ಪವರ್ ಸ್ಟಾರ್​ ಅಪ್ಪು ಸಾವಿನ ಬಳಿಕ ಕೊನೆ ಆಸೆ ಈಡೇರಿಸಿದ ಸಹೋದರರು..!

ಸ್ಯಾಂಡಲ್​ವುಡ್​ನಲ್ಲಿ ಪವರ್​ ಸ್ಟಾರ್​, ಅಪ್ಪು ಎಂದೇ ಖ್ಯಾತಿ ಗಳಿಸಿದ್ದ ಪುನೀತ್​ ರಾಜ್​ಕುಮಾರ್​ ಕೊನೆಯ ಚಿತ್ರ ಜೇಮ್ಸ್​​ ಚಿತ್ರೀಕರಣ ಮುಕ್ತಾಯವಾಗಿದೆ. ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್​ನಲ್ಲಿ ನಡೆದ ಅಂತಿಮ ದಿನದ ಶೂಟಿಂಗ್​ ಮುಗಿಸಿದ ಚಿತ್ರತಂಡ ಕುಂಬಳಕಾಯಿ ಹೊಡೆಯುವ ಕೆಲಸ ಮಾಡಿ ಮುಗಿಸಿದೆ. ಇನ್ನೇನಿದ್ದರೂ ಪೋಸ್ಟ್​ ಪ್ರೊಡಕ್ಷನ್​​ ಕೆಲಸ ಮುಗಿಸಿದ ಬಳಿಕ ಭಾರೀ ನಿರೀಕ್ಷೆ ಹುಟ್ಟಿಸಿರುವ ಜೇಮ್ಸ್​ ಚಿತ್ರ ತೆರೆ ಮೇಲೆ ಬರಲಿದೆ. ನಟ ಪುನೀತ್​ ರಾಜ್​ಕುಮಾರ್​ ಬದುಕಿದ್ದರೆ ಈ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗುತ್ತಿತ್ತು. ಆದರೆ ಇದೀಗ ಅಪ್ಪು ಕಳೆದುಕೊಂಡಿರುವ ನೋವಿನಲ್ಲೇ ಚಿತ್ರದ ಅಂತಿಮ ಕೆಲಸಕ್ಕೆ ಕೈ ಹಾಕಿದೆ ಚಿತ್ರತಂಡ.

ಒಂದೇ ಚಿತ್ರದಲ್ಲಿ ನಟಿಸಿದ್ರು ದೊಡ್ಮನೆ ಮಕ್ಕಳು..!

ದೊಡ್ಮನೆ ಮಕ್ಕಳಾದ ಶಿವರಾಜ್​ಕುಮಾರ್​​, ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​​ ಒಂದೇ ಚಿತ್ರದಲ್ಲಿ ನಟನೆ ಮಾಡಬೇಕು ಎನ್ನುವುದು ಹಲವು ದಿನಗಳ ಕನಸಾಗಿತ್ತು. ಸಾಕಷ್ಟು ಬಾರಿ ಅಭಿಮಾನಿಗಳು ಈ ಬಗ್ಗೆ ಒತ್ತಾಯ ಮಾಡಿದ್ದರು. ಮಾಧ್ಯಮಗೋಷ್ಠಿಗಳಲ್ಲೂ ಈ ಬಗ್ಗೆ ಪ್ರಶ್ನೆಗಳು ತೂರಿ ಬರುತ್ತಿದ್ದವು. ಶಿವರಾಜ್​ ಕುಮಾರ್​, ರಾಘವೇಂದ್ರ ರಾಜ್​​ಕುಮಾರ್​, ಪುನೀತ್​ ಸೇರಿದಂತೆ ಮೂವರೂ ನಮಗೂ ಒಟ್ಟಿಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಆದರೆ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೇವೆ. ಆ ರೀತಿಯ ಕಥೆ ಒದಗಿ ಬಂದರೆ ಖಂಡಿತಾ ನಾವು ಒಟ್ಟಿಗೆ ನಟಿಸ್ತೇವೆ ಎಂದಿದ್ದರು. ಆದರೆ ಅದು ಪುನೀತ್​ ರಾಜ್​ ಕುಮಾರ್​​ ಕೊನೆ ಚಿತ್ರ ಎಂದು ಭಾವಿಸಿರಲಿಲ್ಲ.

ಇದನ್ನೂ ಓದಿ; ದುಡಿದು ತಿನ್ನುವ ಛಲಗಾತಿ, ಹೆತ್ತವರ ಮಾತು ಕೇಳದೆ ಹುಟ್ಟಿದ ದಿನವೇ ಹೆಣವಾದಳು..!!

ಪುನೀತ್​​ ಇಲ್ಲದಿದ್ದರೂ ಬಣ್ಣ ಹಚ್ಚಿದ ಬ್ರದರ್ಸ್​..!

ನಟ ಪುನೀತ್​ ರಾಜ್​ ಕುಮಾರ್​​ ದೊಡ್ಮನೆ ಮಾತ್ರವಲ್ಲ, ಇಡೀ ಕರುನಾಡಿಗೆ ದುಃಖವನ್ನುಣಿಸಿ ದೇವರ ಪಾದ ಸೇರಿಕೊಂಡಿದ್ದಾರೆ. ಇನ್ನೂ ಕೊನೇ ಚಿತ್ರವಾಗಿರುವ ಜೇಮ್ಸ್​​ನಲ್ಲಿ ತಮ್ಮ ಅಭಿನಯವನ್ನು ಕಂಪ್ಲೀಟ್​ ಕೂಡ ಮಾಡಿದ್ದರು. ಅಕಾಲಿಕ ನಿ ಧನದ ಬಳಿಕ ಪುನೀತ್​ ಕೊನೇ ಚಿತ್ರದಲ್ಲಿ ಶಿವರಾಜ್​ ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಬಣ್ಣ ಹಚ್ಚಿ ಅಭಿನಯಿಸಿದ್ದಾರೆ. ಪುನೀತ್​ ಇಲ್ಲದ ನೋವಿನಲ್ಲಿ ಕೊನೆ ಚಿತ್ರದಲ್ಲಿ ಜೊತೆಯಾಗುವ ಮೂಲಕ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್​ನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಇಬ್ಬರೂ ಸಹೋದರರು ಅಪ್ಪುಗಾಗಿ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ; ಸರ್ಕಾರ ವೀಕೆಂಡ್​ ಕರ್ಫ್ಯೂ ವಾಪಸ್​ ಪಡೆದ ಹಿಂದಿನ ಪ್ರಮುಖ ಉದ್ದೇಶ ಏನು..?

‘ಆಸೆ ಹೊತ್ತು ಸ್ವರ್ಗಕ್ಕೆ ಹೋಗಬಾರದು’ ಇದು ನಂಬಿಕೆ

ಆಸೆಗಳನ್ನು ಪೂರೈಸಿಕೊಳ್ಳದೆ ಸ್ವರ್ಗವಾಸಿಗಳಾದರೆ ಸ್ವರ್ಗದಲ್ಲೂ ನೆಮ್ಮದಿ ಸಿಗಲಾರದು ಎನ್ನುವುದು ಹಿಂದೂಗಳ ನಂಬಿಕೆ. ಅದೇ ರೀತಿ ನಟ ಪುನೀತ್​ ರಾಜ್​ಕುಮಾರ್​ ತಮ್ಮ ಬದುಕಿನ ಯಾತ್ರೆ ಮುಗಿಸುವ ಕೆಲವೇ ದಿನಗಳ ಮುನ್ನ, ಅಂದರೆ ಭಜರಂಗಿ 2 ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು. ಒಟ್ಟಿಗೆ ಅಭಿನಯಿಸುವ ಬಗ್ಗೆ ಹೇಳಿಕೊಂಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅಪ್ಪು ಅನುಪಸ್ಥಿತಿಯಲ್ಲಿ ಶಿವರಾಜ್​ ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​​ ಆಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ. ಅಪ್ಪು ಅಗಲಿಕೆ ನೋವಿನಲ್ಲಿರುವ ಇಡೀ ಕರುನಾಡು ಜೇಮ್ಸ್​ ಚಿತ್ರದಲ್ಲಿ ಅಪ್ಪು ಕಣ್ತುಂಬಿಕೊಳ್ಳಲು ಕಾತುರವಾಗಿದೆ.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !