ಮುಖ್ಯಮಂತ್ರಿ ನೋಡಲು ಬಂದ ಬಾಲಕನ ತಲೆ ಹೊಡೆದ ಪೊಲೀಸ್ರು..!

ದಾವಣಗೆರೆ ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್​ ಅಶೋಕ್​, ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕಂದಾಯ ಸಚಿವ ಆರ್​.ಅಶೋಕ್​ ಅವರ ಗ್ರಾಮ ವಾಸ್ತವ್ಯಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗಿಯಾಗಿದ್ದಾರೆ. ಹಳ್ಳಿಯ ಜನರ ಜಾನಪದ ಭಜನಾ ಗೀತೆಗೆ ಭಜನೆ ಮಾಡಿ ಖುಷಿ ಪಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ಮುಖ್ಯಮಂತ್ರಿಗಳನ್ನು ನೋಡಲು ಬಂದ ಬಾಲಕನ ತಲೆಗೆ ಹೊಡೆದು ರಕ್ತ ಸೋರುವಂತೆ ಮಾಡಿದ್ದಾರೆ ನಮ್ಮ ಆರಕ್ಷಕ ಪಡೆ ಸಿಬ್ಬಂದಿ.

11 ವರ್ಷದ ಬಾಲಕನ ಮೇಲೆ ಗೂಂಡಾಗಿರಿ..!

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೋಡಲು ಬಂದ ಬಾಲಕನಿಗೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ನೋಡಲು ವೇದಿಕೆಯತ್ತ ಬಂದಿದ್ದಾಗ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಅಡ್ಡಾದಿಡ್ಡಿ ಓಡಾಡ್ತೀಯಾ ಎಂದು ತಲೆ‌ಗೆ ಲಾಠಿಯಿಂದ ಬಾರಿಸಿದ್ದಾರೆ ಎಎಸ್​ಐ. ರಕ್ತ ಸುರಿಸಿಕೊಂಡು ಅಳುತ್ತಾ ಕಾರ್ಯಕ್ರಮದಿಂದ ಹೊರ ಹೋಗಿದ್ದ ಬಾಲಕ, ಇನ್ನೂ ಮನೆಗೆ ಬಂದಿಲ್ಲ ಎಂದು ಬಾಲಕನ ತಾಯಿ ಮಂಗಳ ಕಣ್ಣೀರು ಹಾಕಿದ್ದಾರೆ. ತಲೆಗೆ ಏಟು ಬಿದ್ದಿರುವ ಕಾರಣ ಹೆದರಿಕೊಂಡು ಮನೆಗೆ ಬಂದಿಲ್ಲ ಎಂದು 11 ವರ್ಷದ ಬಾಲಕ ನಿತಿನ್ ತಾಯಿ ಮಂಗಳಾ ಹೇಳಿದ್ದಾರೆ.

ಮುಖ್ಯಮಂತ್ರಿ ನೋಡಲು‌ ಬಂದ ಬಾಲಕನಿಗೆ ಪೊಲೀಸರಿ ಹಲ್ಲೆ ಮಾಡಿದ್ದಾರೆ. ಆದರೆ ಆಕಸ್ಮಿಕವಾಗಿ ನಡೆದ ಘಟನೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ವಿದ್ಯಾರ್ಥಿನಿಯರು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಪೊಲೀಸರು ಬೇಡ ಎಂದರು ಕೇಳದೆ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಜನರ ನೂಕಾಟದ ನಡುವೆಯು ವಿದ್ಯಾರ್ಥಿನಿಯರ ಆಸೆಯನ್ನು ಸಿಎಂ ಪೂರೈಸಿದ್ದಾರೆ. ವಿದ್ಯಾರ್ಥಿನಿಯರು ಸೆಲ್ಫಿ ಕೇಳುತಿದ್ದಂತೆ ಸಿಎಂ ಮಾಸ್ಕ್ ತೆಗೆದು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಆದರೆ ಮತ್ತೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ನೋಡಲು ಬಂದ ಬಾಲಕನ ಮೇಲೆ ಪೊಲೀಸರು ಹಲ್ಲೆ ಮಾಡಿ ರಕ್ತ ಚೆಲ್ಲಿದ್ದಾರೆ.

ಕುಂದೂರಲ್ಲಿ ಮನೆ ಮನೆಗಳಿಗೂ ಸಚಿವರ ಭೇಟಿ..!

ಕುಂದೂರು ಗ್ರಾಮದಲ್ಲಿ ಸಚಿವ ಆರ್​ ಅಶೋಕ್​ ಮನೆ ಮನೆಗೆ ಭೇಟಿ ನೀಡಿರುವ ಸಚಿವ ಆರ್ ಆಶೋಕ್, ಗ್ರಾಮ‌ ವಾಸ್ತವ್ಯ ಮಾಡುವ ಮುನ್ನ ರಂಗಮಂದಿರದ ಬಳಿ ಮಲಗಿದ್ದ ವೃದ್ಧರನ್ನು ಮಾತನಾಡಿಸಿದ್ದಾರೆ. ವೃದ್ಧಾಪ್ಯ ವೇತನ ಸರಿಯಾಗಿ ಬರುತ್ತೋ ಇಲ್ವೋ ಎಂದು ಯೋಗಕ್ಷೇಮ ವಿಚಾರಿಸಿದ್ದಾರೆ. ಗ್ರಾಮದ ಬಹುತೇಕ ಮನೆಗಳಿಗೆ ಭೇಟಿ ನೀಡಿದ್ದಾರೆ. ಶಾಸಕ ಎಂಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಹಲವಾರು ನಾಯಕರು ಸಾಥ್ ನೀಡಿದ್ದಾರೆ. ಗ್ರಾಮ ವಾಸ್ತವ್ಯ ಹೂಡಿದ್ದೂ ಸರಿ, ಸಿಎಂ ಚಾಲನೆ ಕೊಟ್ಟಿದ್ದೂ ಸರಿ, ಆದರೆ ಮುಂಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನೋಡಲು ಬಂದ ಬಾಲಕನ ಮೇಲೆ ಖಾಕಿಪಡೆ ಕ್ರೌರ್ಯ ಮೆರೆದಿರುವುದು ಹೀನಾಯ ಕೃತ್ಯವೇ ಸರಿ.

Related Posts

Don't Miss it !