ಅಪ್ರಾಪ್ತನ ಬುಟ್ಟಿಗೆ ಹಾಕಿಕೊಂಡ ಮಹಿಳೆ ಆತನಿಂದಲೇ ಕೊಲೆ..!

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಹಿಳೆಯ ಕೊಲೆ ನಡೆದಿತ್ತು. ಬನಶಂಕರಿಯ ಯಾರಬ್​ ನಗರದಲ್ಲಿ ನಡೆದಿದ್ದ ಮಹಿಳೆಯ ಕೊಲೆಯಲ್ಲಿ ಪೊಲೀಸರಿಗೆ ಸಂದಿಗ್ದತೆ ತಂದೊಡ್ಡಿದ್ದವು. ಕೊಲೆಯಾದ ಮಹಿಳೆ ಅಫ್ರೀನ್​ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಳು. ದಂಪತಿಗಳ ನಡುವೆ ಸಾಮರಸ್ಯ ಇರಲಿಲ್ಲ ಎಂದು ಅಫ್ರೀನ್​ ಖಾನಂ ತಾಯಿ ಪೊಲೀಸರ ಎದುರು ಹೇಳಿಕೊಂಡಿದ್ದರು. ಮಹಿಳೆಯ ಕೊಲೆ ನಡೆದ ಬಳಿಕ ಮನೆಯೊಳಕ್ಕೆ ಬೆಂಕಿ ಹಾಕಿ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಲಾಗಿತ್ತು. ಇದೇ ಕಾರಣದಿಂದ ಗಂಡನನ್ನೇ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ರು. ಆದರೆ ನಾನು ಸತ್ಯವಾಗಲೂ ಕೊಲೆ ಮಾಡಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದನು. ಎರಡನೇ ಹಂತದ ತನಿಖೆಯಲ್ಲಿ ಆರೋಪಿಯ ಸುಳಿವು ಸಿಕ್ಕಿತ್ತು.

ಈದ್ ಮಿಲಾದ್ ದಿನವೇ ಓಡಿ ಹೋಗುವ ಸ್ಕೆಚ್​..!

28 ವರ್ಷದ ಅಫ್ರೀನ್​ ಖಾನಂ 17 ವರ್ಷದ ಅಪ್ರಾಪ್ತ ಬಾಲಕನ ತೋಳ್ಬಂಧಿ ಆಗಿದ್ದಳು. ಗಂಡ ಕೆಲಸಕ್ಕೆ ಹೋದ ಬಳಿಕ ಗಂಡನ ಅಕ್ಕನ ಮಗನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತನ ಜೊತೆ ಪಲ್ಲಂಗ ಹಂಚಿಕೊಂಡು ಸುಖಿಸುತ್ತಿದ್ದಳು. ಇದೇ ಕಾರಣದಿಂದ ಗಂಡನ ಜೊತೆಗೂ ಸಾಕಷ್ಟು ಬಾರಿ ಜಗಳ ಮಾಡಿಕೊಂಡಿದ್ದಳು. ಈದ್​ ಮಿಲಾದ್​ ದಿನ, ಗಂಡ-ಹೆಂಡತಿ ಜಗಳದಲ್ಲಿ ಹಬ್ಬವನ್ನೇ ಮಾಡಲಿಲ್ಲ, ಗಂಡ ಕೆಲಸಕ್ಕೆ ಹೋದ ಬಳಿಕ ಇಬ್ಬರೂ ಮಕ್ಕಳನ್ನು ತಾಯಿ ಮನೆಗೆ ಕಳುಹಿಸಿ ಕೊಟ್ಟು, ಸಂಜೆ ಮೇಲೆ ನಾನೂ ಅಲ್ಲಿಗೇ ಬರುತ್ತೇನೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಳು. ಸಂಜೆ ವೇಳೆಗೆ ಮನೆಗೆ ಬಾಲಕನನ್ನು ಮನೆಗೆ ಕರೆಸಿಕೊಂಡು ಮುದ್ದಾಡಿದ ಬಳಿಕ ನಾವಿಬ್ಬರು ಮನೆ ಬಿಟ್ಟು ಓಡಿ ಹೋಗೋಣ ಎನ್ನುವ ಯೋಜನೆಯನ್ನು ಹಂಚಿಕೊಂಡಿದ್ದಳು. ಆದ್ರೆ ಸುಖದ ಉಲ್ಲಾಸದಲ್ಲಿ ಅಪ್ರಾಪ್ತ ಬಾಲಕ ದಿಗಿಲುಗೊಂಡಿದ್ದನು.

Read this;

ಪಿಯು ಓದುತ್ತಿರುವ ಹುಡುಗನಿಗೆ ಗಾಬರಿ..!

ತೋಳ್ ತೆಕ್ಕೆಯಲ್ಲಿ ಉರುಳಾಡುವಾಗ ಯಾವುದೇ ಯೋಚನೆ ಮಾಡದ ಬಾಲಕ, ಮನೆ ಬಿಟ್ಟು ಓಡಿ ಹೋಗೋಣ ಎಂದಾದ ಗಾಬರಿಯಿಂದ ಕಣ್ಣು ಪಿಳಪಿಳನೆ ಬಿಟ್ಟಿದ್ದ. ನಾನಿನ್ನೂ ಸೆಕೆಂಡ್​ ಪಿಯುಸಿ ಓದುತ್ತಿದ್ದೇನೆ. ಈಗಲೇ ಬೇಡ ಎಂದು ಅವಳ ಮನಸ್ಸು ಬದಲಿಸುವ ಕಸರತ್ತು ನಡೆಸಿದ್ದ. ಆದರೆ ಆಕೆ ತನ್ನ ನಿರ್ಧಾರ ಬದಲಿಸದೆ ಈಗಲೇ ಎಲ್ಲಿಗಾದರೂ ಕರೆದುಕೊಂಡು ಹೋಗುವಂತೆ ಒತ್ತಾಯ ಮಾಡಿದ್ದಳು. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ, ಏನು ಮಾಡುವುದು ಎಂದು ಅರ್ಥವಾಗದ ಅಪ್ರಾಪ್ತ ಬಾಲಕ ಅಡುಗೆ ಮನೆಯಲ್ಲಿ ಸಿಕ್ಕ ಚಾಕುವನ್ನು ತೆಗೆದುಕೊಂಡು ಬಂದು ಸಿಕ್ಕ ಸಿಕ್ಕ ಕಡೆಯಲ್ಲಿ ಚುಚ್ಚಿದ್ದನ್ನು ರಕ್ತದ ಮಡುವಿನಲ್ಲಿ ಅಫ್ರೀನ್​ ಖಾನಂ ಉಸಿರು ನಿಲ್ಲಿಸಿ ಬಿದ್ದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಈ ವೇಳೆ ಮನೆಯೊಳಕ್ಕೆ ಬೆಂಕಿ ಹಚ್ಚಿ, ಮನೆಗೆ ಬೀಗ ಹಾಕಿಕೊಂಡು ರಕ್ತಸಿಕ್ತ ಬಟ್ಟೆಯಲ್ಲೇ ಮನೆ ಸೇರಿಕೊಂಡಿದ್ದ.

Read this;

ಕಾಲ್​ ರೆಕಾರ್ಡ್​, ಚಾಟ್​ ಕೊಟ್ಟ ಸಾಕ್ಷಿ..!

ಗಂಡ ಕೊಲೆ ಮಾಡಿಲ್ಲ ಎನ್ನುವುದು ಖಚಿತ ಆಗುತ್ತಿದ್ದ ಹಾಗೆ ಅಫ್ರೀನ್​ ಖಾನಂ ಮೊಬೈಲ್​ ಪರಿಶೀಲನೆ ಮಾಡಲಾಯ್ತು. ಈ ವೇಳೆ ಅಪ್ರಾಪ್ತ ಬಾಲಕನ ಜೊತೆಗೆ ಭಾರೀ ಸಲುಗೆಯಿಂದ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಗಂಟೆಗಟ್ಟಲೇ ಫೋನ್​ ಸಂಭಾಷಣೆ, ವಾಟ್ಸಪ್​ ಚಾಟ್​ ಎಲ್ಲವೂ ಪೊಲೀಸರ ಕೈ ಸೇರಿತ್ತು. ಕೊಲೆ ಆರೋಪಿ ಅಪ್ರಾಪ್ತ ಆಗಿರುವ ಕಾರಣ ಕಾನೂನು ಸ್ವಲ್ಪ ವಿಭಿನ್ನ ಆಗಿರಲಿವೆ. ಇನ್ನೂ ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಕನಸು ಕಟ್ಟಿಕೊಂಡಿದ್ದ ಮಹಿಳೆ ಅಫ್ರೀನ್​ ಖಾನಂ ಮಾತ್ರ ದುರಾಸೆಯಿಂದ ಕೊಲೆಯಾಗಿದ್ದಾಳೆ. ವಯಸ್ಸು ಅಲ್ಲದ ವಯಸ್ಸಲ್ಲಿ ನೋಡಬಾರದನ್ನು ನೋಡಿದ ಬಾಲಪ್ರೇಮಿ ಬಂಧನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸುಖಕ್ಕೆ ಸಾಕ್ಷಿಯಾಗಿದ್ದ ಪ್ರಿಯಕರನೇ ಕೊಲೆ ಮಾಡಿದ್ದು ವಿಧಿಯಾಟ ಎನ್ನಬಹುದು.

Related Posts

Don't Miss it !