ದುಡ್ಡಿದ್ದವರ ಮನೆಗೆ ಕನ್ನ, ಬಡವರಿಗೆ ದಾನ..! ಬೆಂಗಳೂರಲ್ಲೊಬ್ಬ ಅಚ್ಚರಿಯ ಕಳ್ಳ..

ನಟ ಸುದೀಪ್​ ಅಭಿನಯದ ಕೋಟಿಗೊಬ್ಬ 2 ಚಿತ್ರವನ್ನು ನೋಡಿದ್ದವರಿಗೆ ಇದು ಸರಳವಾಗಿ ಅರ್ಥವಾಗುತ್ತೆ. ಯಾಕಂದ್ರೆ ಈ ಚಿತ್ರದಲ್ಲೂ ನಾಯಕ ನಟ ಸುದೀಪ್​, ಲೂಟಿ ಮಾಡಿದ ಹಣವನ್ನು ವಿಶ್ವದ ದೇಶದ ಮೂಲೆ ಮೂಲೆಯ ಬಡವರಿಗೂ ಸಹಾಯ ಮಾಡುತ್ತಾನೆ. ಅದೇ ಪ್ರಕಾರ ಬೆಂಗಳೂರಿನಲ್ಲೊಬ್ಬ ಕಳ್ಳ, ತನ್ನ ಚಾಲಾಕಿ ಬುದ್ಧಿವಂತಿಕೆಯಿಂದ ಕಳ್ಳತನ ಮಾಡಿ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದ. ಶಾಸಕರು. ಪೊಲೀಸರು ಸೇರಿದಂತೆ ದೊಡ್ಡ ದೊಡ್ಡ ಜನರ ಮನೆಗಳನ್ನು ಲೂಟಿ ಮಾಡಿದ್ದ ಜಾನ್ ಮೆಲ್ವಿನ್ ಅಲಿಯಾಸ್ ಕರಿಯ ಇತ್ತೀಚಿಗೆ ಗ್ರಹಚಾರ ಕೆಟ್ಟು ಖಾಕಿ ಬಲೆಗೆ ಬಿದ್ದಿದ್ದಾನೆ. ಬಡವರ ಪಾಲಿಗೆ ದಾನಶೂರ ಕರ್ಣನಾಗಿದ್ದ ಕರಿಯ ಕಂಬಿ ಹಿಂದೆ ಹೋಗುವ ಮುನ್ನ ಸಾಕಷ್ಟು ವಿಚಾರಗಳನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಒಮ್ಮೆ ಸ್ಕೆಚ್​ ಹಾಕಿದ ಮನೆ ಮಿಸ್​ ಆಗೋದಕ್ಕೆ ಬಿಡ್ತಿರಲಿಲ್ಲ..!

ಈ ಡಿಫರೆಂಟ್ ಕಳ್ಳ ಜಾನ್​ ಮೆಲ್ವಿನ್​​ ಅಲಿಯಾಸ್​ ಕರಿಯನಿಗೆ ಡಿಫರೆಂಟ್ ಅಭ್ಯಾಸ ಕೂಡಾ ಇದೆ. ಒಂದು ಸಾರಿ ಒಂದು ಮನೆಗೆ ಸ್ಕೆಚ್ ಹಾಕಿದ ಅಂದ್ರೆ ಮುಗೀತು. ಟಾರ್ಗೆಟ್ ಮಿಸ್ ಆಗೋ ಚಾನ್ಸೇ ಇರಲಿಲ್ಲ. ಮನೆಯಲ್ಲಿಟ್ಟಿದ್ದ ಒಡವೆ, ಹಣ ಎಲ್ಲಾ ದೋಚಿಕೊಂಡು ಹೋಗುವುದೇ ಇವನ ಕಾಯಕ. ಹಗಲಿನಲ್ಲಿ ಮಾತ್ರ ಕಾರ್ಯಾಚರಣೆ ಮಾಡ್ತಿದ್ದ ಈತ ಪ್ರತಿ ಬಾರಿಯೂ ಕಳ್ಳತನಕ್ಕೆ ಹೋದಾಗ ಕ್ರೈಸ್ತ ಧರ್ಮಗ್ರಂಥ ಬೈಬಲ್ ಹಿಡಿದುಕೊಂಡು ಹೋಗ್ತಿದ್ದ. ಕಳ್ಳತನ ‌ಮಾಡಿ ಬಂದ ಹಣದಲ್ಲಿ ಮೈಸೂರಿನ ಡೋರನಹಳ್ಳಿಯ ಚರ್ಚ್ ಹಾಗೂ ವೆಲಂಕಣಿ ಚರ್ಚ್ ನಲ್ಲಿರುವ ಬಡವರಿಗೆ ಊಟ ಹಾಕಿಸ್ತಿದ್ದ. ಇನ್ನೊಂದು ವಿಶೇಷ ಅಂದ್ರೆ ಇವನಿಗೆ ಯಾವುದೇ ಮನೆ, ಮಠವೂ ಇರಲಿಲ್ಲ. ಬೆಂಗಳೂರಿನ ಜಾಲಹಳ್ಳಿ ಬಳಿಯ ಪಾಳು ಮನೆಗಳಲ್ಲೇ ವಾಸ ಮಾಡ್ತಿದ್ದ. ಹೆಂಡತಿ ಮಕ್ಕಳು ಇಲ್ಲದ ಜಾನ್​ ಮೆಲ್ವಿನ್​ ಅಲಿಯಾಸ್​ ಕರಿಯ ಏಕಾಂಗಿ. ಆದರೆ ಭಾರೀ ಶೋಕಿಲಾಲ.

ಇದನ್ನೂ ಓದಿ: ಬ್ಯಾಂಕ್​ ಅಕೌಂಟ್‌ನಲ್ಲಿ ಹಣ ಕಟ್​ ಆಗ್ತಿದ್ಯಾ..? ಇನ್ಮುಂದೆ ಈ ಕಾರಣಕ್ಕೂ ಕಟ್​ ಆಗ್ಬಹುದು..!

ಸಾಕಷ್ಟು ಬಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಕರಿಯ..!!

ಕಳ್ಳತನಕ್ಕೆ ಭಾರೀ ಚಾಲಾಕಿಯಾಗಿದ್ದ ಕರಿಯನ, ತಾನು ಕಳ್ಳತನ ಮಾಡಿದ ವಸ್ತುಗಳನ್ನು ಮಣ್ಣಿನ ಅಡಿಯಲ್ಲಿ ಹೂತಿಟ್ಟು ಗುರುತು ಮಾಡ್ತಿದ್ದ. ಕದ್ದ ಹಣದಿಂದ ಏನೆಲ್ಲಾ ಮಾಡಿದ ಅನ್ನೋದನ್ನ ಕ್ಯಾಲೆಂಡರ್​ನಲ್ಲಿ ಬರೆದಿಡ್ತಿದ್ದ. ಎಲ್ಲಾ ಕಳ್ಳರಿಗೆ ಪೊಲೀಸರು ಅಂದ್ರೆ ಭಯವಿದ್ರೆ, ಈತನಿಗೆ ಪೊಲೀಸರು ಅಂದ್ರೆ ವಿಶೇಷ ಗೌರವ. ಒಂದೆರಡು ಬಾರಿ ಪೊಲೀಸರ ಮನೆಗೂ ಕನ್ನ ಹಾಕಿದ್ದ ಜಾನ್​ ಮಲ್ವಿನ್​​, ಪೊಲೀಸರ ಮನೆ ಎಂದು ಗೊತ್ತಾದ ಬಳಿಕ ಕದ್ದ ವಸ್ತುಗಳನ್ನು ವಾಪಸ್ ಕೊಟ್ಟಿದ್ದ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಪೊಲೀಸ್​ ಠಾಣೆಗಳಿಗೆ ಬೇಕಾಗಿದ್ದ ಈ ಖತರ್ನಾಕ್​ ಚೋರನನ್ನು ಬೆಂಗಳೂರಿನ ವಿಜಯನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಸೆಂಟಲ್​ ಜೈಲಿನ ಅತಿಥಿಯಾಗಿ ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮದುವೆ ಆರತಕ್ಷತೆಯಲ್ಲಿ ನಿಂತಿದ್ದ ಮಧುಮಗಳು ಸ್ಮಶಾನ ಸೇರಿದ್ಯಾಕೆ..?

ಶೋಕಿವಾಲ ಕರಿಯನಿಗೆ ಹೈಫೈ ಹುಡುಗಿಯರ ಶೋಕಿ..!

ಬೆಂಗಳೂರಿನ ಜಾಲಹಳ್ಳಿ ಬಳಿ ಪಾಳು ಮನೆಗಳಲ್ಲಿ ವಾಸ ಮಾಡ್ತಿದ್ದ ಜಾನ್ ಮೆಲ್ವಿನ್ ಅಲಿಯಾಸ್ ಕರಿಯನಿಗೆ ಭಾರೀ ಶೋಕಿಲಾಲ. ಸುಂದರ ಹುಡುಗಿಯರಿಗೆ ಮನಸೋಲುತ್ತಿದ್ದ ಕರಿಯ ಚೆಂದುಳ್ಳಿ ಚೆಲುವೆಯರಿಗಾಗಿ ಲಕ್ಷ ಲಕ್ಷ ಹಣವನ್ನು ಸುರಿಯುತ್ತಿದ್ದ. ತಾನು ಕಳ್ಳತನ ಮಾಡಿಯಾದರೂ ಐಶಾರಾಮಿ ಜೀವನ ನಡೆಸುವ ಹುಡುಗಿಯರಿಗೆ ಗಾಳ ಹಾಕಿ ತನ್ನ ದೇಹ ಸುಖ ತೀರಿಸಿಕೊಳ್ತಿದ್ದ. ಜೊತೆಗೆ ಸಾವಿರಾರು ರೂಪಾಯಿ ಹಣವನ್ನು ಟಿಪ್ಸ್​ ರೂಪದಲ್ಲಿ ಕೊಡುತ್ತಿದ್ದ. ತಾನು ಕಳವು ಮಾಡಿದ್ದ ಜಾನ್​ ಮೆಲ್ವಿನ್​ ಅಲಿಯಾಸ್​ ಕರಿಯ ತಾನು ಕಳವು ಮಾಡಿದ ಹಣದಲ್ಲಿ ಬಹುತೇಕ ಹಣವನ್ನು ಹೈಫೈ ಹುಡುಗಿಯರಿಗೆ ಸುರಿಯುತ್ತಿದ್ದ. ಇದೀಗ ಕಂಬಿ ಹಿಂದೆ ಸೊಳ್ಳೆ ಹೊಡೆಯುವ ಕೆಲಸ ಮಾಡ್ತಿದ್ದಾನೆ.

Related Posts

Don't Miss it !