ಸಮುದ್ರದ ಒಳಗೆ ಅವಿತು ಕುಳಿತ ಅಧ್ಯಕ್ಷ, ಪ್ರಧಾನಿ ಮನೆಗೆ ಬೆಂಕಿ, ಸಂಪೂರ್ಣ ಭಸ್ಮ..!!

ಲಂಕೇಶ್ವರ ಎಂದೇ ಖ್ಯಾತಿ ಪಡೆದಿದ್ದ ರಾವಣ ಆಳಿದ ನಾಡು ಶ್ರೀಲಂಕಾ ಅಕ್ಷರಶಹಃ ರಣಾಂಗಣ ಆಗಿದೆ. ಸೀತೆಯನ್ನು ಮಾರುವೇಶದಲ್ಲಿ ರಾವಣ ಕರೆದುಕೊಂಡು ಹೋಗಿದ್ದಾಗ ಸೀತೆಯನ್ನು ಹುಡುಕುತ್ತಾ ತೆರಳಿದ್ದ ಹನುಮಂತನ ಬಾಲಕ್ಕೆ ರಾವಣನ ಸೇನೆ ಬೆಂಕಿ ಇಟ್ಟಿತ್ತು. ಅದೇ ಬೆಂಕಿಯಿಂದ ಇಡೀ ಲಂಕಾ ರಾಜ್ಯಕ್ಕೆ ಹನುಮಂತ ಬೆಂಕಿ ಇಟ್ಟು ಸಮುದ್ರದಲ್ಲಿ ಬಾಲದ ಬೆಂಕಿಯನ್ನು ತಣಿಸಿ ಭಾರತಕ್ಕೆ ವಾಪಸ್​ ಆಗಿದ್ದನು ಎನ್ನುವುದು ರಾಮಾಯಣದಿಂದ ತಿಳಿದುಬರುತ್ತದೆ. ಅದೇ ಲಂಕಾ ಈಗ ಧಗಧಗನ ಹೊತ್ತಿ ಉರಿಯುತ್ತಿದೆ. ತಾನು ಪಾಲಿಸಿಕೊಂಡು ಬಂದ ಹಣಕಾಸು ನೀತಿಯಿಂದ ದಿವಾಳಿ ಆಗಿರುವ ಶ್ರೀಲಂಕಾ ಸರ್ಕಾರ ಸರಿದಾರಿಗೆ ಬರುವುದಕ್ಕೆ ಹರಸಾಹಸ ಪಡುತ್ತಿದೆ. ಈ ನಡುವೆ ಅಧ್ಯಕ್ಷರು ಓಡಿ ಹೋಗಿದ್ದಾರೆ. ಪ್ರಧಾನಿ ಮನೆಗೆ ಜನರು ಬೆಂಕಿ ಹಚ್ಚಿದ್ದಾರೆ.

ಅಧ್ಯಕ್ಷರ ಮನೆಗೆ ಮುತ್ತಿದೆ, ಸಮುದ್ರದ ಕಡೆಗೆ ಓಡಿದ ರಾಜಪಕ್ಸೆ..!

ಶ್ರೀಲಂಕಾದಲ್ಲಿ ಹಣದುಬ್ಬರ ಜಾಸ್ತಿಯಾಗಿದ್ದು, ಸರ್ಕಾರ ಯಾವುದೇ ವಸ್ತುವನ್ನು ಆಮದು ಮಾಡಿಕೊಳ್ಳಲು ಹಣವಿಲ್ಲದಂತಾಗಿದೆ. ಹಾಗಾಗಿ ದರಗಳ ನಿಯಂತ್ರಣ ತಪ್ಪಿದ್ದು, ಸಾವಿರಾರು ರೂಪಾಯಿ ಕೊಟ್ಟರು ಆಹಾರ ಸೇರಿದಂತೆ ಯಾವುದೇ ಮೂಲಭೂತ ವಸ್ತುಗಳು ಸಿಗುತ್ತಿಲ್ಲ. ಶ್ರೀಮಂತರನ್ನು ಹೊರತುಪಡಿಸಿದರೆ ಮಧ್ಯಮ ಹಾಗು ಸಾಮಾನ್ಯರು ಬದುಕು ನಡೆಸುವುದೇ ದುಸ್ತರವಾಗಿದೆ. ಶನಿವಾರ ನಡೆದ ಬೃಹತ್​ ಪ್ರತಿಭಟನಾ ಮೆರವಣಿಗೆ, ಇದ್ದಕ್ಕಿದ್ದ ಹಾಗೆ ಅಧ್ಯಕ್ಷರ ಮನೆಗೆ ಹೊರಟಿತ್ತು. ಲಕ್ಷಾಂತರ ಜನರು ಅಧ್ಯಕ್ಷರ ಮನೆ ಕಡೆಗೆ ಬರುವುದನ್ನು ತಡೆಯಲು ವಿಫಲವಾದ ಶ್ರೀಲಂಕಾ ಸೇನೆ ಅಧ್ಯಕ್ಷರನ್ನು ಮನೆಯಿಂದ ಕರೆದೊಯ್ಯುವಲ್ಲಿ ಯಶಸ್ವಿಯಾಯ್ತು. ಬಿಗಿ ಭದ್ರತೆಯಲ್ಲಿ ಓಡಿಹೋದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ನೌಕಾಪಡೆಯ ಹಡಗಿನಲ್ಲಿ ವಾಸ್ತವ್ಯ ಹೂಡಿದ್ದು, ಜುಲೈ 13ರಂದು ರಾಜೀನಾಮೆ ಕೊಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಡೆಲಿವರಿ ಬಾಯ್​​ ಕೆಲಸ.. ಕಂಡ ಕಂಡವರ ಸೊಂಟಕ್ಕೆ ಕೈ ಹಾಕೋ ಚಪಲ..!?

ಅಧ್ಯಕ್ಷರು ಓಡಿಹೋದ ದೃಶ್ಯ

ಮನೆಗೆ ನುಗ್ಗಿದ ಶ್ರೀಲಂಕನ್ನರು ಮಾಡಿದ್ದೇನು ಗೊತ್ತಾ..?

ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ಧಿಕ್ಕಾಪಾಲಗಿ ನುಗ್ಗಿದ ಜನ ಸಿಕ್ಕಿದ್ದನ್ನು ತಿಂದರು, ಐಶಾರಾಮಿ ವಸ್ತುಗಳನ್ನು ಬಳಸಿದರು. ಸ್ವಿಮ್ಮಿಂಗ್​ ಪೂಲ್​ನಲ್ಲಿ ಜನರು ಬಿದ್ದು ಒದ್ದಾಡಿದರು. ಸಿಕ್ಕ ಸಿಕ್ಕ ವಸ್ತುಗಳನ್ನು ಕಳವು ಮಾಡಿಕೊಂಡು ಹೋದರು. ಆ ಬಳಿಕ ಕೈಗೆ ಸಿಕ್ಕ ಸಂಸದ ರಜಿತ ಸೇನಾರತ್ನೆ ಮೇಲೆ ದಾಳಿ ಕೂಡ ಮಾಡಲಾಯ್ತು. ಇಷ್ಟೆಲ್ಲಾ ಆಗುತ್ತಿದ್ದರೂ ತಡೆಯಲು ಸಾಧ್ಯವಾಗದೆ ಕೈಕಟ್ಟಿ ಕುಳಿತ ಸೇನೆ ಮೂಕ ಪ್ರೇಕ್ಷಕನಾಗಿತ್ತು. ಸಂಜೆ ವೇಳೆಗೆ ತುರ್ತು ಕ್ಯಾಬಿನೆಟ್​ ಸಭೆ ನಡೆಸಿದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸ್ಪೀಕರ್​ ಅವರು ಒಂದು ತಿಂಗಳ ಅವಧಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಚುನಾವಣೆ ಬಳಿಕ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ರು. ಆ ಬಳಿಕ ತಮ್ಮ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ಇಷ್ಟರಲ್ಲಿ ಸಂಜೆ ಆಗ್ತಿದ್ದ ಹಾಗೆ ಶ್ರೀಲಂಕ ಜನರ ಕೋಪ ವಿಪರೀತವಾಗಿತ್ತು. ಪ್ರಧಾನಿ ಖಾಸಗಿ ನಿವಾಸದ ಬಳಿಕ ಧಾವಿಸಿದ ಜನ ಮನೆಗೆ ಬೆಂಕಿ ಹಚ್ಚಿಬಿಟ್ಟರು.

ಪ್ರತಿಭಟನಾಕಾರರು

ಭಾರತ ದೇಶಕ್ಕೆ ಶ್ರೀಲಂಕಾ ದುಸ್ಥಿತಿ ಎಚ್ಚರಿಕೆ ಕರೆನಾ..?

ಶ್ರೀಲಂಕಾದಲ್ಲಿ ಒಂದು ಕಾಫಿ ಬೆಲೆ 500 ರೂಪಾಯಿ ಆಗಿದೆ. ಒಂದು ಲೀಟರ್​ ಹಾಲಿನ ಬೆಲೆ 350 ಆಗಿದೆ. ಭಾರತದ ಒಂದು ರೂಪಾಯಿಗೆ ಶ್ರೀಲಂಕಾದಲ್ಲಿ ಸರಿಸುಮಾರು 5 ರೂಪಾಯಿ ಬೆಲೆ ಆಗಿದೆ. ಶ್ರೀಲಂಕಾದಲ್ಲಿ ಆರ್ಥಿಕ ಸಮಸ್ಯೆ ತಲೆದೋರುತ್ತಿದೆ ಎಂದು ತಜ್ಞರು ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಲಂಕಾ, ಇಂದು ಏನೂ ಮಾಡಲಾಗದ ದುಸ್ಥಿತಿಯಲ್ಲಿದೆ. ಇನ್ನೂ ಭಾರತದಲ್ಲೂ ಆರ್ಥಿಕ ಸಂಕಷ್ಟ ತಲೆದೋರಿದ್ದು ಕೆಲವೇ ದಿನಗಳಲ್ಲಿ ಭಾರತಕ್ಕೂ ಆರ್ಥಿಕತೆಯ ಹೊಡೆತ ತಟ್ಟಲಿದೆ ಎನ್ನಲಾಗ್ತಿದೆ. ಶ್ರೀಲಂಕಾದಲ್ಲಿ ಆಗಿರುವ ಪ್ರಮಾಣದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಆದರೂ ಸಮಸ್ಯೆ ಆಗಲಿದೆ ಎನ್ನುವುದು ಆರ್ಥಿಕ ತಜ್ಞರ ಮಾತಾಗಿದೆ. ಅಷ್ಟರಲ್ಲಿ ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಸಂಕಷ್ಟವನ್ನು ತಪ್ಪಿಸಬೇಕಿದೆ. ಇಲ್ಲದಿದ್ದರೆ ಭಾರತದ ಜನಸಂಖ್ಯೆಯನ್ನು ತಡೆಯುವುದಕ್ಕೆ ವಿಶ್ವದ ಸೇನೆ ಬರಬೇಕಾಗುತ್ತದೆ. ಸದ್ಯ ಭಾರತದ ರೂಪಾಯಿ ಮೌಲ್ಯ ಕುಸಿದಿದ್ದು, 1 ಡಾಲರ್​ಗೆ 79.29 ಆಗಿದೆ. ಜನರೇ ಯಾವುದಕ್ಕೂ ತಮ್ಮಷ್ಟಕ್ಕೆ ತಾವೇ ಹುಷಾರ್​ ಆಗುವುದು ಒಳಿತು.

Related Posts

Don't Miss it !