿರಲಿಲ್ಲ. ಆದ್ರೆ ಕೇಸ್ ದಾಖಲಿಸಿ ಯುವತಿ ಕುಟುಂಬ ಹುಡುಕಿದ ಪೊಲೀಸರು ಬೆಂಗಳೂರಿನ ಪೊಲೀಸರಿಗೆ ಮಾಹಿತಿ‌ ರವಾನಿಸಿದ್ರು.

ವೈರಲ್ ವಿಡಿಯೋದಲ್ಲಿ ಏನೇನಿದೆ..?

ವೈರಲ್ ವಿಡಿಯೋದಲ್ಲಿ ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಓರ್ವ ಯುವತಿ ಸಂತ್ರಸ್ತೆಯಾಗಿದ್ದಾಳೆ. ಓರ್ವ ಯುವತಿ ಹಾಗೂ ನಾಲ್ವರು ಯುವಕರು ಸೇರಿ ಮಾಡಿರುವ ದುಷ್ಕೃತ್ಯವಿದು. ಓರ್ವ ಯುವತಿಯನ್ನು ಬಾಯಿ ಮುಚ್ಚಿಕೊಂಡು ನಿರ್ವಸ್ತ್ರ ಮಾಡುವ ಯುವಕರು, ವಿಧವಿಧವಾಗಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ಕಿರುಚಾಡಲೂ ಅವಕಾಶ ಕೊಡದ ನೀಚರು, ಡಿಜೆ ಸೌಂಡ್ ಹಾಕಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಅಸ್ಸಾಂ ಪೊಲೀಸರು, ಯುವತಿ ಹಾಗೂ ಆರೋಪಿಗಳು ಬಾಂಗ್ಲಾ ಮೂಲದವರು ಅನ್ನೋದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರೋಪಿಗಳು ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ರವಾನಿಸಿದ್ರು.

ಅಖಾಡಕ್ಕಿಳಿದ ಬೆಂಗಳೂರು ಪೊಲೀಸ್ ಪಡೆ..!

ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಅಸ್ಸಾಂ ಪೊಲೀಸರು ಕೊಟ್ಟ ಮಾಹಿತಿ ಹಿಡಿದು ಆರೋಪಿಗಳ ಪತ್ತೆಗೆ ಮುಂದಾದ ರಾಮಮೂರ್ತಿ ನಗರ ಪೊಲೀಸರು ಅವಲಹಳ್ಳಿಯಲ್ಲಿ ಓರ್ವ ಯುವತಿ ಹಾಗೂ ನಾಲ್ವರು ಕಾಮಾಂಧರಿಗೆ ಕೋಳ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎನ್‌ಆರ್‌ಐ ಕಾಲೋನಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಅನ್ನೋ ಮಾಹಿತಿ ಇದೆ. ಆದ್ರೆ ಈ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಆರು ಜನರನ್ನು ಬಂಧಿಸಿದ್ದೇವೆ, ಹಣಕಾಸಿನ ವಿಚಾರದಲ್ಲಿ ಈ ರೀತಿ ದುಷ್ಕೃತ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ ಎಂದಿದ್ದಾರೆ.

ಹಣಕಾಸು ವಿಚಾರವೋ ವೇಶ್ಯಾವಾಟಿಕೆ ಅವ್ಯವಹಾರವೋ..?

ಹಣಕಾಸು ವಿಚಾರದಲ್ಲಿ ಮನಸ್ತಾಪ ಆಗಿದ್ರಿಂದ ಈ ರೀತಿ ಕೃತ್ಯ ಮಾಡಿದೆವು ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದರೆ ಬಾಂಗ್ಲಾ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಿಂದ ಯುವತಿಯರನ್ನು ಕರೆದು ತರುವ ದಲ್ಲಾಳಿಗಳು ವೇಶ್ಯಾವಾಟಿಕೆಗೆ ಒಪ್ಪದ ಯುವತಿಯರಿಗೆ ಈ ರೀತಿ‌ ಚಿತ್ರಹಿಂಸೆ ಕೊಡುತ್ತಾರೆ ಎನ್ನಲಾಗ್ತಿದೆ. ಈ ರೀತಿ ವೇಶ್ಯಾವಾಟಿಕೆ ನಡೆಸುವುದೇ ಶ್ರೀಮಂತರ ಮನೆಯ ಮಕ್ಕಳು ಅನ್ನೋದು ಜನಜನಿತ. ಈ ರೀತಿ ಸಿಕ್ಕಿಬಿದ್ದಾಗ ಹಣಕಾಸು ವಿಷಯ ಹೇಳಿದ್ರೆ ಮೂಲ ವ್ಯಕ್ತಿ ಬಂಧನದಿಂದ ಬಚಾವ್ ಆದಂತೆಯೇ ಸರಿ. ಈಗಾಗಲೇ ಇಬ್ಬರು ಆರೋಪಿಗಳು ಸ್ಥಳ ಮಹಜರು ವೇಳೆ ಹಲ್ಲೆಗೆ ಮುಂದಾದರು ಅನ್ನೋ ಕಾರಣಕ್ಕೆ ಗುಂಡು ಹೊಡೆಯಲಾಗಿದೆ. ನೀಚರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿಎಂ ಕೂಡ ಹೇಳಿದ್ದಾರೆ.‌ ಆದರೆ ಪ್ರಕರಣದ ದಿಕ್ಕು ಬದಲಾಗದಿದ್ದರೆ ಅಷ್ಟೇ ಸಾಕು.

ಮನೆ ಮಾಲೀಕರು ಹೇಳೋದು ಏನು..?

ಕಳೆದ 6 ತಿಂಗಳ ಹಿಂದೆ ಮನೆ ಬಾಡಿಗೆ ಕೊಡುವಂತೆ ಕೇಳಿಕೊಂಡು‌ ಬಂದಿದ್ದರು. ಗಂಡ ಹೆಂಡತಿ‌ ಹಾಗೂ ಹೆಂಡತಿ‌ ತಂಗಿ ಇರ್ತೀವಿ ಅಂತ ಹೇಳಿಕೊಂಡಿದ್ರು. ಹಾಗಾಗಿ ನಾವು ಮನೆಯನ್ನು ಬಾಡಿಗೆಗೆ ನೀಡಿದ್ದೆವು. ನಮಗೆ ಇದ್ಯಾವುದೇ ಗಲಾಟೆ ಬಗ್ಗೆ ಗೊತ್ತಿರಲಿಲ್ಲ. ಪೊಲೀಸ್ ಬಂದಾಗಲೇ ಈ ಬಗ್ಗೆ ಗೊತ್ತಾಗಿದ್ದು ಎಂದಿದ್ದಾರೆ. ಆದರೆ ಹೆಚ್ಚು ಬಾಡಿಗೆ ಕೊಡ್ತಾರೆ ಅನ್ನೋ ಕಾರಣಕ್ಕೆ ಈ ರೀತಿಯ ಅವ್ಯವಹಾರ ಮಾಡುವ ಜನರಿಗೆ ಮನೆ ಬಾಡಿಗೆ ನೀಡುವುದು ಬೆಂಗಳೂರಿಗರ ಖಯಾಲಿ ಅನ್ನೋದು ಗೊತ್ತಿರೋ ಸಂಗತಿ. ಪ್ರಕರಣದಲ್ಲಿ‌ ಸಂತ್ರಸ್ತೆ ಜಾಗದಲ್ಲಿರುವ ಯುವತಿ ಬೆಂಗಳೂರು ಪೊಲೀಸರ ವಶದಲ್ಲಿದ್ದಾಳೆ ಆಕೆ ನೀಡುವ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿದೆ.

Related Posts

Don't Miss it !