ಪಿಯುಸಿಯಲ್ಲಿ ಶುರುವಾದ ಪ್ರೇಮ.. ಎರಡು ಮಕ್ಕಳಾದರೂ ನಿಲ್ಲಲಿಲ್ಲ..!!

ಕಾಲೇಜು ಓದುವಾಗ ಹುಡುಗ ಹುಡುಗಿಯರು ಪ್ರೇಮಪಾಶಕ್ಕೆ ಸಿಲುಕುವುದು ಸಾಮಾನ್ಯ ಸಂಗತಿ. ಅಪ್ರಾಪ್ತ ವಯಸ್ಸಿನಲ್ಲಿ ಸೃಷ್ಟಿಯಾದ ಪ್ರೇಮ ಎನಿಸಿದರೂ ಆ ಬಳಿಕ ಬದುಕು ಸರಿದಾರಿಗೆ ವಾಪಸ್​ ಕರೆ ತರುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಪ್ರೇಮಪಾಶದಲ್ಲಿ ಜೀವನದ ಹಾದಿ ತಪ್ಪಿ ಅನಾಹುತಗಳಿಗೂ ಎಡೆಮಾಡಿಕೊಡುವುದು ಉಂಟು. ಪ್ರೀತಿ ಪ್ರೇಮ ಎನ್ನುವುದು ಕೇವಲ ಭ್ರಮೆ ಎನ್ನಲಾಗುತ್ತದೆ. ಇದಕ್ಕೆ ಕಾರಣ ಕೆಲವೇ ದಿನಗಳಲ್ಲಿ ಪ್ರೇಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕೆಲವೇ ಕೆಲವು ಜನರ ಪ್ರೀತಿ ಮಾತ್ರ ವಿವಾಹ ಬಂಧನದ ತನಕ ಬರುತ್ತದೆ. ಆ ಪ್ರೇಮ ಪ್ರಕರಣವೂ ಕೆಲವೊಮ್ಮೆ ಬದುಕಿನ ಪಯಣ ದಾಟಲಾಗದೆ ಅರ್ಧದಲ್ಲೇ ತಮ್ಮ ಬಾಳ ಪಯಣ ಅಂತ್ಯ ಮಾಡಿಕೊಳ್ಳುತ್ತಾರೆ. ಈ ನಿಜವಾದ ಸ್ಟೋರಿ ಕೂಡ ಪಿಯುಸಿಯಲ್ಲಿ ಆರಂಭವಾಗಿ ಎರಡು ಮಕ್ಕಳು ಆದ್ಮೇಲೂ ಪ್ರೀತಿ ಮಾತ್ರ ಸತ್ತಿರಲಿಲ್ಲ.

ಕದ್ದು ಮುಚ್ಚಿ ಪ್ರೀತಿಯಾಟ, ಗಂಡನಿಗೆ ಗೊತ್ತಾಯ್ತು..!!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ಮಕ್ಕಳ ತಾಯಿ ಆಗಿದ್ದರೂ ತನ್ನ ಹಳೇ ಪ್ರೇಮಿಯನ್ನು ಬಿಟ್ಟಿರಲಾದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ನಂಜನಗೂಡು ತಾಲೂಕಿನ ಮಸಗೆ ಗ್ರಾಮದ ಯುವತಿ ಗೊಂತ್ತಗಾಲ ಗ್ರಾಮದ ಯುವಕ ಮಹೇಶ್ ಕುಮಾರ್ ಎಂಬಾತನನ್ನು ಪ್ರೀತಿಸಿದ್ದಳು. ಈ ವಿಚಾರ ತಿಳಿಯುತ್ತಿದ್ದ ಹಾಗೆ ಮಗಳಿಗೆ ಮದುವೆ ನಿಗದಿ ಮಾಡಿದ ಪೋಷಕರು ಹಳ್ಳಿದಿಡ್ಡಿ ಗ್ರಾಮದ ಯುವಕನಿಗೆ ಕೊಟ್ಟು ಮದುವೆ ಮಾಡಿಕೊಟ್ಟರು. ಆ ಮದುವೆಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ತಾನು ಪಿಯುಸಿಯಲ್ಲಿ ಪ್ರೀತಿ ಮಾಡುತ್ತಿದ್ದ ಸಾಕ್ಷಿಯಾಗಿ ತನ್ನ ಗಂಡನ ಮನೆಗೆ ಪ್ರೇಮಿಯನ್ನೇ ಕರೆಸಿಕೊಳ್ಳುತ್ತಿದ್ದಳು. ಇತ್ತೀಚಿಗೆ ಈ ವಿಚಾರ ಗಂಡನ ಮನಸಿಗೆ ಮುಟ್ಟಿತ್ತು. ಆಗಲೇ ಗಂಡನು ತನ್ನ ಊರಿನ ಯುವಕರಿಗೆ ಸುದ್ದಿ ಮುಟ್ಟಿಸಿದ್ದ. ಹೆಂಡತಿಗೆ ಬಿಸಿ ಮುಟ್ಟಿಸಿ ಫೋನ್​ ಮಾಡಿಸಿದ್ದರು.

ಇದನ್ನೂ ಓದಿ: ಮಡಿಕೇರಿಯ ಕತ್ತಲೆ ಕೋಣೆಯಿಂದ ಹೊರಕ್ಕೆ ಬಂದಳು 27 ವರ್ಷದ ಪದವಿ ವಿದ್ಯಾರ್ಥಿನಿ..!

ಇಡೀ ಗ್ರಾಮಸ್ಥರೇ ಅಖಾಡಕ್ಕಿಳಿದು ತದುಕಿದ್ರು..!!

ತನ್ನ ಪ್ರೇಯಸಿ ಫೋನ್​ ಮಾಡುತ್ತಿದ್ದ ಹಾಗೆ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮಕ್ಕೆ ಬೈಕ್​ ಏರಿ ಬಂದ ಮಹೇಶ್​​ ಕುಮಾರ್​​ಗೆ ಇಡೀ ಗ್ರಾಮಸ್ಥರು ಮೊದಲೇ ಬೀಸಿದ್ದ ಬಲೆಯಲ್ಲಿ ಕೆಡವಿಕೊಂಡರು. ಎರಡು ಮಕ್ಕಳ ತಾಯಿಯಾಗಿದ್ದರೂ ಹಳೇ ಲವ್ವರ್‌ ಜೊತೆ ಸಂಪರ್ಕದಲ್ಲಿ ಇದ್ದಿದ್ದ ಮಹೇಶ್​ ಕುಮಾರ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಪ್ರಿಯತಮೆಯ ಮೂಲಕವೇ ಪ್ರಿಯತಮನನ್ನು ಗ್ರಾಮಕ್ಕೆ ಕರೆಸಿಕೊಂಡು ಥಳಿಸಿದ ಬಳಿಕ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರೂ ಪ್ರೇಮಿಗಳು ಮದುವೆ ಆಗುವ ನಿರ್ಧಾರ ಮಾಡಿದ್ದಾಗ ತಪ್ಪಿಸಿದ ಕುಟುಂಬಸ್ಥರ ನಿರ್ಧಾರವೇ ತಪ್ಪಾಗಿತ್ತೋ..? ಅಥವಾ ಪ್ರೀತಿಯನ್ನು ಮರೆಯದೆ ಮುಂದುವರಿಸಿದ್ದು ತಪ್ಪೋ ಎನ್ನುವಂತಾಗಿದೆ.

ಇದನ್ನೂ ಓದಿ: Shapoorji Pallonji : ಬಾಂಬೆ ಮೂಲದ ಬಿಲ್ಡರ್​​ ಕೈಗೆ ಸಿಕ್ಕ ಕನ್ನಡಿಗರ ಆರ್ತನಾದ..!

ಪ್ರೀತಿ ನಶೆಯಲ್ಲಿ ಸಿಕ್ಕವರ ಸಂಸಾರ ಸರಿಯಾಗುತ್ತಾ..?

ಗಂಡ ಹಾಗೂ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಪ್ರೇಮಿ ಮಹೇಶ್​​ ಕುಮಾರ್​ಗೆ ಫೋನ್​ ಮಾಡಿರುವ ಮಹಿಳೆಗೆ ಇದೀಗ ಆತನ ಮೇಲೆ ಮತ್ತಷ್ಟು ಪ್ರೇಮ ಆಗಿದ್ದರೂ ಅಚ್ಚರಿಯಿಲ್ಲ. ಪೊಲೀಸರಿಗೆ ಯಾವುದೇ ದೂರು ಸದ್ಯಕ್ಕೆ ದಾಖಲಾಗಿಲ್ಲ. ಆದರೆ ಆಸ್ಪತ್ರೆಯಿಂದ ದೂರು ದಾಖಲಾಗುತ್ತದೆ. ಆ ಬಳಿಕ ಪೊಲೀಸರು ವಿಚಾರಣೆ ನಡೆಸಿ ಗ್ರಾಮಸ್ಥರ ಮೇಲೆ ಪರಿಣಾಮ ಬೀರುವುದು ಶತಸಿದ್ಧ. ಆದರೆ ಮಹಿಳೆ ಎರಡು ಮಕ್ಕಳ ತಾಯಿ ಆಗಿದ್ದರೂ ಈತನ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದು ತಪ್ಪಿರಬಹುದು. ಆದರೆ ಆಕೆಯ ಪ್ರೇಮಿಯ ಮೇಲೆ ಹಲ್ಲೆಯಾಗಿರುವುದು ಆಕೆಯ ಮನೆ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿರುವ ಸಾಧ್ಯತೆಯಿದೆ. ಮತ್ತೆ ಗಂಡನ ಜೊತೆಗಿನ ಸಂಸಾರ ಸರಿಯಾಗುತ್ತಾ ಎನ್ನುವುದೇ ಈಗ ಸೃಷ್ಟಿಯಾಗಿರುವ ಪ್ರಶ್ನೆ.

Related Posts

Don't Miss it !