ಆ್ಯಂಕರ್​ ಅನುಶ್ರೀ ತಂದೆ ಪರಿಸ್ಥಿತಿ ಹೇಗಿದೆ ಗೊತ್ತಾ..? ಅಪ್ಪನ ಜೀವ ರಕ್ಷಣೆಗೆ ಬರ್ತಾರಾ ಸ್ಟಾರ್​ ಡಾಟರ್..?

‘ಆ್ಯಂಕರ್ ಅನುಶ್ರೀ ನನ್ನ ಮಗಳು’ ಎಂದು ಸಂಪತ್​ ಎಂಬುವರು ಹೇಳಿಕೊಂಡಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಾ ಕೊನೆಯ ದಿನಗಳನ್ನು ಎಣಿಸುತ್ತಿರುವ ಸಂಪತ್​​, ಮಗಳು ಸೇರಿದಂತೆ ತನ್ನವರನ್ನು ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗಳ ಮದುವೆಯನ್ನು ನೋಡುವ ಆಸೆಯಿತ್ತು. ಆದರೆ ನಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲ. ನನ್ನಿಂದ ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು. ಇದೊಂದೇ ಕಾರಣದಿಂದ ನಾನು ಇಷ್ಟು ದಿನ ಎಲ್ಲೂ ಹೇಳಿಕೊಂಡಿರಲಿಲ್ಲ. ಮಕ್ಕಳ ಬದುಕನ್ನು ಹಾಳು ಮಾಡುವುದು ನನ್ನ ಇಚ್ಛೆಯಲ್ಲ. ಆದರೆ ಕೊನೆ ದಿನಗಳಲ್ಲಿ ನೋಡುವ ಬಯಕೆಯಾಗಿದೆ ಎಂದಿದ್ದಾರೆ. ಆದರೆ ತನ್ನ ತಂದೆ ನಮ್ಮನ್ನು ಬಿಟ್ಟು ಹೋದವರು ಇಲ್ಲೀವರೆಗೂ ಬಂದಿಲ್ಲ ಎಂದು ಹೇಳಿಕೊಂಡಿದ್ದ ಆ್ಯಂಕರ್​ ಅನುಶ್ರೀ ಇದೀಗ ಕೊನೆಯ ದಿನಗಳನ್ನು ಎಣಿಸುತ್ತಿರುವ ತನ್ನ ತಂದೆ ಸಂಪತ್​ ಅವರನ್ನು ಕ್ಷಮಿಸಿ ಬಂದು ಯೋಗಕ್ಷೇಮ ನೋಡಿಕೊಳ್ತಾರಾ..? ಬೇರೊಬ್ಬರ ಆಸರೆಯಲ್ಲಿ ಬದುಕುತ್ತಿರುವ ಸಂಪತ್​ ಅವರಿಗೆ ಸ್ಟಾರ್​ ಆ್ಯಂಕರ್​ ಆಗಿರುವ ಅನುಶ್ರೀ ಆಸರೆ ಕಲ್ಪಿಸುತ್ತಾರಾ..? ಎನ್ನುವ ಕುತೂಹಲ ಮೂಡಿಸಿದೆ.

ಸ್ಟೇಜ್ ಮೇಲೆ ಅನುಶ್ರೀ

ಎಲ್ಲಿದ್ದಾರೆ ಆ್ಯಂಕರ್​ ಅನುಶ್ರೀ ತಂದೆ ಸಂಪತ್​..?

2003-04ರಲ್ಲಿ ಅನುಶ್ರೀ ತಾಯಿ ಹಾಗೂ ಮಕ್ಕಳಿಂದ ಬೇರೆ ಆಗಿದ್ದ ಸಂಪತ್​, ದೇಶ ವಿದೇಶದಲ್ಲಿ ಸಂಚಾರ ಮಾಡಿ ಮಾರ್ಕೆಟಿಂಗ್​ ವಿಭಾಗದಲ್ಲಿ ಸಾಕಷ್ಟು ರಾಜ್ಯಗಳನ್ನು ಸುತ್ತಾಡಿದ್ದಾರೆ. ಮುಂಬೈನಲ್ಲಿ ಭೂಗತ ಲೋಕದ ಜೊತೆಗೂ ನಂಟು ಹೊಂದಿದ್ದೆ. ಆದರೆ ಎಲ್ಲೂ ನನ್ನ ಕುಟುಂಬದ ಬಗ್ಗೆ ಹೇಳಿಕೊಳ್ಳಲಿಲ್ಲ ಎಂದಿದ್ದಾರೆ. ಇದೀಗ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಸತತ ಎರಡು ಬಾರಿ ಲಕ್ವ ಹೊಡೆದಿದ್ದು, ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲೀವರೆಗೂ ಶಿವಲಿಂಗೇಗೌಡ ಎಂಬುವವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಇದೀಗ ವೈದ್ಯರು, ಸಂಪತ್​ ಸ್ಥಿತಿ ಗಂಭೀರವಾಗಿದ್ದು, ಆಪ್ತರು, ಕುಟುಂಬಸ್ಥರು ಯಾರಾದರೂ ಬಂದು ಮಾತನಾಡಿಸುವುದಿದ್ದರೆ ಬಂದು ಮಾತನಾಡಿಸಲಿ. ಸಂಪತ್​ ಅವರ ಆರೋಗ್ಯದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿರುವ ಕಾರಣಕ್ಕೆ ಸಂಪತ್​ ಅವರು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮಗಳು ಅನುಶ್ರೀ ಹಾಗೂ ಮಗ ಅಭಿಜಿತ್​ ಮತ್ತು ಪತ್ನಿ ನನ್ನನ್ನು ಬಂದು ನೋಡಲೇ ಬೇಕು ಎಂದು ಹೇಳುವುದಿಲ್ಲ. ನಾನು ಅವರನ್ನು ಸಾಕಿದ್ದೇನೆ. ಮಾನವೀಯತೆಯಿಂದ ಬಂದು ನೋಡುವುದಾದರೆ ನೋಡಲಿ, ಇಲ್ಲದಿದ್ದರೆ ಈ ದೇಹ ಮಣ್ಣಲ್ಲಿ ಮಣ್ಣಾಗಲಿದೆ ಎಂದಿದ್ದಾರೆ.

ತಮ್ಮನೊಂದಿಗೆ ಅನುಶ್ರೀ

ಹೆಂಡತಿ ಮಕ್ಕಳನ್ನು ಬಿಟ್ಟು ಹೊರಕ್ಕೆ ಬಂದಿದ್ಯಾಕೆ ಅನುಶ್ರೀ ತಂದೆ..?

ಹೆಂಡತಿ ಮಕ್ಕಳನ್ನು ಬಿಟ್ಟು ಸಂಪತ್​ ಹೊರಕ್ಕೆ ಬರುವ ನಿರ್ಧಾರಕ್ಕೆ ಸ್ವತಃ ಆ್ಯಂಕರ್​ ಅನುಶ್ರೀಯೇ ಕಾರಣ ಎನ್ನುವುದನ್ನು ಸಂಪತ್​ ಬಯಲು ಮಾಡಿದ್ದಾರೆ. 6ನೇ ತರಗತಿ ತನಕ ಓದಿಸಿದ್ದ ತಂದೆ ಸಂಪತ್​ಗೆ ಅನುಶ್ರೀ ಡ್ಯಾನ್ಸ್​​ ಮಾಡುವುದು ಇಷ್ಟವಿರಲಿಲ್ಲ. ಆದರೂ ಅನುಶ್ರೀ ತಾಯಿ ಕುಟುಂಬಸ್ಥರು ಪಟ್ಟು ಬಿಡಲಿಲ್ಲ. ತಂದೆಯ ಮಾತಿಗೆ ಕಿಂಚಿತ್ತು ಬೆಲೆ ಸಿಗದಿದ್ದಾಗ ಮನನೊಂದು ಹೊರಕ್ಕೆ ಬಂದೆ ಎನ್ನುವುದು ಸಂಪತ್​ ಅವರ ಆರೋಪ. ಸಾವಿನ ಸಮೀಪಿಸಿದರೂ ಮಕ್ಕಳ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವ ಸಂಪತ್​, ನನ್ನನ್ನು ಬಂದು ನೋಡದಿದ್ದರೂ ಪರವಾಗಿಲ್ಲ. ಇನ್ನೂ ಉತ್ತಮ ಮಟ್ಟಕ್ಕೆ ಬೆಳವಣಿಗೆ ಕಾಣಲಿ ಎಂದು ಹಾರೈಸಿದ್ದಾರೆ. ನಾನು ಈ ಹಿಂದೆ ಬಾಂಬೆ ಗ್ಯಾಂಗ್​ನಲ್ಲಿ ಸೇರಿಕೊಂಡಿದ್ದಾಗ ನನಗೆ ಆಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರೆ, ಇಷ್ಟು ದಿನಗಳ ಕಾಲ ಇವರು ಜೀವಂತವಾಗಿ ಇರುತ್ತಿರಲಿಲ್ಲ. ಆದರೆ ನಾನು ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ನನ್ನ ಇಡೀ ಜೀವನ ತ್ಯಾಗ ಮಾಡಿದ್ದೇನೆ. ಕಳೆದ ವರ್ಷ ನನ್ನ ಮಗ ಅಭಿಜಿತ್ ನನ್ನನ್ನು ನೋಡಲು ಬಂದಿದ್ದ, ನನ್ನ ಮಗಳು ಇನ್ನೂ ಒಳ್ಳೆ ಲೆವೆಲ್​ಗೆ ಬೆಳೆಯಲಿ, ನಾನು ಸತ್ರೆ ಬಂದು ಮಣ್ಣಾಕಿ ಹೋಗ್ಲಿ, ನಾನು ಅವರಿಂದ ಏನನ್ನೂ ಬಯಸುವುದಿಲ್ಲ ಎಂದಿದ್ದಾರೆ. ಅಪ್ಪ ಇದ್ದರೂ ಅಪ್ಪ ಇಲ್ಲ ಅಂದಿದ್ದಾರೆ ಎಂದು ಬೇಸರಿಸಿಕೊಂಡಿದ್ದಾರೆ.

ಅನುಶ್ರೀ ಬಾಲ್ಯದ ಚಿತ್ರ

ಆ್ಯಂಕರ್​ ಅನುಶ್ರೀ ಬಾಲ್ಯ ಎಲ್ಲಿ ಕಳೆದಿದ್ದಾರೆ ಗೊತ್ತಾ..?

ಆ್ಯಂಕರ್​ ಅನುಶ್ರೀ ಮಂಗಳೂರಿನವರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅನುಶ್ರೀ ಬಾಲ್ಯವನ್ನು ಇಲ್ಲೇ ಬೆಂಗಳೂರಿನಲ್ಲಿ ಕಳೆದರು ಎನ್ನುವುದನ್ನು ಅನುಶ್ರೀ ತಂದೆ ಸಂಪತ್​ ಬಹಿರಂಗ ಮಾಡಿದ್ದಾರೆ. 6ನೇ ತರಗತಿ ತನಕ ಅನುಶ್ರೀ ಸೇಂಟ್​ ಥಾಮಸ್​ ಶಾಲೆಯಲ್ಲಿ ಓದಿದರು. ಅಂದರೆ ಸುಮಾರು 11 ರಿಂದ 12 ವರ್ಷಗಳ ಬಾಲ್ಯವನ್ನು ಆ್ಯಂಕರ್​ ಅನುಶ್ರೀ ಬೆಂಗಳೂರಿನಲ್ಲೇ ಕಳೆದಿದ್ದರು. ಆ ಬಳಿಕ ಇಡೀ ಕುಟುಂಬ ಮಂಗಳೂರಿಗೆ ಶಿಫ್ಟ್​ ಆಗಿತ್ತು. ಅಲ್ಲಿ ಶುರುವಾದ ಕೌಂಟುಂಬಿಕ ಕಲಹ ದಾಂಪತ್ಯದಲ್ಲಿ ಬಿರುಕು ಮೂಡಿಸಿತ್ತು. ಮಂಗಳೂರಿನಿಂದ ಮತ್ತೆ ಬೆಂಗಳೂರಿಗೆ ಬಂದ ಅನುಶ್ರೀ ಸಾಕಷ್ಟು ಕಡೆ ಕೆಲಸ ಮಾಡಿ ಸೈ ಎನಿಸಿಕೊಂಡರು. ತನ್ನ ತಂದೆ ನಮ್ಮನ್ನು ಬಿಟ್ಟು ಹೋದರು ಎನ್ನುವ ವಿಚಾರವನ್ನು ಹೇಳಿಕೊಂಡು ಕೆಲವೊಮ್ಮೆ ಭಾವುಕ ಆಗಿರುವುದನ್ನು ಇಡೀ ಕರ್ನಾಟಕವೇ ನೋಡಿದೆ. ಇದೀಗ ತಂದೆ ಸಿಕ್ಕಿದ್ದಾರೆ. ಆ್ಯಂಕರ್​ ಅನುಶ್ರೀ ಹಾಗೂ ಆಕೆಯ ಸಹೋದರ ಮತ್ತು ತಾಯಿ ಬಂದು ಸಂಪತ್​ ಅವರನ್ನು ಭೇಟಿ ಮಾಡ್ತಾರಾ..? ಅವರ ಕೊನೆ ದಿನಗಳಲ್ಲಿ ಹಾರೈಕೆ ಮಾಡ್ತಾರಾ..? ಸ್ಟ್ರೋಕ್​ನಿಂದ ಬಳಲುತ್ತಿರುವ ತಂದೆಯನ್ನು ಕ್ಷಮಿಸ್ತಾರಾ..? ಎನ್ನುವುದು ಕುತೂಹಲ ಮೂಡಿಸಿದೆ. ಸಾಕಷ್ಟು ಜನರನ್ನು ವೇದಿಕೆ ಮೇಲೆ ಸಮಾಧಾನ ಮಾಡುವ ಮನಸ್ಥಿತಿ ಹೊಂದಿರುವ ಆ್ಯಂಕರ್​ ಅನುಶ್ರೀ ನೊಂದ ತಂದೆಯನ್ನು ಸಮಾಧಾನ ಮಾಡ್ತಾರಾ ಕಾದು ನೋಡ್ಬೇಕು.

ಆ್ಯಂಕರ್ ಅನುಶ್ರೀ ತಂದೆ ಸಂಪತ್

Related Posts

Don't Miss it !