ವಿದ್ಯಾರ್ಥಿಗಳ ಹಂತದಲ್ಲೇ ಧರ್ಮವೆಂಬ ವಿಷಬೀಜ ಬಿತ್ತನೆ..! ಭವಿಷ್ಯದ ಕತ್ತಲೆ..

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ ಕೂಡ ಸೃಷ್ಟಿಸಿತ್ತು. ವಿದ್ಯಾರ್ಥಿಗಳ ವಿಚಾರ. ಭಾರತ ಜಾತ್ಯಾತೀಯ ಮನೋಭಾವ, ಸರ್ವ ಧರ್ಮಗಳ ಸಂಸ್ಕೃತಿಗೆ ಸಾಕಷ್ಟಿಯಾಗಿತ್ತು. ಈ ಬಗ್ಗೆ ಸಂವಿಧಾನದಲ್ಲೂ ಸ್ಪಷ್ಟವಾಗಿ ನಮೂದು ಮಾಡಿದ್ದು, ಎಲ್ಲಾ ಜಾತಿ ಧರ್ಮವನ್ನು ಗೌರವಿಸಬೇಕು ಎಂದು ತಿಳಿಸಲಾಗಿದೆ. ಆದರೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಚಿಕ್ಕಮಗಳೂರಲ್ಲಿ ವಿದ್ಯಾರ್ಥಿಗಳ ಹಂತದಲ್ಲಿ ಧರ್ಮಾಂಧತೆ ತುಂಬಲಾಗ್ತಿದೆ. ದೇಶದ ಭವಿಷ್ಯವಾಗಬೇಕಿದ್ದ ವಿದ್ಯಾರ್ಥಿಗಳು, ಧರ್ಮಾಂಧತೆ ತುಂಬಿಕೊಂಡು ಬದುಕನ್ನು ಬರಡು ಮಾಡಿಕೊಳ್ತಿದ್ದಾರೆ.

ಉಡುಪಿಯಲ್ಲಿ ಹಿಜಬ್​​ ಧರಿಸುವುದಾಗಿ ಕೆಲವರ ಹಠ..!

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್ ವಿವಾದ ಇನ್ನೂ ಬಗೆಹರಿದಿಲ್ಲ. ಹಿಜಬ್ ಧರಿಸಿಯೇ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಕೇಳಿದ್ದರು. ಮೊದಲಿಗೆ 12 ಮಂದಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ತರಗತಿಗೆ ಹಾಜರಾಗಲು ಆಗ್ರಹಿಸಿದ್ದರು. ಆದರೆ ಪ್ರಾಂಶುಪಾಲರು ಬುದ್ಧಿ ಮಾತು ಹೇಳಿದ ಬಳಿಕ ಆರು ವಿದ್ಯಾರ್ಥಿನಿಯರು, ಹಿಜಬ್​​ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದರು. ಇನ್ನುಳಿದ ಆರು ಮಂದಿ ಈಗಲೂ ತರಗತಿಯಿಂದ ಹೊರಗೆ ಉಳಿದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬೆಂಬಲ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣದಿಂದ ಹಠಕ್ಕೆ ಬಿದ್ದಿರುವ ವಿದ್ಯಾರ್ಥಿನಿಯರ ಬಗ್ಗೆ ಶಾಸಕ ರಘುಪತಿ ಭಟ್ ಮಾತನಾಡಿದ್ದು, ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಮಾಡಲಾಗುತ್ತಿದೆ ಎಂದಿದ್ದಾರೆ. 60 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಜನರ ಹಠ ಮಾತ್ರ ಧರ್ಮಾಂಧತೆಯನ್ನು ಹುಡುಕುತ್ತಿದೆ.

Read This;

ಮಲೆನಾಡಲ್ಲಿ ಹಿಂದೂ ವಿದ್ಯಾರ್ಥಿಗಳ ಕೌಂಟರ್​..!

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಮಾಡಿದ್ದೇ ಧರ್ಮಾಂಧತೆಯ ಪ್ರತೀಕ ಎನ್ನುತ್ತಿರುವಾಗ ಚಿಕ್ಕಮಗಳೂರಿನಲ್ಲಿ ಹಿಂದೂ ವಿದ್ಯಾರ್ಥಿಗಳು ಉಡುಪಿಯ ಮುಸ್ಲಿಂ ವಿದ್ಯಾರ್ಥಿಗಳಿಗೆ ಕೌಂಟರ್​ ಕೊಟ್ಟಿದ್ದಾರೆ. ಉಡುಪಿ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಮೂಲಕ ತಿರುಗೇಟು ಕೊಡುವ ಮೂಲಕ ನಾವೂ ಕೂಡ ಧರ್ಮಾಂಧರು ಎನ್ನುವುದನ್ನು ಸಾಬೀತು ಮಾಡಲು ಮುಂದಾಗಿದ್ದಾರೆ. ಕಾಲೇಜಿಗೆ ಕೇಸರಿ ಶಲ್ಯ, ಸ್ಕಾರ್ಫ್ ಹಾಕಿಕೊಂಡು ಬಂದಿದ್ದಾರೆ. ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರ ವಿಧ್ಯಾರ್ಥಿಗಳನ್ನು ಮನವೋಲಿಸಿದ ಪ್ರಾಂಶುಪಾಲರು, ಜನವರಿ 10 ರಂದು ಪೋಷಕರ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಕಾಲೇಜಿಗೆ ರಜೆ ನೀಡಿ ಪೋಷಕರ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ.

ರಾಜಕಾರಣಕ್ಕೆ ಮಕ್ಕಳನ್ನು ಬಳಸುವುದು ಅಕ್ಷಮ್ಯ ಅಲ್ಲವೇ..?

ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್​​ ಧರಿಸುವ ಹುನ್ನಾರದ ಹಿಂದೆ ಮುಸ್ಲಿಂ ಸಂಘಟನೆ ಕೈವಾಡ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪೋಷಕರು ಒಪ್ಪಿಕೊಂಡರು ವಿದ್ಯಾರ್ಥಿನಿಯರು ಒಪ್ಪದೆ ತರಗತಿಯಿಂದ ಹೊರಗೆ ಉಳಿದಿರುವುದು ದುರಾದೃಷ್ಟಕರ ಎನ್ನಬಹುದು. ಇನ್ನೂ ಕಾನೂನು ಹಾಗೂ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವುದೂ ಅಕ್ಷಮ್ಯ ಅಪರಾಧವೇ ಸರಿ. ಬಿಜೆಪಿ ಶಾಸಕ ರಘುಪತಿ ಭಟ್​​ ಕೇಳಿರುವ ಪ್ರಶ್ನೆಗಳು ಸಮಂಜಸ ಆಗಿವೆ. ವಿದ್ಯಾರ್ಥಿಗಳು ತಮಗಿಷ್ಟದ ಬಟ್ಟೆಯನ್ನು ಹಾಕಿಕೊಂಡು ತರಗತಿಗೆ ಬರಲು ಅವಕಾಶ ಇದೆಯೇ..? ಸಮವಸ್ತ್ರ ಎಂದರೆ ಶಿಸ್ತು, ಸಮವಸ್ತ್ರ ಎಂದರೆ ಸಮಾನತೆ. ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಜಬ್ ಧರಿಸುವುದರಿಂದ ಧರ್ಮದ ಬೇಧ ಬರುತ್ತದೆ. ರಾಜ್ಯದಲ್ಲಿ ಯೂನಿಫಾರಂ ಬೇಕಾ..? ಬೇಡ್ವಾ..? ಎಂದು ಸರ್ಕಾರ ತೀರ್ಮಾನಿಸಲಿ ಎಂದಿದ್ದಾರೆ. ಆದರೂ ಚಿಕ್ಕಮಗಳೂರಲ್ಲಿ ಹಿಂದೂ ಮಕ್ಕಳನ್ನು ಬಳಸಿದ್ದು ಸರಿಯಲ್ಲ ಅಲ್ಲವೇ..?

Related Posts

Don't Miss it !