‘ಕಾರಿನಲ್ಲಿ ಬಂದು ನಾನು ಕಳ್ಳತನ ಮಾಡಿಲ್ಲ’ ಇಷ್ಟವಾಯ್ತು ತೆಗೆದುಕೊಂಡು ಹೋಗಿದ್ದೆ..!

ಬೆಂಗಳೂರಿನಲ್ಲಿ ಕಳ್ಳರಿಗೇನು ಬರವಿಲ್ಲ. ಗಲ್ಲಿ ಗಲ್ಲಿಯಲ್ಲೂ ಕಳ್ಳತನ ಮಾಡುವ ದುಷ್ಕರ್ಮಿಗಳು ಸಿಗುತ್ತಾರೆ. ದಿನನಿತ್ಯ ನೂರಾರು ಕೇಸ್​ಗಳು ದಾಖಲಾಗುತ್ತವೆ. ಪೊಲೀಸರು ಎಲ್ಲಾ ಪ್ರಕರಣಗಳನ್ನು ತನಿಖೆ ನಾಡಿ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಇಲ್ಲೊಂದು ಅಚ್ಚರಿಯ ಪ್ರಕರಣವನ್ನು ಪೊಲೀಸರು ಸರಳವಾಗಿ ಪತ್ತೆ ಹಚ್ಚುವ ಮೂಲಕ ನಷ್ಟ ಅನುಭವಿಸಿದ್ದವರಿಗೆ ನ್ಯಾಯ ಕೊಡಿಸಿದ್ದಾರೆ. ಅದೂ ಕೂಡ ಕೆಲವೇ ದಿನಗಳ ಹಿಂದೆ ನಡೆದಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ದೂರು ಕೊಟ್ಟವರು ಹಾಗೂ ಕಳ್ಳತನ ಮಾಡಿದ್ದವರು ಇಬ್ಬರೂ ಪೊಲೀಸ್​ ಠಾಣೆ ಮೆಟ್ಟಿಲೇರದೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಂಡಿದ್ದಾರೆ.

ಕಾರಿನಲ್ಲಿ ಬಂದು ಪಾಟ್​ ಕದ್ದಿದ್ದು ಎಲ್ಲಿ..? ಯಾಕೆ..?

ಬೆಂಗಳೂರಿನ ಸಂಜಯ್​ ನಗರ ವ್ಯಾಪ್ತಿಯ ಆರ್​ಎಂವಿ ಎರಡನೇ ಸ್ಟೇಜ್​ನಲ್ಲಿ ಮನೆ ಮುಂದಿನ ಪಾಟ್​ ಕಳ್ಳತನ ಮಾಡಲಾಗಿತ್ತು. ಕಾರಿನಲ್ಲಿ ಬಂದಿದ್ದ ಮಹಿಳೆ ಹಾಗೂ ಮತ್ತೋರ್ವ ಕಾರನ್ನು ನಿಲ್ಲಿಸಿ ಕಾವ್ಯಾ ಸೆಲ್ವಂ ಎಂಬುವರ ಮನೆ ಮುಂದಿನ ಕಾಂಪೌಂಡ್​ ಮೇಲೆ ಇಟ್ಟಿದ್ದ ಎರಡು ಪಾಟ್​ಗಳನ್ನು ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಮನೆ ಮಾಲಕಿ ಕಾವ್ಯ ಸೆಲ್ವಂ, ನಮ್ಮ ಬಳಿ ಆ ಗಿಡಗಳನ್ನು ಜೇಳಿದ್ದರೆ ನಾವೇ ಕೊಡುತ್ತಿದ್ದೆವು. ಈ ರೀತಿ ಕಳವು ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಟ್ವಿಟರ್​ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್​ ಒಂದನ್ನು ಹಾಕಿದ್ದರು. ಬೆಂಗಳೂರು ಪೊಲೀಸರಿಗೂ ಮಾಹಿತಿ-ಯನ್ನು ಟ್ಯಾಗ್​ ಮಾಡಿದ್ದರು. ಪೊಲೀಸರು ಆಕ್ಟೀವ್​ ಆಗಿ ಕಳ್ಳರನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ: ಆತನಿಗೆ ಮೂವರು.. ಈಕೆಗೆ ನಾಲ್ವರು.. ಗಂಡ ಹೆಂಡ್ತಿ ಕಾಮದಾಹ.. ಜಮೀನಿಗಾಗಿ ಮರ್ಡರ್​..!!

ಬಹಿರಂಗವಾಗಿ ಕಳವು ಮಾಡಿದ್ದವರು ಖಾಕಿ ಕಣ್ಣಲ್ಲಿ ಸೆರೆ..!

ಕಾವ್ಯ ಎನ್ನುವರ ಮನೆ ಎದುರಿನ ಪಾಟ್​ಗಳನ್ನು ಕಳವು ಮಾಡುವಾಗ ಯಾರಾದರೂ ನೋಡಿದರೆ ಎನ್ನುವ ಆತಂಕದಲ್ಲಿ ಸುತ್ತಮುತ್ತ ನೋಡಿದ್ದ ಯುವತಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗುತ್ತೇವೆ ಎನ್ನುವುದನ್ನು ಮರೆತಿದ್ದರು. ಆದರೆ ಕಾರು ನಿಲ್ಲಿಸುವುದು, ಯುವತಿ ಕೆಳಕ್ಕೆ ಇಳಿದು ಬಂದು ಕಾರ್​ನ ಡಿಕ್ಕಿ ತೆಗೆದು ಕಾಂಪೌಂಡ್​ ಬಳಿಗೆ ಹೋಗಿ ಪಾಟ್​ ಎತ್ತಿಕೊಂಡು ಬರುವ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿತ್ತು. ಆದರೆ ಕಾರ್​ನ ನಂಬರ್​ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೆ ಬೆಂಗಳೂರಿನ ಹಲವಾರ ಸಿಗ್ನಲ್​ಗಳಲ್ಲಿ ಸಿಸಿ ಕ್ಯಾಮಾರಗಳಿದ್ದು, ಕಾರು ತಿರುಗಿದ ಮಾರ್ಗದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆ ಕಾರು ಎಲೆಟ್ರಾನಿಕ್​ ಸಿಟಿ ಕಡೆಗೆ ಪ್ರಯಾಣ ಮಾಡಿತ್ತು.

ಇದನ್ನೂ ಓದಿ; B.S ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಅಬ್ಬಿಗೆರೆಯಲ್ಲಿ ಅಂತ್ಯಸಂಸ್ಕಾರ..! ಕಾರಣ..

ಪಾಟ್​ ಕಳವು ಬಗ್ಗೆ ಪೊಲೀಸರಿಂದ ಫೋನ್​ ಕರೆ..!

ಪಾಟ್​​ ಕಳವು ಮಾಡಿದ ಯುವ ದಂಪತಿ ನೆಮ್ಮದಿಯಾಗಿ ಎಲೆಕ್ಟ್ರಾನಿಕ್​ ಸಿಟಿಯ ನಿವಾಸವನ್ನು ಸೇರಿಕೊಂಡಿದ್ದರು. ಆದರೆ ಟ್ವೀಟರ್​​ನಲ್ಲಿ ಮಾಹಿತಿ ಸ್ಫೋಟ ಆಗ್ತಿದ್ದ ಹಾಗೆ ಪೊಲೀಸರು ಕಾರಿನ ನಂಬರ್​ ಆಧಾರವಾಗಿ ಮಾಲೀಕನನ್ನು ಪತ್ತೆ ಮಾಡಿದ್ದರು. ಕೂಡಲೇ ಸಂಜಯ್​ ನಗರ ಪೊಲೀಸ್​ ಠಾಣೆಗೆ ಬರಬೇಕು ಎಂದು ಸೂಚನೆ ಕೊಟ್ಟಿದ್ದರು. ಆ ಕೂಡಲೇ ಪಾಟ್​​ಗಳ ಜೊತೆಗೆ ಓಡೋಡಿ ಬಂದ ಯುವತಿ ಮನೆ ಮಾಲಕಿ ಕಾವ್ಯಾ ಸೆಲ್ವಂ ಅವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದಾರೆ. ನಾವು ಕಳ್ಳತನ ಮಾಡಲಿಲ್ಲ. ಈ ಕಡೆಯಿಂದ ಹೋಗುವಾಗ ಕಾಂಪೌಂಡ್​ ಮೇಲಿದ್ದ ಪಾಟ್​​ ನಮ್ಮ ಗಮನ ಸೆಳೆದಿತ್ತು. ಕೇಳಿಯೇ ತೆಗೆದುಕೊಂಡು ಹೋಗೋಣ ಎಂದು ನೋಡಿದೆವು. ಆದರೆ ಯಾರೂ ಕಾಣಲಿಲ್ಲ. ಹಾಗಾಗಿ ತೆಗೆದುಕೊಂಡು ಹೋದೆವು. ದಯಮಾಡಿ ಕ್ಷಮಿಸಿ ಎಂದು ಬೇಡಿಕೊಂಡಿದ್ದರು. ಅಂತಿಮವಾಗಿ ಪೊಲೀಸ್​ ಠಾಣೆಗೆ ಹೋಗದೆ ಕೇಸ್​​ ಕ್ಷಮಾಪಣೆಯಲ್ಲೇ ಇತ್ಯರ್ಥವಾಗಿದೆ.

Related Posts

Don't Miss it !