ಡಾಕ್ಟರ್​ ಎಡವಟ್ಟು, ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ..! ಪೊಲೀಸರೇ ಕೊಲೆಗಾರರು..

ಬೆಂಗಳೂರಿನಲ್ಲಿ 40 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್​ನಲ್ಲಿ ವಿಡಿಯೋ ಒಂದನ್ನು ಮಾಡಿದ್ದು, ತನ್ನ ಸಾವಿಗೆ ತಾನು ಕೆಲಸ ಮಾಡುವ ಮನೆಯ ಮಾಲಕಿ ಡಾ ರಮ್ಯಾ ಹಾಗೂ ಅವರ ಪತಿ ರೋಹಿತ್​ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಪೊಲೀಸರು ಮಾಡಿರುವ ಎಟವಟ್ಟು ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನುವುದನ್ನು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ರೆಕಾರ್ಡ್​ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಕೆ.ಆರ್ ಪುರದ ಬಸವನಪುರದಲ್ಲಿ ನಡೆದಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಮಹಿಳೆ ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..?

ಆರ್ಥಿಕವಾಗಿ ಅಷ್ಟೊಂದು ಪ್ರಬಲವಾಗಿರದ ಉಮಾ, ತನ್ನ ತಾಯಿ ಹಾಗೂ ಮಗನ ಜೊತೆಗೆ ವಾಸವಾಗಿದ್ದರು. ಮನೆಗೆಲಸ ಮಾಡಿಕೊಂಡು ಜೀವನ ಮಾಡ್ತಿದ್ದರು. ಕಳೆದ 6 ತಿಂಗಳಿಂದ ಡಾ ರಮ್ಯಾ ರೋಹಿತ್​ ಹಾಗೂ ರೋಹಿತ್​ ಮಯೂರ್​ ಎಂಬುವರ ಮನೆಯಲ್ಲಿ ಕೆಲಸ ಮಾಡ್ತಿದ್ದ ಉಮಾ ಅವರಿಗೆ ಮಾಸಿಕ 13 ಸಾವಿರ ಸಂಬಳ ಸಿಗ್ತಿತ್ತು. ಆದರೆ ಕಳೆದ ಎರಡ್ಮೂರು ತಿಂಗಳ ಈಚೆಗೆ ಡಾ ರಮ್ಯಾ ರೋಹಿತ್​ ನಿವಾಸದಲ್ಲಿ 258 ಗ್ರಾಂ ಚಿನ್ನಾಭರಣ ಕಳ್ಳತನ ಆಗಿದ್ದು, ಕಳೆದ ಸೋಮವಾರ ಅಂದರೆ ಫೆಬ್ರವರಿ 7ರಂದು ದೂರು ದಾಖಲಾಗಿತ್ತು. ಆ ಬಳಿಕ ಡಾ ರಮ್ಯಾ ರೋಹಿತ್​ ಮನೆಗೆ ಮಫ್ತಿಯಲ್ಲಿ ಹೋಗಿದ್ದ ಪೊಲೀಸರು ಉಮಾ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಅಮ್ಮ ಬೇಗ ಬಾ ನನ್ನನ ಕೊಂದು ಬಿಡ್ತಾರೆ…ಪ್ರಾಣ ಉಳಿಸದ ಸಂದೇಶ.!!

ಠಾಣೆಯಲ್ಲಿ ಕೂರಿಸಿ, ಕಳ್ಳತನ ಒಪ್ಪಿಕೊಳ್ಳುವಂತೆ ಒತ್ತಡ..!

ಕೆ.ಆರ್​ ಪುರಂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡು ರಾತ್ರಿ ಆದ್ಮೇಲೆ ಮನೆಗೆ ಕಳುಹಿಸಿದ್ದರಂತೆ. ಮನೆಗೆ ಬಂದ ಬಳಿಕ ಪಿನಾಯಿಲ್​ ಹಾಗೂ 20 ಪ್ಯಾರಾಸಿಟಮೋಲ್​ ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಯತ್ನ ನಡೆಸಿದ್ದರಂತೆ. ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಡಿಸ್ಚಾರ್ಜ್​ ಮಾಡಲಾಗಿತ್ತು. ಮತ್ತೆ ಗುರುವಾರ ಸ್ಟೇಷನ್​ ಹತ್ರ ಬರುವುದಕ್ಕೆ ಹೇಳಿ ಇಡೀ ದಿನ ರಾತ್ರಿ ತನಕ ಸ್ಟೇಷನ್​ ಬಳಿಯೇ ಇದ್ದೆವು. ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡು ಬಿಡು ಎಂದು ಪೊಲೀಸರು ಒತ್ತಡ ಹಾಕಿದ್ದರಂತೆ. ಆದರೆ ಕಳ್ಳತನವನ್ನೇ ಮಾಡಿಲ್ಲ ಎಂದಾದ ಮೇಲೆ ಒಪ್ಪಿಕೊಳ್ಳೋದು ಹೇಗೆ..? ಎಂದು ಪ್ರಶ್ನಿಸುತ್ತಾರೆ ಉಮಾ ಪುತ್ರ ಚಂದ್ರಶೇಖರ್.

ಚಿನ್ನ ಕಳವು ಮಾಡಿದ್ದರೆ..! ಕೂಲಿ ಕೆಲಸ ಬೇಕಿತ್ತಾ..?

ಕಳೆದ ಎರಡ್ಮೂರು ತಿಂಗಳ ಹಿಂದೆ ನಮ್ಮ ಅಮ್ಮ 12 ಲಕ್ಷ ಮೌಲ್ಯದ ಚಿನ್ನಾಭರ ಕಳವು ಮಾಡಿ ನಾವು 12 ಲಕ್ಷಕ್ಕೆ ಬೆಲೆ ಬಾಳುವುದಿದ್ದರೆ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ವಾ..? ಎನ್ನುವ ಚಂದ್ರಶೇಖರ್​, ಕೊರೊನಾ ಲಾಕ್​ಡೌನ್​ ವೇಳೆಯಲ್ಲೂ ಫೇಕ್​ ಐಡಿ ಕಾರ್ಡ್​ ಮಾಡಿಕೊಟ್ಟು ಕೆಲಸ ಮಾಡಿಸಿಕೊಂಡರು. ಶುಕ್ರವಾರ ಬೆಳಗ್ಗೆ ಪೊಲೀಸರು ಏಕಾಏಕಿ ಬಂದು ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರು. ಎಲ್ಲವನ್ನೂ ಕಿತ್ತು ಬಿಸಾಡಿ ಹುಡುಕಿ ತಡಕಿ ಹೋದರು. ಮನೆಯಲ್ಲಿ ಏನೂ ಸಿಗಲಿಲ್ಲ. ನಾನು ಮನೆಯಿಂದ ಹೊರಕ್ಕೆ ಹೋಗಿದ್ದೆ, ಅಜ್ಜಿ ಕೆಲಸ ಹುಡುಕಿಕೊಂಡು ಹೋಗಿದ್ದರು. ನನ್ನ ತಾಯಿ ವಿಡಿಯೋ ಮಾಡಿ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸಹಾಯಕತೆ ತೋಡಿಕೊಳ್ತಾರೆ. ತಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎನ್ನುವ ವೀಡಿಯೋವನ್ನು ಪೊಲೀಸರಿಗೂ ಕಳುಹಿಸಿದ್ದಾರೆ.

ಇದನ್ನು ಓದಿ I ಹೈಕೋರ್ಟ್​ ಮಾತಿಗೆ ಸೊಪ್ಪು ಹಾಕದ ಕರ್ನಾಟಕ ಸರ್ಕಾರ..! ಕಾಲೇಜು ಓಪನ್​ ಸದ್ಯಕ್ಕಿಲ್ಲ..!!

ಪೊಲೀಸ್​ ದರ್ಪ, ಮಾನಕ್ಕೆ ಅಂಜಿದ ಮಹಿಳೆ ಆತ್ಮಹತ್ಯೆ..!

ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬೇಕು ಎನ್ನುವುದು ಸರಿ. ಆದರೆ ಅನುಮಾನ ಬಂದಿದೆ ಎನ್ನುವ ಕಾರಣಕ್ಕೆ ಮಹಿಳೆಗೆ ಟಾರ್ಚರ್​ ಕೊಟ್ಟಿರುವುದು ಸರಿಯಲ್ಲ. ಕಳ್ಳತನ ಒಪ್ಪಿಕೊಳ್ಳುವಂತೆ ಒತ್ತಡ ಹೇರುವುದು, ಮನೆಯಲ್ಲಿ ಬಂದು ಸರ್ಚ್​ ಮಾಡಿ, ಮಾನ ಹರಾಜು ಹಾಕುವ ಮುನ್ನ ಪೊಲೀಸರು ಸಾಕಷ್ಟು ಆಲೋಚನೆ ಮಾಡಬೇಕು. ಇದೇ ರೀತಿ ಒಬ್ಬರು ಶ್ರೀಮಂತರ ಮೇಲೆ ದೂರು ದಾಖಲಾಗಿದ್ದರೆ ಪೊಲೀಸರು ಇದೇ ರೀತಿ ನಡೆದುಕೊಳ್ತಾರಾ..? ಇಲ್ಲ ಎಂದ ಮೇಲೆ ಬಡವರು ಎನ್ನುವ ಕಾರಣಕ್ಕೆ ಹೀಗೆ ನಡೆದುಕೊಂಡಿದ್ದು ಸರೀನಾ ಎನ್ನುವುದನ್ನು ಪೊಲೀಸರೇ ಆಲೋಚನೆ ಮಾಡುವುದು ಸೂಕ್ತು. ಹಣಕಾಸಿನಲ್ಲಿ ಬಡವರೇ ಇರಬಹುದು, ಮಾನ ಮರ್ಯಾದೆ ಎನ್ನುವುದು ಬಂದಾಗ ಶ್ರೀಮಂತರಾಗಿ ಇರ್ತಾರೆ. ದುಡಿದು ತಿನ್ನುವ ಜನರೇ ಇರಬಹುದು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸಿಕೊಳ್ಳಲಾರರು. ಆದರೂ ಆತ್ಮಹತ್ಯೆ ಮಹಾಪಾಪ. ಇದ್ದು ಕಾನೂನು ರಕ್ಷಣೆ ಪಡೆಯಬೇಕಿತ್ತು ಉಮಾ.

Related Posts

Don't Miss it !