35 ವರ್ಷದ ಮಹಿಳೆ ಜಿಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ಯಾಕೆ..? ಆ ಮೂರು ಕಾರಣಗಳು ಇಲ್ಲಿವೆ..!!

ಬೆಂಗಳೂರಿನಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ 35 ವರ್ಷದ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮಲ್ಲೇಶ್​ ಪಾಳ್ಯದಲ್ಲಿ ವಾಸವಾಗಿದ್ದ ಮಂಗಳೂರಿನ ಅವಿವಾಹಿತ ಮಹಿಳೆ ವಿನಯ ವಿಠ್ಠಲ್​ ಪ್ರಾಣ ಕಳೆದುಕೊಂಡಿದ್ದಾರೆ. ಜಿಮ್​ನಲ್ಲಿ ಇದ್ದ ಸಿಸಿಟಿವಿಯಲ್ಲಿ ಕುಸಿದು ಹಿಂಭಾಗಕ್ಕೆ ಬಿದ್ದು ಸಾವನ್ನಪ್ಪುವ ದೃಶ್ಯ ಸೆರೆಯಾಗಿದ್ದು, ಸಾವಿಗೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಲು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಸಿ.ವಿ ನಗರ ಆಸ್ಪತ್ರೆಯಲ್ಲಿ ವಿನಯ ವಿಠ್ಠಲ್ ಶವವನ್ನು ಇಡಲಾಗಿದೆ. ಆದರೆ ಮಹಿಳೆ ವಿನಯ ವಿಠ್ಠಲ್​ ಸಾವಿಗೆ ಹೃದಯಾಘಾತ ಕಾರಣವೋ..? ಅಥವಾ ದೇಹ ಸೌಂದರ್ಯ ಕಾಪಾಡುವ ಉದ್ದೇಶದಿಂದ ಏನಾದರೂ ಔಷಧಿ ತೆಗೆದುಕೊಂಡಿದ್ದರೋ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ತುಂಬಾ ಒಳ್ಳೆಯ ವ್ಯಕ್ತಿ, ಪ್ರತಿದಿನ ಜಿಮ್​ಗೆ ಹೋಗ್ತಿದ್ದರು..!

ಮಹಿಳೆ ವಿನಯ ವಿಠ್ಠಲ್​ ವಾಸವಾಗಿದ್ದ ಮನೆಯ ಮಾಲಕಿ ಜಯಮ್ಮ ಮಾಹಿತಿ ನೀಡಿರುವಂತೆ, ಕಳೆದ ಎರಡು ವರ್ಷಗಳಿಂದ ವಿನಯ ವಿಠ್ಠಲ್ ನಮ್ಮ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಬ್ಯಾಕ್​​ಗ್ರೌಂಡ್ ವೆರಿಫಿಕೇಷನ್ ಆಫೀಸರ್ ಆಗಿ ಕೆಲಸ ಮಾಡ್ತಿದ್ದ ಅವರು, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಜಿಮ್​ಗೆ ಹೋಗಿ 8 ಗಂಟೆಗೆ ಮನೆಗೆ ವಾಪಸ್​ ಆಗ್ತಿದ್ರು ಎಂದಿದ್ದಾರೆ. ಆದರೆ ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಸಾವು ಆಗಿದೆ ಎನ್ನುವ ಸುದ್ದಿ ಬಂತು. ವಿನಯ ಹೆಸರಿಗೆ ತಕ್ಕಂತೆ ಎಲ್ಲರ ಜೊತೆಗೂ ಸ್ನೇಹ ಭಾವದಿಂದಲೇ ಇದ್ದರು ಎಂದಿದ್ದಾರೆ. ಎಲ್ಲರ ಜೊತೆಗೂ ಚೆನ್ನಾಗಿ ಮಾತನಾಡಿಕೊಂಡು ಇದ್ದವರು ಹೀಗೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದು ಬೇಸರದ ಸಂಗತಿ ಎಂದಿದ್ದಾರೆ.

ಸಾವಿನ ಬಗ್ಗೆ ಖಾಕಿಗೆ ಶಂಕೆಯಿಲ್ಲ, ಡೆತ್​ ರಿಪೋರ್ಟ್​ ಫೈನಲ್​..!

ಮಹಿಳೆ ವಿನಯ ವಿಠ್ಠಲ್​ ಸಾವಿನ ಬಗ್ಗೆ ಮಾತನಾಡಿರುವ ಪೂರ್ವ ವಿಭಾಗ DCP ಭೀಮಾಶಂಕರ್ ಗುಳೇದ್, ಜಿಮ್​ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಬೈಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ. ಜಿಮ್​ನಲ್ಲಿ ವರ್ಕ್​ಔಟ್ ಮಾಡುವಾಗ ಕುಸಿದು ಬಿದ್ದು ಸಾವು ಸಂಭವಿಸಿದೆ. ಆದರೂ ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದಿದ್ದಾರೆ. ಆದರೆ The Public Spot ವಿನಯ ಸಾವಿನ ಬಗ್ಗೆ ನಿಖರ ಮಾಹಿತಿ ಸಂಗ್ರಹ ಮಾಡಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿನಯ ಸಾವಿಗೆ ಹೃದಯಾಘಾತ ಕಾರಣ, ಆದರೆ ಅದಕ್ಕೂ ಪ್ರಮುಖ ಕಾರಣ ಅಂದರೆ ನಿದ್ರೆ ಮಾಡದೆ ಇದ್ದಿದ್ದು ಎನ್ನುವ ಮಾಹಿತಿ ಸಿಕ್ಕಿದೆ.

ವಿನಯ ಸಾವಿಗೆ ಈ ಮೂರು ವಿಚಾರಗಳೇ ಕಾರಣವೇ..?


ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ದೇಹ ಸೌಂದರ್ಯದ ಬಗ್ಗೆ ತುಂಬಾ ಆಸಕ್ತಿ ವಹಿಸಿದ್ದ ವಿನಯ, ಪ್ರತಿದಿನ ಚಾವೂ ತಪ್ಪದೆ ಜಿಮ್​ಗೆ ಹೋಗುತ್ತಿದ್ದರು ಎನ್ನಲಾಗಿದೆ. ದೇಹಕ್ಕೆ ವಿಶ್ರಾಂತಿ ಸಿಗದೆ ಇದ್ದಾಗ ಹೆಚ್ಚುವರಿ ಆಯಾಸ ಆದರೆ ಹೃದಯ ತನ್ನ ಕೆಲಸವನ್ನು ನಿಲ್ಲಿಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಅದರ ಜೊತೆಗೆ ವಿನಯಗೆ ಮದುವೆ ಆಗಿರಲಿಲ್ಲ. ಆ ವಿಚಾರದಲ್ಲೂ ಸಾವು ಸಂಭವಿಸಿರುವ ಸಾಧ್ಯತೆಯನ್ನೂ ವೈದ್ಯರು ಅಲ್ಲಗಳೆಯುವುದಿಲ್ಲ. ಯಾವಾಗ ಮನೋಲ್ಲಾಸ ಇರುವುದಿಲ್ಲವೋ ಆ ಸಮಯದಲ್ಲಿ ಹೃದಯ ತನ್ನ ಕಾರ್ಯಚಟುವಟಿಕೆಯನ್ನು ತುಂಬಾ ಆಸಕ್ತಿಯಿಂದ ಮಾಡುವುದಿಲ್ಲ ಎನ್ನುವುದು ವೈದ್ಯರ ಅಭಿಪ್ರಾಯ. ಇನ್ನೊಂದು ಕಾರಣವೆಂದರೆ ಒಂಟಿ ಜೀವನ. ಜೀವನದಲ್ಲಿ ಲವಲವಿಕೆಯೇ ಇಲ್ಲದಿದ್ದರೂ ಸಾವು ಸನಿಹಕ್ಕೆ ಬರುವ ಸಾಧ್ಯತೆ ಬಗ್ಗೆಯೂ ವೈದ್ಯರು ಎಚ್ಚರಿಸುತ್ತಾರೆ.

Related Posts

Don't Miss it !