ಮರ್ಯಾದ ಹತ್ಯೆ: ಶಿವಮೊಗ್ಗ ಮಗಳು, ದಾವಣಗೆರೆ ವಾಸ, ಚಿಕ್ಕಮಗಳೂರಲ್ಲಿ ಮರ್ಡರ್

ಚಿಕ್ಕಮಗಳೂರಿನಲ್ಲಿ ಮರ್ಯಾದ ಹತ್ಯೆ ನಡೆದಿದೆ. ಮಗಳು ಪ್ರೀತಿಸುತ್ತಿದ್ದಳು, ತಮ್ಮ ಮಾತನ್ನು ಕೇಳಲಿಲ್ಲ ಎನ್ನುವ ಏಕೈಕ ಕಾರಣಕ್ಕೆ 18 ವರ್ಷದ ಮಗಳನ್ನು ತಂದೆಯೇ ಬಡಿದು ಕೊಂಡದಿದ್ದಾರೆ. ಕಡೂರು ತಾಲೂಕಿನ ಬೀರೂರಿನಲ್ಲಿ ಈ ಘಟನೆ ನಡೆದಿದೆ. 18 ವರ್ಷ ವಯಸ್ಸಿನ ರಾಧಾ ಎಂಬ ಯುವತಿಯನ್ನು ತಂದೆ ಚಂದ್ರಪ್ಪ ಕೊಲೆ ಎಂಬುವರು ಕೊಲೆ ಮಾಡಿದ್ದಾರೆ. ಮಗಳು ಪ್ರೇಮಪಾಶಕ್ಕೆ ಸಿಲುಕಿದ್ದಳು. ಆದರೆ, ಆ ಪ್ರೇಮ ಪಾಶದಿಂದ ಮಗಳನ್ನು ಹೊರಕ್ಕೆ ಕರೆತರಲಾಗದೆ ವೇಲ್​ನಿಂದ ಮಗಳ ಕುತ್ತಿಗೆ ಬಿಗಿದು ಕೊಂದು ಬಿಟ್ಟಿದ್ದಾರೆ. ಬೀರೂರು ಪೊಲೀಸರು ಆರೋಪಿ ಚಂದ್ರಪ್ಪನನ್ನು ಬಂಧನ ಮಾಡಿದ್ದಾರೆ.

ಶಿವಮೊಗ್ಗದ ರಾಧ ಚಿಕ್ಕಮಗಳೂರಲ್ಲಿ ಕೊಲೆ..!

ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕೆಂಚೇಗೌಡ ಕೊಪ್ಪಲಿನ ನಿವಾಸಿಯಾದ ಚಂದ್ರಪ್ಪ, ಚಿಕ್ಕಮಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದರು. ಅವರಿಗೆ ಮುದ್ದಾದ ಮಗಳು ಇದ್ದಳು. ಆಕೆಯ ವಯಸ್ಸು 18 ವರ್ಷ. ತನ್ನ ಊರಿನಲ್ಲೇ ನೀರು ಬಿಡುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು, ಈ ವಿಚಾರ ರಾಧಾಳ ಪೋಷಕರಿಗೆ ಗೊತ್ತಾಗಿತ್ತು. ಆದರೆ ಪ್ರೀತಿಯನ್ನು ಬಿಟ್ಟುಬಿಡುವಂತೆ ಮಗಳ ಜೊತೆಗೆ ಹೇಳಿಕೊಂಡಿದ್ದರು. ಆದರೆ ಪ್ರೀತಿಯನ್ನು ಬಿಡುವುದಕ್ಕೆ ಮಗಳು ಒಪ್ಪಿರಲಿಲ್ಲ. ಅಂತಿಮವಾಗಿ ತನ್ನ ಅಕ್ಕನ ಮನೆಗೆ ಕಳುಹಿಸಿದ್ದರು ಚಂದ್ರಪ್ಪ. ಆದರೂ ಪ್ರಿಯಕರನನ್ನ ಬಿಡಲು ಒಪ್ಪದಿದ್ದಕ್ಕೆ ಅಂತಿಮವಾಗಿ ಮಗಳನ್ನು ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ.

Read This;

ಅಕ್ಕನ ಮನೆಯಲ್ಲಿ ಮಗಳನ್ನು ಬಿಟ್ಟಿದ್ದ ಚಂದ್ರಪ್ಪ..!

ಒಂದು ವರ್ಷದಿಂದ ಪ್ರೇಮಪಾಶದಲ್ಲಿ ಸಿಲುಕಿದ್ದ ರಾಧಾ ಪ್ರೀತಿಯನ್ನು ಬಿಡಲು ಒಪ್ಪಿರಲಿಲ್ಲ. ದಾವಣಗೆರೆಯ ಚನ್ನಗಿರಿಯಲ್ಲಿ ವಾಸವಿದ್ದ ಚಂದ್ರಪ್ಪ ಅವರ ಅಕ್ಕನ ಮನೆಯಲ್ಲಿ ಬಿಟ್ಟಿದ್ದರು. ಸ್ವಲ್ಪ ದಿನ ಭೇಟಿ, ಮಾತುಕತೆ ನಡೆಯದಿದ್ದರೆ ಪ್ರೀತಿ ಕಮರುತ್ತೆ ಎನ್ನುವ ಆಸೆಯಲ್ಲಿದ್ದ ಪೋಷಕರಿಗೆ ಆಘಾತ ಕಾದಿತ್ತು. ಎಲ್ಲೇ ಇದ್ದರೂ ನಾನು ಪ್ರೀತಿಯನ್ನು ಬಿಡಲಾರೆ ಎನ್ನುವ ಸಂದೇಶ ರವಾನಿಸಿದ್ದಳು ರಾಧಾ. ನಾನು ಮದುವೆಯಾದರೆ ಈತನನ್ನೇ ಮದುವೆಯಾಗುತ್ತೇನೆ. ಇಲ್ಲದಿದ್ದರೆ ಮದುವೆಯನ್ನೇ ಆಗಲಾರೆ ಎನ್ನುವ ಹಠಕ್ಕೆ ಬಿದ್ದಿದ್ದಳು. ಅಂತಿಮವಾಗಿ ಊರಿಗೆ ಕರೆದೊಯ್ಯಲು ಆಗಮಿಸಿದ ಚಂದ್ರಪ್ಪ, ಮಗಳನ್ನು ಹತ್ಯೆ ಮಾಡಿ ಊರಿಗೆ ಹೋಗಿದ್ದ.

ರೈಲಿಗೆ ತಲೆ ಕೊಡಿಸಲು ಕರೆದೊಯ್ದು ವಿಫಲ..!

ದಾವಣಗೆರೆಯ ಚನ್ನಗಿರಿಯಿಂದ ಬೀರೂರು ಮೂಲಕ ರೈಲಿನಲ್ಲಿ ಹೋಗುವ ನೆಪಮಾಡಿಕೊಂಡು ಕರೆದೊಯ್ದ ತಂದೆ ಚಂದ್ರಪ್ಪ, ನೀನು ಪ್ರೀತಿಯನ್ನು ಬಿಡದಿದ್ದರೆ ನಾವಿಬ್ಬರೂ ಬದುಕಿರುವುದು ಬೇಡ, ನಾವಿಬ್ಬರೂ ಸಾಯೋಣ ಬಾ ಎಂದು ರೈಲ್ವೆ ಹಳಿ ಮೇಲೆ ಕರೆದುಕೊಂಡು ಹೋಗಿದ್ದಾನೆ. ಆದರೆ ರೈಲಿನಲ್ಲಿ ಅಪಘಾತದ ರೀತಿ ಈಕೆಯನ್ನು ಸಾಯಿಸಿ ತಾನು ಪರಾರಿಯಾಗುವ ಮನಸ್ಸು ಮಾಡಿದ್ದಾನೆ. ಆದರೆ ರೈಲ್ವೆ ಹಳಿ ಮೇಲೆ ಸಾಯಿಸುವ ಯೋಜನೆ ವಿಫಲವಾಗಿದೆ. ಅಂತಿಮವಾಗಿ ಆಕೆ ವೇಲ್​ನಿಂದಲೇ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಏಕಾಏಕಿ ಶಿಕಾರಿಪುರದ ಮನೆಗೆ ವಾಪಸ್​ ಆಗಿದ್ದಾನೆ. ಆದರೆ ಕುಟುಂಬಸ್ಥರು ರಾಧಾಳ ಬಗ್ಗೆ ವಿಚಾರಿಸಿದಾಗ ಹೆತ್ತು ಆಡಿಸಿದ ಕರುಳು ನಿಜವನ್ನು ಒಪ್ಪಿಕೊಂಡಿದೆ.

Also Read;

ಮಮಕಾರದಿಂದ ಮನವೊಲಿಕೆ ಮಾಡುವ ಶಕ್ತಿ​​ ಇರಬೇಕು..!

ಚಂದ್ರಪ್ಪ ತನ್ನ ಮಗಳನ್ನು ಕೊಂದ ಕಾರಣದಿಂದ ಕೊಲೆಗಾರ ಆಗಿದ್ದಾನೆ. ಕಾನೂನು ಪ್ರಕಾರ ಚಂದ್ರಪ್ಪನಿಗೆ ಶಿಕ್ಷೆಯೂ ಆಗುತ್ತದೆ. ಆದರೆ ಪುಟ್ಟ ಹುಡುಗಿಯಿಂದ ದೊಡ್ಡವಳನ್ನಾಗಿ ಮಾಡಿದ ತಂದೆ ಆಸೆಯನ್ನು ಮಗಳು ಕೇಳಬಹುದಿತ್ತು. ಅಥವಾ ತನ್ನ ತಂದೆಗೆ ಮಗಳು ಮನವರಿಕೆ ಮಾಡಿಕೊಡಬಹುದಿತ್ತು. ನಾನು ಆತನನ್ನು ಪ್ರೀತಿ ಮಾಡಿ ಮದುವೆಯಾದರೆ ನಿನ್ನ ಕಣ್ಣು ಮುಂದೆಯೇ ಇರುತ್ತೇನೆ, ನಿನ್ನ ಕಷ್ಟ ಸುಖದಲ್ಲಿ ನಾನು ಭಾಗಿಯಾಗ್ತೇನೆ. ಎನ್ನುವ ಭರವಸೆಯ ಮಾತುಗಳ ಮೂಲಕ ಮನಸ್ಸು ಗೆಲ್ಲಬಹುದಿತ್ತು. ಇನ್ನೂ ಚಂದ್ರಪ್ಪ ಕೂಡ ಕೊಲೆ ಮಾಡಿ ಸಾಧಿಸಿದ್ದು ಏನಿದೆ. ಉತ್ತಮನಿಗೆ ಮದುವೆ ಮಾಡಿಕೊಡೋಣ ಎನ್ನುವುದು ಎಲ್ಲಾ ಪೋಷಕರ ಮನದಾಸೆ. ಆದರೆ ಇಲ್ಲ ನಾನು ಈತನನ್ನೇ ಮದುವೆಯಾಗ್ತೇನೆ ಎಂದಾಗ ಸಾಯಿಸುವ ಬದಲು ನಿನ್ನಿಚ್ಛೆ ಎಂದು ಕೈತೊಳೆದುಕೊಳ್ಳುವುದೇ ಸೂಕ್ತ.

Related Posts

Don't Miss it !