ಅವ್ವನ ಜೊತೆ ಟುವ್ವಿ ಟುವ್ವಿ, ಮಗಳ ಜೊತೆ ಲವ್ವಿ ಡವ್ವಿ..! ತಾಯಿ ಕೊರಳಿಗೆ ಪ್ರೇಮ ಪಾಶ..

ಬೆಂಗಳೂರು ನಗರ ಸೋಮವಾರ ರಾತ್ರಿ ಬೆಚ್ಚಿ ಬಿದ್ದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿ ಬೆಂಗಳೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಮಹಿಳೆಯನ್ನು ಕಾರಿನಿಂದ ಹೊರಕ್ಕೆ ಎಳೆದು ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದರು. ಮಂಗಳವಾರ ಮಹಿಳೆಯ ಕೊಲೆ ತನಿಖೆಗೆ ಖಾಕಿ ಪಡೆ ಇಳಿದಾಗ ಸಾಕಷ್ಟು ವಿಚಾರಗಳು ಬಯಲಾಗಿವೆ. ಜಿಗಣಿಯಲ್ಲಿ ಮತದಾನ ಮಾಡಿ ಸ್ನೇಹಿತೆಯ ಮನೆಯಲ್ಲಿ ಊಟ ಮುಗಿಸಿ ಬೆಳ್ಳಂದೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಅರ್ಚನಾ ರೆಡ್ಡಿ ಎಂಬುವರ ಕೊಲೆಯಾಗಿದೆ. ಈ ಕೊಲೆಯನ್ನು ಆಕೆಯ 2ನೇ ಗಂಡ ನವೀನ್​ ಕುಮಾರ್​ ಮಾಡಿದ್ದಾನೆ ಎನ್ನುವುದನ್ನು ಖಾಕಿ ಪಡೆಗೆ ಸಾರಿ ಹೇಳಿತ್ತು, ಸಿಗ್ನಲ್​ನಲ್ಲಿದ್ದ ಸಿಸಿಟಿವಿ ದೃಶ್ಯ. ಅರ್ಚನಾ ರೆಡ್ಡಿ ತನ್ನ ಮಗ, ಕಾರು ಚಾಲಕ ಹಾಗೂ ಒಂದೆರಡು ಹುಡುಗರನ್ನು ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರು ಕಡೆಗೆ ಬರ್ತಿದ್ದಾಗ ಹೊಸೂರು ಮುಖ್ಯರಸ್ತೆಯ ಹೊಸ ರೋಡ್​ ಜಂಕ್ಷನ್​ ಬಳಿ ಕೊಚ್ಚಿ ಕೊಲೆ ಮಾಡಿದ್ದರು. ಕಾರಿನಲ್ಲಿದ್ದವರು ಪ್ರಾಣ ಉಳಿದರೆ ಸಾಕು ಎನ್ನುವಂತೆ ಇಳಿದು ಓಡಿ ಹೋಗಿದ್ದರು.

ದೀಪಿಕಾ ರೆಡ್ಡಿ ನವೀನ್​ ಅರ್ಚನಾ ರೆಡ್ಡಿ

ಕೊಲೆ ಮಾಡಿದವನು ಅರ್ಚನಾ ರೆಡ್ಡಿ 2ನೇ ಗಂಡ..!

ಅರ್ಚನಾ ರೆಡ್ಡಿ ಕೋಟ್ಯಂತರ ರೂಪಾಯಿ ಆಸ್ತಿಗೆ ಒಡತಿಯಾಗಿದ್ದು, ಎರಡು ಮಕ್ಕಳಾದ ಮೇಲೆ ಮೊದಲ ಗಂಡನಿಂದ ಡಿವೋರ್ಸ್​ ಪಡೆದಿದ್ದಳು. ಆ ಬಳಿಕ ನವೀನ್​ ಕುಮಾರ್​ನನ್ನು ಮದುವೆಯಾಗಿ ಬೆಳ್ಳಂದೂರಿನ ಐಶಾರಾಮಿ ಬಂಗಲೆಯಲ್ಲಿ ವಾಸವಿದ್ದರು. ಆದರೆ ಮೂರ್ನಾಲ್ಕು ತಿಂಗಳ ಈಚೆಗೆ ಅರ್ಚನಾ ರೆಡ್ಡಿ ಹಾಗೂ ನವೀನ್​ ಜೊತೆಗೆ ಮನಸ್ತಾಪ ಶುರುವಾಗಿತ್ತು. ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸ್​ ಠಾಣೆಗೂ ದೂರು ನೀಡಿದ್ದ ಅರ್ಚನಾ ರೆಡ್ಡಿ, ನನ್ನ ತಂಟೆಗೆ ಬಂರದಂತೆ ಪೊಲೀಸರ ಮೂಲಕ ಎಚ್ಚರಿಕೆ ನೀಡಿಸಿದ್ದಳು. ಇದರಿಂದ ಕುಪಿತನಾಗಿದ್ದ ನವೀನ್​, ಸೋಮವಾರ ಮತದಾನ ಮಾಡಿದ ಬಳಿಕ ಇನೋವಾ ಕಾರಿನಲ್ಲಿ ಅರ್ಚನಾ ರೆಡ್ಡಿ ಬರುತ್ತಿರುವ ಮಾಹಿತಿ ಪಡೆದಿದ್ದ. ಮಾರ್ಗಮಧ್ಯೆ ನವೀನ್​ ಕುಮಾರ್​ ಹಾಗೂ ಆತನ ತಂಡ ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿದ್ದಾರೆ. ಇದಕ್ಕೆ ಕಾರಣ ಅರ್ಚನಾ ರೆಡ್ಡಿ ಮಗಳು ಎನ್ನುತ್ತಿವೆ ಮೂಲಗಳು.

ಅಮ್ಮ ಅರ್ಚನಾ ರೆಡ್ಡಿ ಜೊತೆ ಮಗಳು ದೀಪಿಕಾ ರೆಡ್ಡಿ ಸೆಲ್ಫಿ

ಅರ್ಚನಾ ರೆಡ್ಡಿಗೆ ಇದ್ದಳು ವಯಸ್ಸಿಗೆ ಬಂದ ಮಗಳು..!

ಅರ್ಚನಾ ರೆಡ್ಡಿ ಹಣವಂತೆ ಹಾಗೂ ರೂಪವತಿಯಾಗಿದ್ದಳು. 2ನೇ ಗಂಡ ನವೀನ್​ ಜೊತೆಗೆ ಸರಸ ಸಲ್ಲಾಪದ ಜೊತೆಗೆ ಓರ್ವ ಕುಖ್ಯಾತ ರೌಡಿಯ ತೋಳ್ಬಂದಿಯಾಗಿದ್ದಳು ಎನ್ನಲಾಗಿದೆ. ಅರ್ಚನಾ ರೆಡ್ಡಿಯನ್ನು ಮದುವೆಯಾದ ನವೀನ್​, ಈಕೆಯ ಆಟ ನೋಡಿ, ಆಕೆಯ ಮಗಳ ಮೇಲೆ ಕಣ್ಣು ಹಾಕಿದ್ದ. ಮಲತಂದೆ ಆಗಿದ್ದರೂ ಅರ್ಚನಾ ರೆಡ್ಡಿ ಮಗಳು ದೀಪಿಕಾ ರೆಡ್ಡಿಯನ್ನು ಸುಖದ ಸುಪ್ಪತ್ತಿಗೆಗೆ ಕರೆದೊಯ್ದಿದ್ದ. ಮಗಳು ನವೀನ್​ ಬಲೆಯಲ್ಲಿದ್ದಾಳೆ ಎನ್ನುವುದನ್ನು ಅರಿತ ಅರ್ಚನಾ ರೆಡ್ಡಿ, ನವೀನ್​ಗೆ ಹಣ ನೀಡುವುದನ್ನು ನಿಲ್ಲಿಸಿದ್ದಳು. ತನ್ನ ಮಗಳನ್ನು ಬಿಟ್ಟು ಬಿಡುವಂತೆ ವಾರ್ನ್​ ಮಾಡಿದ್ದಳು. ಕುಖ್ಯಾತ ರೌಡಿಯಿಂದಲೂ ಬೆದರಿಕೆ ಕರೆ ಮಾಡಿಸಿದ್ದಳು. ಇದರಿಂದ ಕೆರಳಿದ ನವೀನ್​ ಅರ್ಚನಾ ರೆಡ್ಡಿ ಮಗಳನ್ನು ಕರೆದುಕೊಂಡು ಎಸ್ಕೇಪ್​ ಆಗಿದ್ದ. ಇದೀಗ ಅರ್ಚನಾ ರೆಡ್ಡಿ ಮಗಳು ದೀಪಿಕಾ ರೆಡ್ಡಿ ಜೊತೆಗೆ ಸೇರಿ ಮಾಸ್ಟರ್​ ಪ್ಲ್ಯಾನ್​ ಮಾಡಿ ಫಿನಿಷ್​ ಮಾಡಿದ್ದಾರೆ ಎನ್ನುತ್ತಿವೆ ಪೊಲೀಸ್​ ಮೂಲಗಳು.

ಅರ್ಚನಾ ರೆಡ್ಡಿ ಬಂಗಲೆ

ಹೈಫೈ ಲೈಫು, ಕೊಟ್ಯಂತರ ರೂಪಾಯಿ ಆಸ್ತಿ ಕಂಟಕ..!

ಅರ್ಚನಾ ರೆಡ್ಡಿ ಮೊದ ಪತಿಯಿಂದ ದೂರವಾದ ಬಳಿಕ ನವೀನ್​ ಜೊತೆಗೆ ಸುಖ ಸಂಸಾರ ಮಾಡಿಕೊಂಡು ಜೀವನ ನಡೆಸಬಹುದಿತ್ತು. ಆದರೆ ಐಶಾರಾಮಿ ಜೀವನ ಕುಖ್ಯಾತ ರೌಡಿಯ ಜೊತೆ ಪಲ್ಲಂಗ ಏರುವಂತೆ ಮಾಡಿತ್ತು. ಮದುವೆಯಾಗಿದ್ದ ಎರಡನೇ ಗಂಡ ಈಕೆಯ ಮುಲಾಜಿನಲ್ಲಿದ್ದ ಕಾರಣ ಈಕೆಯನ್ನು ಪ್ರಶ್ನೆ ಮಾಡುವುದು ಸಾಧ್ಯವಿರಲಿಲ್ಲ. ಮನೆಯಲ್ಲೇ ಅರ್ಚನಾ ರೆಡ್ಡಿ ಮಗಳನ್ನು ಬೇಟೆಯಾಡಿದ್ದ. ಅರ್ಚನಾ ರೆಡ್ಡಿ ಫೈವ್​ ಸ್ಟಾರ್​ ಹೋಟೆಲ್​, ಐಶಾರಾಮಿ ಬದುಕಿನಿಂದ ನವೀನ್​ನನ್ನು ಮರೆತು ತನ್ನದೇ ಲೋಕದಲ್ಲಿ ಅಲೆದಾಡಿದ್ರೆ, ಮನೆಯಲ್ಲಿದ್ದ ನವೀನ, ಮನೆಯಲ್ಲಿದ್ದ ಅರ್ಚನಾ ಕುಡಿಗೆ ಪ್ರೀತಿ ಪಾಠ ಮಾಡಿದ್ದ. ತಾಯಿ ಹಕ್ಕಿಯನ್ನು ಬಿಟ್ಟು ದೀಪಿಕಾ ರೆಡ್ಡಿ ನವೀನ್​ ಜೊತೆಗೆ ಹಾರಿ ಹೋಗಿತ್ತು. ಕೊನೆಗೆ ನಿನ್ನ ಸಹವಾಸ ಬೇಡ, ಆಸ್ತಿಯನ್ನು ಪಾಲು ಮಾಡು, ಚನ್ನಪಟ್ಟಣದ ಬಳಿಯ ಆಸ್ತಿಯನ್ನು ಕೊಟ್ಟು ಬಿಡು ಎಂದು ಕೇಳಿದ್ದರು. ಯಾವಾಗ ಕುಖ್ಯಾತ ರೌಡಿಯಿಂದ ಬೆದರಿಕೆ ಕರೆ ಬಂದಿತ್ತು, ಅಂದೇ ಅರ್ಚನಾ ರೆಡ್ಡಿ ಮುಗಿಸುವ ಸಂಚು ಸಿದ್ಧವಾಗಿತ್ತು ಎನ್ನುತ್ತದೆ ಬಲ್ಲ ಮೂಲಗಳು. ಇದೀಗ ಅರ್ಚನಾ ರೆಡ್ಡಿ ಆಸ್ತಿ ಮಗಳು ದೀಪಿಕಾ ರೆಡ್ಡಿ ಹಾಗೂ ಆಕೆಯ ಸಹೋದರ ಹಕ್ಕುದಾರರು. ಆಸ್ತಿ ಐಶಾರಾಮಿ ಜೀವನ ಸುಂದರಿಯ ಜೀವನಕ್ಕೆ ಅಂತ್ಯವಾಡಿದೆ ಎಂದರೆ ಸುಳ್ಳಲ್ಲ.

Related Posts

Don't Miss it !