ನಟ ಪುನೀತ್ ಸಾವಿನ ಬಗ್ಗೆ ಡಾಕ್ಟರ್ ಹೇಳಿದ್ದು ಸತ್ಯವಿದ್ದರೆ ಹೆದರುವ ಅಗತ್ಯ ಏನಿದೆ..?

ನಟ ಪುನೀತ್ ರಾಜ್‍ಕುಮಾರ್ ಸಾವನ್ನಪ್ಪಿ ಈಗಾಗಲೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದೆ. ಆದರೆ ಸಾವಿನ ಬಗೆಗಿನ ಅನುಮಾನಗಳು ಮಾತ್ರ ಇನ್ನೂ ಕೂಡ ಬಗೆಹರಿದಿಲ್ಲ. ಮನೆಯಿಂದ ಹೊರಟ ಪುನೀತ್ ರಾಜ್‍ಕುಮಾರ್ ಕ್ಲಿನಿಕ್ ತಲುಪಿ ತಪಾಸಣೆಗೆ ಒಳಪಟ್ಟಿದ್ದಾರೆ. ಡಾ ರಮಣ ರಾವ್ ಹೇಳುವ ಪ್ರಕಾರ ಕ್ಲಿನಿಕ್‌ನಲ್ಲಿ ಎಲ್ಲಾ ರೀತಿಯ ತಾತ್ಕಾಲಿಕ ಚಿಕಿತ್ಸೆ ನೀಡಿ ಕೆಲವೇ ನಿಮಿಷಗಳಲ್ಲಿ ಅವರನ್ನು ಕಳಿಸಿಕೊಟ್ಟೆವು. ಆಂಬ್ಯುಲೆನ್ಸ್ ಬಂದು ಕರೆದೊಯ್ಯುವ ಹೊತ್ತಿಗೆ ಸಮಯ ಆಗುತ್ತೆ ಎನ್ನುವ ಕಾರಣಕ್ಕೆ ಕಾರ್‌ನಲ್ಲೇ ಕಳಿಸಿದೆವು ಎನ್ನುತ್ತಾರೆ. ಇಷ್ಟನ್ನು ಹೇಳುವಾಗ ಡಾ ರಮಣರಾವ್ ನೊಂದುಕೊಂಡು ಮಾತನಾಡುತ್ತಾರೆ. ಆದರೆ ಅಲ್ಲಿ ನಡೆದಿರುವ ಎಡವಟ್ಟುಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವ ಗಡಸುತನ ಪ್ರದರ್ಶನ ಮಾಡಿಲ್ಲ.

ತಡವಾಗುತ್ತೆ ಎಂದು ಕಾರ್‌ನಲ್ಲೇ ಕಳಿಸಿದ್ರಂತೆ ಡಾಕ್ಟರ್..?

ಸದಾಶಿವ ನಗರದ ರಮಣಶ್ರೀ ಕ್ಲಿನಿಕ್‌ನಿಂದ ರಾಮಯ್ಯ ಆಸ್ಪತ್ರೆ ಎರಡು ಕಿಲೋಮೀಟರ್ ದೂರದಲ್ಲಿದೆ. ಆದ್ರೆ ವಿಕ್ರಂ ಆಸ್ಪತ್ರೆ ವೈದ್ಯರು ಶ್ರೇಷ್ಠ ಎನ್ನುವ ಹಿನ್ನಲೆಯಲ್ಲಿ ಕಳುಹಿಸಿದ್ದೇನೆ ಎಂದಿದ್ದಾರೆ. ಆದರೆ ಹೃದಯಾಘಾತ ಅಥವಾ ಹೃದಯ ಸ್ತಂಭನದ ವೇಳೆ ಶೀಘ್ರ ಚಿಕಿತ್ಸೆ ಮುಖ್ಯವೋ..? ಅಥವಾ ವಿಶ್ವದ ಶ್ರೇಷ್ಠ ವೈದ್ಯರಿಂದ ಚಿಕಿತ್ಸೆ ಮುಖ್ಯವೋ ಎನ್ನುವುದಕ್ಕೆ ವೈದ್ಯರೇ ಉತ್ತರ ನೀಡಬೇಕಿದೆ. ಆಂಬ್ಯುಲೆನ್ಸ್ ಇರುವುದೇ ರೋಗಿಗಳ ಜೀವ ಉಳಿಸುವುದಕ್ಕೆ ಎನ್ನುವುದನ್ನು ವೈದ್ಯರು ಮರೆತುಬಿಟ್ಟರೆ..? ವಿಕ್ರಂ ಆಸ್ಪತ್ರೆ ವೈದ್ಯರನ್ನೇ ಐಸಿಯು ಆಂಬ್ಯುಲೆನ್ಸ್‌ನಲ್ಲಿ ಕರೆಸುವುದಕ್ಕೆ ಆಗುತ್ತಿರಲಿಲ್ಲವೇ..? ಎನ್ನುವ ಪ್ರಶ್ನೆ ಕೂಡ ಉದ್ಬವ ಆಗಿದೆ.

ಆಂಬ್ಯುಲೆನ್ಸ್ ಬೇಡ.. ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರೆ..? ಉಳಿಯುತ್ತಾ ಜೀವಾ..?

ನಟ ಪುನೀತ್ ರಾಜ್‌ಕುಮಾರ್ ಸಾಮಾನ್ಯ ವ್ಯಕ್ತಿಯಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಸಾಕಷ್ಟು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಚಿರಪರಿಚಿತರು. ಡಾಕ್ಟರ್ ಹೇಳಿದಂತೆ ಸಮಯ ವ್ಯರ್ಥ ಮಾಡುವುದು ಬೇಡ ಎನ್ನುವ ಉದ್ದೇಶವೇ ನಿಜವಾಗಿದ್ದರೆ..! ಪೊಲೀಸ್ ಠಾಣೆಗೆ ಕರೆ ಮಾಡಿ ಎಸ್ಕಾರ್ಟ್ ಕಳಿಸಬಹುದಿತ್ತಲ್ಲವೇ..? ಒಂದು ಹೃದಯವನ್ನು ರವಾನೆ ಮಾಡುವಾಗ ಗ್ರೀನ್ ಕಾರಿಡಾರ್ ಕಲ್ಪಿಸುವ ಪೊಲೀಸರು ಒಂದು ಜೀವ ಉಳಿಸುವುದಕ್ಕಾಗಿ ಗ್ರೀನ್ ಕಾರಿಡಾರ್ ಕೊಡುತ್ತಿರಲಿಲ್ಲವೇ..? ಇಷ್ಟೆಲ್ಲಾ ಕಷ್ಟ ರನ್ನುವುದಾದರೆ ಪುನೀತ್ ಮೊಬೈಲ್‌ನಿಂದ ಸಿಎಂಗೆ ಒಂದು ಕರೆ ಮಾಡಿದ್ದರೂ ಎಲ್ಲ ವ್ಯವಸ್ಥೆ ಆಗುತ್ತಿತ್ತು ಅಲ್ಲವೇ..? ಜೀವ ಹೋಗಿ ಆಗಿದೆ. ವೈದ್ಯರ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ರಕ್ಷಣಾತ್ಮಕ ನಡೆ ಸಹಿಸಲು ಅಸಾಧ್ಯ.

ದೂರು ದಾಖಲಿಸದಂತೆ ಖಾಸಗಿ ವೈದ್ಯ ಸಂಘಟನೆ ಆಗ್ರಹ..!

ನಟ ಪುನೀತ್ ರಾಜಕುಮಾರ್ ನಿಧನ ವಿಚಾರದಲ್ಲಿ ಡಾ ರಮಣ ರಾವ್ ಬೆಂಬಲಕ್ಕೆ ಖಾಸಗಿ ಆಸ್ಪತ್ರೆ ಸಂಘಟನೆ ಮುಂದಾಗಿದೆ. ನಟ ಪುನೀತ್ ಸಾವಿನಲ್ಲಿ ಚಿಕಿತ್ಸೆ ಲೋಪ ಆಗಿದೆ ಎನ್ನುವ ಆರೋಪವನ್ನು ಅಲ್ಲಗಳೆದಿರುವ ಫನಾ ಅಧ್ಯಕ್ಷ ಡಾ ಪ್ರಸನ್ನ, ಸಿಎಂಗೆ ಪತ್ರ ಬರೆದಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳಿಂದ ನಟ ಪುನೀತ್ ಸಾವಿನ ಬಗ್ಗೆ ನಡೆದಿರುವ ಚರ್ಚೆ ವೈದ್ಯಕೀಯ ಗೌಪ್ಯತೆಯ ಉಲ್ಲಂಘನೆ ಆಗುತ್ತದೆ. ಈಗಾಗಲೇ ದೂರು ನೀಡಲಾಗಿದೆ. ಆದರೆ FIR ಅಥವಾ PCR ದಾಖಲಿಸಿಕೊಳ್ಳುವ ಮುನ್ನ ಸುಪ್ರೀಂ ಕೊರ್ಟ್ ಗೈಡ್‌ಲೈನ್ಸ್ ಗಮನದಲ್ಲಿರಬೇಕು. ವೈದ್ಯರಿಗೆ ಅವರದ್ದೇ ಆದ ಇತಿ-ಮಿತಿಗಳಿವೆ. ಜೀವ ಉಳಿಸುವುದು ಎಲ್ಲ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಡಾ ರಮಣ ರಾವ್‌ಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಬದುಕಿಸುವ ಅವಕಾಶ ಇದ್ದರೂ ಬದುಕಿಸದಿದ್ದರೆ ಅದು ಹತ್ಯೆ..?

ಯಾವುದೇ ಕೆಲಸದಲ್ಲಿ ತಪ್ಪು ಮಾಡಿರುವುದು ಸಾಬೀತಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದರೆ ವೈದ್ಯಕೀಯ ವಿಚಾರದಲ್ಲಿ ಮಾತ್ರ ಶಿಕ್ಷೆಯ ಮಾತು ಇಲ್ಲ. ವೈದ್ಯರು ಚಿಕಿತ್ಸೆ ನೀಡಿ ಯಾವುದೇ ಬೇಜವಾಬ್ದಾರಿ ತೋರಿಸಿಲ್ಲ, ಆದರೂ ಬದುಕಲಿಲ್ಲ ಎಂದಾಗ ವೈದ್ಯರು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ವೈದ್ಯರು ಎಡವಟ್ಟುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದಾದರೆ ಶಿಕ್ಷೆ ನೀಡುವುದರಲ್ಲಿ ತಪ್ಪೇನಿದೆ..? ವೈದ್ಯರು ಎನ್ನುವ ಹಣೆಪಟ್ಟಿಯಿಂದ ತಪ್ಪನ್ನು ಮುಚ್ಚಿ ಹಾಕುವುದು ಸೂಕ್ತವೇ..? ಒಬ್ಬ ರೋಗಿಯನ್ನು ಅದರಲ್ಲೂ ಹೃದಯ ಸಂಬಂಧಿ ರೋಗಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆದರೂ ವೈದ್ಯರು ಅಥವಾ ನರ್ಸ್ ಜೊತೆ ಸ್ಥಳಾಂತರ ಮಾಡುತ್ತಾರೆ. ಆದರೆ ಬೇಕಾಬಿಟ್ಟಿ ಕಾತಿನಲ್ಲಿ ಕಳುಹಿಸಿದ್ದು ಬೇಜವಾಬ್ದಾರಿ ಅಲ್ಲವೇ..? ರೋಗಿಯನ್ನು ಬದುಕಿಸಲು ಅವಕಾಶ ಇದ್ದರೂ ಸಾಯಲು ಬಿಡುವುದು ಹತ್ಯೆ ಎಂದೇ ಭಾವಿಸಬೇಕಿದೆ

Related Posts

Don't Miss it !