11 ತಿಂಗಳಿಗೆ ಬಾಳ ಯಾನ ಮುಗಿಸಿದ ಯುವ ಜೋಡಿ..!

ಕೊರೊನಾ ಎಷ್ಟೊಂದು ಭೀಕರತೆ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಘಟನೆಯೇ ಸಾಕ್ಷಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಯುವ ಉದ್ಯಮಿ ಕಿರಣ್ ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಬೆಳ್ಳೂರು ಕ್ರಾಸ್ ನಲ್ಲಿರುವ ದಿ ಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ನನ್ನು ಕಳೆದ ಮೂರು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಅಷ್ಟರ ವೇಳೆಗೆ ಪರಿಸ್ಥಿತಿ ಕೈಮೀರಿ ನ್ಯೂಮೋನಿಯಾಗೆ ಬದಲಾಗಿದ್ದರ ಪರಿಣಾಮ ಶನಿವಾರ ಮುಂಜಾನೆ ಕಿರಣ್ ಇಹಲೋಕ ತ್ಯಜಿಸಿದ್ದರು. ಹುಟ್ಟೂರಾದ ಬೊಮ್ಮೇನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು.

11 ತಿಂಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದ ಕಿರಣ್

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಟೋಲ್ ಬಳಿ “ ಬಕಾಸುರ “ ಹೆಸರಿನ ಹೋಟೆಲ್ ಆರಂಭಿಸಿದ್ದರು. ಬಳಿಕ ಕಳೆದ 11 ತಿಂಗಳ ಹಿಂದೆ ಅಂದರೆ ಕೊರೊನಾ ಮೊದಲನೆ ಅಲೆ ಸಮಯದಲ್ಲೇ ತುಂಬಾ ಸರಳವಾಗಿ ಪೂಜಾ ಎಂಬಾಕೆಯನ್ನು ವರಿಸಿದ್ದರು. ಆ ಬಳಿಕ ಕೊರೊನಾ ಹೊಡೆತದಿಂದ ಹೋಟೆಲ್ ಉದ್ಯಮಕ್ಕೆ ಬ್ರೇಕ್ ಬಿದ್ದಿತ್ತು. ಊರಿನಲ್ಲೇ ತೋಟದ ಕೆಲಸ ಮಾಡಿಕೊಂಡು ಸಂಸಾರ ಸಾಗರ ಈಜುವಾಗ ಕೊರೊನಾ ಎಂಬಾ ಬಿರುಗಾಳಿ ಎಲ್ಲವನ್ನೂ ಸ್ವಾಹಃ ಮಾಡಿಬಿಟ್ಟಿದೆ. ಬಾಳಿ ಬದುಕು ಕಟ್ಟಿಕೊಳ್ಳುವ ಕನಸು ಕಟ್ಟಿಕೊಂಡಿದ್ದ ಯುವಕ ಕಿರಣ್ ಕೊರೊನಾದಿಂದ ಸಾವಿನ ಮನೆ ಸೇರಿದ್ದಾರೆ. ಇಂದು ಹುಟ್ಟೂರು ಬೊಮ್ಮನಹಳ್ಳಿಯ ತೋಟದಲ್ಲಿ ಲೀನವಾಗಿದ್ದಾರೆ.

ಸತಿಸಹಗಮನ ಪದ್ಧತಿ ನೆನಪು ಮಾಡಿದ ಪೂಜಾ..!

ಮೃತ ಕಿರಣ್ ಪತ್ನಿ ಪೂಜಾ ಕೂಡ ಗಂಡನಷ್ಟೇ ತುಂಬಾ ಚುರುಕು ಸ್ವಭಾವದ ಹುಡುಗಿ. ಎಲ್ಲಾ ಹುಡುಗರಂತೆ ತಾನೂ ಕೂಡ ಬುಲೆಟ್ ಸವಾರಿ ಮಾಡುತ್ತಿದ್ದ ಕೆಚ್ಚೆದೆಯ ಹುಡುಗಿ. ಗಂಡನ ಎಲ್ಲಾ ಕೆಲಸಗಳಿಗೂ ಬೆನ್ನೆಲುಬಾಗಿದ್ದ ಪೂಜಾ ಗಂಡನ ಸಾವನ್ನು ಸಹಿಸಲಾಗದೆ ಸಾವಿನ ಹಾದಿ ಹಿಡಿದಿದ್ದಾಳೆ. ಗಂಡನ ಶವಕ್ಕೆ ತೋಟದಲ್ಲಿ ಅಗ್ನಿಸ್ಪರ್ಶ ಆಗುತ್ತಿದ್ದ ಹಾಗೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ನೇಣಿಗೆ ಕೊರಳು ಒಡ್ಡಿದ್ದಾಳೆ. ಈ ಮೂಲಕ ಗಂಡನ ಸಾವನ್ನೇ ಹಿಂಬಾಲಿಸುವ ಮೂಲಕ ಸತಿಸಹಗಮನ ಪದ್ಧತಿಯನ್ನು ನೆನಪು ಮಾಡಿಕೊಳ್ಳುವಂತೆ ಪೂಜಾ ಮಾಡಿದ್ದು, ಇಡೀ ಕುಟುಂಬವೇ ದುಃಖದಲ್ಲಿ ಮುಳುಗುವಂತೆ ಮಾಡಿದೆ.

ಏನಿದು ಸತಿ ಸಹಗಮನ ಪದ್ಧತಿ..?

ಬ್ರೀಟೀಷರು ಭಾರತವನ್ನು ಆಳುವ ಮೊದಲು ಅಂದರೆ 18ನೇ ಶತಮಾನದಲ್ಲಿ ನಮ್ಮ ಭಾರತದ ರಾಜ ಪರಂಪರೆಯಲ್ಲಿ ಸತಿ ಸಹಗಮನ ಪದ್ಧತಿ ಜಾರಿಯಲ್ಲಿತ್ತು. ಒಂದು ವೇಳೆ ಗಂಡನು ಕಾರಣಾಂತರಗಳಿಂದ ಸಾವನ್ನಪ್ಪಿದರೆ ಗಂಡನ ಚಿತೆಗೆ ಹೆಂಡತಿ ಹಾರುವ ಮೂಲಕ ತಾನೂ ಜೀವವನ್ನು ಅರ್ಪಣೆ ಮಾಡಿಕೊಳ್ಳಬೇಕಿತ್ತು. ಒಂದು ವೇಳೆ ಹೆಂಡತಿ ಸ್ವಯಂ ಈ ನಿರ್ಧಾರ ಮಾಡದೆ ಇದ್ದರೆ ಊರಿನ ಜನರು ಹಾಗೂ ಸಂಬಂಧಿಕರೇ ಪತ್ನಿಯನ್ನು ಜೀವಂತವಾಗಿ ಬೆಂಕಿಗೆ ತಳ್ಳುವ ಪರಿಸ್ಥಿತಿ ಇತ್ತು. ಸತಿ ಸಹಗಮನ ಪದ್ಧತಿಯನ್ನು ಮೊದಲು ವಿರೋಧಿಸಿದ್ದು ಪಶ್ಚಿಮ  ಬಂಗಾಳದಲ್ಲಿ ರಾಜಾ ರಾಮ್ ಮೋಹನ್ ರಾಯ್ ಎಂಬ ದಿಟ್ಟ ಹೋರಾಟಗಾರ. ಹಿಂದೂ ಸಂಸ್ಕೃತಿಯಲ್ಲಿ ಹೆಂಡತಿಯನ್ನು ಗಂಡನ ಚಿತೆಗೆ ತಳ್ಳುವುದು ಅನರ್ಥ ಎಂದು ಬ್ರಹ್ಮ ಸಮಾಜ ಎಂಬ ಸಂಸ್ಥೆ ಕಟ್ಟಿಕೊಂಡು  ಜಾಗೃತಿ ಮೂಡಿಸಿದರು. ಬಳಿಕ ಬ್ರಿಟೀಷ್ ಅಧಿಕಾರಿ ಲಾರ್ಡ್ ವಿಲಿಯಂ ಎಂಬಾರ ಸತಿಸಹಮನ ಪದ್ಧತಿಯನ್ನು ರದ್ದು ಮಾಡುವ ಕಾನೂನು ಜಾರಿ ಮಾಡಿದ್ದನು.

ಮಂಡ್ಯದ ಜಾನಪದದಲ್ಲೇ ಅಡಕವಾಗಿದೆ ಸಹಗಮನ ಪದ್ಧತಿ..!

ಭಾರತದ ಪುರಾಣಗಳಲ್ಲೂ ಸತಿಸಹಗಮನ ಪದ್ಧತಿ ಜಾತಿಯಲ್ಲಿರುವುದು ಗೊತ್ತಾಗುತ್ತದೆ. ಮಹಾಭಾರತದಲ್ಲಿ ಪಾಂಡು ರಾಜ ಸತ್ತನೆಂದು ತಿಳಿದ ಕೂಡಲೇ ಪತ್ನಿ ಮಂದ್ರಿಯೂ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಅದರಂತೆ ಮಂಡ್ಯದಲ್ಲೂ ಹಲವು ಜಾನಪದ ಮನೆ ಮಾಡಿದ್ದು, ಅದರಲ್ಲಿ ಖಂಡ ಕಾವ್ಯವನ್ನು ಈಗ ನೆನಪು ಮಾಡಿಕೊಳ್ಳಬೇಕಾದ ಸಮಯ. ಖಂಡಕಾವ್ಯದಲ್ಲೂ ಸತಿಸಹಗಮನ ಪದ್ಧತಿ ಬಗ್ಗೆ ಹಲವಾರು ಕಥೆಗಳಿಗೆ. ಹೆಂಡತಿ ಈರೋಬಿಗೆ ಹರಿವಾಣ ತರಲು ಘಟ್ಟದ ಕೆಳಕ್ಕೆ ಹೋಗಿದ್ದ ಗಂಡ ಮರಳಿ ಮನೆಗೆ ವಾಪಸ್ ಬಾರಲಿಲ್ಲ. ಸತ್ತು ಹೋದನು ಅನ್ನೋ ಸುದ್ದಿ ಖಚಿತ ಆಗುತ್ತಿದ್ದಂತೆ ಈರೋಬಿ ಕೂಡ ಅಗ್ನಿ ಪ್ರವೇಶ ಮಾಡಿದ್ದಳು. ಆ ಬಗ್ಗೆ ಖಂಡಕಾವ್ಯ ಕೂಡ ಪ್ರಚಲಿತದಲ್ಲಿದೆ.

(ಕಾವ್ಯದ ತುಣುಕು ಕೆಳಗಿದೆ)

ಮಾನಸಿಕ ಖಿನ್ನತೆಯೇ ಈ ರೀತಿಯ ಘಟನೆಗೆ ಕಾರಣ..!

ಕೊರೊನಾ ಸೋಂಕು ಸಾಮಾನ್ಯ ಕಾಯಿಲೆಯ ರೀತಿಯಲ್ಲಿಯೇ ಗುಣವಾಗುವ ಕಾಯಿಲೆಗಳಲ್ಲಿ ಒಂದು. ಆದರೆ ಬೇರೆ ಎಲ್ಲಾ ಸೋಂಕುಗಳು ಈಗಾಗಲೇ ಜನರಲ್ಲಿ ಹರಡಿರುವ ಕಾರಣ ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಇರುತ್ತದೆ. ಆದ ಕಾರಣ ಸಾಮಾನ್ಯವಾಗಿ ಸೋಂಕು ಅಷ್ಟೊಂದು ಸುಲಭವಾಗಿ ಹರಡುವಿಕೆ ಕಡಿಮೆ. ಒಂದು ವೇಳೆ ರೋಗ ನಿರೋಧಕ ಶಕ್ತಿ ಕಡಿಮೆ ಆದರೆ ಮಾತ್ರ ಸೋಂಕು ಹರಡುತ್ತದೆ. ಆದರೆ ಕೊರೊನಾ ವೈರಾಣು ಪತ್ತೆಯಾದ ಬಳಿಕ ಇನ್ನೂ ಎಲ್ಲರಿಗೂ ವ್ಯಾಪಿಸಿಲ್ಲದ ಕಾರಣ ಪ್ರತಿಯೊಬ್ಬರಿಗೂ ಈಗ ವ್ಯಾಪಿಸುತ್ತಿದೆ. ಹಾಗಾಗಿ ಹರಡುವ ವೇಗ ಹೆಚ್ಚಾಗಿದೆ ಎಂದೆನಿಸುತ್ತಿದೆ ಅಷ್ಟೆ. ಆದರೆ ಆ ವೈರಾಣು ವಿರುದ್ಧ ಹೋರಾಡುವ ಪ್ರತಿಕಾಯಗಳು ನಮ್ಮ ದೇಹದಲ್ಲಿ ಸೃಷಚ್ಟಿಯಾದರೆ ಕೊರೊನಾ ಸೋಂಕು ಕೂಡ ಸಾಮಾನ್ಯ ಶೀತ ಜ್ವರದಂತೆ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ವೈದ್ಯರು. ಆದರೆ ಅಲ್ಲೀ ತನಕ ಸ್ವಲ್ಪ ಸಮಯ ಹಿಡಿಯುತ್ತದೆ. ಧೈರ್ಯದಿಂದ ಇದ್ದರೆ ಪ್ರತಿಕಾಯ ಸೃಷ್ಟಿ ಆದಷ್ಟು ಬೇಗ ಆಗಲೂ ಬಹುದು ಅನ್ನೋದು ತಜ್ಞರ ಅಭಿಪ್ರಾಯ. ಯಾವಾಗ ಸೋಂಕು ಬರುತ್ತಿದ್ದ ಹಾಗೆ ಮನೆ ಮಂದಿಯೆಲ್ಲರೂ ಖಿನ್ನತೆಗೆ ಒಳಗಾಗುತ್ತಾರೆ, ಆಗ ಸೋಂಕನ್ನು ಎದುರಿಸುವುದು ಕಷ್ಟ. ಜೊತೆಗೆ ಸೋಂಕಿತರ ಸಾವನ್ನಪ್ಪಿದರೆ ಅದರಿಂದ ಹೊರಬಹುದು ಕಷ್ಟ ಆಗುತ್ತದೆ.


ಈರೋಬಿ ಖಂಡಕಾವ್ಯ

ಬಾಣತಿರೋಬಿ ಬಟ್ಟಲಲ್ಲುಣುತಾಳೆಂದು
ಘಟ್ಟದ ಕೆಳಗಲ ಹರಿವಾಣಾ-ತರಲ್ಹೋಗಿ
ಶೆಟ್ಟಿ ಶಂಕರರಾಯ ಮಡಿದಾನೆ||ಕೋ||

ಕನ್ನೆ ಈರೋಬಿ ತಣಿಗೇಲುಣುತಾಳೆಂದು
ಕಣೀವೆಯ ಕೆಳಗಲ ಹರಿವಾಣ ತರಲ್ಹೋಗಿ
ರಾಯ ಶಂಕರರಾಯ ಮಡಿದಾನೆ||ಕೋ||

ಸತ್ತ ಸುದ್ದಿ ಬಂತು ನೆತ್ತರದರಬಿ ಬಂತು
ಕತ್ತಿ ಬಂತು ಅವನ ಗುರುತಿಗೆ-ಈರೋಬಿ
ಹೆತ್ತೊರಿಗೇಳು ನಿಲುಭಾರ

ಕರ್ಮಿ ಹೆಣ್ಹುಟ್ಟಿ ನೀ ವನವನೆ ಸೇರಿದೆ
ಮನವೇ ನಿಂದುರುದು ಬೇಯ್ತದೆ-ನನ್ನಂಥ
ಕರ್ಮಿ ಹೆಣ್ಹುಂಟೆ ಧರೆಯಲಿ

ಕೊಂಡ ತಗಿಯೋರು ನೀವು ಚೆಂದಾಗಿ ತೆಗಿರಯ್ಯ
ಕೊಂಡದ ಮೇಲೆ ಗುಡಿಕಟ್ಟಿ-ತೆಗಿದಾರೆ
ನಿಮಗೆ ಗಂಡು ಸಂತಾನ ದೊರೆಯೋದು

ಗಂಡ ಸಾಯೋಕಿಂತ ಮುಂಡ್ಯಾಗೊಕಿಂತ
ಕಂಡೋರ ಮನೆಯ ಕಸನ್ಹಾಕಿ-ಸಾಯೋಕಿಂತ
ಕೊಂಡವನ್ನೇರೋದೆ ಕಡುಲೇಸು

ಕೊಂಡ ತೆಗೆಸ್ಯಾಳೆ ಕೊಂಡಾ ಕೂಡಿಸ್ಯಾಳೆ
ಮುಂದಾಕೊಂಟಾಳೆ ಈರೋಬಿ
ಬಣ್ಣ ಇಟುಗೊಂಡು ಬಂಗಾರ ತೊಟುಗೊಂಡು
ಬೀದೀಲಿ ಹೊರಟಾಳೆ ಈರೋಬಿ

ಹುಟ್ಟಿದ್ದಳಿಸಂದ್ರ ಬೆಳೆದಿದ್ದು ನಾಗ್ತಿಹಳ್ಳಿ
ಕೆಟ್ಟು ಬಾಳಿದ್ದು ಬೆಳ್ಳೂರು-ಹೆಣ್ಣು ಮಕ್ಕಳು
ನನ್ನಂಗೆ ನಿಂದು ಉರಿಯಾಲಿ

ಕಳಸ ಹೊತ್ತುಕೊಂಡು ಬಂದಳು-ಈರೋಬಿ
ಕೊಂಡ ಮೂರು ಸುತ್ತು ಬಳಸ್ಯಾಳು-ಈರೋಬಿ
ಕಳಸವ ಮಡಗಿ ಕೈಯೆತ್ತಿ ಮುಗಿದಾಳು-ಈರೋಬಿ
ಕೊಂಡಕೆ ಮುಂದಾಗಿ ನಡೆದಾಳು

Related Posts

Don't Miss it !