ಮೊಸಳೆ ಬಾಯಿಗೆ ಮಗು ಎಸೆದು ನದಿಗೆ ಹಾರಿದ ತಾಯಿ..! ಈ ಘಟನೆಗೆ ಹೊಣೆ ಯಾರು..!?

ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆ ರೋಣಾ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಹಿಳೆ ಉಮಾದೇವಿ ಶೆಲ್ಲಿಕೇರಿ, ತನ್ನ ಮೂವರು ಹೆಣ್ಣು ಮಕ್ಕಳಾದ 10 ವರ್ಷದ ತನುಶ್ರೀ, 7 ವರ್ಷದ ಪ್ರಿಯಂಕಾ, 3 ವರ್ಷದ ಶ್ರೇಷ್ಠ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. ಅದರಂತೆ ಬುಧವಾರ ಬೆಳಗ್ಗಿನ ಜಾವ 4 ಗಂಟೆಗೆ ಮಕ್ಕಳನ್ನು ಎಬ್ಬಿಸಿಕೊಂಡು ಊರಿಗೆ ಹೊರಡುವ ಮಾತನಾಡಿ, ನದಿ ತೀರಕ್ಕೆ ಕರೆದುಕೊಂಡು ಹೋಗಿದ್ದಳು.

ಓಡಿ ಹೋಗಿ ಬದುಕಿಕೊಂಡ ಇಬ್ಬರು ಮಕ್ಕಳು..!

ಮಲಪ್ರಭಾ ನದಿ ತೀರಕ್ಕೆ ಮಕ್ಕಳ ಜೊತೆಗೆ ಬಂದಿದ್ದ ಉಮಾದೇವಿ, ಮಕ್ಕಳ ಜೊತೆಗೆ ನದಿಗೆ ಹಾರುವ ಬಗ್ಗೆ ವಿಚಾರ ತಿಳಿಸಿದ್ಲು. ತಾಯಿ ಸಾಯುವ ಮಾತನಾಡುತ್ತಿದ್ದ ಹಾಗೆ 10 ವರ್ಷದ ತನುಶ್ರೀ ಹಾಗೂ 7 ವರ್ಷದ ಪ್ರಿಯಾಂಕಾ ಕಾಲಿಗೆ ಬುದ್ಧಿ ಹೇಳಿದ್ದರು. ಊರಿನ ಕಡೆಗೆ ಓಡಿ ಹೋಗಿದ್ದ ಮಕ್ಕಳು, ತಾಯಿ ನದಿಗೆ ಹಾರಿದ ವಿಚಾರವನ್ನು ತಿಳಿಸಿದ್ದರು. ಮಕ್ಕಳು ಹೇಳಿದ್ದನ್ನು ಕೇಳಿದ ಗ್ರಾಮಸ್ಥರು ನದಿ ಕಡೆಗೆ ಓಡಿದ್ದರು. ಅಷ್ಟರಲ್ಲಿ 3 ವರ್ಷದ ಶ್ರೇಷ್ಟಳನ್ನು ನದಿಗೆ ಎಸೆದಿದ್ದ ಉಮಾದೇವಿ, ತಾನೂ ಕೂಡ ನದಿಗೆ ಹಾರಿದ್ದಳು. ಹೊಳೆ ಆಲೂರು ಗ್ರಾಮಸ್ಥರು ಸೇರಿದಂತೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಎಲ್ಲರೂ ಸೇರಿ ಹುಡುಕಾಟ ಶುರು ಮಾಡಿದ್ದರು. ತಾಯಿ ಉಮಾದೇವಿ ಮುಳ್ಳಿನ ಪೊದೆಯೊಂದರಲ್ಲಿ ಸಿಲುಕಿಕೊಂಡಿದ್ದನ್ನು ಗಮನಿಸಿ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

Read this also;

ಗದಗದ ಜಿಮ್ಸ್​ಗೆ ಉಮಾದೇವಿ ದಾಖಲು..!

ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಉಮಾದೇವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗದ ಜಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉಮಾದೇವಿ ಆರೋಗ್ಯ ಸ್ಥಿರ‌ವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್​ಗೆ ದಾಖಲು ಮಾಡಲಾಗಿದೆ ಎಂದು ಹೊಳೆ ಆಲೂರು ಆರೋಗ್ಯ ಕೇಂದ್ರದ ಡಾ. ವೀರಣ್ಣ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ. ಉಮಾದೇವಿ ಘಟನೆ ಬಳಿಕ ಆಘಾತಕ್ಕೆ ಒಳಗಾಗಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಉಮಾದೇವಿಗೆ ಇಂದು ಜಿಮ್ಸ್​ನಲ್ಲಿ ಚಿಕಿತ್ಸೆ ನೀಡಲಿದ್ದು, ನಾಳೆ ಧಾರವಾಡದ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ರವಾನೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ. ನದಿಗೆ ಎಸೆದಿದ್ದ 3 ವರ್ಷದ ಮಗು ಶ್ರೇಷ್ಠಾಳನ್ನು ಪತ್ತೆ ಮಾಡುವ ನಿನ್ನೆ ವಿಫಲವಾಗಿದ್ದು, ಇಂದೂ ಕೂಡ ಮುಂದುವರಿದಿದೆ. ಆದರೆ ಮಲಪ್ರಭಾ ನದಿಯಲ್ಲಿ ಸಾಕಷ್ಟು ಪ್ರಮಾಣದ ಮೊಸಳೆಗಳಿದ್ದು, ಮಗುವಿನ ಶವ ಸಿಗುವುದು ಅನುಮಾನ ಎನ್ನುತ್ತಿದ್ದಾರೆ ಅಗ್ನಿಶಾಮಕ ಸಿಬ್ಬಂದಿ.

Read this also;

ಕುಟುಂಬಕ್ಕೆ ಆಧಾರವಾಗಿದ್ದ ಗಂಡನ ಸಾವು..!

ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕನಾಗಿದ್ದ ಗಂಡ ಸಂಗಮೇಶ್​ ಕಳೆದ 3 ತಿಂಗಳ ಹಿಂದಷ್ಟೇ ಕೊರೊನಾ ಸೋಂಕಿನಿಂದ ಮೃತನಾಗಿದ್ದ. ಶಾಲಾ ಆಡಳಿತ ಮಂಡಳಿ ಕೂಡ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಮೂವರು ಹೆಣ್ಣು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಗಂಡನೆ ಇಲ್ಲದಿದ್ದರಿಂದ ಸಾಕಷ್ಟು ಮನನೊಂದಿದ್ದ ಉಮಾದೇವಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇನ್ನೂ ರಾಜ್ಯ ಸರ್ಕಾರ ಕೂಡ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಘೋಷಣೆ ಮಾಡಿರುವ ಪರಿಹಾರದ ಹಣ ಕೂಡ ನೊಂದವರ ಕೈ ಸೇರಿಲ್ಲ. ಇಷ್ಟು ದಿನಗಳ ಕಾಲ ಗಂಡನ ಪೋಷಣೆಯಲ್ಲಿ ಬದುಕು ಸಾಗಿಸುತ್ತಿದ್ದ ಹೆಣ್ಣು ಮಕ್ಕಳಿಗೆ ಗಂಡನಿಲ್ಲದ ವಿಚಾರ ದಿಕ್ಕು ತೋಚದಂತೆ ಮಾಡಿರಬಹುದು ಎನ್ನುತ್ತಾರೆ ಮನೋ ವೈದ್ಯರು.

Related Posts

Don't Miss it !