ಅಪ್ಪು ನಿಧನದ ಬೆನ್ನಲ್ಲೇ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಮತ್ತೊಂದು ಆಘಾತ..!

ಕನ್ನಡಿಗರ ನೆಚ್ಚಿನ ನವೆಂಬರ್​ ತಿಂಗಳ ಆರಂಭಕ್ಕೂ ಮುನ್ನವೇ ಅಕ್ಟೋಬರ್​ 29ರಂದು ನೆಚ್ಚಿನ ನಟನನ್ನು ಕಳೆದುಕೊಂಡು ದುಃಖಕ್ಕೆ ಈಡಾಗಿದ್ರು. ಕನ್ನಡ ಚಿತ್ರರಂಗದ ದೊಡ್ಮನೆ ಕೂಡ ಶೋಕಸಾಗರದಲ್ಲಿ ಮುಳುಗಿತ್ತು. ಇದೀಗ ಮತ್ತೆ ದೊಡ್ಮನೆ ಕುಟುಂಬಕ್ಕೆ ಶಾಕ್​ ಆಗಿದೆ. ನಟ ದಿವಂಗತ ಪುನೀತ್ ರಾಜ್​​ಕುಮಾರ್​​ ಪತ್ನಿ ಅಶ್ವಿನಿ ಅವರ ತಂದೆ ಇಹಲೋಕ ತ್ಯಜಿಸಿದ್ದಾರೆ. 78 ವರ್ಷದ ರೇವನಾಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವಿಧಿವಶರಾಗಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ನಿಂದ ಕನ್ನಡಿಗರ ನೆಚ್ಚಿನ ನಟ ಪುನೀತ್​ ರಾಜ್​ಕುಮಾರ್​ ಸಾವನ್ನಪ್ಪಿದ ಕೆಲವೇ ತಿಂಗಳುಗಳಲ್ಲಿ ಅಪ್ಪು ಕುಟುಂಬಕ್ಕೆ ಈ ಆಘಾತ ಮತ್ತಷ್ಟು ನೋವುಂಟು ಮಾಡಿದೆ. ಈಗಾಗಲೇ ಪುನೀತ್​ ಸಾವಿನಿಂದ ಕಂಗಾಲಾಗಿದ್ದ ಅಶ್ವಿನಿ ಪುನೀತ್​​ರಾಜ್​​ಕುಮಾರ್, ತಂದೆಯನ್ನೂ ಕಳೆದುಕೊಂಡು ದಿಕ್ಕು ತೋಚದಂತಾಗಿದೆ.

ಪುನೀತ್​ ಪುತ್ರಿ ಬಂದ ಬಳಿಕ ಅಂತ್ಯ ಸಂಸ್ಕಾರಕ್ಕೆ ನಿರ್ಧಾರ..!

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರೇವನಾಥ್​, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್​ ಆಗಿ ಕೆಲಸ ಮಾಡಿದ್ದಾರೆ. ಆ ಬಳಿಕ ಬೆಂಗಳೂರಿನಲ್ಲೇ ವಾಸವಾಗಿದ್ದರು. ನಟ ಪುನೀತ್ ನಿಧನದ ಬಳಿಕ ಪುತ್ರಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಜೊತೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಬೆಳಗ್ಗೆ ವಾಕ್​ ಮಾಡುವ ವೇಳೆ ರೇವನಾಥ್​ ಕುಸಿದು ಬಿದ್ದಿದ್ದು, ಕೂಡಲೇ ಎಂಎಸ್​ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ರೇವನಾಥ್​ ನಿಧನರಾಗಿದ್ದಾರೆ. ಇದೀಗ ಪುನೀತ್​ ರಾಜ್​​ಕುಮಾರ್​ ಹಿರಿಯ ಪುತ್ರಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕದಲ್ಲಿ ಇರುವ ಕಾರಣ ಮಂಗಳವಾರ ಅಂತ್ಯಕ್ರಿಯೆ ಮಾಡುವ ಬಗ್ಗೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಬೆಂಗಳೂರು ಅಥವಾ ಚಿಕ್ಕಮಗಳೂರಿನಲ್ಲಿ ಅಂತ್ಯಕ್ರಿಯೆ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಸದ್ಯಕ್ಕೆ ಎಂ.ಎಸ್​ ರಾಮಯ್ಯ ಆಸ್ಪತ್ರೆಯಲ್ಲೇ ಪಾರ್ಥಿವ ಶರೀರ ಇಡುವ ತೀರ್ಮಾನ ಮಾಡಿದ್ದಾರೆ.

ಆಸ್ಪತ್ರೆಗೆ ದೌಡಾಯಿಸಿದ ದೊಡ್ಮನೆ ಕುಟುಂಬ, ಸಂಬಂಧಿಕರು..!

ಅಪ್ಪು ಮಾವ ರೇವನಾಥ್ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದ ಹಾಗೆ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ಬಂಧುಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಪತ್ನಿ ಗೀತಾ ಶಿವರಾಜ್​ಕುಮಾರ್​ ಜೊತೆಗೆ ಆಗಮಿಸಿದ ಶಿವಣ್ಣ ಅಶ್ವಿನಿ ಪುನೀತ್​ ರಾಜ್​ಕುಮಾರ್​​ಗೆ ಸಾಂತ್ವನ ಹೇಳಿದ್ರು. ನಟ ಶ್ರೀ ಮುರುಳಿ ಸೇರಿದಂತೆ ಚಿನ್ನೇಗೌಡ್ರು ಹಾಗೂ ಬಂಧು ಬಳಗದ ಜನರು ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ್ರು. ರೇವನಾಥ್ ಅವರ ಹಿರಿಯ ಮಗಳು ಕೂಡ ಆಸ್ಟ್ರೇಲಿಯಾದಿಂದ ಬರಬೇಕಿದ್ದು, ನಾಳೆ ಸಂಜೆ ಬೆಂಗಳೂರಿಗೆ ಬಂದು ತಲುಪುವ ಸಾಧ್ಯತೆಯಿದೆ. ಹೀಗಾಗಿ ಮಂಗಳವಾರ ಮೃತದೇಹವನ್ನು ಎಂ.ಎಸ್​ ರಾಮಯ್ಯ ಶವಾಗಾರದಲ್ಲೇ ಮೃತದೇಹ ಇರಿಸಲಾಗಿದೆ. ನಾಳೆ ಮಗಳು ಹಾಗೂ ಮೊಮ್ಮೊಗಳು ಬಂದ ಬಳಿಕ ಅಂತ್ಯಸಂಸ್ಕಾರದ ಬಗ್ಗೆ ನಿರ್ಧಾರ ಆಗಲಿದೆ.

ಅಪ್ಪನ ಆಸರೆ ಬಯಸಿದ್ದ ಅಶ್ವಿನಿಗೆ ಸಿಡಿಲು ಬಡಿದಂತಾಗಿದೆ..!

ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಅಪ್ಪನ ಆಸರೆ ಬಯಸಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್​​, ಇದೀಗ ತಂದೆಯನ್ನೂ ಕಳೆದುಕೊಂಡಿದ್ದಾರೆ. ಈಗಾಗಲೇ ಜೀವನದ ಆಧಾರ ಸ್ತಂಭವಾಗಿದ್ದ ಪುನೀತ್​​ ರಾಜ್​ಕುಮಾರ್​ ಕಳೆದುಕೊಂಡು ಸಂಕಷ್ಟದ ಬದುಕಿಗೆ ಅಶ್ವಿನಿ ರಾಜ್​ಕುಮಾರ್​​ ಒಳಗಾಗಿದ್ದರು. ಆ ಬಳಿಕ ಅಪ್ಪ ನಾನಿದ್ದೀನಿ ಮಗಳೆ ಎನ್ನುವ ಧೈರ್ಯ ತುಂಬುವ ಮೂಲಕ ಮಗಳ ಜೀವನದಲ್ಲಿ ಆಸರೆಯಾಗಿ ನಿಂತಿದ್ದರು. ಆದರೆ ಇದೀಗ ನಾನಿದ್ದೀನಿ ಮಗಳೇ ಎಂದಿದ್ದ ಅಪ್ಪನೂ ಅಶ್ವಿನಿಯನ್ನು ಬಿಟ್ಟು ತೆರಳಿರುವುದು ಕುಟುಂಬದ ಕಣ್ಣೀರು ಹೆಚ್ಚಾಗುವಂತೆ ಮಾಡಿದೆ. ಚಿಕ್ಕಮಗಳೂರಿನಲ್ಲೂ ರೇವನಾಥ್​​ಗೆ ಸಾಕಷ್ಟು ಆಸ್ತಿ ಇದ್ದು, ಅಲ್ಲಿನ ತೋಟದಲ್ಲೇ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Related Posts

Don't Miss it !