ಅಪ್ಪನ ಬಳಿಕ ಮಗನೂ ಸೈಡ್​ಲೈನ್​, ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ..!

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್​ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್​ ಒತ್ತಾಯಪೂರ್ವಕವಾಗಿ ಕೆಳಕ್ಕೆ ಇಳಿಸುವ ಕೆಲಸ ಮಾಡಿತ್ತು. ಈ ಬಗ್ಗೆ ಯಡಿಯೂರಪ್ಪ ಎಲ್ಲೂ ಕೂಡ ಹೇಳಿಕೊಳ್ಳದಿದ್ದರೂ ಎಲ್ಲರಿಗೂ ಗೊತ್ತಿರುವ ಮುಚ್ಚಿಟ್ಟ ಸತ್ಯ. ಆ ಬಳಿಕ ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರ ಇಡುವ ಕೆಲಸ ಆಗ್ತಿದೆ. ವಿಜಯೇಂದ್ರ ಅವರನ್ನು ಬಳಸಿಕೊಳ್ಳದಂತೆ ಒತ್ತಡ ಹೇರಿ ಸೈಡ್​ಲೈನ್​ ಮಾಡುವ ಕೆಲಸ ಆಗ್ತಿದೆ ಎನ್ನುವು ಅಭಿಮಾನಿಗಳು ಹಾಗೂ ಸಮುದಾಯದ ನಾಯಕರ ವಾದವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ದಿಲ್ಲಿಯ ಎಸಿ ರೂಮಿನಲ್ಲಿ ಕುಳಿತು, ಚೇಲಾ ನಳಿನ್ ಕುಮಾರ್​ ಕಟೀಲ್​ ಮೂಲಕ ದರ್ಬಾರ್​​ ಎಂದು ಬಿ.ಎಲ್​ ಸಂತೋಷ್​ ವಿರುದ್ಧ ಕೆಂಡಾಕ್ರೋಶ ಉಂಟಾಗುತ್ತಿದೆ.

ವಿಜಯೇಂದ್ರ ಸೈಡ್​ ಲೈನ್​ ಮಾಡಿದ್ದು ಎಲ್ಲಿ..!?

ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪ್ರತಿಯೊಂದು ಉಪಚುನಾವಣೆ ವೇಳೆಯಲ್ಲೂ ವಿಜಯೇಂದ್ರ ಆ ಕ್ಷೇತ್ರದಲ್ಲಿ ಮೊಕ್ಕಾಂ ಹೂಡುತ್ತಿದ್ದರು. ಗೆಲ್ಲಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡುತ್ತಿದ್ದರು. ಆದರೆ ಇದೀಗ ಘೋಷಣೆ ಆಗಿರುವ ಸಿಂಧಗಿ ಹಾಗೂ ಹಾನಗಲ್​ ಉಪಚುನಾವಣೆಯಲ್ಲಿ ಉಸ್ತುವಾರಿ ನೀಡದೆ ಬದಿಗೆ ಸರಿಸಲಾಗಿದೆ. ಕೋರ್​ ಕಮಿಟಿ ಸಭೆಯ ಬಳಿಕ ಯಾವ ಕ್ಷೇತ್ರದ ಉಸ್ತುವಾರಿ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಬಹಿರಂಗವಾಗಿ ಹೇಳಿದ್ದರು. ಆದರೆ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಹೆಸರು ಪ್ರಸ್ತಾಪವೇ ಆಗಲಿಲ್ಲ ಎನ್ನಲಾಗಿದೆ. ವಿಜಯೇಂದ್ರಗೆ ಉಸ್ತುವಾರಿ ಕೊಡುವ ಬಗ್ಎ ಯಾರೊಬ್ಬರೂ ಪ್ರಸ್ತಾಪ ಮಾಡಲಿಲ್ಲ. ಉಸ್ತುವಾರಿ ಬಗ್ಗೆ ಬೇರೊಂದು ಪಟ್ಟಿ ಸಿದ್ಧವಾಗಿತ್ತು. ಆ ಪಟ್ಟಿಗಷ್ಟೇ ಅನುಮೋದನೆ ನೀಡಲಾಯ್ತು ಎನ್ನಲಾಗಿದೆ. ಈ ನಡೆ ಬಿ.ಎಸ್​ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅಭಿಮಾನಿಗಳ ಆಕ್ರೋಶ ಇಮ್ಮಡಿಯಾಗುವಂತೆ ಮಾಡಿದೆ.

ಬಿಜೆಪಿ ಚುನಾವಣಾ ಉಸ್ತುವಾರಿ ಪಟ್ಟಿ

Read this also;

ಈಗ ಉಸ್ತುವಾರಿಗಳು ಯಾರು..? ವಿಜಯೇಂದ್ರ ಕೈಬಿಟ್ಟಿದ್ಯಾಕೆ..?

ವಿಜಯಪುರದ ಸಿಂಧಗಿ ಕ್ಷೇತ್ರಕ್ಕೆ ಸಚಿವರಾದ ಗೋವಿಂದ ಕಾರಜೋಳ, ವಿ ಸೋಮಣ್ಣ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್​ ಜಿಗಜಿಣಗಿ, ಬಸನಗೌಡ ಪಾಟೀಲ್​ ಯತ್ನಾಳ್​, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್​, ಎ.ಎಸ್​ ಪಾಟೀಲ್​ ನಡಹಳ್ಳಿ, ಪಿ. ರಾಜೀವ್​, ಶ್ರೀಕಾಂತ್​​ ಕುಲಕರ್ಣಿ, ಬಾಬುರಾವ್​ ಚಿಂಚನಸೂರ್​ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಹಾವೇರಿಯ ಹಾನಗಲ್​ ಕ್ಷೇತ್ರಕ್ಕೆ ಮುರುಗೇಶ್​ ನಿರಾಣಿ, ಮಾಧುಸ್ವಾಮಿ, ಬಿ.ಸಿ ಪಾಟೀಲ್​, ಶಿವರಾಮ್​ ಹೆಬ್ಬಾರ್​, ಶಿವಕುಮಾರ್​ ಉದಾಸಿ, ರವಿಕುಮಾರ್​, ಮಹೇಶ್​ ಟೆಂಗಿನಕಾಯಿ, ರಾಜೂಗೌಡ, ನೆಹರು ಓಲೇಕಾರ್​, ಎಂ ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್​ ಕುಮಾರ್​ ಗುತ್ತೂರು ಅವರನ್ನು ನೇಮಿಸಲಾಗಿದೆ. ಕಳೆದ ಉಪಚುನಾವಣೆಗಳಲ್ಲಿ ಬಿ.ವೈ ವಿಜಯೇಂದ್ರ ಚುನಾವಣಾ ಗೆಲುವಿನ ಎಲ್ಲಾ ಕ್ರೆಡಿಟ್​ ತಾವೇ ತೆಗೆದುಕೊಳ್ಳುವ ಕೆಲಸ ಮಾಡಿದ್ದರು. ಇದರಿಂದ ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಶಕ್ತಿ. ವಿಜಯೇಂದ್ರ ಇದೀಗ ತನ್ನ ತಂದೆಯಂತೆಯೇ ತಂತ್ರಗಾರಿಕೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ ಎನ್ನಲಾಗ್ತಿತ್ತು.

ವಿಜಯೇಂದ್ರ ಬೆಂಬಲಿಗರ ಕಿಡಿನುಡಿ

Read this also;

ಪ್ರಚಾರದಿಂದಲೂ ದೂರ ಉಳೀತಾರಾ ಬಿಎಸ್​ವೈ, ಬಿವೈವಿ..?

ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಬೇಕಿಲ್ಲ, ಆದರೆ ಅವರು ಪಕ್ಷ ಬಿಟ್ಟು ಹೋದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ನಿಚ್ಚಳವಾಗಿ ಅರಿವಿದೆ ಎನ್ನುತ್ತಾರೆ ಬಿ.ಎಸ್​ ಯಡಿಯೂರಪ್ಪ ಆಪ್ತರು. ಇದೀಗ ಸ್ವತಃ ಬಿ.ವೈ ವಿಜಯೇಂದ್ರ ಅವರನ್ನು ಚುನಾವಣಾ ಉಸ್ತುವಾರಿಯಿಂದ ದೂರ ಇಟ್ಟಿರುವುದು ನುಂಗಲಾರದ ತುತ್ತಾಗಿದೆ. ಇನ್ಮುಂದೆ ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಪಕ್ಷದ ಚಟುವಟಿಕೆಗಳಿಂದ ದೂರವಾಗಿ ಉಳೀತಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಷ್ಟು ದಿನಗಳೂ ಕೂಡ ಹೈಕಮಾಂಡ್​ ನಾಯಕರ ಬೆದರಿಕೆಗೆ ಹೆದರಿ ಕೆಲವೊಂದು ಕಡೆಗಳಲ್ಲಿ ಮಾತ್ರ ಭಾಗಿಯಾಗ್ತಿದ್ದರು. ವಿಜಯೇಂದ್ರ ಹಾಗೂ ರಾಘವೇಂದ್ರ ಭವಿಷ್ಯದ ದೃಷ್ಟಿಯಿಂದಲೇ ಎಲ್ಲಾ ನೋವನ್ನು ಸಹಿಸಿಕೊಳ್ಳುತ್ತಿದ್ದರು. ಇದೀಗ ಮಕ್ಕಳ ಭವಿಷ್ಯಕ್ಕೂ ಅಡ್ಡಗಾಲು ಹಾಕುತ್ತಿರುವ ಕಾರಣಕ್ಕೆ ಯಡಿಯೂರಪ್ಪ ಹೈಕಮಾಂಡ್​ ವಿರುದ್ಧ ತಿರುಗಿ ಬೀಳ್ತಾರಾ..? ಎನ್ನುವ ಅನುಮಾನ ದಟ್ಟವಾಗುವಂತೆ ಮಾಡಿದೆ.

Related Posts

Don't Miss it !