10ನೇ ತರಗತಿ.. 16 ವರ್ಷ 5ನೇ ಮಹಡಿಯಿಂದ ಹಾರಿದ ಏಕೈಕ ಪುತ್ರ..!

ಕೊರೊನಾ ಸೋಂಕು ಬಂದ ಬಳಿಕ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎನ್ನುವ ವಿಚಾರ ವೈದ್ಯಕೀಯ ಲೋಕದಲ್ಲಿ ಕೇಳಿಬರುತ್ತಿರುವ ಆತಂಕಕಾರಿ ವಿಚಾರ. ಆದರೆ ಅದೇ ವೈದ್ಯರ ದಂಪತಿ ಏಕೈಕ ಪುತ್ರ 5ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಇರುವ ಆನೇಕಲ್ ತಾಲೂಕಿನ ಕಮ್ಮಸಂದ್ರ ಸಮೀಪದ ಡ್ಯಾಡಿಸ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಗಾರ್ಡನ್ ಅಪಾರ್ಟ್ಮೆಂಟ್​ನ ಐದನೇ ಮಹಡಿ ಏರಿದ್ದ 16 ವರ್ಷದ ಬಾಲಕ ಮೇಲಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆ ಒಡೆದು ಹೋಗಿದ್ದರಿಂದ ಬಾಲಕ ಪ್ರಾಣ ಸ್ಥಳದಲ್ಲೇ ಹೋಗಿದೆ.

ವೈದ್ಯ ದಂಪತಿಯ ಏಕೈಕ ಪುತ್ರ, 10ನೇ ತರಗತಿ ವಿದ್ಯಾರ್ಥಿ..!

ಬಾಲಕ ಆದಿತ್ಯ ಪಾಟೀಲ್​ ಬೆಂಗಳೂರಿನ ಬೇಗೂರು ಸಮೀಪದ ಟ್ರಿಮಿಸ್ ಶಾಲೆಯಲ್ಲಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದನು. ತಂದೆ ತಾಯಿ ಇಬ್ಬರು ಬೆಂಗಳೂರಿನ ಸ್ಪರ್ಶ್​​ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಓದಿನಲ್ಲೂ ಸಾಕಷ್ಟು ಮುಂದಿದ್ದ ಬಾಲಕನಿಗೆ ಯಾವುದಕ್ಕೂ ಕೊರತೆ ಆಗದಂತೆ ಸಾಕುತ್ತಿದ್ದರು. ಡಾ. ಶರಣ ಪಾಟೀಲ್ ಮತ್ತು ತಾಯಿ ಡಾ. ಮಮತಾ ಅವರಿಗೆ ಏಕೈಕ ಮುದ್ದಿನ ಮಗನಾಗಿದ್ದ ಆದಿತ್ಯ ಪಾಟೀಲ್​​, 2 ದಿನಗಳಿಂದ ಆರಂಭವಾಗಿದ್ದ ಪರೀಕ್ಷೆಗೆ ಹಾಜರಾಗುತ್ತಿದ್ದನು. ಮಂಗಳವಾರ ಕೂಡ ಪರೀಕ್ಷೆಗೆ ತೆರಳಬೇಕಿದ್ದ ಆದಿತ್ಯ, ಏಕಾಏಕಿ ಅಪಾರ್ಟ್​ಮೆಂಟ್​​ನ 5ನೆ ಮಹಡಿ ಮೇಲೆ ಹೋಗಿ ಕೆಳಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಒಬ್ಬನೇ ಮಗನನ್ನು ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡುವ ಕನಸು ಕಂಡಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಸಾವಿನ ಕಾರಣ ವಿಚಿತ್ರ ಎನಿಸುತ್ತಿದೆ.

ಇದನ್ನೂ ಓದಿ; ಐಶಾರಾಮಿ ಈಗಲ್​ಟನ್​ ರೆಸಾರ್ಟ್​ ಒಳಗೆ ನಡೆದ ಜೋಡಿ ಕೊಲೆ..!

ಓದಿನ ಮೇಲೆ ಹಿಡಿತ ಸಾಧಿಸಲು ಒತ್ತಡ ಹೇರಿದ್ರಾ..?

ತುಂಬಾ ಚುರುಕಿನಿಂದ ಇರುತ್ತಿದ್ದ ಆದಿತ್ಯ, ಪರೀಕ್ಷೆಗೆ ತೆರಳಲು ಕ್ಯಾಬ್​ ಕೂಡ ಮನೆ ಬಳಿಗೆ ಬಂದಿತ್ತು. ಮನೆಯಲ್ಲೇ ಡ್ರೈವರ್​ ಕೂರಿಸಿ ಅಂಗಡಿ ಹೋಗಿ ಬರುವುದಾಗಿ ಹೊರಕ್ಕೆ ಬಂದಿದ್ದ ಆದಿತ್ಯ ಪಾಟೀಲ್​, ಸಾಕಷ್ಟು ಸಮಯವಾದರೂ ಮನೆಗೆ ವಾಪಸ್​ ಆಗದಿದ್ದಾಗ ಡ್ರೈವರ್​ ಹುಡುಕಾಟ ನಡೆಸಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕಳೆದ ಒಂದು ತಿಂಗಳಿನಿಂದ ರೂಮಿನಲ್ಲೇ ಕುಳಿತು ಓದಿಕೊಳ್ತಿದ್ದ. ಹೀಗಾಗಿ ಹೆಚ್ಚಾಗಿ ಮೊಬೈಲ್​ ಕೊಡುತ್ತಿರಲಿಲ್ಲ. ಆದರೆ ಈ ಬಗ್ಗೆ ಯಾವುದೇ ಜಗಳ, ಬೈಗುಳ ಯಾವುದೂ ನಡೆದಿಲ್ಲ ಎಂದಿದ್ದಾರೆ ಕುಟುಂಬಸ್ಥರು. ಆದರೆ ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚು ಮಾರ್ಕ್ಸ್ ತೆಗೆಯುವ ಬಗ್ಗೆ ಪೋಷಕರಿಂದ ಒತ್ತಡ ಇತ್ತಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್​ ಕಿಚ್ಚು, ಶಾಲಾ ಕಾಲೇಜಿಗೆ ರಜೆ, ಸರ್ಕಾರದಲ್ಲೇ ಗೊಂದಲ..!

ಕೊಲೆಯೋ ಆತ್ಮಹತ್ಯೆಯೋ..? ಪ್ರೇಮ ವೈಫಲ್ಯವೋ..?

ಅಂಗಡಿಗೆ ಹೋಗಿ ಬರುವುದಾಗ ಮನೆಯಿಂದ ಹೊರಕ್ಕೆ ಬಂದಿದ್ದ ಆದಿತ್ಯ ಪಾಟೀಲ್​ ಅಂಗಡಿಗೆ ಹೋಗಿದ್ದನೇ..! ಅಲ್ಲಿ ಯಾರನ್ನಾದರೂ ಭೇಟಿ ಆಗಿದ್ದಾನಾ..? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮಹಡಿ ಮೇಲೆ ಹೋಗಿದ್ಯಾಕೆ..? ಹೋಗುವ ಮುನ್ನ ಯಾರೊಂದಿಗಾದರೂ ಫೋನ್​ನಲ್ಲಿ ಮಾತನಾಡಿದ್ದಾನಾ..? ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮಂಗಳವಾರ ಪ್ರಪೋಸಲ್​ ಡೇ ಎಂದು ಯುವ ಜನಾಂಗ ಆಚರಣೆ ಮಾಡಿರುವ ಕಾರಣ, ಆದಿತ್ಯ ಯಾರಿಗಾದರೂ ಪ್ರೇಮ ನಿವೇದನೆ ಮಾಡಿಕೊಂಡು, ವೈಫಲ್ಯ ಅನುಭವಿಸಿದನೇ..? ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾವುದಾದರೂ ಸುಳಿವುದು ಸಿಗಬಹುದೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮಹಡಿ ಮೇಲಿನಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತೆ ಇಲ್ಲ. ಯಾವುದಕ್ಕೂ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಸತ್ಯತೆ ಬಹಿರಂಗ ಎನ್ನುತ್ತಾರೆ ಪೊಲೀಸ್ ಅಧಿಕಾರಿ.

Related Posts

Don't Miss it !