ಜೇಮ್ಸ್ ಪ್ರೀ ರಿಲೀಸ್ ಈವೆಂಟ್‌ನಲ್ಲಿ ರಾಘಣ್ಣ ಸಾವಿನ ಮಾತು..!! ಅಯ್ಯೋ ದುರ್ವಿಧಿ..

ನಟ ಪುನೀತ್ ರಾಜ್‍ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್. ಮಾರ್ಚ್ 17 ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು, ಅಂದೇ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅಭಿನಯ ಕಣ್ತುಂಬಿಕೊಳ್ಳಬಹುದು. ಸಿನಿಮಾ ಬಿಡುಗಡೆಗೂ ಮುನ್ನ ಜೇಮ್ಸ್ ಚಿತ್ರತಂಡ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ದೊಡ್ಮನೆಯ ಎಲ್ಲರೂ ಪಾಲ್ಕೊಂಡು ಅಪ್ಪು ಗುಣಗಾನ ಮಾಡಿದ್ರು. ಅಪ್ಪು ಡ್ಯಾನ್ಸ್ ನೋಡಿದ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ದುಃಖ ತಡೆಯಲು ಸಾಧ್ಯವಾಗದೆ ಅರ್ಧದಲ್ಲೇ ಎದ್ದು ಹೋದ ಘಟನೆಯೂ ನಡೀತು. ಇದರ ನಡುವೆ ರಾಘವೇಂದ್ರ ರಾಜ್‌ಕುಮಾರ್ ವೇದಿಕೆ ಮೇಲೆ ನೊಂದು ಮಾತನಾಡಿದ್ರು.

30ನೇ ಚಿತ್ರಕ್ಕೆ ವಿಭಿನ್ನ ರೀತಿಯಲ್ಲಿ ಚಿತ್ರತಂಡದ ಸಿದ್ಧತೆ..!

ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ 30ನೇ ಚಲನಚಿತ್ರ. ಜೇಮ್ಸ್ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜೇಮ್ಸ್ ತಂಡ 30 ವಿಶೇಷತೆಗಳನ್ನು ಮಾಡಿತ್ತು. ಕಾರ್ಯಕ್ರಮದಲ್ಲಿ ಟಾಲಿವುಡ್ ಸ್ಟಾರ್ ಚಿರಂಜೀವಿ ವಿಶಶ್ ಬೈಟ್ ಹಾಕಲಾಗಿತ್ತು. ಜೇಮ್ಸ್ ವೇದಿಕೆಯಲ್ಲಿ ಅಪ್ಪುಗಾಗಿ ಹಾಡಿ ರಂಜಿಸಿದ್ರು ನಟ, ಗಾಯಕ ಸಾಧು ಕೋಕಿಲ. ಅಲ್ಲದೆ ಬಾಲ್ಯದ ಅಪ್ಪು ಫೋಟೋದಿಂದ ಜೇಮ್ಸ್ ಸೇರಿದಂತೆ ವಿಶೇಷ ಫೊಟೋಗಳ ಝಲಕ್ ಕೂಡ ಮಾಡಲಾಗಿತ್ತು. ಜೇಮ್ಸ್ , ಈವೆಂಟ್ ನಡೆಯುತ್ತಿರುವ ಜಾಗಕ್ಕೂ ಜೇಮ್ಸ್ ತಂಡಕ್ಕೂ ಇನ್ನೊಂದು ವಿಶೇಷ ಕೂಡ ಇತ್ತು. ಜೇಮ್ಸ್ ಚಿತ್ರದ ಶೂಟಿಂಗ್ ಮಾಡಿದ್ದ ಜಾಗದಲ್ಲೆ ಈವೆಂಟ್ ಮಾಡ್ತಿರುವ ಚಿತ್ರತಂಡ, ಈವೆಂಟ್ ಮಾಡಲಟಯ್ತು. ಈವೆಂಟ್ ಮಾಡಿದ ಜಾಗದಲ್ಲಿ ಬೃಹತ್ ಸೆಟ್ ಹಾಕಿ 18 ದಿನಗಳಲ್ಲಿ ಕಾಲ ಜೇಮ್ಸ್ ಚಿತ್ರದ ಶೂಟಿಂಗ್ ಮಾಡಲಾಗಿತ್ತು. ಈಗ ಅದೇ ಜಾಗದಲ್ಲಿ ಈವೆಂಟ್ ಮಾಡಿದ್ದಾರೆ.

ನಾನೂ ಅಪ್ಪು ಇರುವ ಕಡೆಗೆ ಹೋಗ್ತೇನೆ. ನನಗೂ ಬೇಡ ಎನಿಸಿದೆ..!!

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ನನಗೆ ಅನ್ನಿಸಿದ್ಧನ್ನ ಹೇಳುತ್ತೇನೆ, ಚನ್ನಾಗಿ ಓಡುತ್ತಿದ್ದ ಗಾಡಿ ನಿಲ್ಲಿಸಿಬಿಟ್ಟ ಭಗವಂತ. ನಾನು ಇನ್ನೂ ಕುಂಟಿಕೊಂಡು ಹೋಗುತ್ತಿದ್ದೇನೆ. ಆದ್ರೆ ನನಗೆ ಇದನ್ನೆಲ್ಲಾ ನೋಡಿಕೊಂಡು ಇರೋದಕ್ಕೆ ಆಗಲ್ಲ. ನಾನು ಹೋಗಿ ಬಿಡ್ತೇನೆ, ಇಲ್ಲಿ ಇರೋದಕ್ಕೆ ಆಗಲ್ಲ. ನಾನು ಅಪ್ಪುವನ್ನು ಹುಡುಕಿಕೊಂಡು ಹೋಗುತ್ತೇನೆ. ನನ್ನ ಕೈಲಿ ಇರೋದಕ್ಕೆ ಆಗಲ್ಲ ಎಂದು ಸ್ಟೇಜ್ ಬಿಟ್ಟು ಕೆಳಕ್ಕೆ ಇಳಿದರು ರಾಘವೇಂದ್ರ ರಾಜ್ ಕುಮಾರ್.

ತಮ್ಮನ ಸಂಕಟ ಕಂಡು ಸಂತೈಸಿದ ಹಿರಿಯ ಅಣ್ಣ ಶಿವಣ್ಣ..!!

ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿ ಮಾತನಾಡುತ್ತಿದ್ದಂತೆ, ಓಡಿ ಬಂದ ಶಿವಣ್ಣ, ವೇದಿಕೆ ಮೇಲೆ ಒಬ್ಬರೊಬ್ಬರನ್ನೊಬ್ಬರು ತಬ್ಬಿಕೊಂಡು ಸಂತೈಸಿದರು. ಪುನೀತ್ ನೆನಪಿಸಿಕೊಂಡು ಕಣ್ಣೀರಿಟ್ಟರು. ಆ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಪ್ರೇಮದ ಕಾಣಿಕೆಯಿಂದ ಹಿಡಿದು ಇಂದಿನವರೆಗೂ ಅಪ್ಪುನ ಸಿನಿಮಾ ನೋಡಿ ಅಪ್ಪುರನ್ನ ಕೊಂಡಾ ಡಿದ್ದೇವೆ. ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದು ನನಗೆ ನೋವಾಯ್ತು. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ನಾವು ಐದು ಜನ ಮಕ್ಕಳು ಅದರಲ್ಲಿ ಒಬ್ಬ ಇಲ್ಲವಾದ. ಅಪ್ಪ, ಅಮ್ಮ ಕೂಡ 100 ವರ್ಷ ಇರಬೇಕು ಅಂತ ನಮಗೆ ಆಸೆ ಇತ್ತು. ಆದ್ರೆ ಅವರು ಹೊರಟು ಹೋದ್ರು. ಅವರ ಜೊತೆ ನನ್ನ ತಮ್ಮನೂ ಹೊರಟು ಹೋದ ಎಂದು ಗದ್ಗದಿತರಾದರು.

Related Posts

Don't Miss it !