ಕಾವಿಯೊಳಗೆ ಕಾಮದ ಅಟ್ಟಹಾಸ.. ಮಹಿಳಾ ಸನ್ಯಾಸಿನಿ ಅನಾಚಾರ..! ಭಕ್ತನ ಹೊಲದಲ್ಲಿ ಚೆಲ್ಲಾಟ..

ರಾಜ್ಯದಲ್ಲಿ ಸ್ವಾಮೀಜಿಗಳು ಜನರಿಗೆ ಮಾರ್ಗದರ್ಶಕರು ಆಗುವ ಬದಲು ತಾವೇ ಹಾದಿ ತಪ್ಪಿದ್ದೇವೆ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಚಿತ್ರದುರ್ಗದ ಮುರುಘಾ ಶ್ರೀಗಳು ಕಚ್ಚೆ ಹರುಕ ಎನ್ನುವ ಕಾರಣಕ್ಕೆ ಜೈಲು ಪಾಲಾದ ಬಳಿಕ ಸ್ವಾಮೀಜಿಗಳು ಕಾಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿಲ್ಲ ಎಂದು ಮಹಿಳೆಯರಿಬ್ಬರು ಮಾತನಾಡಿದ್ದರು. ಇದೀಗ ಆ ಮಹಿಳೆಯರು ಮಾತನಾಡಿದ್ದು ಎಲ್ಲವೂ ಸತ್ಯ ಎನ್ನುವಂತೆ ಒಂದೊಂದೇ ಪ್ರಕರಣಗಳು ಸಾಬೀತು ಮಾಡುತ್ತಿದೆ. ಸ್ವಾಮೀಜಿಗಳ ಕಾಮಪುರಾಣದ ಬಳಿಕ ಸ್ತ್ರೀ ಸ್ವಾಮೀಜಿ ಎನಿಸಿಕೊಂಡವರ ವೀಡಿಯೋ ಕೂಡ ವೈರಲ್​ ಆಗ್ತಿರೋದು ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ.

ಹೊಲದಲ್ಲಿ ಹೊಂದಾದ ಕಾವಿ ಕಾಮಿ, ಖಾದಿ ಕಾಮಿ..!!

ವಿಜಯಪುರ ‌ಜಿಲ್ಲೆ ಇಂಡಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ರಮೇಶ ಕನಮಡಿ ಜೊತೆಗೆ ಸರಸ ಸಲ್ಲಾಪ ಮಾಡಿರುವ ವೀಡಿಯೋ ವೈರಲ್​ ಆಗಿದೆ. ಮಠ ಒಂದರ ಪೀಠಾಧಿಪತಿ ಆಗಿರೋ ವನಶ್ರೀ ಮಾತಾ ಅವರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಣದಲ್ಲಿ ಹರಿದಾಡ್ತಿದ್ದ ಹಾಗೆ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ರಮೇಶ್​ ಕನಮಡಿ ಹಾಗು ಮಾತೆ ವನಶ್ರೀ ಕೂಡ ಮೊಬೈಲ್​ ಸ್ವಿಚ್​​ ಆಫ್​ ಮಾಡಿಕೊಂಡು ಕಣ್ಮರೆ ಆಗಿದ್ದಾರೆ. ಆದ್ರೆ ಈ ಬಗ್ಗೆ ಎಲ್ಲಿಯೂ ದೂರು ದಾಖಲಾಗಿಲ್ಲ ಅನ್ನೋದು ಸತ್ಯ. ಆದರೂ ಭಕ್ತರು ಈ ವೀಡಿಯೋ ನೋಡಿ ಗಾಬರಿ ಆಗಿದ್ದಾರೆ.

ಪ್ರೇಯಸಿ ಪ್ರೇಮಿಗೆ ವೀಡಿಯೋ ಕಳಿಸಿದ್ರೆ, ಪ್ರೇಮಿ ಊರಿಗೆ ಹಂಚಿದ..!!

ಮಾಜಿ‌ ತಾಲೂಕು ಪಂಚಾಯತಿ ಸದಸ್ಯ ಹಾಗೂ ಮಠದ ಪೀಠಾಧಿಪತಿ ಆಗಿರೋ ಮಾತಾಳ ಖಾಸಗಿ ವಿಡಿಯೋ ರೆಕಾರ್ಡ್​ ಆಗಿರುವುದು ಸ್ವತಃ ಮಾತಾಳ ಮೊಬೈಲ್​ನಲ್ಲಿ ಅನ್ನೋದು ದುರಂತ. ತನ್ನ ಸರಸ ಸಲ್ಲಾಪದ ದೃಶ್ಯಗಗಳನ್ನು ತಾನೇ ರೆಕಾರ್ಡ್ ಮಾಡಿದ್ದ ವನಶ್ರೀ ಮಾತಾ, ತನ್ನ ಗೆಳಯನ ಮೊಬೈಲ್‌ಗೆ ಕಳುಹಿಸಿದ್ದಳು. ಮಾಡಿದ ಹಲ್ಕಟ್ ಕೆಲಸವನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಗೆಳಯನಿಗೆ ಕಳುಹಿಸಿದ್ದಳು. ಆದರೆ ಆ ವೀಡಿಯೋವನ್ನು ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಬೇರೆಯವರಿಗೆ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾನೆ.

ಸರಸದ ಗಳಿಗೆ ಮೆಲುಕು ಹಾಕಲು ವೀಡಿಯೋ ರೆಕಾರ್ಡ್..!!

ರಮೇಶ್ ಕನಮಡಿ ಅವರ ಹೊಲದಲ್ಲಿ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದಿದೆ. ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಅಕ್ಕಮಹಾದೇವಿ ಮಠದ ಪೀಠಾಧಿಪತಿ ಆಗಿರುವ ವನಶ್ರೀ ಮಾತಾ, ಕಳೆದ ವರ್ಷ ಮಿರಗಿ ಗ್ರಾಮಕ್ಕೆ ಪ್ರವಚನ ಹೇಳಲು ಬಂದಿದ್ದಳು ವನಶ್ರೀ ಮಾತಾ. ಆ ವೇಳೆ ರಮೇಶ ಕನಮಡಿ ಹಾಗೂ ವನಶ್ರೀ ಮಾತಾ ಪರಿಚಯ ಆತ್ಮೀಯತೆಗೆ ತಿರುಗಿತ್ತು. ಈ ಬಾರಿ ನವರಾತ್ರಿ ಪೂಜೆಗೆ ವನಶ್ರೀ ಮಾತಾಳನ್ನು ಮನೆಗೆ ಕರೆಸಿಕೊಂಡಿದ್ದ ರಮೇಶ ಕನಮಡಿ, ಬರೋಬ್ಬರಿ ಒಂಭತ್ತು ದಿನಗಳ ಕಾಲ ಮನೆಯಲ್ಲಿಯೇ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಜಮೀನು ಕಡೆಗೆ ವಿಹಾರ ಹೋಗಿದ್ದಾಗ ಇಬ್ಬರು ರಾಸಲೀಲೆ ಆಡಿದ್ದಾರೆ. ಕಾವಿಯುಟ್ಟು ತೆವಲು ತೀರಿಸಿಕೊಂಡ ವನಶ್ರೀ, ಚಕ್ಕಂದದ ವೀಡಿಯೋ ಮಾಡಿಕೊಂಡು ಮಜಾ ತೆಗೆದುಕೊಳ್ಳಲು ಹೋಗಿ ಮಾನ ಹರಾಜು ಮಾಡಿಕೊಂಡಿದ್ದಾಳೆ.

Related Posts

Don't Miss it !