ಅಪ್ಪು ಅಂತ್ಯಕ್ರಿಯೆ ಇಂದಲ್ಲ.. ನಾಳೆ.. ಕಾರಣ ಏನು ಗೊತ್ತಾ..?

ನಟ ಪುನೀತ್ ರಾಜ್‍ಕುಮಾರ್ ವಿಧಿವಶರಾಗಿ 30 ಗಂಟೆಗಳಾಗುತ್ತಿವೆ. ಕಂಠೀರವ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಕಣ್ಣೀರ ತರ್ಪಣ ಸಲ್ಲಿಸುತ್ತಿದ್ದಾರೆ. ಈ ನಡುವೆ ಅಮೆರಿಕದಲ್ಲಿದ್ದ ಪುನೀತ್ ಮಗಳು ವಿದೇಶದಿಂದ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಇಂದೇ ಮುಗಿಸಲು ಸಕಲ ತಯಾರಿಗಳು ನಡೆದಿದ್ದವು. ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನಕ್ಕೆ ಬೇಕಾದ ಎಲ್ಲಾ ತಯಾರಿಗಳೂ ನಡೆದಿದ್ದವು. ಅಂತಿಮ ಯಾತ್ರೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಬದಲಿ ಮಾರ್ಗಕ್ಕೆ ಮಾರ್ಪಾಡು ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಆದ ಬದಲಾವಣೆಯಂತೆ ಅಂತಿಮ ಸಂಸ್ಕಾರ ಕಾರ್ಯವನ್ನು ನಾಳೆಗೆ ಮುಂದೂಡಿಕೆ ಮಾಡುವ ನಿರ್ಧಾರ ಘೋಷಣೆ ಆಗಿದೆ.

ಅಂತಿಮ ಯಾತ್ರೆಯ ಮಾರ್ಗದಲ್ಲಿ ಖಾಕಿ ಕಣ್ಗಾವಲು..!

ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅಂತಿಮ ಯಾತ್ರೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 8 ಸಾವಿರ ಮಂದಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಹಾಗೂ 3 ಸಾವಿರ ಜನ ಟ್ರಾಫಿಕ್ ಪೊಲೀಸರು, 60 ಕೆಎಸ್ಆರ್‌ಪಿ ತುಕಡಿ, 35 ಸಿಎಆರ್ ತುಕಡಿ, ಎರಡು ಆರ್‌ಪಿಎಫ್ ತುಕಡಿ, 19 ಡಿಸಿಪಿಗಳು, ಇಬ್ಬರು ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯ ಮಾಡಲಾಗಿತ್ತು. ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ, ಕಾರ್ಪೋರೇಷನ್ ಸರ್ಕಲ್, ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್ ಸರ್ಕಲ್, ಶೇಷಾದ್ರಿ ರಸ್ತೆ, ಚಾಲುಕ್ಯ ವೃತ, ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಸ್ಯಾಂಕಿ ರಸ್ತೆ, ಮಾರಮ್ಮ ಟೆಂಪಲ್ ಸರ್ಕಲ್, ಯಶವಂತಪುರ, ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ ಮೂಲಕ ಕಂಠೀರವ ಸ್ಟುಡಿಯೋಗೆ ತರುವುದಕ್ಕೆ ವ್ಯವಸ್ಥೆಗಳೂ ಆಗಿದ್ದವು. ಅಂತಿಮವಾಗಿ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಭಾನುವಾರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ‌.

Read This:

ಅಂತ್ಯಕ್ರಿಯೆ ನಾಳೆಗೆ ಮುಂದೂಡಿದ್ದು ಯಾಕೆ..?

ಶುಕ್ರವಾರ ಪುನೀತ್ ರಾಜ್‍ಕುಮಾರ್ ವಿಧಿವಶರಾದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸಂಜೆ ತನಕ ಕುಟುಂಬಸ್ಥರ ಜೊತೆಯಲ್ಲೇ ಇದ್ದರು. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಭಾನುವಾರ ಅಂತ್ಯಕ್ರಿಯೆ ಮಾಡಲಾಗುವುದು. ಮಗಳು ವಿದೇಶದಿಂದ ಬರಬೇಕಿದೆ ಎಂದಿದ್ದರು. ಆದರೆ ಇಂದು ಪುನೀತ್ ರಾಜ್‍ಕುಮಾರ್ ಮಗಳು ಬೆಂಗಳೂರಿಗೆ ಬಂದಿಳಿದಿದ್ದಾರೆ. ಆದರೆ ಅಂತ್ಯಕ್ರಿಯೆ ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣ ಅಭಿಮಾನಿಗಳು. ಕೇವಲ ಮಗಳ ಬರುವಿಕೆಗಾಗಿ ನಾನು ಕಾಯಲಿಲ್ಲ. ಅಭಿಮಾನಿಗಳಿಗೂ ಅಪ್ಪು ಅಗಲಿಕೆ ಕುಟುಂಬಸ್ಥರ ಹಾಗೆಯೇ ಆಘಾತ ಉಂಟು ಮಾಡಿದೆ. ಅಂತಿಮ ದರ್ಶನವೂ ಸಿಗದೆ ಅಭಿಮಾನಿಗಳಿಗೆ ಬೇಸರ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ರಾಜ್ ಕುಟುಂಬ ಬಂದಿದೆ. ಇದನ್ನು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶಾಂತಿಯುತವಾಗಿ ವರ್ತಿಸಿ ಎಂದು ಅಭಿಮಾನಿಗಳಿಗೆ ಕರೆ..!

ಅಂತಿಮ ದರ್ಶನಸಲ್ಲಿ ಇಲ್ಲೀವರೆಗೂ ಶಾಂತಿಯುತವಾಗಿ ಎಲ್ಲರೂ ಸಹಕರಿಸಿದ್ದೀರಿ. ಮುಂದೆಯೂ ಸಹಕರಿಸಿ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಪುನೀತ್ ರಾಜ್ ಕುಮಾರ್ ಮಗಳು ಬೆಂಗಳೂರಿಗೆ ಬಂದಿದ್ದಾರೆ. ನಾಳೆವರೆಗೂ ಅವಕಾಶ ಇದೆ, ಶಾಂತಿಯಿಂದ ದರ್ಶನ ಮಾಡಿ. ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಜನಸಂದಣಿ ಹೆಚ್ಚಾಗಿದೆ. ಬಹಳಷ್ಟು ಜನ ಅಪ್ಪು ಅವರ ಅಂತಿಮ ದರ್ಶನ ಪಡೆಯುವ ಇಚ್ಛೆ ಇದೆ. ಸಂಜೆ ಆರು ಗಂಟೆಯ ನಂತರ ಕತ್ತಲಾದ ಬಳಿಕ ಚಿಕ್ಕ ಜಾಗದಲ್ಲಿ ಅಂತ್ಯಕ್ರಿಯೆ ಮಾಡುವುದು ಸವಾಲಿನ ಕೆಲಸ ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಿದೇವೆ. ಅಂತ್ಯಕ್ರಿಯೆಯನ್ನು ನಾಳೆ ಮಾಡ್ಬೇಕು ಅನ್ನುವ ತೀರ್ಮಾನ ಮಾಡಿದೇವೆ. ನಾಳೆ ಬೆಳಗಿನ ಜಾವದವರೆಗೂ ಅಪ್ಪು ದರ್ಶನ ಮಾಡಲು ಅನುಕೂಲ ಮಾಡಲಾಗುವುದು. ಎಲ್ಲರೂ ನಿಧಾನವಾಗಿ, ಶಾಂತವಾಗಿ ಸಾಲಿನಲ್ಲಿ ಬಂದು ದರ್ಶನ ಮಾಡಬಹುದು ಎಂದಿದ್ದಾರೆ.

Also Read;

ಕಂಠೀರವ ಸ್ಟುಡಿಯೋ ಬಳಿ ನೀರವ ಮೌನ ಮನೆ ಮಾಡಿದೆ. ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೋಸ್ಕರ ನಾವು ಅಂತ್ಯಕ್ರಿಯೆ ಮುಂದೂಡಿದ್ದೇವೆ ಎಂದು ಚಿನ್ನೇಗೌಡ್ರು ತಿಳಿಸಿದ್ದಾರೆ. ಸಚಿವ ಗೋಪಾಲಯ್ಯ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಪುನೀತ್ ಕುಟುಂಬಸ್ಥರ ನಡುವೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಅಪ್ಪು ಅಭಿಮಾನಿಗಳು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಎಲ್ಲರಿಗೂ ಅಪ್ಪುವಿನ ಅಂತಿಮ ದರ್ಶನ ಸಿಗಬೇಕು. ಆಗಾಗಿ ನಾಳೆ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಸಮಯ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ. ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳಿಗಾಗಿ ಪುನೀತ್ ಆತ್ಮ ಕಾದು ಕುಳಿತಿದೆ.

Related Posts

Don't Miss it !