ಕರುನಾಡಿನ ಮುಕುಟ ಅಪ್ಪು ಚಿತ್ರ ‘ಜೇಮ್ಸ್’​ ಎತ್ತಂಗಡಿ ಶಿಕ್ಷೆ.. ಯಾಕೀ ಅವಮಾನ..!?

ಕನ್ನಡಿಗರ ಮೆಚ್ಚಿನ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ಕೊನೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಜೇಮ್ಸ್​ ಚಿತ್ರವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಥಿಯೇಟರ್​ ಎದುರು ಸಾಲುಗಟ್ಟಿ ನಿಂತಿದೆ. ಆದರೆ ಜೇಮ್ಸ್​ ಚಿತ್ರವನ್ನು ಥಿಯೇಟರ್​ನಿಂದ ಖಾಲಿ ಮಾಡಿಸಿ ದಿ ಕಾಶ್ಮೀರಿ ಫೈಲ್ಸ್​ ಚಿತ್ರವನ್ನು ಹಾಕುವಂತೆ ಒತ್ತಡ ಶುರುವಾಗಿದೆ ಎನ್ನಲಾಗಿದೆ. ಬಿಜೆಪಿ ಶಾಸಕರು ಥಿಯೇಟರ್​ ಮಾಲೀಕರ ಮೇಲೆ ಒತ್ತಡ ತಂದಿದ್ದು, ದಿನಕ್ಕೆ ಒಂದು ಶೋ ಮಾತ್ರ ನೀಡ್ತೇವೆ. ನಾವು ದಿ ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಹಾಕಬೇಕಿದೆ ಎಂದು ನಿರ್ಮಾಪಕರಿಗೆ ಥಿಯೇಟರ್​ ಮಾಲಿಕರು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಚಿತ್ರತಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದೆ. ಅಪ್ಪು ಸಿನಿಮಾವನ್ನು ಥಿಯೇಟರ್​ನಿಂದ ತೆಗೆಯದಂತೆ ಒತ್ತಾಯಿಸಿದ್ದಾರೆ. ಕಾಶ್ಮೀರ್​ ಫೈಲ್​ ವಿಚಾರಕ್ಕೆ ಈಗಾಗಲೇ ರಾಜಕೀಯ ವಾಗ್ವಾದ ಶುರುವಾಗಿತ್ತು. ಈ ಹೊತ್ತಿನಲ್ಲೇ ಅಪ್ಪು ಸಿನಿಮಾವನ್ನು ತೆಗೆದು ದಿ ಕಾಶ್ಮೀರ್ ಫೈಲ್ಸ್ ಹಾಕುತ್ತಿರುವುದು ಸಿದ್ದರಾಮಯ್ಯ ಕಣ್ಣು ಕೆಂಪಾಗುವಂತೆ ಮಾಡಿದೆ.

ಸರಣಿ ಟ್ವೀಟ್​ ಮೂಲಕ ಸಿದ್ದರಾಮಯ್ಯ ಚಾಟಿ..!

ಜೇಮ್ಸ್​​ ಚಿತ್ರದ ಪರವಾಗಿ ಸಾಲು ಸಾಲಾಗಿ ಟ್ವೀಟ್​ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರತಿಯೊಬ್ಬ ಕನ್ನಡಿಗನೂ ಜೇಮ್ಸ್​ ಚಿತ್ರವನ್ನು​ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ನಟ ಪುನೀತ್​ ಅವರ ಕೊನೆಯ ಚಿತ್ರ ಜೇಮ್ಸ್ ಅನ್ನು ಬಲವಂತದಿಂದ ನಿಲ್ಲಿಸ್ತಿದ್ದಾರೆ. ಆ ಜಾಗಕ್ಕೆ ದಿ ಕಾಶ್ಮೀರಿ ಫೈಲ್ಸ್ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಒತ್ತಡ ಖಂಡನೀಯ. ಹೌಸ್​​ಫುಲ್​ ಆಗಿ ಪ್ರದರ್ಶ ನ ಕಾಣ್ತಿರೋ ಜೇಮ್ಸ್​​​​​ ಪ್ರದರ್ಶನ ನಿಲ್ಲಿಸಲು ಬಲವಂತ ಮಾಡುತ್ತಿರುವ ಆಘಾತಕಾರಿ ಎಂದು ಬಣ್ಣೀಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಜೇಮ್ಸ್​​ ತೆರವಿಗೆ ಹುನ್ನಾರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಿ. ಇಲ್ಲದಿದ್ರೆ ಸರ್ಕಾರ ಶಾಮೀಲಾಗಿದೆ ಎಂದುಕೊಳ್ಳಬೇಕಾಗುತ್ತದೆ ಎಂದು ಟೀಕಿಸಿದ್ದಾರೆ. ಪುನೀತ್ ಸತ್ತಾಗ ಸ್ವತಃ ಮುಖ್ಯಮಂತ್ರಿಗಳೇ ಕಣ್ಣೀರಿಟ್ಟು, ಹಣೆಗೆ ಮುತ್ತಿಟ್ಟಿದ್ದರು. ಬಿಜೆಪಿ ಶಾಸಕರು, ನಾಯಕರು ಕೂಡ ಶೋಕ ವ್ಯಕ್ತಪಡಿಸಿದ್ದರು. ಆ ಭಾವನೆ ಪ್ರಾಮಾಣಿಕವಾಗಿದ್ರೆ ಈಗ ಜೇಮ್ಸ್​ ಚಿತ್ರವನ್ನು ತೆರವು ಮಾಡದೆ ಸಾಬೀತುಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಿಮ್ಮ ಪ್ರೀತಿ, ವಿಶ್ವಾಸ ಈಗ ಸಾಬೀತು ಮಾಡಿ – ಸಿದ್ದು

ಜೇಮ್ಸ್​ ಚಿತ್ರವನ್ನು ತೆಗೆದು ದಿ ಕಾಶ್ಮೀರಿ ಫೈಲ್ಸ್​ ಹಾಕುವುದಕ್ಕೆ ಹೊರಟಿರುವುದು ಪುನೀತ್​​ಗೆ ಮಾಡ್ತಿರುವ ದ್ರೋಹ ಅಲ್ಲ. ಸಮಸ್ತ ಕನ್ನಡಿಗರ ಮಾಡ್ತಿರುವ ಅವಮಾನ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡಿಗರು ಬೀದಿಗಿಳಿತಾರೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಪುನೀತ್​ ರಾಜ್​ಕುಮಾರ್ ಅವರನ್ನು​ ವಿಶ್ವವೇ ಕೊಂಡಾಡ್ತಿದೆ. ಅಪ್ಪು ಕೊನೇ ಚಿತ್ರ ನೋಡಿ ಪುನೀತ್​ಗೆ ಗೌರವ ಸಲ್ಲಿಸ್ತಿದ್ದಾರೆ. ಜೇಮ್ಸ್​ ಚಿತ್ರಕ್ಕೆ ಬಿಜೆಪಿ ಕರ್ನಾಟಕದಿಂದ ಅಡ್ಡಿ ಮಾಡಲಾಗ್ತಿದೆ. ಕಾಶ್ಮೀರಿ ಫೈಲ್ಸ್, ಜೈ ಭೀಮ್​ ಗಾಂಧಿ ಬಗ್ಗೆಯೂ ಸಿನಿಮಾ ಇದೆ. ಅವಱರು ಸಿನಿಮಾ ನೋಡಿ ಅಂತ ಬಲವಂತ ಮಾಡಿದ್ದಾರಾ..? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಜೇಮ್ಸ್​ ತೆಗೆದು ಬಲವಂತದ ಪ್ರದರ್ಶನ ಸರಿಯಲ್ಲ ಎಂದಿದ್ದಾರೆ. ಕಾಶ್ಮೀರಿ ಫೈಲ್ಸ್​ಗೆ ತೆರಿಗೆ ವಿನಾಯ್ತಿ ಕೊಟ್ಟು ಕನ್ನಡಿಗ ಅಂತೀರಾ..? ಮುಖ್ಯಮಂತ್ರಿಗಳಿಗೆ ಕನ್ನಡದ ಜೇಮ್ಸ್ ನೆನಪಾಗಲಿಲ್ಲವೇ..? ಜೇಮ್ಸ್​ಗೂ ತೆರಿಗೆ ವಿನಾಯ್ತಿ ಕೊಡಿ ಅಂತ ಸಿಎಂಗೆ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

ಒತ್ತಡ ಬಂದಿರುವ ನಿಜ ಎಂದ ಜೇಮ್ಸ್​ ನಿರ್ಮಾಪಕ..!

ಜೇಮ್ಸ್​ ಚಿತ್ರ ನಿರ್ಮಾಪಕ ಕಿಶೋರ್ ಕೊಪ್ಪಳದಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಭೇಟಿ ಆಗಿ ಸಿನಿಮಾ ನೋಡಲು ಅಹ್ವಾನ ಮಾಡಿದ್ದೇವೆ. ಅವರೇ ಸಿನಿಮಾ ಹೇಗೆ ನಡೆಯುತ್ತಿದೆ ಎಂದು ಕೇಳಿದ್ರು. ಆ ವೇಳೆ ಕೆಲವು ಕಡೆ ಸಮಸ್ಯೆ ಆಗ್ತಿದೆ ಎಂದು ನಾನು ಹೇಳಿದ್ದೇನೆ. ನನಗೆ ಚಿತ್ರಮಂದಿರದ ಮಾಲೀಕರು ಒಂದು ಶೋ ಹಾಕ್ತೀನಿ ಎಂದರು. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದಿದ್ದಾರೆ ಕಿಶೋರ್. ಅವರಿಗೆ ಯಾರ ಒತ್ತಡ ಹಾಕಿದ್ದಾರೆ ನನಗೆ ಗೊತ್ತಿಲ್ಲ. ನಾನು ಅದಕ್ಕೆ ಒಪ್ಪಲಿಲ್ಲ, ನನ್ನ ಸಿನಿಮಾಗೆ ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದೇನೆ. ಸಿನಿಮಾ ಪ್ಲಾಫ್ ಆಗಿಲ್ಲ, ಹಿಟ್ ಆಗಿದೆ, ನನಗೆ ಕಂಪ್ಲೀಟ್ ಶೋ ನಡಿಬೇಕು ಎಂದು ಕಿಶೋರ್ ಹೇಳಿದ್ದಾರೆ. ಅಣ್ಣನ ಕೊನೆಗೆ ಸಿನಿಮಾಗೆ ಸಪೋರ್ಟ್ ಮಾಡಬೇಕು ಎಂದಿದ್ದಾರೆ ಕಿಶೋರ್. ಮತ್ತೊಮ್ಮೆ ನಮಗೆ ಅಣ್ಣನೊಂದಿಗೆ ಸಿನಿಮಾ ಮಾಡಲು ಆಗಲ್ಲ. ಸದ್ಯ ಜೇಮ್ಸ್​ಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ನಮಗೆ ಸಮಸ್ಯೆ ಆಗಿರೋದು ನಿಜ, ಎಲ್ಲಿ ಅನ್ನೋದು ಸದ್ಯಕ್ಕೆ ಬೇಡಾ ಎಂದಿದ್ದಾರೆ. ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ ನಿರ್ಮಾಪಕ ಕಿಶೋರ್‌.

Related Posts

Don't Miss it !