ಆತ್ಮಗಳ ಜೊತೆಗೆ ಮಾತನಾಡುವ ವಿದ್ಯೆ..! 17 ವರ್ಷದ ಯುವತಿ ನಾಪತ್ತೆ..!

ಬೆಂಗಳೂರಿನಲ್ಲಿ ವಿಚಿತ್ರವಾದ ಮಿಸ್ಸಿಂಗ್ ಕೇಸ್ ಒಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಯುವತಿ ನಾಪತ್ತೆಯಾಗಿದ್ದಾಳೆ. ಆದರೆ ಆಕೆಯನ್ನು ಯಾರೂ ಅಪಹರಣ ಮಾಡಿಲ್ಲ. ಆಕೆಯೇ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ನಾಪತ್ತೆಯಾಗಿರುವ ಕಾರಣ ಪೋಷಕರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. 17 ವರ್ಷದ ಯುವತಿ ಮನೆ ಬಿಟ್ಟು ಹೋಗಿರುವುದರಿಂದ ಪ್ರೀತಿ, ಪ್ರೇಮ, ಪ್ರಣಯ ಎನ್ನುವ ಮಾತು ತುಂಬಾ ಸಲೀಸಾಗಿ ಎಲ್ಲರಲ್ಲೂ ಬರುವಂತಹ ಮಾತು. ಆದರೆ ಪೋಷಕರು ಮಾತ್ರ ಬೇರೆಯದ್ದೇ ಕಾರಣ ನೀಡುತ್ತಿದ್ದಾರೆ. ಪೊಲೀಸರೂ ಹಿಂದೆಂದೂ ಕೇಳಿರದ ಕಾರಣ ನೋಡಿ ಪೊಲೀಸರೇ ಒಂದು ಕ್ಷಣ ನಿಬ್ಬೆರಗಾಗಿದ್ದಾರೆ. ಆ ಕಾರಣ ಅಷ್ಟೊಂದು ವಿಚಿತ್ರವಾಗಿದೆ.

ಆನ್​ಲೈನ್​ ಕಲಿತಳು ಅಚ್ಚರಿಯ ವಿದ್ಯೆ..! ಮನೆ ತೊರೆದ ಮಗಳು..!

ಕೊರೊನಾ ಕಾರಣದಿಂದ ಸರಿಯಾಗಿ ಶಾಲೆಗಳು ನಡೆದಿರುವ ಕಾರಣಕ್ಕೆ ಮಕ್ಕಳು ಆನ್​ಲೈನ್​ ಪಾಠ ಕೇಳುವಂತಾಗಿದೆ. ಅದೇ ರೀತಿ ಆನ್​ಲೈನ್​ ಮೂಲಕ ಕಲಿತ ವಿದ್ಯೆ ಈಕೆ ಮನೆ ಬಿಟ್ಟು ಹೋಗುವುದಕ್ಕೆ ಕಾರಣವಾಗಿದೆ ಎನ್ನುವುದು ಪೋಷಕರು ನೀಡುತ್ತಿರುವ ಕಾರಣ. ‘ಶಾಮನಿಸಂ’ ವಿದ್ಯೆಗೆ ಆಕರ್ಷಿತಳಾಗಿದ್ದ ಯುವತಿ ಏಕಾಏಕಿ ಮೌನಕ್ಕೆ ಶರಣಾಗಿದ್ದಳು. ‘ಶಾಮನಿಸಂ’ ಬಗ್ಗೆ ಹೆತ್ತವರಲ್ಲಿಯೂ ಹೇಳಿಕೊಂಡಿದ್ದಳು. ಯಾರೊಂದಿಗೂ ಬೆರೆಯದೆ ಒಬ್ಬಳೇ ಇದ್ದ ಯುವತಿಯನ್ನು ಪೋಷಕರು ಕೌನ್ಸಲಿಂಗ್​ಗೂ ಕರೆದುಕೊಂಡು ಹೋಗಿದ್ದರು. ಆ ಬಳಿಕ ಹೆತ್ತವರ ಜೊತೆಗೂ ಮಾತನಾಡುವುದನ್ನು ನಿಲ್ಲಸಿದ್ದಳು. ಇದೀಗ ಸರಿ ಸುಮಾರು 2 ತಿಂಗಳ ಹಿಂದೆ ಅಂದರೆ ಅಕ್ಟೋಬರ್ 31 ರಂದು 2 ಜೊತೆ ಬಟ್ಟೆ ಹಾಗೂ 2,500 ನಗದು ಜೊತೆಗೆ ಅನುಷ್ಕಾ ಮನೆ ಬಿಟ್ಟು ಹೋಗಿದ್ದಾಳೆ. ‘ಶಾಮನಿಸಂ’ ಎನ್ನುವ ಭೂತ ಪೋಷಕರನ್ನು ಆತಂಕಕ್ಕೆ ಈಡು ಮಾಡಿದೆ.

Read this;

‘ಶಾಮನಿಸಂ’ ತಂತ್ರ ಅಂದ್ರೆ ಏನು ಗೊತ್ತಾ..?

17 ವರ್ಷದ ಅನುಷ್ಕಾಳಿಗೆ ವಿಶೇಷವಾದ್ದದ್ದು ಅಂದ್ರೆ ಹೆಚ್ಚಿನ ಕುತೂಹಲ ಮತ್ತು ಆಸ್ತಿ. ಪುರಾತನ ಕಾಲದ ಹೀಲಿಂಗ್ ಪದ್ಧತಿಯಾದ ‘ಶಾಮನಿಸಂ’ ಇದೊಂದು ವಿದ್ಯೆ. ‘ಶಾಮನಿಸಂ’ ಅಭ್ಯಾಸ ಮಾಡುವ ಜನರು ಅರೆಪ್ರಜ್ಞಾವಸ್ಥೆಯಲ್ಲಿ ಆತ್ಮಗಳೊಂದಿಗೆ ಮಾತುಕತೆ ನಡೆಸ್ತಾರೆ. ಆತ್ಮಗಳಿಗೆ ನಿರ್ದೇಶನ ಮಾಡ್ತಾರೆ. ಆನ್​ಲೈನ್​ನಲ್ಲಿ ‘ಶ್ಯಾಮನಿಸಂ’ ಅಭ್ಯಾಸ ಮಾಡುತ್ತಿದ್ದ ಅನುಷ್ಕಾ, ಇದರಿಂದ ಭಾರೀ ಪ್ರಭಾವಕ್ಕೆ ಒಳಗಾಗಿದ್ದಳು ಎನ್ನುತ್ತಾರೆ ಪೋಷಕರು. ಮಗಳು ಅನುಷ್ಕಾ ನಾಪತ್ತೆ ಹಿಂದೆ ‘ಶಾಮನಿಸಂ’ ಅಂದ್ರೆ ಹಳ್ಳಿ ಭಾಷೆಯಲ್ಲಿ ಮಾಟ ಮಂತ್ರದ ಪ್ರಭಾವಿದೆ ಎಂದು ಪೋಷಕರು ಪೊಲೀಸರ ಬಳಿ ದೂರಿದ್ದಾರೆ. ಸದಾ ಕಾಲ ಒಂಬಟ್ಟಿಯಾಗಿ ಆನ್​ಲೈನ್​​ನಲ್ಲಿ ಮಾಟ – ಮಂತ್ರದ ವೀಡಿಯೋಗಳನ್ನೇ ನೋಡ್ತಿದ್ದ ಅನುಷ್ಕಾ ಎಲ್ಲಿದ್ದಾಳೆ ಪತ್ತೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ನಗರದ ಸಿಸಿಟಿವಿ ಜಾಲಾಡಿದರೂ ಅನುಷ್ಕಾ ಪತ್ತೆಯಿಲ್ಲ..!!

ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೀ #helpfindanushka ಎನ್ನುವ ಅಭಿಯಾನ ಶುರು ಮಾಡಲಾಗಿದೆ. ಜೊತೆಗೆ ಅನುಷ್ಕಾ ತಂದೆ ಫೋನ್​ ನಂಬರ್​ ಕೂಡ ನೀಡಲಾಗಿದ್ದು, ಮಗಳು ಪತ್ತೆಯಾದಲ್ಲಿ ಈ ನಂಬರ್​ಗೆ 9663875821 ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಅನುಷ್ಕಾ ಪೋಷಕರು ಕೂಡ ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದಾರೆ. ಆದರೆ ಅನುಷ್ಕಾ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ‘ಶಾಮನಿಸಂ’ ಕಲಿತು ಆತ್ಮಗಳ ಜೊತೆಗೆ ಸಂಚರಿಸುತ್ತಿದ್ದಾಳೆ. ಅನುಷ್ಕಾ ನಿವಾಸ ರಾಜಾಜಿನಗರದಿಂದ ಹೊರಮಾವು ತನಕ ಸಿಸಿಟಿವಿ, ಪಿಜಿ, ಹಾಸ್ಟೆಲ್​, ಅಧ್ಯಾತ್ಮ ಕೇಂದ್ರಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ಅನುಷ್ಕಾ ಸುಳಿವು ಸಿಕ್ಕಿ ಎನ್ನುತ್ತಾರೆ ಪೊಲೀಸರು.

Also Read;

‘ದಯಮಾಡಿ ಮಗಳ ಪತ್ತೆಗೆ ಸಹಾಯ ಮಾಡಿ’

ಅಪ್ರಾಪ್ತರು ನಾಪತ್ತೆಯಾದ ವೇಳೆ 24 ಗಂಟೆಗಳಲ್ಲಿ ಪ್ರಕರಣ ದಾಖಲಿಸಬೇಕು. ನಾಪತ್ತೆಯಾಗಿ 4 ತಿಂಗಳು ಕಳೆದರೂ ಪತ್ತೆಯಾಗದಿದ್ದರೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು. ಜಿಲ್ಲಾ ಪೊಲೀಸರ ಗಮನಕ್ಕೆ ತರಬೇಕು ಹಾಗೂ ಮಾನವ ಕಳ್ಳಸಾಗಣೆ ನಿಗ್ರಹ ದಳಕ್ಕೆ ಮಾಹಿತಿ ನೀಡಬೇಕು ಎನ್ನುವುದು ಸುಪ್ರೀಂಕೋರ್ಟ್​ ಆದೇಶ. ಇದಿಗ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಅಪಹರಣ ಕೇಸನ್ನು ಸೆಕ್ಷನ್​ 363ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ ಈ ಹೆಣ್ಣು ಮಗಳು ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್​ ಠಾಣೆ, ಅಥವಾ ಈ ಮೇಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎನ್ನುವುದು ಪೊಲೀಸರು ಹಾಗೂ ಪೋಷಕರ ಮನವಿಯಾಗಿದೆ.

Related Posts

Don't Miss it !