ಡ್ರಗ್ಸ್​ ಸೇವನೆ, ಸಾಗಾಟ ಕೇಸಲ್ಲಿ ಜೈಲು ಸೇರ್ತಾರಾ ಆ್ಯಂಕರ್​ ಅನುಶ್ರೀ..!?

ಕನ್ನಡದ ಖ್ಯಾತ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ ನಡೆಸಿಕೊಟ್ಟಿರುವ ಆ್ಯಂಕರ್​ ಅನುಶ್ರೀ ಜೈಲು ಸೇರುವ ಸಾಧ್ಯತೆ ದಟ್ಟವಾಗಿದೆ. ಡ್ರಗ್ಸ್​ ಜಾಲದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ನೀಡಿದ್ದ ಮಾಹಿತಿ ಮೇರೆಗೆ ನೋಟಿಸ್​ ನೀಡಿ ವಿಚಾರಣೆ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡುತ್ತಿದ್ದು, ಆರೋಪಪಟ್ಟಿಯಲ್ಲಿ ಆ್ಯಂಕರ್​ ಅನುಶ್ರೀ ಹೆಸರು ಉಲ್ಲೇಖ ಆಗಿದೆ ಎನ್ನಲಾಗ್ತಿದೆ. ಆ್ಯಂಕರ್ ಅನುಶ್ರೀ ಡ್ರಗ್ಸ್ ಸೇವನೆ ಮಾತ್ರ ಮಾಡಿದ್ದಲ್ಲಾ, ಅನುಶ್ರೀ ಡ್ರಗ್ ಸಾಗಾಟ ಕೂಡ ಮಾಡಿದ್ರು ಎಂದು ಚಾರ್ಜ್​ಶೀಟ್​ನಲ್ಲಿ ಆರೋಪಿ ನಂಬರ್​ 2 ಆಗಿರೋ ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ ಎನ್ನಲಾಗ್ತಿದೆ. ನಮ್ಮ ರೂಂಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. Ecstasy ಪಿಲ್ಸ್ ತರುತ್ತಿದ್ದಾಗಿ ಕಿಶೋರ್​ ಅಮನ್​ ಶೆಟ್ಟಿ ಹೇಳಿದ್ದಾರೆ. ಜೊತೆಗೆ ಕಿಶೋರ್, ತರುಣ್ ಜೊತೆ ಸಾಕಷ್ಟು ಭಾರೀ ಮಾದಕ ವಸ್ತು ಸೇವಿಸಿರೋದಾಗಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

ಮಂಗಳೂರಿಗೆ ತಟ್ಟಿದ್ದ ಬೆಂಗಳೂರು ಬಿಸಿ..!

ಬೆಂಗಳೂರಿನಲ್ಲಿ ಸಿನಿಮಾ ಸ್ಟಾರ್​ಗಳು ಸೇರಿದಂತೆ ಸಾಕಷ್ಟು ಜನರು ಡ್ರಗ್ಸ್​ ಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಈ ವೇಳೆ ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ ಡ್ರಗ್ಸ್ ಕೇಸ್​ನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್​ನಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬೆಂಗಳೂರು ಸಿಸಿಬಿ ಪೊಲೀಸರ ಬಳಿ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬಯಲಾಗಿತ್ತು. ಆರೋಪಿ ನಂಬರ್​ 15 ಆಗಿದ್ದ ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಬಾಯ್ಬಿಟ್ಟಿದ್ದ. ಕೂಡಲೇ ಅಲರ್ಟ್​ ಆದ ಬೆಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿದ್ದರು. ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮಾಹಿತಿ ರವಾನಿಸಿದ್ದರು.

Read this also;

ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಸಿಗ್ತಿದ್ದ ಹಾಗೆ ಅಲರ್ಟ್ ಆದ ಮಂಗಳೂರು ಸಿಸಿಬಿ ಕಾರ್ಯಪಡೆ, ವಿಚಾರಣೆ ನಡೆಸಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್​ನನ್ನ ಬಂಧಿಸಿದ್ದರು. ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದ ಆ್ಯಂಕರ್​ ಆನುಶ್ರೀಗೂ ನೋಟಿಸ್ ಕೊಟ್ಟಿದ್ದ ಮಂಗಳೂರು ಸಿಸಿಬಿ ಪೊಲೀಸರು, ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಪೋನ್ ಸಿಡಿಆರ್ ಆಧರಿಸಿ ಆ್ಯಂಕರ್​ ಆನುಶ್ರೀ ವಿಚಾರಣೆ ನಡೆಸಿದ್ದರು. ಜೊತೆಗೆ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು. ಅವರ ಜೊತೆಗೆ ಆ್ಯಂಕರ್​ ಅನುಶ್ರೀಗೆ ಸ್ನೇಹ ಇತ್ತು. ಎಲ್ಲರೂ ಒಟ್ಟಾಗಿ ಪಾರ್ಟಿ ಮಾಡಿದ್ದೇವೆ ಎನ್ನುವ ಹೇಳಿಕೆ ಹಿಡಿದು ವಿಚಾರಣೆ ಮಾಡಲಾಗಿತ್ತು.

ಮಂಗಳೂರು ಕೇಸಲ್ಲಿ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗ್ತಿದೆ..!

ಡ್ರಗ್ ಕೇಸ್​ ಚಾರ್ಜ್​ಶೀಟ್​ನಲ್ಲಿ ಆ್ಯಂಕರ್ ಅನುಶ್ರೀ ಹೆಸರು ಉಲ್ಲೇಖ ಆಗಿದೆ ಎನ್ನುವ ವರದಿ ಜೊತೆಗೆ ಆರೋಪಿಗಳ ಪಟ್ಟಿಯಿಂದ ಅನುಶ್ರೀ ಹೆಸರನ್ನು ಕೈ ಬಿಡಲಾಗಿದೆ ಎನ್ನುವ ಮಾಹಿತಿಗಳೂ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರಿಲ್ಲ. ಈಗಾಗಲೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಿ ಆಗಿದೆ. ಕಿಶೋರ್ ಅಮನ್ ಶೆಟ್ಟಿ, ತರುಣ್ ಸೇರಿದಂತೆ ನಾಲ್ವರನ್ನು ಆರೋಪಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆ್ಯಂಕರ್​ ಅನುಶ್ರೀ ಡ್ರಗ್ಸ್ ತೆಗೆದುಕೊಳ್ತಿದ್ರು ಎಂಬುದಕ್ಕೆ‌ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಆದರೆ 2007ರಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದೆವು ಎಂಬ ಕಿಶೋರ್ ಅಮನ್​ ಶೆಟ್ಟಿ ಹೇಳಿಕೆಯನ್ನು ಜಾರ್ಚ್​ಶೀಟ್​​ನಲ್ಲಿ ಉಲ್ಲೇಖಿಸಿದ್ದೇವೆ. ಡ್ರಗ್ಸ್​ಗೆ ಸಂಬಂಧಿಸಿದಂತೆ ಆರೋಪಿಗಳು ಹಾಗು ಆ್ಯಂಕರ್​ ಅನುಶ್ರೀ ನಡುವೆ ಯಾವುದೇ ಫೋನ್‌ ಸಂಭಾಷಣೆ ನಡೆದಿಲ್ಲ. ಯಾವುದೇ ಸಾಕ್ಷ್ಯ ಸಿಗದೆ ಇರುವುದರಿಂದ ಅನುಶ್ರೀ ಹೆಸರನ್ನು ಆರೋಪಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

Read this also;

ಬೆಂಗಳೂರಲ್ಲಿ ಇಲ್ಲ ಆ್ಯಂಕರ್​ ಅನುಶ್ರೀ..!

ಡ್ರಗ್ಸ್ ಪ್ರಕರಣ ಸದ್ದು ಮಾಡುವ ವೇಳೆಗೆ ಆ್ಯಂಕರ್​ ಅನುಶ್ರೀ ಸಂಪರ್ಕಕ್ಕೆ ಯತ್ನ ಮಾಡಿದ್ದು, ಮmಂಗಳವಾರ ಬೆಳಗ್ಗೆ ಲಗೇಜು ಸಮೇತ ಮನೆಯಿಂದ ಹೊರಟಿದ್ದು, ಎಲ್ಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿಲ್ಲ. ಚಾರ್ಜ್​ಶೀಟ್​ ವಿಚಾರವಾಗಿ ಚರ್ಚೆ ಮಾಡಲು ತೆರಳಿದ್ದಾರಾ..? ಅಥವಾ ಬೇರೆ ಕಾರ್ಯಕ್ರಮಗಳ ಮೇಲೆ ಹೋಗಿದ್ದಾರಾ ಎನ್ನುವುದನ್ನೂ ಖಚಿತ ಮಾಡುತ್ತಿಲ್ಲ. ಮುಂಬೈಗೆ ತೆರಳಿದ್ದಾರೆ ಎನ್ನುವ ಮಾಹಿತಿ ಹರಿದಾಡ್ತಿದೆ. ಮಂಗಳೂರು ಡ್ರಗ್ಸ್​ ಜಾಲದ ಜಾರ್ಜ್​ಶೀಟ್​ನಲ್ಲಿ​ ಆ್ಯಂಕರ್​ ಅನುಶ್ರೀ ಹೆಸರು ಉಲ್ಲೇಖದ ಬಗ್ಗೆ ಬೆಳಗಾವಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾನೂನು ತನ್ನ ಕೆಲಸವನ್ನ ಮಾಡುತ್ತಿದೆ. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ಯಾರ ಬಗ್ಗೆಯೂ ನಮಗೆ ಸಾಫ್ಟ್ ಕಾರ್ನರ್ ಇಲ್ಲ ಎಂದಿದ್ದಾರೆ. ಕೋರ್ಟ್​ ವಿಚಾರಣೆ ವೇಳೆ ಯಾವ ತಿರುವು ಪಡೆಯುತ್ತೆ ಎನ್ನುವುದರ ಮೇಲೆ ಜೈಲು ಸೇರುವುದು ನಿರ್ಧಾರ ಆಗಲಿದೆ.

Related Posts

Don't Miss it !