‘ಅಶ್ಲೀಲ ವೀಡಿಯೋ’ ಮಹಾನಾಯಕ ತಂತ್ರ..? ಬಯಲಾಗುತ್ತಾ ಬಾಂಬೆ ಸೀಕ್ರೆಟ್..?

ರಾಮನಗರ ಜಿಲ್ಲೆ ಚನ್ನಪಟ್ಟಣದ ಕಾಂಗ್ರೆಸ್​ ಕಾರ್ಯಕರ್ತೆ ನವ್ಯಶ್ರೀ ವೀಡಿಯೋ ಒಂದು ಇತ್ತೀಚಿಗೆ ಬಿಡುಗಡೆ ಆಗಿತ್ತು. ಅಶ್ಲೀಲ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ನವ್ಯಶ್ರೀ, ವೀಡಿಯೋದಲ್ಲಿ ಇರುವ ವ್ಯಕ್ತಿ ನನ್ನ ಗಂಡ ಎಂದು ಬಹಿರಂಗ ಮಾಡಿದ್ದರು. ನವ್ಯಶ್ರೀ ಆರ್. ರಾವ್‌, ಬೆಳಗಾವಿಯ ತೋಟಗಾರಿಕೆ ಇಲಾಖೆ ಅಧಿಕಾರಿ ನನ್ನ ಗಂಡ ಎಂದು ಬಹಿರಂಗ ಮಾಡಿದ್ದರು. ಆದರೆ ಆ ಬಳಿಕ ನವ್ಯಶ್ರೀ ವಿರುದ್ಧ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ನವ್ಯಶ್ರೀ ಜೊತೆಗೆ ಆಕೆಯ ಸ್ನೇಹಿತ ತಿಲಕರಾಜ್ ಡಿ.ಟಿ. ಎಂಬುವರ ವಿರುದ್ಧವೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. 50 ಲಕ್ಷ ರೂಪಾಯಿ ನೀಡದಿದ್ದರೆ ಅತ್ಯಾಚಾರ, ಸುಲಿಗೆ ಪ್ರಕರಣ ದಾಖಲಿಸುವುದಾಗಿ ಪದೇಪದೇ ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂರು ಮಕ್ಕಳ ತಂದೆ ನಾನು, ಆದರೂ ಸಲುಗೆ ಬೆಳೆಸಿದ್ದರು..!

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರಿನಲ್ಲಿ ಮಹತ್ವದ ಮಾಹಿತಿಯನ್ನು ದೂರಿನಲ್ಲಿ ಹಂಚಿಕೊಂಡಿದ್ದು, ಡಿಸೆಂಬರ್ 2020ರಲ್ಲಿ ನಾನು ಬೆಂಗಳೂರಲ್ಲಿ ಕೆಲಸ ಮಾಡುವಾಗ ನವ್ಯಶ್ರೀ ಪರಿಚಯವಾಗಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯ ಮಾಡಿಕೊಂಡಿದ್ದ ನವ್ಯಶ್ರೀ, ನವ್ಯ ಫೌಂಡೇಷನ್ ಹೆಸರಿನಲ್ಲಿ NGO ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ನನ್ನೊಂದಿಗೆ ಸಲುಗೆ ಬೆಳೆಸಿದ್ದರು. ಕಳೆದ ಒಂದೂವರೆ ವರ್ಷದ ಸ್ನೇಹದಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲೂ ನಾವು ಸೇರಿದ್ದೇವೆ. ಆದರೆ ಈಗ ಕೆಲವು ವಿಡಿಯೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಬಾಯ್​ ಮುಚ್ಕೊಂಡು ಕೆಲಸ ಮಾಡಿ ಎಂದಿದ್ದ ಡಿಕೆಶಿಗೆ ಜಮೀರ್​ ಕೌಂಟರ್​ ಅಟ್ಯಾಕ್​​..!

ನಾನು ಹಾಗು ಇತರೆ ಮೂವರು ಬಾಂಬೆಗೂ ಹೋಗಿದ್ದೆವು..!

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡುತ್ತಿದ್ದ ಬೆಳಗಾವಿಯಲ್ಲಿ ಕಾಣಿಸಿಕೊಂಡ ನವ್ಯಶ್ರೀ, ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ಅದು ಅಲ್ಲದೆ ನಾವು ಬಾಂಬೆಯಲ್ಲಿ ಬೀಡು ಬಿಟ್ಟಿದ್ದ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಹೋಟೆಲ್‌ಗೆ ನಾನು ಮತ್ತು ಮೂವರು ಯುವತಿಯರು ಹೋಗಿದ್ದೆವು. ಅಲ್ಲಿ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ಕಂಪ್ಲೀಟ್ ಮಾಡಿದ್ದೇವೆ. ಎಲ್ಲಾ ಶಾಸಕರ ಚಲನವಲನಗಳನ್ನು ಗಮನಿಸಿ, ನಾಯಕರಿಗೆ ಸಂದೇಶ ಕಳುಹಿಸಲಾಗುವುದು. ಆದರೆ ಅಲ್ಲಿಗೆ ಕಳುಹಿಸಿದ್ದು ಯಾರು ಎನ್ನುವುದನ್ನು ಮಾತ್ರ ಮರೆ ಮಾಚಿದ್ದಾರೆ. ಆದರೆ ಚನ್ನಪಟ್ಟಣದ ಮಹಾನಾಯಕ ಈ ವೀಡಿಯೋ ಹಿಂದಿದೆ ಎನ್ನುವ ಮೂಲಕ ಸಣ್ಣ ಸುಳಿವು ಕೊಟ್ಟಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ದತೆ ಇದೆ. ಇನ್ನು ಅತೃಪ್ತ ಶಾಸಕರು ಯಾರೂ ಆಶ್ಲೀಯ ವೀಡಿಯೋ ಬಿಡುಗಡೆ ಮಾಡದಂತೆ ತಡೆಯಾಜ್ಞೆ ತಂದಿರುವುದರ ಹಿಂದೆ ಇದೇ ಮಹಾನಾಯಕ ಇದ್ದಾರಾ..? ಅನ್ನೋ ಬಗ್ಗೆಯೂ ಚರ್ಚೆ ಶುರುವಾಗಿದೆ.

ಇಂದು ಬಯಲಾಗುತ್ತಾ ಬಾಂಬೆ ಸೀಕ್ರೆಟ್ ಮ್ಯಾಟರ್..!?

ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರು ಬಾಂಬೆಯಲ್ಲಿ ವಾಸ್ತವ್ಯ ಹೂಡಿದ್ದರು. ಆ ದಿನಗಳ ಬಗ್ಗೆ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಬಾಂಬೆ ಡೇಸ್ ಪುಸ್ತಕ ಬರೆಯುವುದಾಗಿ ಹೇಳಿದ್ದರು. ಆದರೆ ಪುಸ್ತಕ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಬಾಂಬೆಯಲ್ಲಿ ಶಾಸಕರು ವಾಸ್ತವ ಹೂಡಿದ್ದ ಹೋಟೆಲ್‌ನಲ್ಲಿ ನಾನು ಮತ್ತು ಇತರೆ ಮೂವರು ಹೋಗಿದ್ದೆವು. ಸೀಕ್ರೆಟ್ ಟಾಸ್ಕ್ ಕೊಡಲಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇವೆ ಎಂದು ನವ್ಯಶ್ರೀ ರಾವ್ ಹೇಳಿರುವ ಹೇಳಿಕೆ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ನವ್ಯಶ್ರೀ ವಿರುದ್ಧ FIR ಆಗಿದ್ದು ಸೋಮವಾರ ಅಂದರೆ ಇಂದು ವಿಚಾರಣೆಗ ಬರುವಂತೆ ನೋಟಿಸ್ ನೀಡಲಾಗಿದೆ. ಈ ನಡುವೆ ರಾಜಕುಮಾರ್ ಟಾಕಳೆ ವಿರುದ್ಧವೂ ಪ್ರತಿ ದೂರು ದಾಖಲಾಗಿದೆ. ನವ್ಯಶ್ರೀ ವಿಚಾರಣೆ ಮುಗಿಸಿ ಬಂದು ಮಹಾನಾಯಕ ಹಾಗು ಬಾಂಬೆ ಸೀಕ್ರೆಟ್ ಬಿಚ್ಚಿಟ್ಟರೆ ಸಾಕಷ್ಟು ಸಚಿವರ ಕುತ್ತಿಗೆಗೆ ಬರುವುದು‌ ಖಚಿತ ಎನ್ನಲಾಗ್ತಿದೆ.

Related Posts

Don't Miss it !