ಏನಾಯ್ತು ಅಣ್ಣಾವ್ರ ಮಗ ನಟ ಪುನೀತ್ ರಾಜ್ ಕುಮಾರ್‌ಗೆ..?

ನಟ ಪುನೀತ್ ರಾಜ್ ಕುಮಾರ್ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಪುನೀತ್ ರಾಜ್‌ಕುಮಾರ್ ಅವರನ್ನು ದಾಖಲು ಮಾಡಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮನೆ ಹಾಗೂ ವಿಕ್ರಮ್ ಆಸ್ಪತ್ರೆ ಬಳಿ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ,ಆರೋಗ್ಯ ವಿಚಾರಿಸಿದ್ದಾರೆ. ನಟ ಶಿವರಾಜ್‌ಕುಮಾರ್, ಶ್ರೀಮುರಳಿ, ನಿರ್ದೇಶಕ ಆನಂದ್ ರಾಮ್ ಸೇರಿದಂತೆ ಸಾಕಷ್ಟು ಗಣ್ಯರು ಆಸ್ಪತ್ರೆ ಬಳಿಗೆ ದೌಡಾಯಿಸುತ್ತಿದ್ದಾರೆ.

ಹಾರ್ಟ್ ಅಟ್ಯಾಕ್ ಆದರೆ ಆತಂಕ ಯಾಕೆ..?

ಹಾರ್ಟ್ ಅಟ್ಯಾಕ್ ಆದರೆ ಚಿಕಿತ್ಸೆ ಕೊಡಬಹುದು. ಆದರೆ ಆಸ್ಪತ್ರೆ ಮೂಲಗಳಿಂದ ಇಲ್ಲೀವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಪೊಲೀಸ್ ಕಮಿಷನರ್ ಸೇರಿದಂತೆ ಎಲ್ಲರೂ ಆಸ್ಪತ್ರೆ ಬಳಿಗೆ ಬರುತ್ತಿದ್ದು, ಬಂದೋಬಸ್ತ್ ಹೆಚ್ಚಳ ಮಾಡಲಾಗುತ್ತಿದೆ. ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಧಿಕೃತವಾಗಿ ಎನನ್ನೂ ಹೇಳದಿದ್ದರೂ ಬಂದೋಬಸ್ತ್ ಹೆಚ್ಚಳ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗ್ತಿದೆ. ಮನೆ ಬಳಿಯೂ ಬ್ಯಾರಿಕೇಡ್ ಆಗಿ ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಆತಂಕ ದುಪ್ಪಟ್ಟು ಆಗುವಂತೆ ಮಾಡಿದೆ.

Also read;

ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮೈಸೂರಿನಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ನೆಲಮಂಗಲ ಬಳಿ ವಾಸವಿರುವ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಕೂಡ ಆಸ್ಪತ್ರೆ ಕಡೆಗೆ ಹೊರಟಿದ್ದಾರೆ. ಆಸ್ಪತ್ರೆ ಮೂಲಗಳು ಮಾಹಿತಿ ಕೊಟ್ಟಿದ್ದು, ಚಿಕಿತ್ಸೆ ಮುಂದಯವರಿದಿದೆ. ಆದರೆ ಇನ್ನರ್ಧ ಗಂಟೆಯಲ್ಲಿ ಸಂಪೂರ್ಣ ಮಾಹಿತಿ ಕೊಡುತ್ತೇವೆ ಎಂದಿದ್ದಾರೆ. ಯಾವ ಮಾಹಿತಿ ಕೊಡುತ್ತಾರೆ ಎನ್ನುವುದನ್ನು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಭದ್ರತೆ ಹೆಚ್ಚಳ ಸೇರಿದಂತೆ ಪೊಲೀಸರ ತಯಾರಿ ಎಲ್ಲವನ್ನೂ ಹೇಳುತ್ತಿದೆ ಎನ್ನುತ್ತಿದ್ದಾರೆ. ಆಕ್ರಂದನ ಅಭಿಮಾನಿಗಳ ಪ್ರೀತಿಯನ್ನು ತೋರಿಸುತ್ತಿದೆ.

Related Posts

Don't Miss it !