ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್​ಗೆ​ ಅವಕಾಶ ಸರಿಯೋ..? ತಪ್ಪೋ..?

ಉಡುಪಿಯಲ್ಲಿ ಹಿಜಾಬ್​​ ಧರಿಸಿ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿರುವ ಘಟನೆಗೆ ಹಿಂದೂ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಒಂದು ತಿಂಗಳಿಂದ ಹಿಜಾಬ್ ವಿಚಾರ ವಿವಾದ ಹುಟ್ಟು ಹಾಕಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಆ ಕಾಲೇಜಿನಲ್ಲಿ 1985 ರಿಂದಲೇ ಸಮವಸ್ತ್ರದ ಬಗ್ಗೆ ನಿರ್ಧಾರ ಮಾಡಿದೆ. ಆ ಶಾಲೆಗೆ ಸೇರುವ ಮಗು ಹಾಗೂ ಪೋಷಕರಿಗೆ ಇಬ್ಬರಿಗೂ ಸಮವಸ್ತ್ರದ ಬಗ್ಗೆ ಗೊತ್ತಿತ್ತು, ಹಾಗಿದ್ದರೂ ಬೇಕೆಂದೇ ವಿವಾದ ಸೃಷ್ಟಿಸಿದ್ದಾರೆ. ಇನ್ನೊಂದು ವಿಚಾರ ಎಂದರೆ ಊಗ ವಿರೋಧ ಮಾಡುತ್ತಿರುವ ಮುಸ್ಲಿಂ ಸಮುದಾಯದ ಮಕ್ಕಳೂ ಕೂಡ ಕಳೆದ ಒಂದೂವರೆ ವರ್ಷದ ಹಿಂದಿನಿಂದ ಕಳೆದ ತಿಂಗಳ ತನಕ ಸಮವಸ್ತ್ರ ಧರಿಸುತ್ತಿದ್ದರು. ಯಾರದ್ದೋ ಪ್ರಚೋದನೆಯಿಂದ ಹೀಗೆ ಮಾಡಿದ್ದಾರೆ. ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದೇನೆ. ಮುಂದೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದಿದ್ದಾರೆ. ಅದೇ ಸಮಯದಲ್ಲಿ ಕೋಲಾರದಲ್ಲೂ ವಿವಾದ ಸೃಷ್ಠಿಯಾಗಿದೆ.

ಶಾಲೆಯಲ್ಲೇ ಮುಸ್ಲಿಂ ಮಕ್ಕಳಿಂದ ನಡೆದಿದೆ ನಮಾಜ್​..!

ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಸೋಮೇಶ್ವರ ಪಾಳ್ಯದ ಬಳೇಚಂಗಪ್ಪ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಇಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದ ಮಕ್ಕಳ ಓದುವುದಕ್ಕೆ ಬರುತ್ತಾರೆ. ಆದರೆ ಪ್ರತಿ ಶುಕ್ರವಾರ ನಮಾಜ್​ ಮಾಡುವುದಕ್ಕೆ ತರಗತಿಯಿಂದ ಹೊರಕ್ಕೆ ಹೋಗುತ್ತಿದ್ದರು. ಶಾಲೆಗೆ ಬಂದ ಮಕ್ಕಳು ಮತ್ತೆ ಹೊರಕ್ಕೆ ಹೋದರೆ ಬರುವುದು ತಡವಾಗಬಹುದು ಎನ್ನುವ ಕಾರಣಕ್ಕೆ ಕಳುಹಿಸುತ್ತಿರಲಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯದ ಮಕ್ಕಳು ಶುಕ್ರವಾರ ತರಗತಿಗೇ ಬರುತ್ತಿರಲಿಲ್ಲ. ಇದನ್ನು ಗಮನಿಸಿದ ಮುಖ್ಯ ಶಿಕ್ಷಕಿ ಉಮಾದೇವಿ, ಶಾಲೆಯಲ್ಲೇ ಒಂದು ಕೊಠಡಿಯಲ್ಲಿ ನಮಾಜ್​ ಮಾಡಿ ಮುಗಿಸಿ ಎಂದು ಸಲಹೆ ನೀಡಿದ್ದರು. ಅಂದಿನಿಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಖಾಲಿ ಕೊಠಡಿಯಲ್ಲಿ ನಮಾಜ್​ ಮಾಡುತ್ತಿದ್ದರು. ಶಾಲಾ ಶಿಕ್ಷಕರ ನಿರ್ಧಾರಕ್ಕೆ ಸ್ಥಳೀಯ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಈ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ಅಕ್ಕ ಪ್ರೀತಿಗೆ ಒಪ್ಪಲಿಲ್ಲಎಂದು ತಮ್ಮನನ್ನು ಕಿಡ್ನ್ಯಾಪ್​ ಮಾಡಿದ ಪಾಗಲ್​ ಪ್ರೇಮಿ..!!

ಶಿಕ್ಷಣ ಸಚಿವರು ಸಿಡಿಮಿಡಿ, ಶಿಕ್ಷಕಿಗೆ ಅಮಾನತು ಶಿಕ್ಷೆ..!

ಕೋಲಾರದ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್​​ಗೆ ಅವಕಾಶ ಕೊಟ್ಟ ವಿಚಾರದ ಬಗ್ಗೆ ತುಮಕೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಯಾವುದೇ ಶಾಲೆಯಲ್ಲಿ ನಡೆಯ ಬಾರದಂತದ್ದು ಅಲ್ಲಿ ನಡೆದಿದೆ. ನಿನ್ನೆಯೇ ಅಲ್ಲಿನ ಡಿಡಿಪಿಐಗೆ ಕರೆ ಮಾಡಿ, ಎಲ್ಲಾ ರಿಪೋರ್ಟ್ ತರಿಸಿಕೊಂಡು, ಕಾರಣ ಆದವರ ಮೇಲೆ ಸೂಕ್ತ ಕ್ರಮವನ್ನು ತಕ್ಷಣ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಇನ್ನೂ ಯಾವುದೇ ಶಾಲೆಯ ವಾತಾವರಣದಲ್ಲಿ ನಮಾಜ್​ ಮಾಡೋಕೆ ಅವಕಾಶ ಇಲ್ಲ. ಅದರಲ್ಲ್ಲೂ ಕ್ಲಾಸ್ ರೂಮ್ ಒಳಗಡೆ..! ಖಂಡಿತ ಹೀಗೆ ಮಾಡಿರೋದು ತಪ್ಪು ಎಂದಿದ್ದರು. ಶಿಕ್ಷಣ ಸಚಿವರು ಹೀಗೆ ಹೇಳ್ತಿದ್ದ ಹಾಗೆ ಅತ್ತ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ, ನಮಾಜ್​ ಮಾಡಲು ಅವಕಾಶ ಕೊಟ್ಟ ಶಾಲಾ ಮುಖ್ಯೋಪಧ್ಯಾಯಿನಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲಿಗೆ ದ್ವೇಷದ ವಿಷ ಬೀಜ ಕೋಲಾರದ ಬರಡು ಮಣ್ಣಿಗೂ ಬಿದ್ದಂತಾಗಿದೆ.

ಇದನ್ನೂ ಓದಿ: ಪವರ್ ಸ್ಟಾರ್​ ಅಪ್ಪು ಸಾವಿನ ಬಳಿಕ ಕೊನೆ ಆಸೆ ಈಡೇರಿಸಿದ ಸಹೋದರರು..!

ಸಮವಸ್ತ್ರದ ವಿಚಾರದಲ್ಲಿ ಸರಿ, ನಮಾಜ್​ ವಿಷಯದಲ್ಲಿ ತಪ್ಪು..!

ಉಡುಪಿಯಲ್ಲಿ ವಿವಾದ ಸೃಷ್ಟಿಸಿರುವ ಹಿಜಾಬ್​​ ವಿವಾರ ರಾಜಕೀಯ ಕಾರಣಕ್ಕೆ ಸೃಷ್ಟಿಯಾಗಿರುವ ಗಿಮಿಕ್​ ಎನ್ನುವುದನ್ನು ಎಲ್ಲರೂ ಒಪ್ಪಲೇ ಬೇಕು. ಸಮವಸ್ತ್ರ ಧರಿಸಿಕೊಂಡು ಮಕ್ಕಳು ಪಾಠ ಕೇಳಬೇಕು ಎಂದರೆ ಕೇಳಬೇಕು. ಅದರಲ್ಲಿ ಎರಡು ಮಾತಿಲ್ಲ. ಶಾಲಾ ಆವರಣದಲ್ಲಿ ಮಕ್ಕಳು ಎಲ್ಲರೂ ಸಮಾನರು ಎನ್ನುವ ದೃಷ್ಟಿಯಿಂದಲೇ ಸಮವಸ್ತ್ರ ಮಾಡುವುದು. ಇದನ್ನು ಶಿಕ್ಷಣ ಸಚಿವರು ಹೇಳಿದ್ದಾರೆ ಮುಸ್ಲಿಂ ಸಮುದಾಯದ ಮಕ್ಕಳೂ ಒಪ್ಪಿಕೊಳ್ಳಳೇಬೇಕು. ಆದರೆ ಕೋಲಾರದ ಶಾಲೆಯಲ್ಲಿ ಮಕ್ಕಳಿಗೆ ನಮಾಜ್​ ಮಾಡಲು ಅವಕಾಶ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅಮಾನತು ಮಾಡುವುದು, ಶಾಲಾ ಆವರಣದಲ್ಲಿ ಅದೂ ಕೂಡ ಶಾಲಾ ಕೊಠಡಿಯಲ್ಲಿ ಮಾಡಬಾರದ ಕೆಲಸ ಮಾಡಿದ್ದಾರೆ ಎಂದು ಶಿಕ್ಷಣ ಸಚಿವರು ಹೇಳುವುದು ಅಕ್ಷಮ್ಯವಲ್ಲವೇ..!? ಪ್ರತಿ ಶುಕ್ರವಾರ ಶಾಲೆಗಳಲ್ಲಿ ಶಾರದ ಪೂಜೆ ಮಾಡಲು ಕಾನೂನು ಒಪ್ಪಿಗೆ ಇದೆ ಎಂದಾದರೆ, ಮುಸ್ಲಿಂ ತನ್ನ ಧರ್ಮವನ್ನು, ಕ್ರೈಸ್ತರ ಮಕ್ಕಳ ತನ್ನದೇ ಆದ ಧರ್ಮವನ್ನು ಅನುಸರಿಸುವುದರಲ್ಲಿ ತಪ್ಪೇನಿದೆ..? ಇದೆಲ್ಲಾ ಧರ್ಮದ ಸಂಘರ್ಷ ಎದುರಾಗುವುದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರವೇ ಆಗುವುದು ಅನುಮಾನಕ್ಕೆ ಎಡೆ ಮಾಡುವುದಿಲ್ಲವೇ..?

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !