ಮಂಗಳೂರಿನಲ್ಲಿ ಬೆಳಗ್ಗೆ ಕಿಸ್​​ ಗೇಮ್​ ! ಸಂಜೆ ವೇಳೆ ಅಶ್ಲೀಲ ದೃಶ್ಯವೇ ವೈರಲ್​..

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಪಂದ್ಯ ಆಡಿದ್ದಾರೆ. ಪಂದ್ಯದ ನಿಯಮದಂತೆ ಎಲ್ಲರ ಎದುರೇ ಕಿಸ್ ಮಾಡಬೇಕು ಎನ್ನುವ ನಿಯಮವನ್ನು ಪಾಲಿಸಿದ್ದಾರೆ. ಆದರೆ ಆ ವೀಡಿಯೋವನ್ನು ರೆಕಾರ್ಡ್​ ಮಾಡಿಕೊಂಡು ವಾಟ್ಸ್​​ ಆ್ಯಪ್​ನಲ್ಲಿ ಹಾಕಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದ್ದ ಹಾಗೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ಕಿಸ್ಸಿಂಗ್ ಗೇಮ್​ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಿಸ್ತುಕ್ರಮ ಜರುಗಿಸಿದ್ದಾರೆ. ಬಾವುಟಗುಡ್ಡೆಯ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕುಚೇಷ್ಟೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಕಿಸ್ಸಿಂಗ್​ ಗೇಮ್​ ಅಷ್ಟೇ ಅಲ್ಲದೆ ಅಶ್ಲೀಲ ವೀಡಿಯೋಗಳು ಕೂಡ ರೆಕಾರ್ಡ್​ ಆಗಿದ್ದು ಬಯಲಿಗೆ ಬಂದಿದೆ.

ಅಪಾರ್ಟ್​ಮೆಂಟ್​ನಲ್ಲಿ ರೂಂ.. ದುಷ್ಚಟಗಳಿಗೆ ವಿದ್ಯಾರ್ಥಿಗಳು ಬಲಿ..!

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ ಪಂದ್ಯ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಒಟ್ಟು ಎಂಟು ಮಂದಿ ವಿದ್ಯಾರ್ಥಿಗಳು ಹಾಗು ಮೂರು ಮಂದಿ ವಿದ್ಯಾರ್ಥಿನಿಯರು ಈ ಪ್ರಕರಣದಲ್ಲಿ ಭಾಗವಹಿಸಿದ್ದಾರೆ. ಈ ಘಟನೆ ನಡೆದು ನಾಲ್ಕು ತಿಂಗಳುಗಳು ಆಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚೆಗೆ ತನ್ನ ತರಗತಿಯ ವಾಟ್ಸ್​ ಆಪ್​ ಗ್ರೂಪ್​​ಗೆ ವಿಡಿಯೋ ಹಾಕಿದ್ದಾನೆ. ಈ ವಿಡಿಯೋ ಶಿಕ್ಷಕರ ಗಮನಕ್ಕೆ ಬಂದು ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಈ ಪೋಲಿ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯ ಅಪಾರ್ಟ್​ಮೆಂಟ್​ನಲ್ಲಿ ರೂಮ್​ ಪಡೆದಿದ್ದರು. ಅಲ್ಲಿಯೇ ವೀಡಿಯೋ ಮಾಡಲಾಗಿದೆ ಎಂದಿದ್ದಾರೆ. ಇದೇ ವೇಳೆ ಡ್ರಗ್ಸ್​ ಕಿಕ್​ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಕುಡಿತ, ಡ್ರಗ್ಸ್​​, ಮೋಜು ಮಸ್ತಿ ಮಾಡಿರೋದಕ್ಕೆ ಸಾಕ್ಷ್ಯ ಲಭ್ಯ..!

ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆಗಿರುವ ವೀಡಿಯೋದಲ್ಲಿ ಒಬ್ಬ ಯುವಕ ಓರ್ವ ಯುವತಿಗೆ ಚುಂಬಿಸುವ ದೃಶ್ಯ ರೆಕಾರ್ಡ್​ ಆಗಿದ್ದು, ಮತ್ತೋರ್ವ ಯುವತಿ ಇನ್ನೊಬ್ಬ ಯುವಕ ತೊಡೆ ಮೇಲೆ ತಲೆ ಹಾಕಿ ಮಲಗಿರುವುದು ಕಂಡು ಬರುತ್ತದೆ. ಈ ವಿಡಿಯೋ ಮಾಡುವಾಗ ಅಶ್ಲೀಲವಾಗಿ ಮಾತನಾಡುವ ವಿದ್ಯಾರ್ಥಿಗಳು, ಮದ್ಯಪಾನ ಮಾಡಿ, ಡ್ರಗ್ಸ್​ ಸೇವನೆ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ರೂಮ್​ ಮಾಡಿದ್ದ ವಿದ್ಯಾರ್ಥಿಗಳು, ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಇದೇ ಕಾರಣಕ್ಕಾಗಿ ಮಾಲೀಕರು ರೂಮ್​ನಿಂದ ಹೊರಗೆ ಹಾಕಿದ್ದರು. ಈ ವೀಡಿಯೋ ಮಾಡಿದಾಗ ಗೇಮ್​ ಆಡಿದ್ದು, ಟ್ರೂತ್​ ಅಂಡ್​ ಡೇರ್​ ಆಟ ಆಡಿದ್ದರು. ಟ್ರೂತ್​​ ಅಂದ್ರೆ ಸತ್ಯ ಹೇಳಬೇಕು. ಡೇರ್​ ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು ಎನ್ನುವುದನ್ನು ಪಾಲಿಸಿದ್ದಾರೆ ಎಂದಿದ್ದಾರೆ. ಆದರೆ ಸೆಕ್ಸ್​ ಮಾಡಿರುವ ವೀಡಿಯೋ ರೆಕಾರ್ಡ್​ ಮಾಡಿದ್ಯಾಕೆ ಎನ್ನುವುದು ಖಾಕಿಪಡೆಯ ತಲೆ ಬಿಸಿ ಮಾಡಿದೆ.

ವೀಡಿಯೋ ಮಾಡಿದ್ರ ಹಿಂದೆ ದುರುದ್ದೇಶ ಇರುವ ಶಂಕೆ..!

ಕಿಸ್​ ಮಾಡಿದ್ದ ವೀಡಿಯೋ ವೈರಲ್​ ಆಗಿತ್ತು. ಸ್ವತಃ ಪೊಲೀಸ್​ ಕಮಿಷನರ್​ ಶಶಿಕುಮಾರ್​ ಮಾತನಾಡಿ, ಸ್ನೇಹಿತರು ಒಟ್ಟಿಗೆ ಸೇರಿದಾಗ ಅನುಮತಿಯಿಂದಲೋ ಅಥವಾ ಹುಡುಗಾಟಿಕೆಗೋ ಈ ರೀತಿ ನಡೆದಿರಬಹುದು. ಆದರೆ ವೀಡಿಯೋ ಎಲ್ಲಾ ಮಾಡಿಕೊಳ್ಳುವುದು ಸರಿಯಲ್ಲ ಎಂದಿದ್ದರು. ಹಾಗಾಗಿ ವೀಡಿಯೋ ವೈರಲ್​ ಮಾಡಿದ ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಹುಡುಗಿ ಪೋಷಕರನ್ನೂ ಕರೆದು ಮಾತನಾಡ್ತೇವೆ ಎಂದಿದ್ದರು. ಅಷ್ಟರಲ್ಲಿ ಇನ್ನೊಂದು ವೀಡಿಯೋ ಕೂಡ ವೈರಲ್​ ಆಯ್ತು. ದೈಹಿಕ ಸಂಪರ್ಕ ಬೆಳಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬರ್ತಿದ್ದ ಹಾಗೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎಲ್ಲಾ 8 ಮಂದಿಯನ್ನು ವಶಕ್ಕೆ ಪಡೆದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಡಿಯೋ ಮಾಡಿಕೊಂಡಿದ್ದ ಉದ್ದೇಶ ಕರೆದಾಗ ತಮ್ಮ ಜೊತೆಯಲ್ಲಿ ಬರುವಂತೆ ಬೆದರಿಕೆ ಹಾಕುವ ಉದ್ದೇಶದಿಂದ ಮಾಡಿದ್ದಾರೆಯೇ..? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚಿಗೆ ಪುತ್ತೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು Sex ಮಾಡುವಾಗ ವೀಡಿಯೋ ಮಾಡಿಕೊಂಡು ವೈರಲ್​ ಮಾಡಿಕೊಂಡಿದ್ದರು. ಇದೀಗ ಮಂಗಳೂರು ಸರದಿ. ವೀಡಿಯೋ ಮಾಡಿಕೊಳ್ಳುವ ಚಟಕ್ಕೆ ಬಿದ್ದು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.

Related Posts

Don't Miss it !