ಕುಟುಂಬದ ಹಠಮಾರಿತನ ಹಾಗೂ ಕಬ್ಬಾಳು ಬೆಟ್ಟದಲ್ಲಿ ಪ್ರೇಮಿಗಳ ದುರಂತ ಕಥೆ..!

ರಾಮನಗರದಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರ ಕೊಳೆತ ದೇಹಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿನ ಕರ್ನಾಟಕದ ಗಡಿ ಗ್ರಾಮದ ಇಬ್ಬರು ಪ್ರೇಮಿಗಳು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಕುಟುಂಬಸ್ಥರು ಮದುವೆ ಮಾಡಿಕೊಡಲು ನಿರಾಕರಿಸಿ, ಬೇರೊಬ್ಬನ ಹುಡುಗನ ಜೊತೆಗೆ ಮದುವೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಆದರೆ ಮನಸ್ಸು, ದೇಹ ಬೇರೆ ಬೇರೆ ವ್ಯಕ್ತಿಗಳಿಗೆ ಒಪ್ಪದ ಯುವತಿ ತಾನು ಪ್ರೀತಿಸಿದ್ದ ಯುವಕನ ಜೊತೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಳೆ. ಅದರಂತೆ ಕನಕಪುರದ ಬಳಿಗೆ ಬಂದು ಸಾವಿನ ಕೂಪಕ್ಕೆ ದೂಡಿಕೊಂಡಿದ್ದಾರೆ.

ನಾಪತ್ತೆ ಆಗಿದ್ದ ಪ್ರೇಮಿಗಳು ಬೆಟ್ಟದಿಂದ ಬಿದ್ದರು..!

ಕನಕಪುರದ ಕಬ್ಬಾಳು ದೇವಸ್ಥಾನಕ್ಕೆ ಸಾಕಷ್ಟು ಭಕ್ತಸಮೂಹವಿದೆ. ಮಂಗಳವಾರ ಹಾಗೂ ಶುಕ್ರವಾರ ಸಾವಿರಾರು ಭಕ್ತರು ಕಬ್ಬಾಳಮ್ಮನ ದರ್ಶನಕ್ಕೆ ಆಗಮಿಸುತ್ತಾರೆ. ಭಕ್ತರ ಹಾಗೆಯೇ ಬಂದಿದ್ದ ಯುವ ಜೋಡಿ ಕಬ್ಬಾಳು ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ. ಮೃತ ಚಂದನಾ ಹಾಗೂ ಸತೀಶ್​ ಪ್ರೀತಿಸಿದ್ದ ವಿಚಾರ ತಿಳಿದಿದ್ದರೂ ಕುಟುಂಬಸ್ಥರು ಬೇರೊಬ್ಬ ಹುಡುಗನ ಜೊತೆಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪದ ಚಂದನಾ ಗಂಡನನನ್ನು ಕಾಡಿಸಿಕೊಂಡೇ ಬಂದಿದ್ದಳು ಎನ್ನಲಾಗಿದೆ. ಅಂತಿಮವಾಗಿ ಸೆಪ್ಟೆಂಬರ್​ 22 ರಂದು ಪತಿಯ ಮನೆಯಿಂದ ನಾಪತ್ತೆಯಾಗಿದ್ದಳು. ಇದೀಗ ಹಳೇ ಗೆಳಯ ಸತೀಶ್​ ಜೊತೆಗೆ ಶವವಾಗಿ ಪತ್ತೆಯಾಗಿದ್ದಾಳೆ. ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರೇಮಿಗಳ ಶವ ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.

Read this also;

ಕುಟುಂಬಸ್ಥರು ಮಾಡಿದ ತಪ್ಪಾದ್ರೂ ಏನು..?

ಮಗಳು ಪ್ರೀತಿ ಮಾಡಿದ್ದಾಳೆ ಎನ್ನುವುದು ಗೊತ್ತಾದ ಮೇಲೆ ಮಗಳನ್ನುಮನವೊಲಿಸುವ ಕೆಲಸ ಮಾಡಿಸಬೇಕಿತ್ತು. ಪ್ರೀತಿಯ ಗುಂಗಿನಿಂದ ಹೊರಗೆ ಕರೆತಂದು ಹಲವು ದಿನಗಳ ಕಾಲ ಮನೆಯಲ್ಲಿ ಇರಿಸಿಕೊಳ್ಳಬೇಕಿತ್ತು. ಅಥವಾ ಬೇರೊಂದು ಕೆಲಸಕ್ಕೆ ಸೇರಿಸಿ ಅವಳ ಮನಸ್ಸು ಬದಲಾಯಿಸುವ ಕೆಲಸ ಮಾಡಬೇಕಿತ್ತು. ಆದರೆ ಪ್ರೀತಿ ಮಾಡುತ್ತಿದ್ದಾಳೆ ಎನ್ನುವುದು ಗೊತ್ತಾಗುತ್ತಿದ್ದ ಹಾಗೆ ಅರಿಬಿರಿಯಲ್ಲಿ ಮದುವೆ ಮಾಡಿದ್ದು, ಯುವತಿ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿತ್ತು ಎನ್ನುವುದು ಆಕೆಯ ಆತ್ಮಹತ್ಯೆ ನಿರ್ಧಾರದಿಂದಲೇ ತಿಳಿಯುತ್ತಿದೆ. ಯಾವುದೇ ಒಂದು ಹವ್ಯಾಸದಿಂದ ಹೊರತರುವಾಗ ಪ್ರತ್ಯೇಕವಾದ ಮತ್ತೊಂದು ಹವ್ಯಾಸವನ್ನು ಮಾಡಿಸಬೇಕು ಎನ್ನುವುದು ಮೊದಲಿಗೆ ತಿಳಿದಿರಬೇಕು. ಪ್ರೀತಿ ಎನ್ನುವುದು ಕೂಡ ಒಂದು ಚಟವಿದ್ದಂತೆ. ಆ ಚಟವನ್ನು ಏಕಾಏಕಿ ಬಿಡಿಸಿ ಸುಮ್ಮನಾದರೆ ಇದೇ ಪರಿಸ್ಥಿ ಎದುರಾಗುತ್ತದೆ.

Read this also;

ಪ್ರೇಮಿಗಳು ಸಾಯುವ ಬದಲು ಹೀಗೆ ಮಾಡಬಹುದಿತ್ತು..!

ಪ್ರೀತಿಯೇ ಆಗಲಿ ಸಮಸ್ಯೆಗಳೇ ಆಗಲಿ ಸಾವು ಒಂದು ಅಂತಿಮ ಪರಿಹಾರವಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಪ್ರೀತಿ ಮಾಡಿದ ಮೇಲೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದೇ ಮೊದಲು ಮಾಡಿದ ತಪ್ಪು. ಆ ಬಳಿಕ ಒಂದು ವರ್ಷ ಜೀವನ ಮಾಡಿದ್ದು ಮತ್ತೊಂದು ತಪ್ಪು. ಆದರೂ ಪ್ರೇಮಿ ಜೊತೆಗೆ ಹೋಗುತ್ತೇನೆ ಎನ್ನುವ ನಿರ್ಧಾರ ಮಾಡಿದ ಬಳಿಕ ಸಾಯುವ ನಿರ್ಧಾರ ಮಾಡಿದ್ದು ಮೂರನೇ ತಪ್ಪು. ಮನುಷ್ಯ ಯಾವುದೇ ನಿರ್ಧಾರ ಮಾಡಿದರೂ ಅದರ ಜೊತೆಗೆ ಬದುಕುವ ಛಲ ಬೆಳೆಸಿಕೊಳ್ಳಬೇಕು. ಕೆಲವೊಂದು ಬಾರಿ ತಪ್ಪುಗಳಾಗುತ್ತವೆ. ಆ ತಪ್ಪುಗಳಿಂದ ಕುಗ್ಗಿ ಹೋಗಬಾರದು. ಆ ತಪ್ಪುಗಳು ಜೀವನ ಏನು ಎನ್ನುವ ಪಾಠ ಹೇಳಿಕೊಡುತ್ತವೆ. ತಪ್ಪುಗಳಿಂದ ಎದುರಾಗಿವ ವೈಫಲ್ಯಗಳೇ ಜೀವನದಲ್ಲಿ ಸಾಧಿಸಿ ನಿಲ್ಲುವಂತೆ ಮಾಡುತ್ತವೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಕಬ್ಬಾಳು ದೇವಸ್ಥಾನ ಬೆಟ್ಟದಿಂದ ಹಾರಿ ಆಸತ್ಮಹತ್ಯೆ ಮಾಡಿಕೊಳ್ಳುವ ಬದಲು ಜಗತ್ತು ಸಾಕಷ್ಟು ದೊಡ್ಡದಾಗಿತ್ತು, ಎಲ್ಲಾದರೂ ಹೋಗಿ ಬದುಕಬಹುದಿತ್ತು ಅಲ್ಲವೇ..?

Related Posts

Don't Miss it !