ಸಚಿವರ ಪುತ್ರನ ವೀಡಿಯೋ ಕೇಸ್, ​​ಕಾಂಗ್ರೆಸ್​ ಶಾಸಕರ ಪುತ್ರಿಗೆ ಸುತ್ತಿಕೊಂಡಿದ್ದು ಯಾಕೆ..?

ಬಿಜೆಪಿ ಸರ್ಕಾರದಲ್ಲಿ ಸಿ.ಡಿ ಕೇಸ್​ ಎಂದಾಗ ಎಲ್ಲರ ಕಣ್ಣು, ಕಿವಿ ಆಕ್ಟೀವ್​ ಆಗೋದು ಸಹಜ. ಇತ್ತೀಚಿಗೆ ಸಾಕಷ್ಟು ನಾಯಕರ ವಿಭಿನ್ನ ಅವತಾರದ ಸಿ.ಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಆಗಿವೆ. ಆ ಬಳಿಕ ಕಾಂಗ್ರೆಸ್​​ನಿಂದ ಬಿಜೆಪಿ ಸೇರ್ಪಡೆಗಾಗಿ ಬಾಂಬೆ ಸೇರಿದ್ದ ಶಾಸಕರು ಯಾವುದೇ ಮಾನಹಾನಿ ಸಿ.ಡಿ ದೃಶ್ಯಗಳನ್ನು ಪ್ರಸಾರ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು. ಆದರೆ ಇದೀಗ ಅದೇ ಬಾಂಬೆ ಟೀಂನಲ್ಲಿ ಸಚಿವ ಎಸ್​.ಟಿ ಸೋಮಶೇಖರ್​ ಅವರ ಪುತ್ರನಿಗೆ ಸಿ.ಡಿ ಶಾಕ್​ ಕೊಟ್ಟಿದೆ. ಕೇಳಿದಷ್ಟು ಹಣ ಕೊಡದಿದ್ದರೆ ನೀವು ಇರುವ ಸಿ.ಡಿಯನ್ನು ಬಹಿರಂಗ ಮಾಡ್ತೇವೆ ಎನ್ನುವ ಬೆದರಿಕೆ ಕರೆಗಳು ಬಂದಿದ್ದು, ಒಂದೆರಡು ವೀಡಿಯೋಗಳು ಬಂದಿವೆ ಎಂದು ಸ್ವತಃ ಸಚಿವರ ಪುತ್ರ ನಿಶಾಂತ್​ ದೂರು ಸಲ್ಲಿಕೆ ಮಾಡಿದ್ದಾರೆ. ವಿಶೇಷ ಅಂದ್ರೆ ಕಾಂಗ್ರೆಸ್​ ಶಾಸಕರ ಪುತ್ರಿಯ ಹೆಸರು ಈ ಕೇಸ್​ನಲ್ಲಿ ಕೇಳಿ ಬಂದಿದೆ.

ಒಂದು ವೀಡಿಯೋ.. ಒಂದು ಕೋಟಿ ಹಣಕ್ಕಾಗಿ ಡಿಮ್ಯಾಂಡ್..!

ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿರುವ ಎಸ್​.ಟಿ ಸೋಮಶೇಖರ್​ ಅವರ ಪುತ್ರ ನಿಶಾಂತ್​ ದೂರು ನೀಡಿದ್ದರು. ನಕಲಿ ವೀಡಿಯೋಗಳನ್ನು ಸೃಷ್ಟಿಸಿ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಆಡುಗೋಡಿಯ ಸಿ.ಎ.ಆರ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಹಾಗೂ ನನ್ನ ತಂದೆಯ ರಾಜಕೀಯ ಬೆಳವಣಿಗೆ ಸಹಿಸದೆ ನಮ್ಮ ಹೆಸರಿಗೆ ಚ್ಯುತಿ ತರಲು ಈ ರೀತಿಯ ಹುನ್ನಾರ ಮಾಡಿದ್ದಾರೆ. ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಈ ಸಂಚು ಮಾಡಿದ್ದಾರೆ. ಯಾವುದೋ ಮಹಿಳೆಯ ಜೊತೆಯಲ್ಲಿ ಇರುವಂತೆ ಆಶ್ಲೀಲವಾದ ನಕಲಿ ದೃಶ್ಯಾವಳಿಗಳನ್ನು ಸೃಷ್ಟಿಸಿದ್ದಾರೆ. ಕೆಲವು ಫೋಟೋಗಳನ್ನು ಸಹ ಮೊಬೈಲ್ ನಂ: 7895648639 ಮೂಲಕ 25/12/2021 ರಂದು ಕಳಿಸಿದ್ದಾರೆ. ವಿಡಿಯೋ ಮತ್ತು ಫೋಟೋಸ್​ಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಮತ ಭಾನುಪ್ರಕಾಶ್​ಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

Read This;

ಜ್ಯೋತಿಷಿಯ ಮಗನನ್ನು ಬಂಧಿಸಿದ ಸೈಬರ್​ ಕ್ರೈಂ..!

ವಾಟ್ಸಾಪ್ ಮೂಲಕ ಪದೇ ಪದೇ ಮೆಸೇಜ್​ಗಳನ್ನು ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಹಣ ನೀಡದಿದ್ದರೆ ಆಶ್ಲೀಲ ವೀಡಿಯೋ ಫೋಟೋಗಳನ್ನು ಸಾಮಾಜಿಕ ಜಾಲದಲ್ಲಿ ಬಿಡುಗಡೆ ಮಾಡುವ ಮೂಲಕ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನುವ ಜೊತೆಗೆ ಮೊಬೈಲ್​ ನಂಬರ್​ ಕೊಡುತ್ತಿದ್ದ ಹಾಗೆ ಅಖಾಡಕ್ಕೆ ಇಳಿದ ಪೊಲೀಸರು ಖ್ಯಾತ ಜ್ಯೋತಿಷಿ ಪುತ್ರನನ್ನ ಅರೆಸ್ಟ್ ಮಾಡಿದ್ದಾರೆ. RT ನಗರದ ಚಂದ್ರಶೇಖರ್​ ಸ್ವಾಮಿಜಿ ಪುತ್ರ ರಾಹುಲ್ ಭಟ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ಕೋರ್ಟ್ ಎದುರು ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೂ ಪಡೆದಿದ್ದಾರೆ. ಇನ್ನೂ ಗೋವಾದಲ್ಲಿ ಎಸ್​.ಟಿ ಸೋಮಶೇಖರ್​ ಅವರ ಮಾಜಿ ಗನ್​ಮ್ಯಾನ್​​ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕೇಸ್​ನಲ್ಲಿ ಶಾಸಕರ ಮಗಳ ಪಾತ್ರ ಏನು..? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಯಾರು ಆ ಕಾಂಗ್ರೆಸ್​ ಶಾಸಕ.. ಅವರ ಮಗಳ ಪಾತ್ರವೇನು..?

ಸಚಿವ ಎಸ್​.ಟಿ ಸೋಮಶೇಖರ್​ ಪುತ್ರ ನಿಶಾಂತ್​ ನೀಡಿದ್ದ ದೂರಿನ ಅನ್ವಯ ನಂಬರ್​ ಮೂಲವನ್ನು ಕೆದಕಿದ್ದು, ಯುಕೆ ಮೂಲದ ನಂಬರ್​​ ಬಳಸಿಕ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದ್ದು, ಆ ಸಿಮ್ ಕಾರ್ಡ್ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಮಗಳ ಹೆಸರಿನಲ್ಲಿ ಇದೆ ಎನ್ನುವುದು ಪತ್ತೆಯಾಗಿದೆ. ಆದರೆ ಇಂಡಿ ಶಾಸಕರ ಪುತ್ರಿ ವಿದ್ಯಾಭ್ಯಾಸಕ್ಕೆ ಎಂದು ಅಮೆರಿಕಕ್ಕೆ ತೆರಳಿದ್ದಾರೆ. ಅಮೆರಿಕಕ್ಕೆ ತೆರಳುವ ಮುನ್ನ ಆ ಸಿಮ್ ಅನ್ನು ತನ್ನ ಸ್ನೇಹಿತನಿಗೆ ಕೊಟ್ಟು ಹೋಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಸಿಮ್ ಕಾರ್ಡ್​ ಪಡೆದುಕೊಂಡಿದ್ದ ಶಾಸಕರ ಮಗಳ ಸ್ನೇಹಿತ ರಾಕೇಶ್ ಅಣ್ಣಪ್ಪನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆತನ ಭಾಗಿ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಗದಿರುವ ಕಾರಣ ವಾಪಸ್​ ಕಳುಹಿಸಿದ್ದು, ಹೆಚ್ಚಿನ ವಿಚಾರಣೆಗೆ ಅವಶ್ಯಕತೆ ಇದ್ದಾಗ ಕರೆಯುತ್ತೇವೆ. ವಿಚಾರಣೆಗೆ ಬರಬೇಕು ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ.

Also Read;

ವೀಡಿಯೋ ನಕಲಿಯೋ ಅಸಲಿಯೋ..? ಅದೇ ಸಸ್ಪೆನ್ಸ್​..

ಕಾಂಗ್ರೆಸ್​​ ಶಾಸಕರ ಮಗಳು ವಿದೇಶಕ್ಕೆ ಹೋಗುವಾಗ ಸ್ನೇಹಿತ ರಾಕೇಶ್ ಅಣ್ಣಪ್ಪ ಬಳಿ ಸಿಮ್​ ಕೊಟ್ಟು ಹೋಗಿದ್ದರು. ರಾಕೇಶ್​​ ಅಣ್ಣಪ್ಪ ಹಾಗು ರಾಹುಲ್ ಭಟ್ ಸ್ನೇಹಿತರಾಗಿದ್ದು, ಪ್ಲಾನ್​​ ಮಾಡಿ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿದ್ರಾ..? ಅಥವಾ ನಕಲಿ ವೀಡಿಯೋ ಸೃಷ್ಟಿಸಿ ಶಾಸಕರ ಪುತ್ರಿಯ ಸಿಮ್​ನಿಂದ ಕಳುಹಿಸಿದ್ರಾ..? ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನೂ ಈ ಯೋಜನೆ ಮೊದಲೇ ಗೊತ್ತಿದ್ದು ತನ್ನ ಸಿಮ್​ ಕಾರ್ಡ್​ ಅನ್ನು ಸ್ನೇಹಿತ ರಾಕೇಶ್​ ಅಣ್ಣಪ್ಪನ ಕೈಲಿ ಕೊಟ್ಟು ಹೋಗಲಾಗಿದ್ಯಾ..? ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನೂ ವೀಡಿಯೋ ಅಸಲಿಯೋ ನಕಲಿಯೋ ಎನ್ನುವ ಬಗ್ಗೆ ತಿಳಿದುಕೊಳ್ಳಲು ಎಫ್​ಎಸ್​ಎಲ್​​ಗೂ ರವಾನೆ ಮಾಡಲಾಗಿದೆ. ಈಗ ಕಳುಹಿಸಿರುವ ವೀಡಿಯೋ ಅಸಲಿಯೋ ನಕಲಿಯೋ ಎನ್ನುವ ಬಗ್ಗೆ ತನಿಖೆ ಬಳಿಕ ಉತ್ತರ ಸಿಗಬೇಕಿದೆ. ಆದರೆ ಗೋವಾದಲ್ಲಿ ಸಚಿವರ ಮಾಜಿ ಗನ್ ಮ್ಯಾನ್ ಬಂಧನ ಆಗಿದ್ದು, ಸಿಡಿ ಅಸಲಿಯಾ..? ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಕಲಿ ವೀಡಿಯೋ ಆಗಿದ್ದರೆ, ಸ್ನೇಹಿತರು ಮಾಡಿದ್ದಾರೆ ಎನ್ನಬಹುದು. ಆಗ ಗನ್ ಮ್ಯಾನ್ ಸಹಾಯ ಬೇಕಿಲ್ಲ ಎನ್ನುವ ವಾದ ಹುಟ್ಟಿಕೊಂಡಿವೆ. ಇನ್ನೂ ಅಂತಿಮವಾಗಿ ಈ ಎಲ್ಲರೂ ಸ್ನೇಹಿತರಾ..?ಎನ್ನುವ ಬಗ್ಗೆಯೂ ಸಂದೇಹ ಮೂಡುತ್ತಿದೆ

Related Posts

Don't Miss it !