26 ವರ್ಷದ ಎಂಜಿನಿಯರ್​ ಜೀವ ತೆಗೆದಿದ್ದು ಪ್ರೀತೀನಾ, ಆರೋಗ್ಯನಾ..!?

ವಿದ್ಯೆ, ಆಸ್ತಿ, ಐಶ್ವರ್ಯ ಇದ್ದಾಗ ಸುಖ ಸಮೃದ್ಧಿ ತುಂಬಿರುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಎಲ್ಲವೂ ಇದ್ದರು ಆರೋಗ್ಯ ಒಂದು ಕೈ ಕೊಟ್ಟರೆ ಎಷ್ಟು ಐಶ್ವರ್ಯವಂತ ಆದರೂ ಖಿನ್ನತೆಯ ಭೀಕರತೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಅಂಜು ಪ್ರಕರಣವೇ ಸಾಕ್ಷಿ ಎನ್ನಬಹುದು. ಬೆಂಗಳೂರಿನಲ್ಲಿ ಸಿವಿಲ್​ ಎಂಜಿನಿಯರ್​ ಆಗಿ ಕಳೆದ ವರ್ಷಗಳಿಂದ ಉದ್ಯೋಗ ಮಾಡ್ತಿದ್ದ ಯುವತಿ ಅಂಜು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಬೆಂಗಳೂರಿನ ರಾಜಾಜಿನಗರ ಸಮೀಪದ ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆಯಲ್ಲಿ ವಾಸವಾಗಿದ್ದ ಅಂಜು ದಂಪತಿ ನಡುವೆ ಪ್ರೀತಿಗೇನು ಕೊರತೆ ಇರಲಿಲ್ಲ. ಆದರೆ ಆರೋಗ್ಯ ಸಮಸ್ಯೆ ಆಕೆಯ ಕನಸನ್ನು ನುಚ್ಚುನೂರು ಮಾಡಿತ್ತು. ಕಳೆದ 9 ವರ್ಷಗಳ ಪ್ರೀತಿ ಹೊಳೆಯಲ್ಲಿ ಹುಣಸೆ ತೊಳೆದಂತೆ ತೊಳೆದಂತೆ ಆಗಿದೆ ಎನ್ನಬಹುದು.

9 ವರ್ಷದ ಪ್ರೀತಿಗೆ 4 ತಿಂಗಳ ದಾಂಪತ್ಯವೇ ಕೊಂಕು..!

ಅಂಜು ಮೂಲತಃ ಚಿಕ್ಕಮಗಳೂರು ಮೂಲದವರು. ಕಡೂರು ತಾಲೂಕಿನ ಬೋಳನಹಳ್ಳಿಯ ರವಿಕುಮಾರ್​ ಹಾಗೂ ಹೇಮಾವತಿ ದಂಪತಿಯ 2ನೇ ಪುತ್ರಿ. ಕಳೆದ 9 ವರ್ಷಗಳ ಹಿಂದೆ ಹಾಸನದಲ್ಲಿ ಸಿವಿಲ್ ಎಂಜಿನಿಯರಿಂಗ್​ ಓದುವಾಗಲೇ ಹಾಸನ ಜಿಲ್ಲೆ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ ​ಜೊತೆಗೆ ಪ್ರೇಮಾಂಕುರವಾಗಿತ್ತು. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ 5 ವರ್ಷ ಕೆಲಸ ಮಾಡಿದ ಬಳಿಕ ಪೋಷಕರನ್ನು ಒಪ್ಪಿಸಿ, ಕಳೆದ 4 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದರು. ಗಂಡನ ಮನೆಯಲ್ಲೂ ಹೇಳಿಕೊಳ್ಳುವಂತಹ ಸಮಸ್ಯೆ ಇರಲಿಲ್ಲ. ಆದರೆ ಆಕೆಯನ್ನು ಕಾಡುತ್ತಿದ್ದ ದೀರ್ಘಕಾಲದ ಆರೋಗ್ಯ ಸಮಸ್ಯೆ ಪರಿಣಾಮ ಬೀರಿತ್ತು.

ಅಂಜುಳನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಏನು..?

ಆಧುನಿಕ ಜೀವನಶೈಲಿಗೆ ರೂಡಿಸಿಕೊಂಡ ಬಳಿಕ ನಗರವಾಸಿಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಪ್ರಮುಖವಾದ ಸಮಸ್ಯೆ ಸಮಸ್ಯೆ ಥೈರಾಯಿಡ್. ಈ ಸಮಸ್ಯೆ ಋತುಚಕ್ರದಲ್ಲಿ ಏರುಪೇರು ಹಾಗೂ ಮಕ್ಕಳಾಗುವ ಅವಕಾಶವನ್ನು ಕ್ಷೀಣಿಸುವಂತೆ ಮಾಡುತ್ತದೆ. ಇದರಿಂದ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಳ್ಳುವ ಖಠಿಣ ನಿರ್ಧಾರ ಮಾಡುತ್ತಾರೆ. ಅದೇ ರೀತಿ ಅಂಜು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್​ನೋಟ್​ ಬರೆದಿಟ್ಟು ತನ್ನ ಪಯಣ ಮುಗಿಸಿದ್ದಾರೆ. ಸಂಬಂಧಿಕರ ಮನೆಯಲ್ಲಿ ನಡೆದಿದ್ದು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿದ್ದ ಗಂಡ ಅಂಜನ್​ ಹಾಗೂ ಕುಟುಂಬಸ್ಥರು ಮನೆಗೆ ವಾಪಸ್​ ಆದ ಬಳಿಕ ಸಾವಿನ ವಿಚಾರ ಬಹಿರಂಗ ಆಗಿದೆ.

ಅಂಜು ಡೆತ್​ನೋಟ್​ನಲ್ಲಿ ಏನೇನು ಬರೆದಿದ್ದಾರೆ..?

ಆದರೆ ಅಂಜು ಸಾಯುವ ಮುನ್ನ ‘ನನ್ನ ಸಾವಿಗೆ ನಾನೇ ಕಾರಣ, ನನ್ನ ಮನಸ್ಥಿತಿ ಸರಿಯಿಲ್ಲ, ಏನ್ ಮಾಡ್ತಿದ್ದೀನಿ ಅಂತ ಗೊತ್ತಾಗ್ತಿಲ್ಲ ಅಂಜನ್. I don’t know what I am doing, ನನಗೆ ಬ್ಯಾಕ್ ಪೇನ್ ಇದೆ. ಅದರೂ ಹೇಳಿಕೊಳ್ಳೋಕೆ ಅಗ್ತಿಲ್ಲ. ಕೋಪ, ಹಠ ಎಲ್ಲಾ ಮಾಡ್ತಿದ್ದೆ. ನನಗೆ ಹರ್ಟ್ ಅಗ್ತಿತ್ತು. ನನ್ನ ಜೊತೆ ಇದ್ರು ದೂರ ಇದ್ದಿಯಾ ಅಂತ ಅನ್ನಿಸ್ತಿದೆ. ಏನೂ ಗೊತ್ತಾಗ್ತಿಲ್ಲ ಬರೆಯೋಕೆ. ಬೈ ಬೈ ಇನ್ನೂ ಯಾವತ್ತೂ ನಿನಗೆ ಹಿಂಸೆ ಕೊಡೋಕೆ ಇಷ್ಟ ಇಲ್ಲ. ಅಮ್ಮ ಐ ಲವ್ ಯೂ, ಹಠ ಮಾಡ್ಕೊಂಡು ಇಲ್ಲಿಗೆ ಬಂದೆ, ಹಠ ಮಾಡ್ಕೊಂಡು ಇಲ್ಲಿಂದ ಹೋಗ್ತಿದ್ದೀನಿ. ನನ್ನನ್ನು ಕ್ಷಮಿಸು ಅಮ್ಮಾ ಎಂದು ಬರೆದಿದ್ದಾರೆ.

ಗಂಡನ ಮನೆಯವರ ಮೇಲೆ ಯಾಕೆ ಅನುಮಾನ..?

9 ವರ್ಷದಿಂದ ಪ್ರೀತಿಸಿದ್ದ ಅಂಜನ್ ಕಣಿಯಾರ್ ಹಾಗೂ ಅಂಜು, ಕಳೆದ 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಥೈರಾಯಿಡ್​ ಸಮಸ್ಯೆ ಇರುವುದು ಅಂಜನ್​ಗೂ ಗೊತ್ತೇ ಇತ್ತು. ಆದರೂ ಗಂಡನ ಮನೆಯಲ್ಲಿ ಆದ ಹಿಂಸೆ ಅಂಜು ಸಾವಿಗೆ ಕಾರಣವಾಯ್ತಾ..? ಎನ್ನುವ ಅನುಮಾನ ಪೊಲೀಸರು ಹಾಗೂ ಅಂಜು ಪೋಷಕರನ್ನು ಕಾಡುತ್ತಿದೆ. ಗಂಡನ ಮನೆಯವರು ಬರ್ತ್​ ಡೇ ಪಾರ್ಟಿಗೆ ಅಂಜು ಒಬ್ಬಳನ್ನೇ ಬಿಟ್ಟು ಹೋಗಿದ್ಯಾಕೆ..? ಇನ್ಯಾವತ್ತೂ ನಿನಗೆ ಹಿಂಸೆ ಕೊಡೋದಿಲ್ಲ ಎಂದು ಡೆತ್​ ನೋಟ್​ನಲ್ಲಿ ಬರೆದಿದ್ದಾರೆ. ಅಂದರೆ ಸಾಯುವ ಮುನ್ನ ಮನೆಯಲ್ಲಿ ಗಲಾಟೆ ನಡೆದಿತ್ತು ಎನ್ನುವುದನ್ನು ಮೇಲ್ನೋಟಕ್ಕೆ ಹೇಳಿದಂತಾಯ್ತು. ಅಂಜನ್​​ ನಡಾವಳಿಕ 4 ತಿಂಗಳಲ್ಲಿ ಬದಲಾಗಿದ್ದಕ್ಕೆ ಬೇಸರ ಮಾಡಿಕೊಂಡು ಆತ್ಮಹತ್ಯೆ ಹಾದಿ ಹಿಡಿದ್ರಾ ಅನ್ನೋದನ್ನ ಪೊಲೀಸ್ರು ತನಿಖೆ ಬಳಿಕ ಹೇಳ್ಬೇಕಿದೆ. ಆದರೆ ಅಂಜು ಸಾಯುವ ಹುಡುಗಿ ಅಲ್ಲ ಎನ್ನುವುದು ಪೋಷಕರ ನೇರ ಮಾತು.

Related Posts

Don't Miss it !