‘ನನ್ನ ತಾತನಿಗೆ ಕೊರೊನಾ ಬಂದಿಲ್ಲ ಅಂದಿದ್ರೆ ನಾನು ಬದುಕಿ ಇರ್ತಿದ್ದೆ ಗೊತ್ತಾ..?’ ನನ್ನ ಕೊನೇ ಪತ್ರ..

‘ಹಾಯ್​, ನನ್ನ ಹೆಸರು ಸಮನ್ವಿ, ಅದೇ ವೈಕುಂಠ ಏಕಾದಶಿ ದಿನ ಅಪಘಾತದಲ್ಲಿ ಸಾವನ್ನಪ್ಪಿದ್ನಲ್ಲ ಅದೇ ಸಮನ್ವಿ ನಾನು. ಏಕಾದಶಿ ದಿನ ಸತ್ರೆ ಸ್ವರ್ಗ ಸಿಗುತ್ತೆ ಅಂತಾರಲ್ವಾ..! ನಾನು ಸ್ವರ್ಗದಿಂದಲೇ ಅಪಘಾತದ ಕಂಪ್ಲೀಟ್​ ರಿಪೋರ್ಟ್​ ಹೇಳ್ತೀನಿ ನೋಡಿ​. ನಾನು ಸತ್ತ ಮೇಲೆ ನನ್ನ ದೇಹಕ್ಕೆ ಬೆಂಕಿ ಇಡುವ ತನಕ ನೀವು ತೋರಿಸಿ ಪ್ರೀತಿ ಕಂಡು ನಾನು ನಿಜವಾಗಲೂ ಸ್ವರ್ಗದಲ್ಲೂ ಆನಂದ ಬಾಷ್ಪ ಸುರಿಸುವಂತಾಯ್ತು. ನೀವೆಲ್ಲಾ ಇಷ್ಟೊಂದು ಪ್ರೀತಿಸ್ತೀರಿ ಅನ್ನೋದು ಗೊತ್ತಾಗಿ ತಡೆಯಲಾರದಷ್ಟು ಖುಷಿಯಾಯ್ತು. ಅಮ್ಮ, ಅಪ್ಪ, ನನ್ ಫ್ರೆಂಡ್ಸ್​, ಅಜ್ಜ ಅಜ್ಜಿ ಎಲ್ಲರೂ ಕಣ್ಣೀರು ಹಾಕಿದ್ರು. ನನ್ನನ್ನ ಕಳೆದುಕೊಂಡ ಬಳಿಕ ಮನೆ ಬರಿದಾಗಿದೆ ಅನ್ನೋ ಫೀಲಿಂಗ್​ ಅವರದ್ದು. ಅದು ಸತ್ಯ ಕೂಡ. ಆದರೆ ಏನ್ ಮಾಡೋದು ಅಮ್ಮನೂ ನಾನು ಸ್ಕೂಟರ್‌ನಲ್ಲಿ ಬರುವಾಗ ಲಾರಿ ಡ್ರೈವರ್ ಅಂಕಲ್ ಬಂದು ಗುದ್ ಬಿಟ್ರು. ಅಮ್ಮ ಆ ಕಡೆಗೆ ಬಿದ್ರು, ನಾನು ಈ ಕಡೆಗೆ ಬಿದ್ದೆ. ತಲೆ ಜುಂ ಅನ್ನಿಸ್ತು. ಅಷ್ಟೆ ಗೊತ್ತಿರೋದು ನಂಗೆ. ನನ್ ಪ್ರಾಣಕ್ಕೆ ಕೋಪ ಬಂತು ಅನ್ಸುತ್ತೆ, ನನ್ ದೇಹನ ಅಲ್ಲೇ ಬಿಟ್ಟು ಸ್ವರ್ಗದ ಕಡೆಗೆ ಬಂದ್ ಬಿಡ್ತು.

ಸಂಕ್ರಾಂತಿ ಹಬ್ಬ ಅಲ್ವಾ..? ಅದಕ್ಕೆ ನಾನೂ ಅಮ್ಮ ಶಾಪಿಂಗ್ ಮಾಡಿದ್ವಿ. ನನಗೆ ಬೇಕಿರೋದನ್ನೆಲ್ಲಾ ಅಮ್ಮ ಕೊಡಿಸಿದ್ಲು. ಆಮೇಲೆ ರಾಜಾಜಿನಗರದ ಹತ್ರ ಇದ್ಯಲ್ಲ ಗಾಯತ್ರಿ ನಗರ ಅಲ್ಲಿ ನಮ್ ಅಜ್ಜಿ, ತಾತ ಮನೆ ಇದೆ. ಅಲ್ಲಿಗೆ ಹೋಗಿ ಬರೋಣ ಅಂತಾ ಅಮೃತಮ್ಮ ಹೇಳಿದ್ರು. ಹೇಗಿದ್ರು ಅಪ್ಪ ಮನೆಯಲ್ಲಿ ಇಲ್ಲ, ಅಜ್ಜಿ ಮನೆಗೆ ಮೆಟ್ರೋದಲ್ಲಿ ಹೋಗಿ ಮೆಟ್ರೋದಲ್ಲೇ ಬಂದು ಬಿಡೋಣ ಅಂದಿದ್ರು ಅಮ್ಮ. ನಮ್ ಗಾಡಿನ ಪಾರ್ಕ್ ಮಾಡೋಕೆ ಅಂತ ಮೆಟ್ರೋ ಸ್ಟೇಷನ್ ಕಡೆ ಹೋಗ್ತಿದ್ವಿ. ಅಷ್ಟರಲ್ಲೇ ದೊಡ್ಡ ಲಾರಿ ಬಂದು ಗುದ್ದ್ ಬಿಡ್ತು. ನಂಗೆ ನೋವಾಯ್ತು ಅಂತಾ ಹೇಳಿ ಅಳೋಕು ಟೈ ಇರಲಿಲ್ಲ. ನನ್ನ ಪ್ರಾಣ ಹೊರಟು ಬಂದು ಬಿಡ್ತು. ನಾನು ಕಣ್​ ಕೂಡ ಮುಚ್ಚಿರಲಿಲ್ಲ.‌ ಬೆಳಗ್ಗೆ ನನ್ ದೇಹನಾ ಆಸ್ಪತ್ರೆ ಅವರು ಕಟ್ಟಿಕೊಟ್ಟಿದ್ರಲ್ಲ ಅವಾಗ ತುಂಬಾ ಸಂಕಟ ಆಗ್ತಿತ್ತು. ಅಪ್ಪ, ಅಮ್ಮ ಅಳ್ತಿದ್ದನ್ನು ನೋಡೋಕಾಗ್ಲಿಲ್ಲ.‌

Read This:

ನಮ್ ಅಪ್ಪ ರೂಪೇಶ್ ಇದ್ದಾರಲ್ಲ, ಅವರ ತಂದೆ ಅಂದ್ರೆ ನಮ್ಮ ತಾತಗೆ ಕೊರೊನಾ ಬಂದಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿದ್ದೋ. ಏಕಾದಶಿ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಕರ್ಕೊಂಡ್ ಬರೋಕೆ ಅಂತ ಅಪ್ಪ ಆಸ್ಪತ್ರೆಗೆ ಹೋಗಿದ್ರು. ಅಪ್ಪ ಮನೇಲಿ ಇದ್ದಿದ್ರೆ ಅಮ್ಮ ನನ್ನನ್ನ ಗಾಡಿನಲ್ಲಿ ಕರ್ಕೊಂಡು ಬರ್ತಾ ಇರ್ಲಿಲ್ಲ. ಅಪ್ಪ ಇರ್ಲಿಲ್ವಲ್ಲ, ನಾನು ಒಬ್ಳೆ ಮನೆಲಿ ಇರೋಕಾಗುತ್ತಾ..? ಇಲ್ಲ ತಾನೆ..! ಅದ್ಕೆ ಅಮ್ಮ ನನ್ನನ್ನೂ ಜೊತೆಗೆ ಕರ್ಕೊಂಡು ಬಂದಿದ್ರು. ಪಾಪ ಅವರಿಗೆ ಏನು ಗೊತ್ತು ಹೀಗಾಗುತ್ತೆ ಅಂತ ಅಲ್ವಾ..? ನನ್ ಆಯಸ್ಸು ಅಷ್ಟೇ ಇದ್ದಿದ್ದು ಅನ್ಸುತ್ತೆ. ನಮ್ ಹರಿಕಥೆ ಅಲ್ಲಿ ಭಕ್ತ ಮಾರ್ಕಂಡೇಯ ಕೂಡ ಅಲ್ಪಾಯುಷಿ.‌ ಶಿವ ಪ್ರತ್ಯಕ್ಷವಾಗಿ ಒಳ್ಳೆ ಮಗ ಬೇಕು ಅಂದ್ರೆ 16 ವರ್ಷ, ಕೆಟ್ಟ ಮಗ ಬೇಕು ಅಂದ್ರೆ ನೂರು ವರ್ಷ ಆಯಸ್ಸು. ಯಾವ ಮಗ ಬೇಕು ಅಂದಾಗ ಮೃಗಂಡ ಮುನಿ ಹಾಗೂ ಮರುದ್ವತಿ ಕೂಡ ಒಳ್ಳೇ ಮಗು ಬೇಕು, 16 ವರ್ಷ ಆದರೂ ಸರಿಯೇ ಅಂದಿದ್ರಂತೆ. ನಾನೂ ಹಾಗೆ ಅನ್ಸುತ್ತೆ.

ಭಕ್ತ ಮಾರ್ಕಂಡಯ್ಯ
ಕೃಪೆ: ಜೇಂಕಾರ್ ಮ್ಯೂಸಿಕ್ ಭಕ್ತಿ

Also Read:

ನಮ್ ಅಜ್ಜಿ ಅಪ್ಪ ಗುರುರಾಜುಲು ನಾಯ್ಡು ಹರಿಕಥೆ ಮಾಡ್ತಿದ್ರು. ಅವರಿಗೆ ದೊಡ್ಡ ಹೆಸರು. ನಮ್ ಅಜ್ಜಿ ಕೂಡ ಹರಿಕಥೆ ಹೇಳ್ತಿದ್ರು. ಅಮ್ಮ ಕೂಡ ಹರಿಕಥೆ ಮಾಡ್ತಾರೆ. ನಾನೂ ಕಲಿಬೇಕು ಅನ್ನೋದು ಅಮ್ಮನ ಆಸೆ ಆಗಿತ್ತು.‌ ನಾನೂ ಕಲೀತಿದ್ದೆ, ಅಷ್ಟರಲ್ಲಿ ಹೀಗಾಯ್ತು. ಅಮ್ಮ ಈಗ ಗರ್ಭಿಣಿ, ಮತ್ತೆ ಅಮ್ಮ ಹೊಟ್ಟೇಲಿ ನಾನು ಹುಟ್ಟಿ ಬರ್ತೀನಿ. ಯಾರೂ ಬೇಸ್ರ ಮಾಡ್ಕೊಬೇಡಿ. ನನ್ನನ್ನ ನೋಡೋಕೆ ತಾರಮ್ಮ, ಅನು ಅಮ್ಮ, ಸೃಜನ್ ಅಂಕಲ್, ಡಾರ್ಲಿಂಗ್ ಅನುಪಮಾ ಅಕ್ಕ ಎಲ್ರು ಬಂದಿದ್ರು. ನಾನು ನನ್ನಮ್ಮ ಸೂಪರ್ ಸ್ಟಾರ್ ಪ್ರೋಗ್ರಾಂಗೆ ಬಂದಿದ್ದು ಸ್ವಲ್ಪ ದಿನ‌ ಆದ್ರು ನೀವೆಲ್ಲಾ ನಂಗಿಷ್ಟ. ಪ್ರೋಗ್ರಾಂ ಬಿಟ್ಟು ಬರೋಕೆ ನಂಗೂ ಇಷ್ಟ ಇರಲಿಲ್ಲ. ಆದ್ರೆ ಅಮ್ಮ ಪ್ರೆಗ್ನೆಂಟ್ ಅಲ್ವಾ..? ಕಷ್ಟ ಆಗಬಾರದು ಅಂತ ಹೊರಕ್ಕೆ ಬಂದ್ವಿ. ಯೋಚನೆ ಮಾಡ್ಬೇಡಿ. ನಾನು ಮತ್ತೆ ಅಮ್ಮನ ಹೊಟ್ಟೇಲಿ ಹುಟ್ಟಿ ಬರ್ತೀನಿ. ಅಳ್ಬೇಡ ಅಮ್ಮ.. ಮೈ ಮಾಮ್ ಬೀ ಸ್ಟ್ರಾಂಗ್ ಅಲ್ವಾ..? ನನ್ನ ಮಾತನ್ನೇ The Public Spot ಅವರು ಬರೆದಿದ್ದಾರೆ. ಅವರಿಗೂ ಥ್ಯಾಂಕ್ಸ್.

Related Posts

Don't Miss it !