Interstate Theef: 18 ವರ್ಷ.. 8 ಬಾರಿ ಜೈಲು ವಾಸ.. ಕುಲಕಸುಬು ಬಿಡಲಾರೆ ಎಂದ ಕಿಲಾಡಿ..!

ಬೆಂಗಳೂರಿನಲ್ಲಿ ವಿಭಿನ್ನ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇವಲ 18 ವರ್ಷದ ಯುವಕ 8 ಬಾರಿ ಜೈಲಿಗೆ ಹೋಗಿ ಬಂದಿದ್ದು, ಈತನಿಗೆ ಕೇವಲ 18 ವರ್ಷ ಆದರೆ 8 ಬಾರಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಆದರೂ ತನ್ನ ಕುಲಕಸುಬು ಬಿಟ್ಟಿಲ್ಲ. ಮತ್ತೆ ಮಾಡಿದ ತಪ್ಪನ್ನೇ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. ಯಲಹಂಕ ನ್ಯೂಟೌನ್​ ಪೊಲೀಸರು ಈತನನ್ನು ಬಂಧಿಸಿದ್ದು, ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಈತನ ಸಹಚರನನ್ನು ಪೊಲೀಸರು ಬಂಧಿಸಿದ್ದು, ಕಳ್ಳನ ಕಥೆ ಕೇಳಿ ಖಾಕಿಪಡೆಯೇ ಶಾಕ್​ ಆಗಿದೆ. ಅಪ್ಪ-ಅಮ್ಮನ ವೃತ್ತಿಯನ್ನೇ ಮುಂದುವರಿಸಿದ್ದೇನೆ ಎಂದಿದ್ದಾನೆ ಅಕ್ಬರ್​.

ಮಾಡೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಇದೀಗ ಕಳ್ಳ..!

ಉತ್ತರ ಪ್ರದೇಶ ಮೂಲದ ಅಕ್ಬರ್ ಚಿಕ್ಕವನಿದ್ದಾನಿಂದಾಗಲೇ ತಂದೆ ತಾಯಿ ಜೊತೆಗೆ ಮುಂಬೈಗೆ ಬಂದಿದ್ದ. ಮುಂಂಬೈನ ಮಾಡೆಲ್​​ ಪಬ್ಲಿಕ್​​ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದ ಅಕ್ಬರ್​​ ಚಿಕ್ಕವನಿದ್ದಾಗಲೇ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದ. 5 ನೇ ತರಗತಿ ಓದುತ್ತಿದ್ದಾಗಲೇ ಅಕ್ಬರ್ ತನ್ನ ತಂದೆ ತಾಯಿ ಕಳೆದುಕೊಂಡ ಬಳಿಕ ಜೀವನದಲ್ಲಿ ಮುಂದೇನು ಮಾಡುವುದು ಎಂದು ತಿಳಿಯದ ಅಕ್ಬರ್​, ತನ್ನ ತಂದೆ ತಾಯಿ ಮಾಡುತ್ತಿದ್ದ ಕಳ್ಳತನವನ್ನೇ ಮಾಡಲು ಮುಂದಾಗಿದ್ದ. ಮುಂಬೈನಲ್ಲಿ ಮಾತ್ರ ಕಳ್ಳತನ ಮಾಡದೆ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳತನ ಮಾಡಲು ಶುರು ಮಾಡಿಕೊಂಡಿದ್ದ. ಇದರ ನಡುವೆ ಕೆಲವು ದಿನಗಳು ಮುಂಬೈನಲ್ಲಿ ಆಟೋ ಕೂಡ ಓಡಿಸುತ್ತಿದ್ದ ಎನ್ನುವುದನ್ನು ಪೊಲೀಸ್ರು ತನಿಖೆ ವೇಳೆ ಬಯಲು ಮಾಡಿದ್ದಾರೆ.

ಟ್ಯೂಷನ್​​ಗೆ ಹೋಗುವ ಮಕ್ಕಳ ಮನೆಯೇ ಈತನ ಟಾರ್ಗೆಟ್..!

2004 ರಿಂದ ಕಳ್ಳತನ ಶುರು ಮಾಡಿಕೊಂಡಿದ್ದ ಆರೋಪಿ ಅಕ್ಬರ್​, 8 ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಬೆಂಗಳೂರಿನಲ್ಲಿ ತನ್ನ ಸಹಚರನ ಜೊತೆ ಸೇರಿಕೊಂಡು ಕಳ್ಳತನ ಮಾಡ್ತಿದ್ದ. ಮಕ್ಕಳನ್ನು ಟ್ಯೂಷನ್​ಗೆ ಬಿಡುವುದಕ್ಕೆ ಹೋದಾಗ ಮನೆಯನ್ನು ಕಳ್ಳತನ ಮಾಡುವುದಕ್ಕೆ ಅಕ್ಬರ್ ಯೋಜನೆ ರೂಪಿಸುತ್ತಿದ್ದನು. ಸಾಕಷ್ಟು ದಿನಗಳ ಕಾಲ ಯೋಜನೆ ರೂಪಿಸಿದ ಬಳಿಕ ಕಳ್ಳತನ ಮಾಡಿ ಯಶಸ್ಸು ಆಗ್ತಿದ್ದ. ಹತ್ತಾರು ಬಾರಿ ಕಳವು ಮಾಡಿದ ಬಳಿಕ ಕೆಲವೊಮ್ಮೆ ಖಾಕಿ ಕೈಗೂ ಸಿಕ್ಕಿಬೀಳುತ್ತಿದ್ದ. ಜೈಲಿಗೆ ಹೋಗಿ ಬಂದ ಬಳಿಕ ಮತ್ತದೆ ಕಸುಬು ಮುಂದುವರಿಸುತ್ತಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ 400 ಗ್ರಾಂ ಚಿನ್ನಾಭರಣ ಹಾಗೂ 2ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಇದೀಗ ಸಿಕ್ಕಿ ಬಿದ್ದಿದ್ದಾರೆ.

ಹೈ ಫೈ ಏರಿಯಾದಲ್ಲಿ ಶ್ರೀಮಂತನ ಹಾಗೆ ಸುತ್ತಾಟ​..!

ಹೈ ಫೈ ಆಗಿ ಡ್ರೆಸ್​ ಮಾಡಿಕೊಂಡು ಸುತ್ತಾಡುತ್ತಿದ್ದ ಆರೋಪಿ ಅಕ್ಬರ್​ ತನ್ನ ಸಹಚರನ ಜೊತೆಗೆ ಮನೆಗಳವಿಗೆ ಪ್ಲ್ಯಾನ್​ ಮಾಡುತ್ತಿದ್ದ. ಸಲಿಂ ಅಲಿಯಾಸ್​ ಜಗ್ಗ, ರಾಜು ಚಾಂದ್ ಜೊತೆ ರಿಕ್ಷಾದಲ್ಲಿ ಸುತ್ತಾಡಿ ಮನೆಗಳ್ಳತನ ಮಾಡುತ್ತಿದ್ದ. ಇದೀಗ ಬಂಧಿತ ಕಳ್ಳ ಅಕ್ಬರ್​ನಿಂದ ಬರೊಬ್ಬರಿ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ಸಹಚರ ಶಬಾದ್ ಖಾನ್​​ನನ್ನೂ ಪೊಲೀಸ್ರು ಬಂಧಿಸಿದ್ದಾರೆ. ಆದರೂ ಅಂತರಾಜ್ಯ ಕಳ್ಳ ಅಕ್ಬರ್​ನನ್ನು ಅಂಧಿಸಿದ್ದಾರೆ. ಮುಂದೆ ಜೈಲಿಂದ ಬಂದ ಬಳಿಕ ಅಪ್ಪನ ಅಮ್ಮನ ಕುಲಕಸುಬು ನಿಲ್ಲಿಸ್ತಾನಾ..? ಕಾದು ನೋಡ್ಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ.. ಬಾಲ್ಯದಲ್ಲಿ ತಂದೆ ತಾಯಿ ನೋಡಿ ಕಳ್ಳನಾದ ಮಗ.

Related Posts

Don't Miss it !