ನಿತ್ಯಾನಂದ ಸ್ವಾಮೀಜಿಯನ್ನು ಮದ್ವೆ ಆಗ್ತೇನೆ..! ಹೀಗೆ ಹೇಳಿದ್ಯಾಕೆ ‘ಜೇಮ್ಸ್​’ ನಟಿ..!?

ನಟ, ನಟಿಯರು ಮದುವೆ ಆಗ್ತಾರೆ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಇನ್ನೂ ಮಾಧ್ಯಮಗಳಿಗೂ ಹಬ್ಬದ ವಾತಾವರಣ. ಆದರೆ ಇದೀಗ ನಿತ್ಯಾನಂದ ಸ್ವಾಮೀಜಿ ಸನ್ಯಾಸತ್ವವನ್ನು ಕೆಡಿಸಲು ಇಚ್ಚಿಸಿದ್ದಾರಂತೆ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​. ತಮಿಳುನಾಡಿನ ಪ್ರಿಯಾ ಆನಂದ್ ಇತ್ತೀಚಿಗೆ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನ ಇದೀಗ ಅಚ್ಚರಿಗೆ ಕಾರಣವಾಗಿದೆ.​ ಮದುವೆ ಬಗ್ಗೆ ರ್ಯಾಪಿಡ್​ ರೌಂಡ್​ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಆ್ಯಂಕರ್​, ಮದುವೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮದುವೆ ಆಗಬೇಕಿರುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಪ್ರಿಯಾ ಆನಂದ್​ ಮನಬಿಚ್ಚಿ ಮಾತನಾಡಿದ್ದಾರೆ. ತಮಿಳುನಾಡಿನ ಸುದ್ದಿ ವಾಹಿನಿಗಳಿಂದ ಹಿಡಿದು ಇದೀಗ ಎಲ್ಲಾ ಕಡೆಯಲ್ಲೂ ಪ್ರಿಯಾ ಆನಂದ್​ ಅವರ ಮದುವೆಯದ್ದೇ ಸುದ್ದಿ.

ಕನ್ನಡ, ತಮಿಳ್​, ತೆಲುಗಿನಲ್ಲಿ ನಟಿಸಿರುವ ನಟಿ ಪ್ರಿಯಾ ಆನಂದ್​..!

ಕನ್ನಡದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೊತೆಗೆ ರಾಜಕುಮಾರ ಹಾಗು ಜೇಮ್ಸ್​ನಲ್ಲಿ ನಟನೆ ಮಾಡಿದ್ದ ಪ್ರಿಯಾ ಆನಂದ್​, ತಮಿಳು ಚಿತ್ರರಂಗದಲ್ಲಿ ಶೇಖರ್ ಕಮ್ಮುಲ ನಿರ್ದೇಶನದ ಲೀಡರ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ರಾಮ್ ಪೋತಿನೇನಿ ಕಾಂಬಿನೇಷನ್​ ರಾಮ ರಾಮ ಕೃಷ್ಣ ಕೃಷ್ಣ, ಕೋ ಯಡಿ ಕೋಟಿ ಚಿತ್ರಗಳಲ್ಲಿ ಪ್ರಿಯಾ ಆನಂದ್ ನಟಿಸಿದ್ದರೂ ಸಿನಿಮಾ ಗೆಲುವು ಕಂಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಇದೀಗ ವೆಬ್​ ಸೀರಿಸ್​ಗಳ ಕಡೆಗೂ ಕಾಲಿಟ್ಟಿರುವ ಪ್ರಿಯಾ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಈಕ್ವೆಡಾರ್​ನ ದ್ವೀಪದಲ್ಲಿ ತನ್ನದೇ ಹಿಂದೂ ದೇಶ ಕೈಲಾಶವನ್ನು ನಿರ್ಮಿಸಿಕೊಂಡು ಇರುವ ನಿತ್ಯಾನಂದ ಸ್ವಾಮೀಜಿಯನ್ನು ಮದುವೆ ಆಗುತ್ತೇನೆ ಎಂದಿರುವುದು ಅನುಮಾನಗಳಿಗೂ ಕಾರಣವಾಗಿದೆ.

ಇದನ್ನೂ ಓದಿ: ಬ್ಯಾಂಕ್​ ಉದ್ಯೋಗಿ ಕೊಂದಿದ್ದುಯಾಕೆ ? ಅಪಾರ್ಟ್​ಮೆಂಟ್​ ಸೆಕ್ಯುರಿಟಿ ಗಾರ್ಡ್ಸ್..?

ಪ್ರಚಾರಕ್ಕಾಗಿ ನಟಿ ಪ್ರಿಯಾ ಆನಂದ್​ ಹೀಗೆ ಹೇಳಿದ್ರಾ..?

ಮಾ ನೀಲ್ಲಾ ಟ್ಯಾಂಕ್​ ಅನ್ನೋ ವೆಬ್​ ಸೀರಿಸ್​ ಮುಂದಿನ ಶುಕ್ರವಾರ ರಿಲೀಸ್​ ಆಗ್ತಿದೆ. ಅದೇ ಕಾರಣದಿಂದ ಈ ರೀತಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಜುಲೈ 15ರಂದು ಜೀ5ನಲ್ಲಿ ರಿಲೀಸ್​ ಆಗ್ತಿರೋ ವೆಬ್​ ಸೀರಿಸ್​ನಲ್ಲಿ ಹೆಚ್ಚು ಜನರು ನೋಡುವಂತೆ ಮಾಡುವುದು ಈ ವಿವಾದ ಉದ್ದೇಶ ಎನ್ನಲಾಗ್ತಿದೆ. ಇನ್ನೂ ತಮಿಳಿನಿಲ್ಲಿ ಕೊಟ್ಟಿರೋ ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ ಆದರೆ ನಿತ್ಯಾನಂದನನ್ನು ಮದುವೆ ಆಗ್ತೇನೆ ಎಂದು ಹೇಳಿಲ್ಲ, ಸಿಕ್ಸ್​ ಪ್ಯಾಕ್​ ಇಲ್ಲದಿದ್ರೂ ಪರವಾಗಿಲ್ಲ, ತಮಿಳುನಾಡಿನ ಚೆನ್ನೈನಲ್ಲೇ ವಾಸ ಮಾಡ್ಬೇಕು, ಜಾತಿ ಧರ್ಮ ಯಾವುದೂ ನೋಡೋದಿಲ್ಲ ಅಂತಾ ತುಂಬಾ ಸರಳವಾಗಿಯೇ ಮಾತನಾಡಿದ್ದಾರೆ. ಆದರೆ ಕನ್ನಡ ಮಾಧ್ಯಮಗಳಿಗೆ ಮಾತನಾಡಿರುವ ನಟಿ ಪ್ರಿಯಾ ಆನಂದ್​, ನಾವು ಮಾತನಾಡುವ ಸಂದರ್ಭದಲ್ಲಿ ಆಗೊಂದು ಪ್ರಸಂಗ ಬಂದು ಹೋಗಿದ್ದು ಅಷ್ಟೆ, ಆ ರೀತಿಯ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Related Posts

Don't Miss it !