‘ಅಂಬಿ ಸ್ಮಾರಕದ ಮನವಿ ಪತ್ರ ಮುಖದ ಮೇಲೆ ಎಸೆದ ಕುಮಾರಸ್ವಾಮಿ’

ಮಂಡ್ಯ ರಾಜಕೀಯ ಈಗ ಅಂಬಿ ವಿಚಾರಕ್ಕೆ ತಿರುಗಿದೆ. ಸುಮಲತಾ ವಗ್ದಾಳಿಗೆ ತಿರುಗೇಟು ಕೊಟ್ಟಿದ್ದ ಕುಮಾರಸ್ವಾಮಿ, ನಾನು ಅಂಬರೀಶ್​ ಸ್ನೇಹಿತರು. ಅದೇ ಕಾರಣದಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ತಂದು ಅಂತಿಮ ದರ್ಶನದ ಬಳಿಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದೇನೆ. ನನಗೆ ಅಂಬರೀಶ್​ ಮೇಲೆ ಗೌರವ ಇದೆ ಎಂದು ಹೇಳಿದ್ದರು. ಇದೀಗ ಅಂಬರೀಷ್​ ಬಳಗ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದು, ಅಂಬರೀಶ್​ ಹೆಸರು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಅಂಬರೀಶ್ ಮೃತ ದೇಹದ ಮಂಡ್ಯಕ್ಕೆ ಹೋಗೋ ವಿಚಾರ ಅಲ್ಲಿ ಮಾತಾಡಲು ಸಾಧ್ಯವಾಗಿಲ್ಲ. ಸಿಎಂ ಹೇಳಿದಂತೆ ಮಾಡಿ ಅಂತ ಸುಮಲತಾ ಹೇಳಿದ್ರು. ಆದ್ರೆ ಅಭಿ ಮಂಡ್ಯಕ್ಕೆ ಹೋಗಬೇಕು ಅಂತ ಹೇಳಿದ್ರು. ಬಳಿಕ ಅಭಿ ಹೇಳಿದಂತೆ ಮಾಡಿ ಅಂತ ಸುಮಲತಾ ಹೇಳಿದ್ರು. ಅಂಬರೀಶ್ ದೇವ ಮಾನವ. ದೇವರೇ ಅಂಬರೀಶ್​ಗೆ ಎಲ್ಲವನ್ನು ಮಾಡಿಸಿದ. ನಾನು ಸಿಎಂ ಆಗದೇ ಹೋಗಿದ್ರೆ ಏನ್ ಆಗ್ತಿತ್ತು ಎಂದು ಕುಮಾರಸ್ವಾಮಿ ಹೇಳಿದ್ರು. ಅಂಬರೀಶ್​ಗೆ ಸಿಎಂ ಏನು ಮಾಡಬೇಕಾಗಿ ಇರಲಿಲ್ಲ. ಜನರೇ ಎಲ್ಲ ಮಾಡ್ತಿದ್ದರು. ಅವ್ರ ಸಾವು ಹೇಗೆ ಅಂತ ದೇವರು ಮೊದಲೇ ಬರೆದಿದ್ದ. ನಮ್ಮ ಕೈಯಲ್ಲಿ ಏನು ಇಲ್ಲ. ದೇವರು ಹೇಗೆ ಬೇಕು ಹಾಗೆ ಕರೆಸಿಕೊಂಡ ಎಂದಿದ್ದಾರೆ.

‘ನಿಮಗೆ ನೈತಿಕತೆ, ಸಂಸ್ಕಾರ ಇದ್ದರೆ ಅಂಬರೀಶ್ ಬಗ್ಗೆ ಮಾತಾಡೋದು ಬಿಡಿ’ ಎಂದಿರುವ ಸುಮಲತಾ ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿಲ್ಲ. ಯಡಿಯೂರಪ್ಪ ಸಹಿ ಮಾಡಿ ಕೆಲಸ ಪ್ರಾರಂಭ ಮಾಡಿದ್ರು. ಸ್ಮಾರಕ ಬಗ್ಗೆ ಮಾತಾಡಲು ದೊಡ್ಡಣ್ಣ, ಶಿವರಾಮ್ ಹೋದಾಗ ಇವ್ರು ಹೇಗೆ ಮಾತಾಡಿದ್ರು ಅಂತ ಅವ್ರನ್ನೆ ಕೇಳಿ, ಕುಮಾರಸ್ವಾಮಿ ಅವತ್ತೇ ವಿರೋಧ ಮಾಡಿದ್ರು. ಸ್ಮಾರಕ ಕೇಳಲು ಹೋದಾಗ ಮನವಿ ಪತ್ರವನ್ನು ಮುಖದ ಮೇಲೆ ಎಸೆದು ಹೋಗಿದ್ದು ಕುಮಾರಸ್ವಾಮಿ ಎಂದು ಟೀಕಿಸಿದ್ದಾರೆ. ಅಂಬರೀಶ್ ಸ್ಮಾರಕದಿಂದ ಕುಮಾರಸ್ವಾಮಿ ಕ್ರೆಡಿಟ್ ತೆಗೆದುಕೊಳ್ತಿದ್ದಾರೆ. ಯಾರೇ ಸಿಎಂ ಆಗಿದ್ರು ಅವತ್ತು ಸಹಕಾರ ಕೊಡ್ತಿದ್ದರು. ಕುಮಾರಸ್ವಾಮಿ ಪೇಪರ್ ಮುಖದ ಮೇಲೆ ಎಸೆದ್ರು ಎಂದು ನಟ ದೊಡ್ಡಣ್ಣ ಕಣ್ಣೀರು ಹಾಕಿದ್ರು ಎಂದು ಸುಮಲತಾ ಹೇಳಿದ್ದಾರೆ.

ಅಂಬರೀಶ್​ ಸ್ಮಾರಕ ವಿಚಾರದಲ್ಲಿ ನೀವು ಏನು ಕೆಲಸ ಮಾಡಿಲ್ಲ. ಅಂಬರೀಶ್ ಹೆಸರು ಹೇಳಿ ಯಾಕೆ ಅನುಕಂಪ ಗಿಟ್ಟಿಸುತ್ತೀರಾ..? ಯಾಕೆ ಕುಮಾರಸ್ವಾಮಿ ಹೀಗೆ ಆಟ ಆಡ್ತಿದ್ದೀರಾ..? ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅಂಬರೀಶ್ ಸ್ಮಾರಕ ನನ್ನಿಂದ ಆಯ್ತು ಅನ್ನೋ ವಿಚಾರ ಇರಲಿ, ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದಾರೆ. ಒಬ್ಬೊಬ್ಬ ಶಾಸಕರು ಒಂದೊಂದು ರೀತಿ ಮಾತಾಡ್ತೀರಿ, ಅಂಬರೀಶ್ ಕಾಲದಲ್ಲಿ ಅಕ್ರಮ ಆಗಿದ್ರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ನಟ ದೊಡ್ಡಣ್ಣ ಹೇಳಿದ್ದು

ಹಿರಿಯ ನಟ ದೊಡ್ಡಣ್ಣ ಮಾತನಾಡಿ ಅಂಬರೀಶ್ ಸ್ಮಾರಕ‌ ಮಾಡಿದ್ದು ಕುಮಾರಸ್ವಾಮಿ ಅಲ್ಲ. ಈಗಿನ ಮುಖ್ಯ ಮಂತ್ರಿ ಯಡಿಯೂರಪ್ಪ ಎಂದಿದ್ದಾರೆ. ಸಿನಿಮಾದವರ ಬಗ್ಗೆ ಕುಮಾರಸ್ವಾಮಿ ತುಂಬಾ ಕೀಳಾಗಿ ಮಾಡ್ತಾರೆ. ಕುಮಾರಸ್ವಾಮಿ ಯಾವ ನಟರಿಗೂ ಕಮ್ಮಿಯಿಲ್ಲ. ಯಾವ ಸಿನಿಮಾದವರನ್ನೂ ಕೆಟ್ಟದಾಗಿ‌ ಮಾತನಾಡಬೇಡಿ. ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೋಡೋಕೆ ಹೋಗಿದ್ದೆ. ‘ಪತ್ರವನ್ನು ಮುಖಕ್ಕೆ ಬಿಸಾಡಿದ್ದರು’. ಇವ್ನು ಏನ್ ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಎಂದು ಕುಮಾರಸ್ವಾಮಿ ಹೇಳಿದ್ರು ಎಂದಿದ್ದಾರೆ.

ನಟ ಶಿವರಾಂ ಹೇಳಿದ್ದು

ಅಂಬರೀಶ್ ಸ್ಮಾರಕ ಕೇಳಲು‌ ಹೋಗಿದ್ದಾಗ ಹೆಚ್​ಡಿಕೆ ಪೇಪರ್ ಎಸೆದಿದ್ದರು ಎಂಬ ಹೇಳಿಕೆ ಬಗ್ಗೆ ನಟ ಶಿವರಾಂ ಮಾತನಾಡಿ, ನಾನು ದೊಡ್ಡಣ್ಣ ಒಟ್ಟಿಗೆ ಅಂದಿನ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದೆವು. ಆದರೆ ಅವರು ಮತ್ತು ನಾನು ಬೇರೆ ಬೇರೆ ವಿಚಾರಕ್ಕೆ ಭೇಟಿ ಮಾಡಿದ್ದೆವು. ದೊಡ್ಡಣ್ಣ ಯಾವ ವಿಚಾರಕ್ಕೆ ಬಂದಿದ್ದರು‌ ಅನ್ನೋದು ಗೊತ್ತಿಲ್ಲ. ಅವರು ಮತ್ತು ನಾನು ಒಟ್ಟಿಗೆ ಒಂದೇ ಬಾಗಿಲಿನಲ್ಲಿ‌ ಹೋಗಲು ಸಾಧ್ಯವೇ? ಅವರ ದೇಹದ ಜೊತೆ ನಾನು ‌ಹೇಗೆ ಹೋಗಲು ಸಾಧ್ಯ ಎಂದಿರುವ ನಟ ಶಿವರಾಂ, ಸಿಎಂ ಆಗಿದ್ದ ಕುಮಾರಸ್ವಾಮಿಗೆ ದೊಡ್ಡಣ್ಣ ಯಾವುದೋ ಮನವಿ ನೀಡಿದ್ದರು. ಮನವಿಯನ್ನು ಕುಮಾರಸ್ವಾಮಿ ಪಕ್ಕದಲ್ಲಿ ಇಟ್ಟಿದ್ದರು. ಮನವಿಯಲ್ಲಿ ಯಾವ ವಿಚಾರ ಇತ್ತು ಎಂದು ನನಗೆ ಗೊತ್ತಿಲ್ಲ. ಆದರೆ ಅಂಬರೀಶ್ ಸ್ಮಾರಕ‌ ಕುರಿತ ರಾಜಕೀಯ ಒಳ್ಳೆಯದಲ್ಲ. ಅಂಬರೀಶ್ ನಮ್ಮ ಹುಡುಗ ಎಂದಿದ್ದಾರೆ.

ನಟ ದೊಡ್ಡಣ್ಣ ಹೇಳಿದ್ದು

ಅಂಬರೀಶ್ ಅನ್ನೋದು ಒಂದು ಮಹಾನ್ ಶಕ್ತಿ, ಅತ್ಯಂತ ದಿಟ್ಟತನ ಇತ್ತು. ಗಡಸುತನ ಇತ್ತು. ರಾಜಗಾಂಭೀರ್ಯ ಇತ್ತು. ಅಂಬರೀಶ್ ಸತ್ತಾಗ ಸಿಕ್ಕ ಗೌರವ ಯಾರಿಗೂ ಸಿಕ್ಕಿಲ್ವೇನೋ. ಅಂಬರೀಶ್ ಸತ್ತಾಗ ಭಾವುಕರಾಗಿ ಜನ ಅತ್ತಿರೋದನ್ನ ನೋಡಿದಿನಿ. ಆ ಗಡಸು ಮಾತಿನ ಹಿಂದೆ ಮಲ್ಲಿಗೆ ಹೂವಿನಂತ ಮನಸ್ಸಿತ್ತು. ಅಂಬರೀಶ್ ಇದ್ದಾಗಲೂ ಅದೇ ಗೌರವ ಇತ್ತು. ನಮ್ಮನ್ನು ಅಗಲಿ ಹೋದಾಗಲೂ ಗೌರವ ಇದೆ. ನಾನು ಕುಮಾರಸ್ವಾಮಿ ಅವರ ಬಳಿ ಹೋದಾಗ ಸ್ಮಾರಕದ ಲೆಟರ್ ತೆಗೆದುಕೊಂಡು ಹೋದೆ. ನಮ್ಮನ್ನ ಕಾಯಿಸಿದ್ರು. ಕೆಲಸದ ಒತ್ತಡ ಇರಬಹುದು ಎಂದುಕೊಂಡೆ. ಲೆಟರ್ ಕೊಟ್ಟಾಗ ಆಗಿರೋ ಘಟನೆ ನೋವು ತಂದಿತ್ತು. ಇವರೇನ್ ಮಾಡಿದಾರೆ ಅಂತ ಮಾಡ್ಬೇಕು ಅಂದ್ರು.

ಮುಖದ ಮೇಲೆ ಎಸೆದಿದ್ದು ಸತ್ಯವೇ..?

ನಟ ದೊಡ್ಡಣ್ಣ ಹಾಗೂ ನಟ ಶಿವರಾಂ ಮನವಿ ಪತ್ರ ಕೊಡೋಕೆ ಹೋದಾಗ ಮುಖದ ಮೇಲೆ ಮನವಿ ಪತ್ರ ಎಸೆದ್ರು ಅನ್ನೋ ಹೇಳಿಕೆಯೂ ಇದೆ. ಮನವಿ ಪತ್ರವನ್ನು ಕುಮಾರಸ್ವಾಮಿ ಮುಖದ ಮೇಲೆ ಎಸೆದರು ಎನ್ನುವ ನಟ ದೊಡ್ಡಣ್ಣ ಅವರ ಹೇಳಿಕೆಯೂ ಇದೆ. ಕೊನೆಯಲ್ಲಿ ನಾನು ಹಾಗೂ ನಟ ದೊಡ್ಡಣ್ಣ ಬೇರೆ ಬೇರೆ ಕೆಲಸಕ್ಕಾಗಿ ಅಂದಿನ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದು ನಿಜ. ನಾನು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾಗ, ಪಕ್ಕದಲ್ಲಿ ಒಂದು ಮನವಿ ಪತ್ರವಿತ್ತು. ಅದರಲ್ಲಿ ಏನಿತ್ತು ಎಂಬುದು ನನಗೆ ಗೊತ್ತಿಲ್ಲ. ಆದರೆ ಅಂಬರೀಶ್​ ವಿಚಾರದಲ್ಲಿ ರಾಜಕೀಯ ಬೇಡ ಎಂದಿರುವ ಶಿವರಾಂ ಮಾತು ಕೂಡ ಇದೆ. ಜೊತೆಗೆ ಕುಮಾರಸ್ವಾಮಿ ಅವತ್ತು ನಟ ಅಂಬರೀಶ್​ ಅವರ ಸ್ಮಾರಕದ ಮನವಿ ಪತ್ರವನ್ನು ಮುಖದ ಮೇಲೆ ಎಸೆದಿದ್ದರೆ..! ಅದನ್ನು ಮಾಧ್ಯಮಗಳ ಎದುರು ಅಂದೇ ಬಹಿರಂಗ ಮಾಡಿದ್ದರೆ ಏನಾಗುತ್ತಿತ್ತು..? ಎನ್ನುವ ಜೊತೆಗೆ ಇಂದು ಹೇಳುತ್ತಿರುವ ಮರ್ಮ ಏನು ಎಂಬ ಊಹೆ ನಿಮ್ಮದು.

Related Posts

Don't Miss it !