ಅರ್ಧ ರಾಜ್ಯಕ್ಕೆ ಬೆಣ್ಣೆ.. ಇನ್ನರ್ಧ ರಾಜ್ಯಕ್ಕೆ ಸುಣ್ಣ.. ಅನ್ಯಾಯದ ಸರ್ಕಾರ..!

ಬಸವರಾಜ ಬೊಮ್ಮಾಯಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆದರೆ ಬಸವರಾಜ ಬೊಮ್ಮಾಯಿ ಸರ್ಕಾರ ಇಡೀ ರಾಜ್ಯಕ್ಕೋ ಅಥವಾ ಕೇವಲ ಅರ್ಧ ರಾಜ್ಯಕ್ಕೋ ಎನ್ನುವ ಅನುಮಾನ ಮೂಡುವಮಥೆ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ವಲವಾರು ನ್ಯಾಯ ಕಲ್ಪಿಸುವಲ್ಲಿ ಬಸವರಾಜ ಬೊಮ್ಮಾಯಿ ಸೋಲುಂಡಿದ್ದಾರೆ. ಕೆಲವು ಭಾಗಕ್ಕೆ ಮಾತ್ರ ಬಿಜೆಪಿ ಸರ್ಕಾರ ಮೀಸಲು ಎನ್ನುವಂತಾಗಿದೆ. ಪ್ರಾದೇಶಿಕ ಅಸಮತೋಲನ ಎದ್ದು ಕಾಣುವಂತಾಗಿದೆ.

ಯಾವ ಜಿಲ್ಲೆಗೆ ಬಂಪರ್​..?

ಬೆಂಗಳೂರು ಜಿಲ್ಲೆಗೆ ಭರ್ಜರಿ ಗಿಫ್ಟ್​ ಕೊಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಬರೋಬ್ಬರಿ ಏಳು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಆರ್ ಅಶೋಕ್​ , ವಿ ಸೋಮಣ್ಣ , ಡಾ. ಸಿ ಎನ್​ ಅಶ್ವತ್ಥನಾರಾಯಣ , ಎಸ್​ ಟಿ ಸೋಮಶೇಖರ್ , ಬೈರತಿ ಬಸವರಾಜು, ಕೆ ಗೋಪಾಲಯ್ಯ, ಮುನಿರತ್ನ ಸಚಿವರಾಗಿದ್ದಾರೆ. ಇನ್ನೂ ತುಮಕೂರು ಜಿಲ್ಲೆಯಿಂದ ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ್​ ಸಚಿವರಾಗಿದ್ದಾರೆ. ಶಿವಮೊಗ್ಗದಿಂದಲೂ ಕೆ ಎಸ್ ಈಶ್ವರಪ್ಪ ಹಾಗೂ ಅರಗ ಜ್ಞಾನೇಂದ್ರ ಸಚಿವರಾಗಿದ್ದಾರೆ. ಉಡುಪಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ವಿ ಸುನಿಲ್​ಕುಮಾರ್ ಸಚಿವರಾಗಿದ್ರೆ ಬೆಳಗಾವಿಯಿಂದ ಉಮೇಶ್​ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ. ಬಾಗಲಕೋಟೆಯಿಂದ ಗೋವಿಂದ ಕಾರಜೋಳ ಹಾಗೂ ಮುರುಗೇಶ್​ ನಿರಾಣಿ ಸಚಿವರಾಗಿದ್ದಾರೆ.

ಈ ಜಿಲ್ಲೆಗಳಿಗೂ ಸಿಕ್ಕಿದೆ ಪ್ರಾತಿನಿಧ್ಯ..!

ಚಿತ್ರದುರ್ಗ ಜಿಲ್ಲೆಯಿಂದ ಬಿ ಶ್ರೀರಾಮುಲು , ದಕ್ಷಿಣ ಕನ್ನಡ ಜಿಲ್ಲೆಗೆ ಎಸ್​ ಅಂಗಾರ , ಗದಗ ಜಿಲ್ಲೆಯಿಂದ ಸಿ ಸಿ ಪಾಟೀಲ್, ವಿಜಯನಗರ ಜಿಲ್ಲೆಯಿಂದ ಆನಂದ್ ಸಿಂಗ್, ಬೀದರ್ ಜಿಲ್ಲೆಗೆ ಪ್ರಭು ಚೌವ್ಹಾಣ್​, ಉತ್ತರ ಕನ್ನಡ ಜಿಲ್ಲೆಗೆ ಶಿವರಾಂ ಹೆಬ್ಬಾರ್. ಹಾವೇರಿ ಜಿಲ್ಲೆಗೆ ಬಿ ಸಿ ಪಾಟೀಲ್, ಚಿಕ್ಕಬಳ್ಳಾಪುರದಿಂದ ಡಾ. ಕೆ. ಸುಧಾಕರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎಂಟಿಬಿ ನಾಗರಾಜು, ಮಂಡ್ಯಕ್ಕೆ ಕೆ ಸಿ ನಾರಾಯಣಗೌಡ, ಕೊಪ್ಪಳ ಜಿಲ್ಲೆಗೆ ಹಾಲಪ್ಪ ಆಚಾರ್, ಧಾರವಾಡಕ್ಕೆ ಶಂಕರ ಪಾಟೀಲ ಮುನೇನಕೊಪ್ಪರನ್ನು ಸಚಿವರನ್ನಾಗಿ ಮಾಡಿದ್ದಾರೆ. ಇನ್ನುಳಿದ 13 ಜಿಲ್ಲೆಗಳಿಗೆ ಸಚಿವ ಸ್ಥಾನವನ್ನೇ ಕೊಡದೆ ಸಿಎಂ ಬಸವರಾಜ ಬೊಮ್ಮಾಯಿ ಅರ್ಧಚಂದ್ರನನ್ನು ತೋರಿಸಿದ್ದಾರೆ.

ಯಾವ್ಯಾವ ಜಿಲ್ಲೆಗೆ ಸಿಕ್ಕಿಲ್ಲ ಸಚಿವ ಸ್ಥಾನ..?

ಹಾಸನ, ಮೈಸೂರು, ರಾಮನಗರ, ಚಾಮರಾಜನಗರ. ಕೊಡಗು, ಕೋಲಾರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸ್ಥಾನ ನೀಡದೆ ವಂಚಿಸಿದ್ದಾರೆ. ಈ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಪಕ್ಷದ ಶಾಸಕರೇ ಇದ್ದರೂ ಸಚಿವ ಸ್ಥಾನ ನೀಡದಿರುವ ಬಿಜೆಪಿ ಕಾರ್ಯಕರ್ತರಿಗೇ ಬೇಸರು ಹುಟ್ಟುವಂತೆ ಮಾಡಿದ್ದಾರೆ. ಬೆಂಗಳೂರಿಗೆ ಬರೋಬ್ಬರಿ 7 ಸಚಿವ ಸ್ಥಾನ ನೀಡಿದ್ದು, ಇನ್ನುಳಿದ ಜಿಲ್ಲೆಗಳಿಗೆ 5 ಜಿಲ್ಲೆಗಳಿಗೆ ತಲಾ ಇಬ್ಬರಂತೆ ಸಚಿವರನ್ನಾಗಿ ಮಾಡಲಾಗಿದೆ. ಇನ್ನುಳಿದ 12 ಜಿಲ್ಲೆಗಳಿಗೆ ತಲಾ ಒಬ್ಬರಂತೆ ಸಚಿವರನ್ನಾಗಿ ಮಾಡಲಾಗಿದೆ. ಆದರೆ ಇನ್ನುಳಿದ 13 ಜಿಲ್ಲೆಗಳ ಜನರಿಗೆ ಸರ್ಕಾರವೇ ಇಲ್ಲದ ಅನುಭವ ಮೂಡಿಸಿದ್ದಾರೆ.

ಅಸಮತೋಲನದ ಸರ್ಕಾರದ ಸಮಸ್ಯೆ ಏನು..?

ಚಿಕ್ಕಮಗಳೂರಲ್ಲಿ ಬಿಜೆಪಿ ಭರ್ಜರಿ ಬೆಂಬಲ ಪಡೆದಿದೆ ಆದರೂ ಸಚಿವರನ್ನಾಗಿ ಮಾಡಿಲ್ಲ. ಅದೇ ರೀತಿ ದಾವಣಗೆರೆಯಲ್ಲಿ ಬಿಜೆಪಿ ಸಂಸದರಿದ್ದು ಐವರು ಶಾಸಕರಿದ್ದಾರೆ, ಆದರೂ ಸಚಿವ ಸ್ಥಾನ ಸಿಕ್ಕಿಲ್ಲ. ಮೈಸೂರು – ಕೊಡಗಿನಲ್ಲಿ ಬಿಜೆಪಿ ಸಂಸದರೇ ಇದ್ದು, ಬಿಜೆಪಿ ಶಾಸಕರೂ ಇದ್ದಾರೆ. ಆದರೂ ಪ್ರಾತಿನಿಧ್ಯವಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದೆ. ಆದರೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವಲ್ಲಿ ಬಸವರಾಜ ಬೊಮ್ಮಾಯಿ ಸಮಪಾಲು ಸಮಬಾಳು ಎನ್ನುವ ಸೂತ್ರವನ್ನು ಮರೆತಂತಿದೆ.

Related Posts

Don't Miss it !