ಮದುವೆ ಆಗಿದ್ದವರಿಗೆ ಮೊಬೈಲ್​ ಸ್ಟೋರ್​ನಲ್ಲಿ ಪ್ರೇಮಾಂಕುರ..! ಮುಂದಾಗಿದ್ದು ದುರಂತ..

ಬೆಂಗಳೂರಿನಲ್ಲಿ ದಿನಕ್ಕೆ ನೂರಾರು ಪ್ರೇಮಕತೆಗಳು ನಡೆದು ಹೋಗುತ್ತವೆ. ಆದರೆ ಮೊಬೈಲ್​ ಸ್ಟೋರ್​ ಒಂದರಲ್ಲಿ ಶುರುವಾದ ಪ್ರೇಮ ಕಹಾನಿ ಮೂರು ವರ್ಷದ ಬಳಿಕ ಅಂತ್ಯವಾಗಿದೆ. ಪ್ರೀತಿಯನ್ನು ಬಿಟ್ಟುಕೊಡಲು ಒಲ್ಲದ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನನ್ನೇ ಕಿಡ್ನ್ಯಾಪ್​ ಮಾಡಿದ್ದಾಳೆ. ಇನ್ನೊಂದು ವಿಶೇಷ ಅಂದ್ರೆ ತನ್ನ ಮೊದಲ ಗಂಡನ ಜೊತೆಗೆ ಸೇರಿಕೊಂಡು ಕಿಡ್ನ್ಯಾಪ್​ ಮಾಡಿದ ಪ್ರೇಯರಿ ಅಂಡ್​ ಗ್ಯಾಂಗ್​ ಹನುಮಂತನಗರ ಪೊಲೀಸರ ಬಲೆಗೆ ಬಿದ್ದಿದೆ. ಈ ಪ್ರೇಮಿಗಳ ಲಿವಿಂಗ್​ ಟುಗೆದರ್​ ಶುರುವಾಗುವ ಮುನ್ನ ಇಬ್ಬರಿಗೂ ಮುದುವೆ ಆಗಿತ್ತು. ಮೂರು ವರ್ಷದ ಲಿವಿಂಗ್​ ಟುಗೆದರ್​ ಇದೀಗ ಅಂತ್ಯವಾಗಿದೆ.

ಕ್ಲಾರಾ ಮೊಬೈಲ್​ ಕೆಟ್ಟಿದ್ದರಿಂದ ಶುರುವಾಗಿತ್ತು ಲವ್​..!

ಕ್ಲಾರಾ ಮಧು ಎಂಬಾತನನ್ನು ಮದುವೆ ಆಗಿದ್ದಳು. ಆದರೆ ಸಂಸಾರದಲ್ಲಿ ಸುಖ ಕಾಣಿಸದೆ ಬೇರೊಂದು ಆಸರೆಯನ್ನು ಹುಡುಕುತ್ತಿರುವಾಗಲೇ ಮೊಬೈಲ್​ ಕೆಟ್ಟು ಹೋಗಿತ್ತು. ಮಹದೇವ ಪ್ರಸಾದ್ ಅವರ ಮೊಬೈಲ್​ ಅಂಗಡಿಗೆ ಹೋಗಿದ್ದಾಗ, ಕ್ಲಾರಾಳನ್ನು ನೋಡಿದ ಮಹದೇವ ಪ್ರಸಾದ್​ ಆಕೆಯ ನಂಬರ್​ ಪಡೆದುಕೊಂಡಿದ್ದರು. ಅಷ್ಟರಲ್ಲಿ ಮದುವೆ ಆಗಿ ಸಂಸಾರದ ಕಹಿ ಉಂಡಿದ್ದವನಿಗೆ ಸಿಹಿ ಆಗಿ ಸಿಕ್ಕಳು ಕ್ಲಾರಾ. ಮೊಬೈಲ್​ ನಂಬರ್​ ಶೇರ್​ ಆಗ್ತಿದ್ದ ಹಾಗೆ ಚಾಟಿಂಗ್​ ಶುರು ಮಾಡಿದ ಪ್ರೇಮಿಗಳು, ನೈಟ್​ ಔಟ್​, ಡೇಟಿಂಗ್​ ಶುರು ಮಾಡಿದ ಪ್ರೇಮಿಗಳು, ಆ ಬಳಿಕ ಒಂದೇ ಮನೆಯಲ್ಲಿ ವಾಸ ಕೂಡ ಶುರು ಮಾಡಿದ್ದರು. ಆದರೆ ಇತ್ತೀಚಿಗೆ ಕ್ಲಾರಾ ಮೇಲೆ ಮಹದೇವ್​ ಪ್ರಸಾದ್​ಗೆ ಅನುಮಾನ ಶುರುವಾಗಿತ್ತು. ಲಿವಿಂಗ್​ ಟುಗೆದರ್​​ನಿಂದ ಹೊರಬರುವುದಕ್ಕೆ ಸಿದ್ಧನಾಗಿದ್ದ.

ಪ್ರೇಮಿ ಬಿಟ್ಟು ಹೋಗುವುದನ್ನು ತಡೆಯಲಿಲ್ಲ ಕ್ಲಾರಾ..!

ಹಳೇ ಗಂಡನ ಜೊತೆಯಲ್ಲಿ ಪ್ಲ್ಯಾನ್​ ಮಾಡಿದ್ದ ಕ್ಲಾರಾ, ಮಹದೇವ ಪ್ರಸಾದ್​ನನ್ನು ಕಿಡ್ನ್ಯಾಪ್​ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದಳು. ತನ್ನ ಯೋಜನೆಯಂತೆ ಕಟ್ಟಕಡೆಯ ಬಾರಿಗೆ ನೋಡುವ ಮನಸಾಗಿದೆ ಎಂದು ಕರೆದಿದ್ದಳು ಕ್ಲಾರಾ. ಮನೆ ಬಳಿಗೆ ಬಂದಿದ್ದ ಕಾರನ್ನು ಹತ್ತಿದ ಮಹದೇವ ಪ್ರಸಾದ್​ನನ್ನು ಚಾಮರಾಜಪೇಟೆ ಸ್ಮಶಾನಕ್ಕೆ ಕರೆದುಕೊಂಡು ಹೋಗಲಾಯ್ತು. ಅಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಕ್ಲಾರಾ ಟೀಂ, ಆ ಬಳಿಕ ಚಾಮರಾಜಪೇಟೆಯ ಜನಪ್ರಿಯ ಬೇಕರಿ ಬಳಿಯ ಗೋಡೋನ್​ ಬಳಿಗೆ ಕರೆದುಕೊಂಡು ಬಂದು, ವೈರ್​ನಲ್ಲಿ ಕೈಕಾಲು ಕಟ್ಟಿ, ಸ್ಮಶಾನದಿಂದ ತಂದಿದ್ದ ಚಟ್ಟದ ಬಿದಿರಿನ ಕೋಲಿನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ರು. ಆ ನಂತರ ಬಿಡದಿ ಕಡೆಗೆ ಕರೆದುಕೊಂಡು ಹೋಗಿ ಬಿಟ್ಟು ಹೋಗಿದ್ದರು.

ಹಳೇ ಗಂಡನ ಜೊತೆಗೆ ಸೇರಿಕೊಂಡಿದ್ದೇ ಅನುಮಾನ..!

ಕ್ಲಾರಾ ತನ್ನ ಪ್ರಿಯಕರ ಮಹದೇವ ಪ್ರಸಾದ್​ನನ್ನು ಕಿಡ್ನ್ಯಾಪ್​ ಮಾಡಲು ಮೊದಲ ಪತಿ ಮಧು ಜೊತೆಗೆ ಯೋಜನೆ ರೂಪಿಸಿದ್ದಳು. ಸ್ನೇಹಿತೆ ಹೇಮಾವತಿ, ಆಕೆಯ ಪತಿ ಸಂತೋಷ್​ ಗೌಡ, ಆತನ ಸ್ನೇಹಿತ ಸ್ಮಶಾನ ಕಿರಣ್​, ಮನು, ಲೋಕೇಶ್​, ಅಶ್ವತ್ಥ್​ ನಾರಾಯಣ ಹಾಗೂ ನಾರಾಯಣಸ್ವಾಮಿ ಜೊತೆಗೆ ಸೇರಿಕೊಂಡಿದ್ದಳು. ಆದರೆ ಮೊದಲ ಗಂಡನನ್ನು ಸೇರಿಕೊಂಡು ಕಿಡ್ನ್ಯಾಪ್ ​ ಮಾಡಿದ್ದರ ಬಗ್ಗೆ ಪೊಲೀಸರಿಗೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೊದಲ ಗಂಡನ ಜೊತೆಗೆ ಕಳೆದ ಮೂರು ವರ್ಷದಿಂದಲೂ ಮೊದಲ ಗಂಡನ ಜೊತೆಗೆ ಸೇರಿಕೊಂಡು ಮಹದೇವ ಪ್ರಸಾದ್​ ಬಳಿ ಹಣ ಲಪಟಾಯಿಸಲು ಯೋಜನೆ ಮಾಡಿದ್ರಾ..? ಆ ಗುಟ್ಟು ರಟ್ಟಾಗಿದ್ರಿಂದ ಮಹದೇವ ಪ್ರಸಾದ್​ ದೂರ ಆಗುವುದಕ್ಕೆ ಮುಂದಾಗಿದ್ರಾ..? ಹಣ ಸಿಗಲ್ಲ ಅನ್ನೋ ಕಾರಣಕ್ಕೆ ಕಿಡ್ನ್ಯಾಪ್​ ಮಾಡಿದ್ರಾ ಅನ್ನೋ ಬಗ್ಗೆ ತನಿಖೆ ಮಾಡಲಾಗ್ತಿದೆ.

Related Posts

Don't Miss it !