ಹಾಸನದಲ್ಲಿ ತಾಯಿ ಕೊಂದ ಮಗ, ಮೈಸೂರಲ್ಲಿ ತಂದೆ ಮೇಲೆ ಫೈರಿಂಗ್..!

ಹಾಸನದಲ್ಲಿ ಮಗನೇ ತಾಯಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಯಿ ಹತ್ಯೆ ಮಾಡಿದ ಬಳಿಕ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಹಾಸನ ತಾಲೂಕಿನ ಸಂಕಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಕಂಠಪೂರ್ತಿ ಕುಡಿದು ಬಂದು ತಾಯಿ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಮಗನ ದುರ್ನಡತೆ ಬಗ್ಗೆ ತಾಯಿ ಪ್ರಶ್ನೆ ಮಾಡಿದಾಗ ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. 68 ವರ್ಷದ ತಾಯಿ ಸಣ್ಣಮ್ಮ ಹತ್ಯೆಯಾಗಿದ್ದು, ಪತ್ನಿ ರೂಪಾ ಸ್ಥಿತಿ ಗಂಭೀರವಾಗಿದೆ. ನಂಜೇಶ್‌ಗೌಡ ಎಂಬಾತ ಹೆತ್ತಮ್ಮನ ಭೀಕರ ಹತ್ಯೆ ಮಾಡಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯನ್ನು ಕೊಂದು ಬಳಿಕ ಪತ್ನಿಯ ಕ್ಯಾಂಟೀನ್ ಬಳಿ ಬಂದು ಮಾರಣಾಂತಿಕ ಹಲ್ಲೆ ಮಾಡಿದ ಕಿಡಿಗೇಡಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೂಲತಃ ಹಾಸನ ತಾಲೂಕಿನ ಗೋಳೇನಹಳ್ಳಿಯ ಸಣ್ಣಮ್ಮ ಕುಟುಂಬ ಸಂಕಲಾಪುರದಲ್ಲಿ ನೆಲೆಸಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೂಪಾಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಆಸ್ತಿಗಾಗಿ ಏರ್​ಗನ್​​ನಿಂದ ಫೈರ್​ ಮಾಡಿದ ಮಗ..!

ಮೈಸೂರಿನಲ್ಲಿ ಗುಂಡಿನ ಸದ್ದು ಕೇಳಿಸಿದ್ದು, ಆಸ್ತಿ ವಿಚಾರವಾಗಿ ತಂದೆ ಮಗನ ನಡುವೆ ಗಲಾಟೆ ನಡೆದಿದೆ. ತಂದೆಯನ್ನೇ ಶೂಟ್ ಮಾಡಿದ್ದಾನೆ ಮಗ. ಮೈಸೂರಿನ ವಿಜಯನಗರದ 3 ನೇ ಹಂತದಲ್ಲಿ ಈ ಘಟನೆ ನಡೆದಿದ್ದು, ರೇಣುಕಾ ಕಾಲೇಜಿನ ಆಸ್ತಿ ವಿಚಾರವಾಗಿ ಕುಟುಂಬಸ್ಥರ ನಡುವೆ ಗಲಾಟೆ ಸೃಷ್ಟಿಯಾಗಿದೆ. ಸ್ನೇಹಿತರ ಜೊತೆ ಮನೆಗೆ ನುಗ್ಗಿದ ಮಗ ರುನಾಲ್, ತಂದೆ ಶಿವಕುಮಾರ್ ಜೊತೆ ಆಸ್ತಿ ವಿಚಾರವಾಗಿ ಜಗಳ ಶುರು ಮಾಡಿದ್ದಾನೆ. ಗಲಾಟೆ ವೇಳೆ ಏರ್ ಗನ್​ನಿಂದ ಶೂಟ್ ಮಾಡಿದ್ದಾನೆ, ಮಗ ರುನಾಲ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ತಂದೆ ಶಿವಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶೂಟ್ ಮಾಡಿರುವ ಮಗ ಹಾಗೂ ಆತನ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ವಿಜಯನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದುಡ್ಡಿದ್ದವರ ಮನೆಗೆ ಕನ್ನ, ಬಡವರಿಗೆ ದಾನ..! ಬೆಂಗಳೂರಲ್ಲೊಬ್ಬ ಅಚ್ಚರಿಯ ಕಳ್ಳ..

25 ಸಾವಿರ ಬಡ್ಡಿ ವ್ಯವಹಾರ, ಪ್ರಾಣಕ್ಕೆ ಸಂಚಕಾರ..!

ಸ್ನೇಹಿತರ ನಡುವೆ ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ದೇವಣ್ಣನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಮಂಜುನಾಥ್ ಮೃತ ದುರ್ದೈವಿ. 30 ವರ್ಷದ ಸಂತೋಷ ಬೈಕ್​ನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಫೆಬ್ರವರಿ 11ರಂದು ಘಟನೆ ನಡೆದು, ಯುವಕನ್ನು ಬೆಂಗಳೂರಿನ ನಿಮ್ಹಾನ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 3 ದಿನಗಳಿಂದ ಮಂಜುನಾಥ್​ಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹಸು ಸಾಕಿಕೊಂಡು ಹಾಲಿನ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಅರೋಪಿ ಸಂತೋಷ್​ ನಡುವೆ 25 ಸಾವಿರ ಹಣದ ವ್ಯವಹಾರ ನಡೆದಿತ್ತು. ಬಡ್ಡಿ ಕೊಡುವುದಾಗಿ ಹಣ ಪಡೆದಿದ್ದ ಅರೋಪಿ ಸಂತೋಷ್​, 6 ತಿಂಗಳಾದರೂ ಬಡ್ಡಿಯನ್ನೂ ಕೊಡದೆ ಸತಾಯಿಸಿದ್ದ. ಇದೇ ವಿಚಾರದಲ್ಲಿ ಗಲಾಟೆ ನಡುವೆ ತನ್ನ ಬೈಕ್​ನಿಂದ ಡಿಕ್ಕಿ ಹೊಡೆದು ಬಳಿಕ ಹಲ್ಲೆ ನಡೆಸಿದ್ದ ಅರೋಪಿ ಸಂತೋಷ್​ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ಯಾಂಕ್​ ಅಕೌಂಟ್‌ನಲ್ಲಿ ಹಣ ಕಟ್​ ಆಗ್ತಿದ್ಯಾ..? ಇನ್ಮುಂದೆ ಈ ಕಾರಣಕ್ಕೂ ಕಟ್​ ಆಗ್ಬಹುದು..!

ಫ್ಲಾಟ್​ಫಾರಂ ಕಳ್ಳರಿಗೆ ಕೋಳ ಹಾಖಿದ ರೈಲ್ವೆ ಪೊಲೀಸ್..!

ಬೆಂಗಳೂರಿನ ರೈಲ್ವೆ ಪೊಲೀಸರು ಮೂವರು ಮೊಬೈಲ್ ಕಳ್ಳರನ್ನು ಬಂಧನ ಮಾಡಿದ್ದಾರೆ. ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗ್ತಿದ್ದವರ ಬಳಿ ಮೊಬೈಲ್ ಕಿತ್ತು ಪರಾರಿಯಾಗ್ತಿದ್ದ ಗ್ಯಾಂಗ್ ಅಂದರ್​ ಆಗಿದೆ. ರೈಲ್ವೆ ಹಳಿಯ ಮೇಲಿದ್ದ ಕಲ್ಲುಗಳಿಂದ ಹಲ್ಲೆ ಮಾಡಿ ಮೊಬೈಲ್ ದೋಚುತ್ತಿದ್ದ ಗ್ಯಾಂಗ್ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಇದೀ ಮೂವರು ಖತರ್ನಾಕ್​ ಖಳ್ಳರನ್ನು ಬಂಧನ ಮಾಡಿದ್ದು, ಹಲವು ಮೊಬೈಲ್ ಫೋನ್​​ಗಳನ್ನು ಸೀಜ್ ಮಾಡಲಾಗಿದೆ. ನಾಯಂಡಹಳ್ಳಿ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Related Posts

Don't Miss it !