ಈ ಮುಗ್ದ ಕಂದಮ್ಮನ ಸಾವಿಗೆ ಹೊಣೆ ಯಾರು..? ಉತ್ತರ ಕೊಡಿ ಸಿಎಂ ಸಾರ್​..!!

ಬೆಂಗಳೂರಿನಲ್ಲಿ 2020ರ ಮಾರ್ಚ್ 11ರಂದು ಘನಘೋರ ಘಟನೆಯೊಂದು ನಡೆದಿತ್ತು. ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ನಡೆದಿದ್ದ ದುರ್ಘಟನೆಯಲ್ಲಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ರೆಚಲ್ ಷ್ರೀಷಾ,​ 2 ವರ್ಷಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಅಂತಿಮವಾಗಿ ಇಂದು ಉಸಿರು ಚಿಲ್ಲಿದ್ದಾಳೆ. ತಂದೆಯೊಂದಿಗೆ ಶಾಲೆಗೆ ಸ್ಕೂಟರ್​​ನಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದ ಒಣ ಮರದ ತುಂಡೊಂದು ಬಾಲಕ ರೆಚಲ್​ ಷ್ರೀಷಾಳ ಪ್ರಾಣವನ್ನು ಬಲಿ ಪಡೆದಿದೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮಣಿಪಾಲ್​ ಆಸ್ಪತ್ರೆ ಸೇರಿದ್ದ ರೆಚಲ್​ ಷ್ರೀಷಾ, ಸಾಕಷ್ಟು ನೋವು ಅನುಭವಿಸಿದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ವಿಪರ್ಯಾಸ.

ಕಿಚ್ಚನ ಅಭಿಮಾನಿಯಾಗಿದ್ದಳು ಪುಟ್ಟ ರೆಚಲ್​ ಷ್ರೀಷಾ..!!

ಓದಿನಲ್ಲಿ ಸಾಕಷ್ಟು ಮುಂದಿದ್ದ ಪುಟಾಣಿ ರೆಚಲ್ ಷ್ರೀಷಾ, ಉಳಿದ ಪಠ್ಯೇತರ ಚಟುವಟಿಕೆಯಲ್ಲೂ ತುಂಬಾ ಜಾಣೆಯಾಗಿದ್ದ ರೆಚಲ್​ ಷ್ರೀಷಾ, ಕಿಚ್ಚ ಸುದೀಪನ ಅಪ್ಪಟ ಅಭಿಮಾನಿಯಾಗಿದ್ದಳು. ಹಲವಾರು ಬಾರಿ ಸುದೀಪ್​ ಮನೆ ಬಳಿಗೆ ಮಗಳನ್ನು ಕರೆದುಕೊಂಡು ಹೋಗಿದ್ದ ರೆಚಲ್​ ಷ್ರೀಷಾ ಪೋಷಕರು ಭೇಟಿ ಮಾಡಿಸುವ ಕೆಲಸ ಮಾಡಿದ್ದರು. ಆದರೆ ಸುದೀಪ್​ ಸಿಗದ ಕಾರಣ, ಬರಿಗೈಲಿ ವಾಪಸ್​ ಆಗಿದ್ದರು. ಇನ್ನೂ ರೆಚಲ್​ ಷ್ರೀಷಾ ಮೇಲೆ ಮರದ ಕೊಂಬೆ ಬಿದ್ದು ಮಣಿಪಾಲ ಆಸ್ಪತ್ರೆ ಸೇರಿ ಚಿಕಿತ್ಸೆ ಕೊಡಿಸಿದ್ದರು. ಒಂದೂವರೆ ವರ್ಷದ ಬಳಿಕ ಮನೆಗೆ ಕರೆದುಕೊಂಡು ಹೋಗಿದ್ದ ಪೋಷಕರು ಕಳೆದ ತಿಂಗಳ ಜನವರಿ 11 ರಂದು ನಟ ಸುದೀಪ್​​ಗೆ ವೀಡಿಯೋ ಕಾಲ್​ ಮಾಡಿ ರೆಚಲ್​​ ಷ್ರೀಷಾಳ ಪೋಷಕರು, ತಮ್ಮ ಮಗಳ ಕೊನೆ ಆಸೆಯನ್ನು ನೆರವೇರಿಸಿದ್ದರು. ತನ್ನ ನೆಚ್ಚಿನ ನಾಯಕ ನಟನನ್ನು ಮಗಳಿಗೆ ತೋರಿಸಿದ್ದರು. ನಟ ಸುದೀಪ್​​ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರಾದರೂ ರೆಚಲ್​ ಷ್ರೀಷಾ ತನ್ನ ಬದುಕಿನ ಪಯಣ ಮುಗಿಸಿದ್ದಾಳೆ.

ಇದನ್ನೂ ಓದಿ: ತಂಗಿ ಗಂಡನ ಜೊತೆಗೆ ಸರಸ ಸಲ್ಲಾಪ.. 4 ಮಕ್ಕಳು ಸೇರಿ ಐವರನ್ನು ಬಲಿ ಪಡೆದ ಮಾ‘ನಾ’ರಿ

ಸಾವಿಗೆ ಕಾರಣ ಸರ್ಕಾರದ ನಿರ್ಲಕ್ಷ್ಯ, ಲಚ್ಚೆಗೇಡಿತನ..!!

10 ವರ್ಷದ ಪುಟಾಣಿ ಮಗಳನ್ನು ಕಳೆದುಕೊಂಡ ರೆಚಲ್​ ಷ್ರೀಷಾಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರು ದಿಕ್ಕುತೋಚದೆ ಅನಾಥರಾಗಿದ್ದಾರೆ. ಇನ್ನೂ ಮಣಿಪಾಲ ಆಸ್ಪತ್ರೆಯಲ್ಲಿ ರೆಚಲ್​ ಷ್ರೀಷಾಳನನ್ನು ಭೇಟಿ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಸುಮಾರು 40 ನಿಮಿಷಗಳ ಕಾಲ ಮಗುವಿನ ಜೊತೆಗೆ ಕಾಲ ಕಳೆದಿದ್ದರು. ರೆಚಲ್​ ಷ್ರೀಷಾಳ ಚಿಕಿತ್ಸೆಗೆ ಕುಮಾರಸ್ವಾಮಿ ನೆರವನ್ನೂ ನೀಡಿದ್ದರು. ಸುದೀಪ್​ ಕೂಡ ಹೆಚ್ಚಿನ ಚಿಕಿತ್ಸೆ ನೀಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಭರವಸೆಗೂ ಮಣಿಯದ ಯಮರಾಜ, ಪುಟಾಣಿ ರೆಚಲ್​ ಷ್ರೀಷಾಳನ್ನು ಬಲಿ ಪಡೆದಿದ್ದಾನೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಲಜ್ಜೆಗೇಡಿತನಕ್ಕೆ ಪುಟಾಣಿ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿದೆ.

ಇದನ್ನೂ ಓದಿ: ಕ್ರೇಜಿಸ್ಟಾರ್​ ರವಿಚಂದ್ರನ್​ ಕಿಡ್ನ್ಯಾಪ್​.. ಕನ್ನಡ ಸಿನಿಪ್ರೇಮಿಗಳಲ್ಲಿ ಆತಂಕ..!

ಬಾಲಕಿ ಸಾವಿನಲ್ಲಿ ಸರ್ಕಾರ ಮಾಡಿದ ಎಡವಟ್ಟು ಏನು..?

ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಎಚ್ಚರ ವಹಿಸಿ ಮರದ ಒಣಗಿದ ಕೊಂಬೆಯನ್ನು ಮೊದಲೇ ತೆರವು ಮಾಡುವ ಕೆಲಸ ಮಾಡಿದ್ದರೆ, ಇಂದು ರೆಚಲ್​ ಷ್ರೀಷಾಳ ಪೋಷಕರು ದುಃಖಸಾಗರದಲ್ಲಿ ಮುಳುಗಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಪುಟಾಣಿ ಜೀವವೊಂದು ಪ್ರಾಣತೆತ್ತಿದೆ. ಆಡಳಿತ ನಡೆಸುವ ನಾಯಕರು ಹಾಗೂ ಆಡಳಿತ ವರ್ಗಕ್ಕೆ ಪರಿಜ್ಞಾನ ಇಲ್ಲದಿರುವುದು ಈ ಪ್ರಕರಣದಿಂದ ಸಾಬೀತಾಗಿದೆ. ಇದೇ ಪ್ರಕರಣವನ್ನು ಸಾಕ್ಷಿಯಾಗಿ ಹಿಡಿದುಕೊಂಡು ಹೈಕೋರ್ಟ್​ ಸರ್ಕಾರಕ್ಕೆ ಬೃಹತ್​ ಪ್ರಮಾಣದ ದಂಡ ವಿಧಿಸಿ, ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಚಾಟಿ ಬೀಸಬೇಕಿದೆ. ಇಲ್ಲದಿದ್ರೆ ಕಂದಾಯ ವಸೂಲಿ ಮಾಡುವುದು, ಯೋಜನೆಗಳ ಹೆಸರು ಹೇಳಿಕೊಂಡು ಲೂಟಿ ಮಾಡುವ ಜನನಾಯಕರು, ಅಧಿಕಾರಿ ವರ್ಗಕ್ಕೆ ಜವಾಬ್ದಾರಿಯುತ ಕೆಲಸ ಮಾಡಬೇಕು ಎನ್ನುವ ಆಸಕ್ತಿಯೇ ಬರಲಾರದು.

Related Posts

Don't Miss it !