ಹೆಣ್ಣೇ ನೀನ್ಯಾಕೆ ಇಷ್ಟೊಂದು ಕ್ರೂರಿ..! ನಿನ್ನಲ್ಲಿ ತಾಯ್ತನ ಇಲ್ಲವೇ..?

ಕಳೆದ ಭಾನುವಾರ ಬೆಂಗಳೂರು ಹೊರವಲಯದಲ್ಲಿ ಭೀಕರ ಹತ್ಯೆಯೊಂದು ನಡೆದು ಹೋಗಿತ್ತು. ಸ್ವತಃ ಹೆಂಡತಿಯೇ ಗಂಡನಿಗೆ ಮುಹೂರ್ತ ಇಟ್ಟಿದ್ದಳು. ಕೊಲೆ ಮಾಡಿದ್ದೇನೆ ಎಂದು ಸ್ವತಃ ತಾನೇ ಮಾದನಾಯಕನಹಳ್ಳಿ ಪೊಲೀಸರ ಎದುರು ಶರಣಾಗತಿಯೂ ಆಗಿದ್ದಳು. ಬಂಧನ ಮಾಡಿದ ಬಳಿಕ ಪೊಲೀಸರ ತನಿಖೆಯಲ್ಲಿ ಟಿಕ್‌ಟಾಕ್ ದೋಸ್ತಿಯ ಪರಿಚಯ ಸಿಕ್ಕಿದೆ. ಆಕೆ ಕೊಟ್ಟಿದ್ದ ಕಾರಣವೂ ಸುಳ್ಳು ಎನ್ನುವುದು ಪೊಲೀಸರ ಅನುಮಾನ ಎನ್ನಲಾಗ್ತಿದೆ. ನೇತ್ರಾ ಮೂರನೇ ಮದುವೆ ಮಾಡಿಕೊಂಡ ತಯಾರಿಯೇ ಕೊಲೆಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಸುಳಿವು ಎನ್ನುತ್ತಾರೆ ತನಿಖಾಧಿಕಾರಿಗಳು.

ಕೋಟಿ ಕೋಟಿ ಆಸ್ತಿಗಾಗಿ ಬಂದಳು ಬ್ಯೂಟಿ ನೇತ್ರ..!

ಕೊಲೆಯಾದ ಸ್ವಾಮಿರಾಜ್ ಬೆಂಗಳೂರಿನ ಕಮಲಾನಗರದಲ್ಲಿ ಫೋಟೋ ಸ್ಟುಡಿಯೋ ಒಂದನ್ನು ಇಟ್ಟುಕೊಂಡಿದ್ದ. ಅಲ್ಲಿಗೆ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ನೇತ್ರಾ ಬಂದಾಗ ಪರಿಚಯವಾಗಿತ್ತು. ಆ ಪರಿಚಯ ಮದುವೆ ಹಂತಕ್ಕೆ ತಂದು ನಿಲ್ಲಿಸಿತ್ತು. ಇಬ್ಬರಿಗೂ ಮೊದಲೇ ಮದುವೆ ಆಗಿತ್ತು. ಆದರೂ ಶ್ರೀಮಂತಿಕೆ ಎನ್ನುವುದು ಸೌಂದರ್ಯದ ಮಾರಾಟ ಹಾಗೂ ಕೊಳ್ಳುವುದಕ್ಕೆ ಕಾರಣವಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸ್ವಾಮಿರಾಜ್, ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ್ದನು. ಮದುಯಾದ ಬಳಿಕ ಸ್ವಾಮಿರಾಜ್ ಆಸ್ತಿ ಮೇಲೆ ಕಣ್ಣಿಟ್ಟ ನೇತ್ರ, ಶೂಟಿಂಗ್‌ ಬಾಡಿಗೆ ನೀಡಲು ನಿರ್ಮಿಸಿದ್ದ ಸುಮಾರು 6 ಕೋಟಿ ಮೌಲ್ಯ ಬೃಹತ್ ಬಂಗಲೆಯನ್ನು ತನ್ನ ಹೆಸರಿಗೆ GPA ಮಾಡಿಸಿಕೊಂಡಿದ್ದಳು ಎನ್ನಲಾಗಿದೆ. ಆಸ್ತಿ ಸಿಕ್ಕ ಬಳಿಕ ಸುಮ್ಮನಾಗದ ನೇತ್ರ ಟಿಕ್‌ಟಾಕ್ ವೇಳೆ ಸಿಕ್ಕ ದೋಸ್ತಿ ಜೊತೆಗೆ ಸೇರಿಕೊಂಡು ಗಂಡನಿಗೆ ಮುಹೂರ್ತ ಇಟ್ಟುಬಿಟ್ಟಳು. ಕೊಲೆಗೂ ಮುನ್ನ ಕೆ.ಆರ್ ಮಾರ್ಕೆಟ್‌ಗೆ ಹೋಗಿ ಕೊಲೆ ಮಾಡಲು ಆಯುಧ ಖರೀದಿಸಿದ್ದಳು.

ಭರತ್ ಹಾಗೂ ವಿಜಯ್

ಗಂಡನ ಕೊಲೆ ಆಕೆ ಕೊಟ್ಟ ಕಾರಣ ಏನು ಗೊತ್ತಾ..?

Read this:

ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೊಕ್ಯಾತನಹಳ್ಳಿಯ ಬೃಹತ್ ಬಂಗಲೆಯಲ್ಲಿ ಸ್ವಾಮಿರಾಜ್ ಕೊಲೆ ಆಗಿತ್ತು. ನೇರವಾಗಿ ಪೊಲೀಸ್ ಠಾಣೆಗೆ ಬಂದ ಕೊಲೆಗಾತಿ‌ ನೇತ್ರ ನಾನು ನನ್ನ ಗಂಡನ ಕೊಲೆ ಮಾಡಿದ್ದೇನೆ. ನನ್ನ ಅಪರಾಧಕ್ಕೆ ಶಿಕ್ಷೆ ಅನುಭವಿಸಲು ಕಾನೂನು ಪ್ರಕಾರ ಸಿದ್ಧವಿದ್ದೇನೆ ಎಂದಿದ್ದಳು. ಯಾವ ಉದ್ದೇಶದಿಂದ ಗಂಡನನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದೆ..? ಎಂದು ಪೊಲೀಸರು ಕೇಳಿದ ಪ್ರಶ್ನೆಗೆ ನನ್ನ ಗಂಡ ಲೈಂಗಿಕವಾಗಿ ನನಗೆ ಹಿಂಸೆ ಕೊಡುತ್ತಿದ್ದ, ಪರ ಪುರುಷರ ಜೊತೆಗೆ ಮಲಗುವಂತೆ ಒತ್ತಾಯ ಮಾಡುತ್ತಿದ್ದನು. ಹೀಗಾಗಿ ಕೊಲೆ ಮಾಡುವ ನಿರ್ಧಾರಕ್ಕೆ ಬರಲಾಯ್ತು ಎಂದಾಗ ಪೊಲೀಸರೂ ಕೂಡ ಮರುಗಿದ್ದರು. ಆದರೆ ಆಕೆ ಹೇಳಿದ್ದೇ ಅಂತಿಮವೆಂದು ನಿರ್ಧಾರಕ್ಕೆ ಬರಲಾಗದು ಎನ್ನುವ ಕಾರಣಕ್ಕೆ ಸಂಬಂಧಪಟ್ಟವರನ್ನು ಕರೆದು ವಿಚಾರಣೆ ಮಾಡಿದಾಗ ಕೊಲೆಯ ಅಸಲಿ ಕಹಾನಿ ಬಯಲಾಗಿದೆ.

Also Read:

ಕೊಲೆಗೆ ಕಾರಣವಾದ ಟಿಕ್‌ಟಾಕ್ ಅಕ್ರಮ ಸಂಬಂಧ..!

ಕೊಲೆಯಾದ ಸ್ವಾಮಿರಾಜ್‌ಗೆ ಮೊದಲನೇ ಹೆಂಡತಿ ಸತ್ಯಾಕುಮಾರಿ ಮೇಲೂ ಪ್ರೇಮವಿತ್ತು. ನೇತ್ರ ಸೌಂದರ್ಯಕ್ಕೆ ಮರುಳಾಗಿ ನಾಲ್ಕು ವರ್ಷದಿಂದ ಕುಟುಂಬಸ್ಥರನ್ನ ದೂರವಿಟ್ಟಿದ್ದ. ಆದರೂ ಫೋನ್ ಮಾಡಿ ಮಾತನಾಡ್ತಿದ್ದ. ಕಾಲೇಜಿನಲ್ಲಿ ಓದುತ್ತಿದ್ದ ಮಗಳು ವರ್ಷಿತಾಗೆ ಓಡಾಡುವ ಸ್ಕೂಟಿ ಕೊಡಿಸೋದಕ್ಕೆ ಮುಂದಾಗಿದ್ದ. ಇದೇ ವಿಚಾರ ಮುಂದಿಟ್ಟು ಜಗಳ ಶುರು ಮಾಡಿದ್ದಳಂತೆ. ಮೊದಲ ಪತ್ನಿ ಕರೆ ಮಾಡಿದಾಗ ಜಗಳ ಆಗ್ತಿತ್ತು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಜಗಳ ನಡೆಯುತ್ತಿದ್ದ ವೇಳೆಯಲ್ಲಿ ಗಂಡನನ್ನು ಒಂಟಿ ಹೆಂಗಸು ರಿಂಚ್‌ನಿಂದ ಹೊಡೆದು ಸಾಯಿಸಲು ಸಾಧ್ಯವಿಲ್ಲ ಎನ್ನುವ ಅಂಶದ ಮೇಲೆ ವಿಚಾರಣೆ ನಡೆಸಿದಾಗ ಇಬ್ಬರು ಯುವಕರ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೊಲೆ ಮಾಡೋದಕ್ಕೆ ಎಂದು ಮಾರ್ಕೆಟ್‌ನಲ್ಲಿ ರಿಂಚ್ ಖರೀದಿಸಿದ್ದು ಬೆಳಕಿಗೆ ಬಂದಿದೆ. ಕೊಲೆ ಕೇಸ್‌ನಲ್ಲಿ ನಾನು ಜೈಲು ಸೇರಿದ ಬಳಿಕ ಜಾಮೀನು ಪಡೆಯುವ ಉದ್ದೇಶದಿಂದ 50 ಸಾವಿರ ಹಣವನ್ನೂ ಆರೋಪಿ ಭರತ್‌ಗೆ ಕೊಟ್ಟಿದ್ದಳು ಎನ್ನುವುದು ಗೊತ್ತಾಗಿದೆ. ಭರತ್ ಅಲಿಯಾಸ್ ಅಚ್ಚು ಹಾಗೂ ನೇತ್ರ ಅಕ್ಕನ ಮಗ ವಿಜಯ್‌ನನ್ನು ಅರೆಸ್ಟ್ ಮಾಡಲಾಗಿದೆ. ಕೆ.ಆರ್.ಪುರಂ ಬಳಿಯ ಬಿದರನಹಳ್ಳಿಯ ಭರತ್ ಮತ್ತು ಸುಂಕದಕಟ್ಟೆಯ ವಿಜಯ್ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಒಂದು ವರ್ಷದ ಹಿಂದೆ ಟಿಕ್‌ಟಾಕ್‌ನಲ್ಲಿ ಪರಿಚಯ ಆಗಿದ್ದ 30 ವರ್ಷದ ಭರತ್ ಹಾಗೂ ನೇತ್ರ ನಡುವೆ ಅನೈತಿಕ ಸಂಬಂಧ ನಡೆಯುತ್ತಿತ್ತು ಎನ್ನುವುದು ಕೂಡ ಬಯಲಾಗಿದೆ.

Related Posts

Don't Miss it !