ಓ ಮಕ್ಕಳೇ ಬನ್ನಿ ಶಾಲೆಗೆ.. ಕಳಿಸೋದಿಲ್ಲ ಅಂತಿದ್ದಾರೆ ಪೋಷಕರು..!!

ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭ ಮಾಡಿದ ಬಳಿಕ 9 ರಿಂದ 12ನೇ ತರಗತಿಗಳ ಭೌತಿಕ ಪಾಠಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಇದೀಗ 6 ರಿಂದ 8ನೇ ತರಗತಿ ಮಕ್ಕಳ ಶಾಲೆಗೆ ಬಂದು ಪಾಠ ಕೇಳಬಹುದು ಎನ್ನಲಾಗ್ತಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುವ ತಜ್ಞರ ಸಭೆಯಲ್ಲಿ ಈ ನಿರ್ಧಾರ ಹೊರ ಬೀಳುವ ಎಲ್ಲಾ ಸಾಧ್ಯತೆಗಳು ಇವೆ. ಪ್ರಾಥಮಿಕ ತರಗತಿಗಳಾದ 1 ರಿಂದ 5ನೇ ತರಗತಿ ಮಕ್ಕಳನ್ನು ಹೊರತುಪಡಿಸಿ ಉಳಿದ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಬೋಧಿಸುವುದು ಸರ್ಕಾರದ ಉದ್ದೇಶವಾದಂತೆ ಕಾಣಿಸುತ್ತಿಸುತ್ತಿದೆ. ಈ ನಡುವೆ ಕೊರೊನಾ ಮೂರನೇ ಅಲೆ ಗುಮ್ಮನನ್ನೂ ಸರ್ಕಾರವೇ ಜನರ ಹೆಗಲ ಮೇಲಿಟ್ಟಿರುವ ಕಾರಣ ಬಹುತೇಕ ಮಕ್ಕಳು ಪಾಠ ಕಲಿಯುವ ಆಸಕ್ತಿ ಇದ್ದರೂ ಶಾಲೆಗೆ ಹೋಗಲು ಹಿಂದೆ ಮುಂದೆ ನೋಡುವಂತಾಗಿದೆ.

6 – 8 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭ..!

ಹಂತ ಹಂತವಾಗಿ ಶಾಲೆಗಳ ಪ್ರಾರಂಭಕ್ಕೆ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. 2ನೇ ಹಂತದಲ್ಲಿ 6-8ನೇ ತರಗತಿ ತೆರೆಯಲು ಶಿಕ್ಷಣ ಇಲಾಖೆ ಸಿದ್ಧತೆಮಾಡಿಕೊಮಡಿದೆ. ಕೊರೊನಾ ಟಾಸ್ಕ್ ಪೋರ್ಸ್ ಸಮಿತಿ ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ಆರತಂಭ ಮಾಡಬೇಕು ಎನ್ನುವ ನಿರ್ಧಾರ ಅಂತಿಮವಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೇ ಹಂತದ ತರಗತಿಗಳು ಶುರುವಾಗಲಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸುತ್ತಿವೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರ ತೆಗೆದುಕೊಳ್ಳಬೇಕಿರುವ ಕ್ರಮಗಳು ಹಾಗೂ ಎಚ್ಚರಿಕೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಶಾಲೆ ಆರಂಭಕ್ಕೆ ಗ್ರೀನ್​ ಸಿಗ್ನಲ್​ ನೀಡಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ;

ಶಾಲೆ ಆರಂಭ ಆಗೋದು ಖಚಿತ – ಶಿಕ್ಷಣ ಸಚಿವ

ಕೋವಿಡ್ 19 ಸಮಸ್ಯೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಡಾ. ದೇವಿಶೆಟ್ಟಿ ತಂಡ ಶಾಲೆ ಆರಂಭಿಸುವ ಕುರಿತು ಸ್ಪಷ್ಟವಾಗಿ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇಂದು ತಜ್ಞರಿಂದ ಮತ್ತಷ್ಟು ಸಲಹೆ ಪಡೆದು ಶಾಲೆ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ತಿಳಿಸಿದ್ದಾರೆ. ಶಾಲೆ ಆರಂಭಿಸಲು ಯಾವುದೇ ತೊಂದರೆಯಿಲ್ಲ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಶಾಲೆ ಆರಂಭಿಸುವ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಬಂದ್​ ಆಗಿರುವ ಶಾಲೆ ತೆರೆಯುವ ಕುರಿತು ಇಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ. 1 ರಿಂದ 5ನೇ ತರಗತಿ ಶಾಲೆ ಆರಂಭ ಕುರಿತು ಸಭೆಯಲ್ಲಿ ತಜ್ಞರ ಸಲಹೆ ಪಡೆಯಲಾಗುವುದು. ಕೇಂದ್ರ ಸರ್ಕಾರ ಕೊರೊನಾ ಮೂರನೆ ಅಲೆ ಬಗ್ಗೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಕೊರೊನಾ ಕೇಸ್ ಕಡಿಮೆ ಇದೆ. ಪಾಸಿಟಿವಿಟಿ ರೇಟ್ ಕೂಡ ಕಡಿಮೆ ಇದೆ. ಕೇಂದ್ರದ ಸಲಹೆ ಪರಿಗಣಿಸಿ ಶಾಲೆ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ;

ಪೋಷಕರಿಗೆ ಯಾಕೆ ಮಕ್ಕಳನ್ನು ಕಳುಹಿಸಲು ಭಯ..!

ಕೊರೊನಾ 3ನೇ ಅಲೆ ಬರುತ್ತೋ ಬರುವುದಿಲ್ಲವೋಫ ಎನ್ನುವುದು ಸ್ವತಃ ತಜ್ಞರಿಗೆ ಜಿಜ್ಞಾಸೆ ತಂದಿದೆ. ಈ ಮೊದಲು ಆಗಸ್ಟ್​ನಲ್ಲಿ 3 ನೇ ಅಲೆ ಬರುವುದಾಗಿ ತಿಳಿಸಿದ್ದ ತಜ್ಞರು ಆ ಬಳಿಕ ಆಗಸ್ಟ್​ ಮಧ್ಯ ಅಥವಾ ಆಗಸ್ಟ್​ ಅಂತ್ಯಕ್ಕೆ ಬರುತ್ತದೆ ಎಂದಿದ್ದರು. ಇದೀಗ ಸೆಪ್ಟೆಂಬರ್​, ಅಕ್ಟೋಬರ್​ ಎನ್ನುವ ದೂರದ ಕಲ್ಲನ್ನು ತೋರಿಸುತ್ತಿದ್ದಾರೆ. ಆದರೆ ಮಕ್ಕಳು ಶಾಲೆಗೆ ಬರುವುದಾದರೆ ಪೋಷಕರಿಂದ ಅನುಮತಿ ಪತ್ರ ಪಡೆದುಕೊಂಡು ಬರುವುದು ಅನಿವಾರ್ಯ. ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಅಥವಾ ಸರ್ಕಾರದ ನಿರ್ಧಾರದಿಂದ ಏನಾದರೂ ಸಮಸ್ಯೆ ಆದರೆ, ಸರ್ಕಾರ ಕಾನೂನು ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಅನುಮತಿ ಪತ್ರ ಪಡೆಯುವ ಮೂಲಕ ಜಾಣ ನಡೆಯನ್ನು ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಏನಾದರೂ ಆದರೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆ ಪಾಲಕರದ್ದಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಆರಂಭ..!

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಬಹುತೇಕ ರಾಜಕಾರಣಿಗಳೇ ಆಗಿದ್ದಾರೆ. ಮಕ್ಕಳಿಗೆ ಫೀಸ್ ವಸೂಲಿ ಮಾಡುವ ಉದ್ದೇಶಕ್ಕಾದರೂ ಶಾಲೆಗಳನ್ನು ಆರಂಭಿಸುವ ಕೆಲಸ ಮಾಡುತ್ತಿದೆ. ಇನ್ನೊಂದಿಷ್ಟು ಸಮಯದ ಬಳಿಕ ಕೊರೊನಾ ಮೂರನೇ ಅಲೆಯ ಗುಮ್ಮನ್ನನ್ನು ತೋರಿಸಿ ಮಕ್ಕಳಿಗೆ ಮತ್ತೆ ಆನ್​ಲೈನ್​ ಶಾಲೆ ನಡೆಸಲು ಮುಂದಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮೂರನೇ ಅಲೆಯ ಗುಮ್ಮನ್ನನ್ನು ತೋರಿಸದೆ ಇದ್ದರೆ ಜನರ ಮನಸ್ಸಿನಿಂದ ಭಯ ದೂರ ಆಗಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಾರೆ. ಒಂದು ಕಡೆ ಕೊರೊನಾ ಗುಮ್ಮನನ್ನು ತೋರಿಸುವುದು ಮತ್ತೊಂದು ಕಡೆ ಮಕ್ಕಳನ್ನು ಶಾಲೆಗೆ ಬನ್ನಿ ಎನ್ನುವುದು ಎರಡನ್ನೂ ಮಾಡುತ್ತಿರುವುದು ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿದೆ. ಇದೇ ಕಾರಣಕ್ಕೆ ಈಗಾಗಲೇ ಶುರುವಾಗಿರುವ 9 ರಿಂದ 12ನೇ ತರಗತಿ ಮಕ್ಕಳು ಶಾಲೆ ಕಡೆಗೆ ಮುಖ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪೋಷಕರಲ್ಲಿ ಧೈರ್ಯ ಹುಟ್ಟುವ ಕೆಲಸಗಳನ್ನು ಸರ್ಕಾರ ಮಾಡಿದ್ರೆ ಮಕ್ಕಳನ್ನು ಧೈರ್ಯವಾಗಿ ಕಳುಹಿಸಲಿದ್ದಾರೆ. ಇಲ್ಲದಿದ್ರೆ ಕಷ್ಟ.

Related Posts

Don't Miss it !