ವರ್ತೂರು ಸಂತೋಷ್​ಗೆ ಕೋರ್ಟ್​ನಿಂದ ಜಾಮೀನು.. ಮತ್ತೆ BIGG BOSS ಗೆ ಹೋಗ್ತಾರಾ..?

Varthu Santhosh

ಹುಲಿ ಉಗುರಿನ ಪೆಂಡೆಂಟ್​ ಹಾಕಿಕೊಂಡಿದ್ದ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್​ಗೆ ಜಾಮೀನು ಮಂಜೂರಾಗಿದೆ. ಬೆಂಗಳೂರು ನಗರ 2ನೇ ACJM ಕೋರ್ಟ್​ನಲ್ಲಿ ನಿನ್ನೆ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು, ಇಂದಿಗೆ ಜಾಮೀನು ಆದೇಶ ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕರಣ ಮಾಡಿರುವ ನ್ಯಾಯಾಧೀಶರು, 4 ಸಾವಿರ ರೂಪಾಯಿ ಬಾಂಡ್​ ಅಥವಾ ಒಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲು ಒಪ್ಪಿಗೆ ಸೂಚಿಸಿದೆ. ಇದೀಗ ಮತ್ತೆ ಬಿಗ್​ಬಾಸ್​ ಮನೆಗೆ ಹೋಗ್ತಾರಾ..? ಅಥವಾ ಬಿಗ್​ಬಾಸ್​ ಮನೆಯಿಂದ ವಾಪಸ್​ ಮನೆಗೆ ಹೋಗ್ತಾರಾ ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಮತ್ತೆ ಬಿಗ್​ಬಾಸ್​ ಮನೆಗೆ ವರ್ತೂರು ಸಂತೋಷ್​..!?

ಬಿಗ್​ಬಾಸ್​ ಮನೆಯಲ್ಲಿ ಇದ್ದಾಗ ವರ್ತೂರು ಸಂತೋಷ್​​ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರ ಮನಸ್ಸನ್ನು ಗೆದ್ದಿರಲಿಲ್ಲ. ಆದರೆ ಬಿಗ್​ಬಾಸ್​ ಮನೆಯಿಂದ ವರ್ತೂರು ಸಂತೋಷ್​ ಅರೆಸ್ಟ್​ ಆದ ಬಳಿಕ ನಡೆದ ಘಟನೆ ಸಂತೋಷ್​ ಪರವಾಗಿ ಜನರು ನಿಲ್ಲುವಂತೆ ಮಾಡಿದೆ. ವರ್ತೂರು ಸಂತೋಷ್​ ಒಬ್ಬರನ್ನು ಬಂಧನ ಮಾಡಿದ ಅರಣ್ಯ ಅಧಿಕಾರಿಗಳು ಆ ಬಳಿಕ ಸಿನಿಮಾ ನಟರು, ರಾಜಕಾರಣಿಗಳ ಮನೆಗಳಿಗೆ ಹೋಗಿ ಕೇವಲ ನೋಟಿಸ್​ ಕೊಟ್ಟು ವಾಪಸ್​ ಬಂದಿದ್ದರು. ಈ ಘಟನೆ ಬಳಿಕ ಜನರು ವರ್ತೂರು ಸಂತೋಷ್​ ಬೆನ್ನಿಗೆ ನಿಂತಿದ್ದರು. ಜನಸಾಮಾನ್ಯರು ಎಂದಾಗ ಒಂದು ನ್ಯಾಯ. ಶ್ರೀಮಂತರು, ಅಧಿಕಾರಸ್ಥರು ಎಂದಾಗ ಇನ್ನೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದರು. ಇದೀಗ ಸಂತೋಷ್​​ ಮತ್ತೆ ಬಿಗ್​ಬಾಸ್​ ಮನೆಗೆ ವಾಪಸ್​ ಆದರೆ ಜನಬೆಂಬಲ ಹೆಚ್ಚಾಗುವ ಬಗ್ಗೆ ಬಿಗ್​ಬಾಸ್​ ಆಡಳಿತ ಮಂಡಳಿ ಚರ್ಚೆ ನಡೆಸಿದೆ ಎನ್ನಲಾಗ್ತಿದೆ.

ಬಿಗ್​ಬಾಸ್​ ಮನೆಗೆ ಹೋಗಲು ಇರುವ ಅಡ್ಡಿಯೇನು..?

ಬಿಗ್​ಬಾಸ್​​ ಮನೆಯಲ್ಲಿ ಇರುವ ಜನರಿಗೆ ಹೊರಗಿನ ಪ್ರಪಂಚದಲ್ಲಿ ಏನಾಗ್ತಿದೆ ಅನ್ನೋ ಅರಿವು ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ. ಒಮ್ಮೆ ಮನೆಯಿಂದ ಹೊರಬಿದ್ದರೆ ಅಲ್ಲಿಗೆ ಮುಗೀತು. ಆದರೆ ಕಳೆದ ಬಾರಿ ಒಮ್ಮೆ ಕೊರೊನಾ ಲಾಕ್​ಡೌನ್​ ಆಗಿದ್ದ ಕಾರಣಕ್ಕೆ ಮಧ್ಯದಲ್ಲಿ ಕಾರ್ಯಕ್ರಮ ಸ್ಥಗಿತ ಆಗಿತ್ತು. ಆ ಬಳಿಕ ಮತ್ತೆ ಎಲ್ಲರನ್ನು ಹೊರಕ್ಕೆ ಕಳುಹಿಸಿ, ಎಲ್ಲರನ್ನು ಮತ್ತೆ ಒಳಕ್ಕೆ ಕಳುಹಿಸಲಾಗಿತ್ತು. ಆದರೆ ಈ ಬಾರಿ ವರ್ತೂರು ಸಂತೋಷ್​​ ಜೈಲಿಗೆ ಹೋಗಿದ್ದು, ಅಲ್ಲಿ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುತ್ತಾರೆ. ಈಗ ಸಂತೋಷ್​ ಅವರನ್ನು ವಿಶೇಷ ಅಧಿಕಾರ ಬಳಸಿ ಒಳಕ್ಕೆ ಬಿಡಬೇಕಾ..? ಬಿಡಬಾರದ..? ಅನ್ನೋ ಬಗ್ಗೆ ಸಂಜೆ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಒಳಕ್ಕೆ ಬಂದರೂ ಈ ಎಲ್ಲಾ ಘಟನೆಯನ್ನು ಮುಚ್ಚಿಡುವುದು ಹೇಗೆ ಅಥವಾ ಎಲ್ಲರಿಗೂ ಜೈಲು ವಿಚಾರ ಘೋಷಣೆ ಮಾಡುವುದು ಒಳಿತ ಅನ್ನೋದ್ರ ಬಗ್ಗೆಯೂ ನಿರ್ಧಾರ ಆಗಲಿದೆ ಎನ್ನಲಾಗ್ತಿದೆ.

Related Posts

Don't Miss it !