ಅಮ್ಮ ಬೇಗ ಬಾ ನನ್ನನ ಕೊಂದು ಬಿಡ್ತಾರೆ…ಪ್ರಾಣ ಉಳಿಸದ ಸಂದೇಶ.!!

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ನೆಲಮಂಗಲದಲ್ಲಿ ಘನಘೋರ ಘಟನೆಯೊಂದು ನಡೆದಿದೆ. ತಾಲೂಕಿನ ದಾಬಸ್‌ಪೇಟೆಯ ಪೆಮ್ಮನಹಳ್ಳಿಯಲ್ಲಿ ಮಹಿಳೆಯ ಕೊಲೆ ಮಾಡಿ ನೇಣು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪೆಮ್ಮನಹಳ್ಳಿ ಗಿರೀಶ್ ಎಂಬಾತನ ಪತ್ನಿ ರೇಖಾ ಸಾವನ್ನಪ್ಪಿರುವ ನತದೃಷ್ಟ ಹೆಣ್ಣು ಮಗಳು. ಕಳೆದ 12 ವರ್ಷಗಳ ಹಿಂದೆ ಮದುವೆ ಆಗಿದ್ದ ಗಿರೀಶ್​, ಅಂದಿನಿಂದಲೂ ಸುಖ ಸಂಸಾರವನ್ನು ಮಾಡಲೇ ಇಲ್ಲ. ಹಣಬಾಕನಾಗಿದ್ದ ಗಿರೀಶ್​ ಹಾಗೂ ಆತನ ತಂದೆ ನಾರಾಯಣಪ್ಪ, ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡುತ್ತಲೇ ಇದ್ದರು ಎನ್ನಲಾಗಿದೆ. ಅಂತಿಮವಾಗಿ ಬುಧವಾರ ರಾತ್ರಿ ಕೂಡ ಜಗಳ ನಡೆದು ಕೊಲೆ ಮಾಡಿದ್ದಾರೆ. ಆ ಬಳಿಕ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾರೆ.

ತುಮಕೂರಿನ ರೇಖಾ, ತಂದೆಯಿಲ್ಲದ ಹೆಣ್ಣು ಮಗಳು..!

30 ವರ್ಷದ ರೇಖಾ ಕಳೆದ 12 ವರ್ಷದ ಹಿಂದೆ ಅಂದರೆ 18 ವರ್ಷ ತುಂಬುವ ಮೊದಲೇ ಗಿರೀಶ್ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. ​​ ತುಮಕೂರು ಜಿಲ್ಲೆ ದಿಬ್ಬೂರು ಮೂಲದ ರೇಖಾ, ತಂದೆ ಇಲ್ಲದೆ ತಾಯಿಯ ಆಸರೆಯಲ್ಲಿ ಬೆಳೆದ ಮಗಳ. ಅಮ್ಮ ಕಷ್ಟದಿಂದ ಕೂಲಿನಾಲಿ ಮಾಡಿ ಮಗಳನ್ನು ಸಾಕಿ ಸಲುಹಿದ್ರು. ಈ ವೇಳೆ ತಂದೆಯನ್ನು ಕಳೆದುಕೊಂಡ ಹೆಣ್ಣು ಮಗಳು, ನಮ್ಮ ಮನೆಯಲ್ಲೂ ನನ್ನ ಪತ್ನಿಯಿಲ್ಲ, ಈಕೆಯನ್ನೇ ಮಗಳ ರೀತಿ ನೋಡಿಕೊಳ್ತೇವೆ ಎಂದು ಭರವಸೆ ನೀಡಿದ್ದ ನಾರಾಯಣ, ತಂದೆ ಸ್ಥಾನ ನೀಡುವ ಭರವಸೆ ನೀಡಿದ್ದ. ಆದರೆ ಇದೀಗ ತಂದೆಯಂತಿದ್ದ ಮಾವನೇ ಸೊಸೆಯ ಪಾಲಿಗೆ ಯಮನಾಗಿ ಪರಿಣಮಿಸಿದ್ದಾನೆ ಎನ್ನುವುದು ಗ್ರಾಮಸ್ಥರು ಹೇಳುವ ಮಾತು.

ಇದನ್ನು ಓದಿ; ಹೈಕೋರ್ಟ್​ ಮಾತಿಗೆ ಸೊಪ್ಪು ಹಾಕದ ಕರ್ನಾಟಕ ಸರ್ಕಾರ..! ಕಾಲೇಜು ಓಪನ್​ ಸದ್ಯಕ್ಕಿಲ್ಲ..!!

ಮಾವನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸೊಸೆ..!

ರೇಖಾಳ ಮಾವ ನಾರಾಯಣಪ್ಪ ಹೆಂಡತಿ ಸತ್ತ ಮೇಲೆ ಬೇರೆ ಹೆಂಗಸಿನ ಸಂಬಂಧ ಮಾಡಿಕೊಂಡಿದ್ದ. ಮಗನ ಮದುವೆ ಆದ ಮೇಲೂ ನಾರಾಯಣಪ್ಪನ ಚಪಲ ಚಲ್ಲಾಟ ನಿಲ್ಲಲಿಲ್ಲ. ನಾರಾಯಣಪ್ಪನ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ ಸೊಸೆ ರೇಖಾ. ಇದೇ ಕಾರಣಕ್ಕೆ ಮಗ ಗಿರೀಶನಿಗೆ ಇಲ್ಲಸಲ್ಲದನ್ನು ಹೇಳಿಕೊಟ್ಟು ದಿನನಿತ್ಯವೂ ಜಗಳ ಆಗುವಂತೆ ಮಾಡಿದ್ದ ಎನ್ನುತ್ತಾರೆ ಗ್ರಾಮಸ್ಥರು. ಬುಧವಾರ ರಾತ್ರಿ ಕೂಡ ಇದೇ ರೀತಿ ಶುರುವಾಗಿರುವ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ರೇಖಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇಖಾ ಸತ್ತಿರೋ ದೃಶ್ಯ ನೋಡಿದರೆ ಯಾರೋ ಕೊಂದು ನೇತು ಹಾಕಿದ್ದಾರೆ ಎಂಬ ಸ್ಥಿತಿಯಲ್ಲಿದೆ. ಮಾವ ನಾರಾಯಣಪ್ಪ ಹಾಗೂ ಪತಿ ಗಿರೀಶ್ ಕೊಲೆ ಮಾಡಿದ್ದಾರೆ ಎನ್ನುತ್ತಾರೆ. ಜೊತೆಗೆ ಮತ್ತೊಂದು ಸಾಕ್ಷಿಯೂ ಇದೆ.

ಇದನ್ನು ಓದಿ; ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಮಾಡಿದ ಗಂಡ..!

ಬಾರಮ್ಮ ನನ್ನನ್ನು ಕೊಂದು ಬಿಡ್ತಾರೆ’ ಎಂದಿದ್ದ ಮಗಳು..!

ಮದುವೆಯಾದ ದಿನದಿಂದಲೂ ಸುಖ ಸಂಸಾರ ನಡೆಸಿರದ ರೇಖಾ, ಗಂಡನ ಜೊತೆಯಲ್ಲೇ ಇದ್ದರೂ ಬೇರೆ ಬೇರೆ ಕೋಣೆಯಲ್ಲಿ ಇರುತ್ತಿದ್ದರು. ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿದ್ದ ರೇಖಾಳ ಮಾವ ನಾರಾಯಣಪ್ಪ ಒಳ್ಳೆ ಹಣವಂತನಾಗಿದ್ದರಿಂದ ಅಕ್ರಮ ಸಂಬಂಧಕ್ಕೆ ಹಣ ಸುರಿಯುತ್ತಿದ್ದನು. ತನ್ನ ಅಕ್ರಮಕ್ಕೆ ಅಡ್ಡಿಯಾಗಿದ್ದ ರೇಖಾಳನ್ನು ಮುಗಿಸುವ ನಿರ್ಧಾರಕ್ಕೆ ಬಂಧಿದ್ದ ನಾರಾಯಣಪ್ಪ, ಮಗ ಗೀರೀಶ್​ ಜೊತೆಗೆ ಸೇರಿಕೊಂಡು ಜಗಳ ಶುರು ಮಾಡಿದ್ದ. ಗಂಡ ಹಾಗೂ ಮಾವ ಇಬ್ಬರೂ ಸೇರಿಕೊಂಡು ಹಲ್ಲೆ ಮಾಡುವಾಗ ತನ್ನ ತಾಯಿಗೆ ಕರೆ ಮಾಡಿದ್ದ ಮೃತ ರೇಖಾ, ಅಮ್ಮಾ ನನ್ನನ್ನು ಸಾಯಿಸಿ ಬಿಡ್ತಾರೆ ಬೇಗ ಬಾರಮ್ಮ ಅಂದಿದ್ದಳಂತೆ. ಆದರೆ ತುಮಕೂರಿನಿಂದ ರೇಖಾ ತಾಯಿ ಸರೋಜಮ್ಮ ಪೆಮ್ಮನಹಳ್ಳಿಗೆ ಬರುವ ಹೊತ್ತಿಗೆ ರೇಖಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರೇಖಾಳ ಪತಿ ಗಿರೀಶ್ ಹಾಗೂ ಮಾವ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Related Posts

Don't Miss it !