ಮಾವುತನನ್ನು ಕೊಂದ ಅನೆಗೂ ಜೈಲು ಶಿಕ್ಷೆ..! ತಾಯಿ ಕೊಂದ ನಾಯಿಗೂ ಶಿಕ್ಷೆ..!

ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಸರ್ಕಾರ ಕೆಲವೊಂದು ಶಿಕ್ಷೆಗಳನ್ನು ಗುರುತಿಸಿದ್ದು, ಭಾರತೀಯ ದಂಡ ಸಂಹಿತೆ ಪ್ರಕಾರ ನ್ಯಾಯಾಲಯ ಶಿಕ್ಷೆಯನ್ನು ವಿಧಿಸುತ್ತದೆ. ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಎಲ್ಲಾ ಅಪರಾಧಿ ಕೃತ್ಯಗಳಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದರೆ ಕಾಡುಪ್ರಾಣಿಗಳಿಗೂ ಶಿಕ್ಷೆ ನೀಡುವ ಮೂಲಕ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇ ಬೇಕು ಎನ್ನುವುದನ್ನು ಸಾಮಾಜಿಕ ನ್ಯಾಯದ ಮೂಲಕ ಇತ್ತೀಚಿನ ಕೆಲವು ಪ್ರಕರಣಗಳು ಸಾಕ್ಷಿಯಾಗಿವೆ. ಕಾಡಿನಿಂದ ಹಿಡಿದು ತರಬೇತಿ ನೀಡಿದ್ದ ಆನೆಯೊಂದು ಮಾವುತನನ್ನೇ ಕೊಂದಿದ್ದ ಪ್ರಕರಣದಲ್ಲಿ ಆನೆಯನ್ನು ಬಂಧನ ಮಾಡಲಾಗಿದೆ. ಇನ್ನು ಮತ್ತೊಂದು ಕಡೆ ಮನೆ ಮಾಲೀಕನ ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಶ್ವಾನವನ್ನು ಬಂಧಿಸಿರುವ ಘಟನೆ ಜರುಗಿದೆ.

ಗಜ ರಾಜ ಮಾಡಿದ ತಪ್ಪಾದರೂ ಏನು? ಈ ಶಿಕ್ಷೆ ಏಕೆ?

ಮಧ್ಯಪ್ರದೇಶದ ಪನ್ನಾ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನನ್ನು ನಿಯಂತ್ರಣ ಮಾಡುತ್ತ ಸಾಕಿ ಸಲಹಿದ್ದ ಮಾವುತನನ್ನು ಕೊಂದ ಆನೆಗೆ ಜೈಲುಶಿಕ್ಷೆ ನೀಡಲಾಗಿದೆ. ಸರಪಳಿಗಳನ್ನು ಹಾಕಿ ಆನೆಯನ್ನು ಬಂಧಿಸಲಾಗಿದೆ. ಆನೆಗಳನ್ನು ಪನ್ನಾ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಹಿಡಿದು ಪಳಗಿಸುವ ಕೆಲಸ ಮಾಡಲಾಗುತ್ತದೆ. ಇದೇ ರೀತಿ ಕೆಲವು ವರ್ಷಗಳ ಹಿಂದೆ ಪಳಹಿಸಲಾಗಿತ್ತು. ಕಳೆದ ಜುಲೈ 4ರಂದು ಮಾವುತನನ್ನು ಕೊಂದು ಕಾಡಿನೊಳಗೆ ಪರಾರಿಯಾಗಿತ್ತು. ಈ ವೇಳೆ ಮಾವುತನ ಸಹಾಯಕ್ಕೆ ಬಂದಿದ್ದ ಹೆಣ್ಣು ಆನೆ ವತ್ಸಲಾ ಮೇಲೂ 55 ವರ್ಷದ ಗಂಡು ಆನೆ ರಾಮ್​ ಬಹದ್ದೂರ್​​ ದಾಳಿ ಮಾಡಿತ್ತು. ಆ ಬಳಿಕ ಮದವೇರಿದ ಆನೆಯ ಬೆನ್ನತ್ತಿದ್ದ ಮಾವುತರು ಕೆಲವು ದಿನಗಳ ಬಳಿಕ ಆನೆಯನ್ನು ಸೆರೆ ಹಿಡಿದು ಬಂಧಿಸಲಾಗಿದೆ. ಇದೇ ಮೊದಲ ಬಾರಿಗೆ ಆನೆಗೆ ಅರಣ್ಯಾಧಿಕಾರಿಗಳು ಶಿಕ್ಷೆ ವಿಧಿಸಿದ್ದಾರೆ.

30 ವರ್ಷಗಳ ಹಿಂದೆ ಸೆರೆ ಹಿಡಿದಿದ್ದ ರಾಮ್​ ಬಹದ್ದೂರ್​..!

ಛತ್ತೀಸ್‌ಗಢದ ಕಾಡಿನಲ್ಲಿ ಈ ಆನೆಯನ್ನು 1993 ರಲ್ಲಿ ಸೆರೆಹಿಡಿಯಲಾಗಿತ್ತು. ಸುಮಾರು 25 ವಯಸ್ಸಿನ ಪ್ರಾಯದ ಆನೆಯನ್ನು ಸೆರೆ ಹಿಡಿದು ಪನ್ನಾ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕರೆತರಲಾಗಿತ್ತು. ಅಂದಿನಿಂದ ಆನೆಗೆ ರಾವ್​ ಬಹದ್ದೂರ್​​ ಎಂದು ನಾಮಕರಣ ಮಾಡಿ ಮಾವುತ ಮಹಾವತ್ ಆನೆ ಜೊತೆಗಿದ್ದಾನೆ. ಗಂಡು ಆನೆ ರಾಮ್ ಬಹದ್ದೂರ್ ಆನೆ ಜೊತೆಗೆ ಬಹುಕಾಲ ಸಮಯ ಕಳೆದಿದ್ದು, ಆನೆಯ ಸಂಪೂರ್ಣ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದನು. ಆನೆ ಕೂಡ ಮಾವುತನ ಮೇಲೆ ಸಾಕಷ್ಟು ಪ್ರೀತಿಯನ್ನು ಹೊಂದಿತ್ತು. ಆದರೆ ಜುಲೈ 4ರಂದು ಏಕಾಏಕಿ ಮದವೇರಿದ್ದ ಆನೆ, ಮಾವುತನನ್ನು ತುಳಿದು ಸಾಯಿಸಿ, ಕಾಡಿನೊಳಕ್ಕೆ ನುಗ್ಗಿ ಹೋಗಿತ್ತು. ಇದೀಗ ಬಂಧನ ಮಾಡಿ ಶಿಕ್ಷೆ ವಿಧಿಸಲಾಗಿದೆ ಎಂದು ಪನ್ನ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಉತ್ತಮ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ತಾಯಿ ಕೊಂದ ಸಾಕು ನಾಯಿ..!

ಉತ್ತರ ಪ್ರದೇಶದ ಲಕ್ನೌದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಕಳೆದ ಮೂರು ದಿನಗಳ ಹಿಂದೆ ಸಂಭವಿಸಿದ್ದು, 82 ವರ್ಷದ ವಯೋವೃದ್ಧೆ ಶಿಕ್ಷಕಿಯನ್ನು ಕೊಂದಿದೆ. ಕೈಸರ್​ಬರ್ಗ್​​ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ಮಹಿಳೆ ತಮ್ಮ ಮಗ ಜಿಮ್​ ಟ್ರೈನರ್​ ಜೊತೆಯಲ್ಲಿ ಮನೆಯಲ್ಲಿ ವಾಸವಿದ್ದರು. ಆಕ್ರಮಣಕಾರಿ ಆಗಿದ್ದ ಪಿಟ್​ಬುಲ್​ ಜಾತಿಯ ಎರಡು ನಾಯಿಗಳನ್ನು ಸಾಕಿದ್ದರು. ಮಗ ಮುಂಜಾನೆ 5 ಗಂಟೆಗೆ ಜಿಮ್​ ತೆರೆಯುವ ಉದ್ದೇಶದಿಂದ ಎಂದಿನಂತೆ ತೆರಳಿದ್ದ ಬಳಿಕ ನಾಯಿಹಗಳು ದಾಳಿ ಮಾಡಿದ್ದವು. ವಯೋವೃದ್ಧೆಯ ಚೀರಾಟ ಕೇಳಿದ ಬಳಿಕ ಅಕ್ಕಪಕ್ಕದ ಮನೆಯ ನಿವಾಸಿಗಳು ರಕ್ಷಣೆ ಓಡಿ ಬಂದಿದ್ದರು. ಆದರೆ ಮನೆಯ ಡೋರ್​ ಲಾಕ್ ಆಗಿದ್ದರಿಂದ ರಕ್ಷಣೆ ಮಾಡುವುದು ಅಸಾಧ್ಯವಾಗಿತ್ತು. ಜಿಮ್​ ಟ್ರೈನರ್​ ಆಗಿದ್ದ ಮಗ ಬರುವ ವೇಳೆಗೆ ಆ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆಗೆ ಉಸಿರಾಟ ನಿಂತಿತ್ತು. ಆ ಬಳಿಕ ಸ್ಥಳೀಯ ಮುನ್ಸಿಪಲ್​ ಅಧಿಕಾರಿಗಳು ಬಂದು ನಾಯಿಯನ್ನು ವಶಕ್ಕೆ ಪಡೆದಿದ್ದಾರೆ.

Related Posts

Don't Miss it !