ಕೋಟಿ ಆಂಟಿಗೆ ಗಂಡಂದಿರ ಬದಲಾವಣೆ ಮಾಡೋದೆ ಕಯಾಲಿ..! ಅಮ್ಮನ ಕೊಂದ ಮಗಳು ಅಂದರ್..

ಕಳೆದ ಸೊಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿ ಬರ್ತಿದ್ದ ಮಹಿಳೆ ಅರ್ಚನಾ ರೆಡ್ಡಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿ ರಾಜಾರೋಶವಾಗಿ ತೆರಳಿದ್ದ ಹಂತಕರ ಕೈಗೆ ಖಾಕಿ ಕೋಳ ಹಾಕಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಅದರಲ್ಲಿ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿ ಕೂಡ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದಳು ಎನ್ನುವುದನ್ನು ಪತ್ತೆ ಮಾಡಿರುವ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು, ಅಮ್ಮನ ಕೊಂದ ಕಂದಮ್ಮನನ್ನು ಮುದ್ದೆ ಮುರಿಯಲು ಜೈಲಿಗೆ ಅಟ್ಟಿದ್ದಾರೆ. ಯುವಿಕಾ ರೆಡ್ಡಿ ಹಾಗೂ ಅರ್ಚನಾ ಮೂರನೇ ಗಂಡ ನವೀನ್​ ಮಾಸ್ಟರ್​ ಪ್ಲ್ಯಾನ್​ ಮಾಡಿ ಕೊಂದಿರುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಆದರೆ ಆಂಟಿ ಅರ್ಚನಾ ರೆಡ್ಡಿ ಕೊಲೆಯಲ್ಲಿ ಸಾಕಷ್ಟು ಆಯಾಮಗಳಿವೆ. ಅದರಲ್ಲಿ ಆಂಟಿ ಅರ್ಚನಾ ರೆಡ್ಡಿಗೆ ಇದ್ದ ಚಪಲ ಡಿವೋರ್ಸ್​.

ಸುಂದರಿಗೆ ಅಂಟಿಕೊಂಡಿತ್ತು ಡಿವೋರ್ಸ್​ ಕಾಯಿಲೆ..!

ಹೊರೂಸೂರು ಮುಖ್ಯರಸ್ತೆಯ ಹೊಸರೋಡ್ ಜಂಕ್ಷನ್​ನಲ್ಲಿ ರಾತ್ರಿ 10 ಗಂಟೆ ಸುಮಾರಿನಲ್ಲಿ ಕೊಲೆಯಾದ ಅರ್ಚನಾ ರೆಡ್ಡಿ ಬಲು ಸುಂದರಿ. ತನ್ನ ಅಂದ ಚಂದವನ್ನೆ ಬಂಡವಾಳ ಮಾಡಿಕೊಂಡಿದ್ದ ಅರ್ಚನಾ ರೆಡ್ಡಿಗೆ ಮದುವೆ ಆಗುವುದೇ ಕಯಾಲಿ ಆಗಿತ್ತು. ತನ್ನ ಮೋಹಕ ರೂಪದಿಂದ ಶ್ರೀಮಂತ ಪುರುಷರನ್ನು ಕೆಣಕುವುದು. ತನ್ನ ಹಿಡಿತಕ್ಕೆ ಸಿಗುತ್ತಿದ್ದ ಹಾಗೆ ಮದುವೆ ಆಗುವುದು. ಕೆಲವೇ ವರ್ಷಗಳಲ್ಲಿ ಮನಸ್ತಾಪದ ಹೆಸರಿನಲ್ಲಿ ಡಿವೊರ್ಸ್​ ಕೊಡುವುದು ಅರ್ಚನಾ ರೆಡ್ಡಿಯ ಚಪಲ. ಇದೇ ರೀತಿ ಅರವಿಂದ್​, ಸಿದ್ದಿಕ್, ನವೀನ್​, ರೋಹಿತ್​​ ಜೊತೆ ಸಂಪರ್ಕ. ಮೊದಲ ಇಬ್ಬರಿಂದ ಡಿವೋರ್ಸ್​ ಪಡೆದಿದ್ದ ಅರ್ಚನಾ ರೆಡ್ಡಿ, ಕೋಟಿ ಕೋಟಿ ಹಣವನ್ನು ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದಳು. ಆ ಹಣವನ್ನು ರಿಯಲ್​​ ಎಸ್ಟೇಟ್​​ ವ್ಯವಹಾರದಲ್ಲಿ ಹಾಕಿ ಸಂಪಾದಿಸುವ ಮಾರ್ಗ ಹುಡುಕಿಕೊಂಡಿದ್ದಳು. ಮೂರನೇ ಗಂಡನಿಂದಲೂ ದೂರಾಗಿ ನಾಲ್ಕನೇ ಪುರುಷನ ಜೊತೆಗೆ ವ್ಯವಹಾರ ಕುದುರಿಸಿದ್ದಳು. ಆದ್ರೆ ಕೋಟಿ ಕೋಟಿ ಹಣದ ಮೇಲೆ ಹಿಡಿತ ಸಾಧಿಸಲು ಹವಣಿಸಿದ ನವೀನ್​ ಮಗಳನ್ನು ಮೋಹದ ಬಲೆಯಲ್ಲಿ ಬೀಳಿಸಿದ್ದ.

Read This;

ಬಿಸಿ ರಕ್ತದ ಹುಡುಗಿ ಯುವಿಕಾ ರೆಡ್ಡಿಗೆ ಜಿಮ್​ನಲ್ಲಿ ಪ್ರಣಯ ಪಾಠ..!

ಅರ್ಚನಾ ರೆಡ್ಡಿಯ ಮೂರನೇ ಪ್ರೇಮಿ ನವೀನ್ ತನ್ನ ಸಹಚರರಾದ ಸಂತೋಷ್ ಯುವಿಕಾ ರೆಡ್ಡಿ, ಆನಂದ, ನರೇಂದ್ರ ಮತ್ತು ದೀಪು ಬಂಧಿತ ಆರೋಪಿಗಳಾಗಿದ್ದು, ನವೀನ್​ ಜಿಮ್​ ಟ್ರೈನರ್​ ಆಗಿದ್ದನು. ಅರ್ಚನಾ ರೆಡ್ಡಿ ಕೂಡ ತನ್ನ ಸೌಂದರ್ಯವನ್ನು ಕಾಪಾಡಲು ಜಿಮ್​ಗೆ ಹೋಗುತ್ತಿದ್ದಳು. ಆಕೆಯ ಜೊತೆಗೆ ಮಗಳು ಯುವಿಕಾ ರೆಡ್ಡಿ ಕೂಡ ಜಿಮ್​ನಲ್ಲಿ ವ್ಯಾಯಾಮ ಮಾಡ್ತಿದ್ಲು. ಅರ್ಚನಾ ರೆಡ್ಡಿ ಮೋಹ ಜಾಲದಲ್ಲಿ ಬಿದ್ದ ನವೀನ್​ ಕೆಲವು ದಿನಗಳ ಕಾಲ ಸುಖ ಜೀವನದ ದಾಸನಾಗಿದ್ದ. ಅರ್ಚನಾ ರೆಡ್ಡಿಯ ಐಶಾರಾಮಿ ಬಂಗಲೆಯಲ್ಲೇ ವಾಸ ಮಾಡುತ್ತಿದ್ದ. ಆದರೆ ಕೆಲವು ದಿನಗಳಿಂದ ಇಚೆಗೆ ಹಣದ ವ್ಯವಹಾರದಲ್ಲಿ ನವೀನ್​ ಹಾಗೂ ಅರ್ಚನಾ ರೆಡ್ಡಿ ನಡುವೆ ವೈಮನಸ್ಸು ಮೂಡಿತ್ತು. ಯಾವಾಗ ಕೋಟ್ಯಧೀಶೆ ತನ್ನ ಮಂಚದ ಮೇಲಿನಿಂದ ನವೀನ್​ನನ್ನು ಹೊರದಬ್ಬಿದ್ದಳೋ ನವೀನ್​ ಕಣ್ಣು ಕೆಂಪಾಗಿದ್ದವು. ಸುಖವುಂಡಿದ್ದ ದೇಹ ಬೆವರಿತ್ತು. ಎಲ್ಲವನ್ನು ಮನಸ್ಸಿನಲ್ಲೇ ಅಡಗಿಸಿಟ್ಟುಕೊಂಡಿದ್ದ ನವೀನ್​ ಜಿಮ್​ಗೆ ಬರ್ತಿದ್ದ ಅರ್ಚನಾ ರೆಡ್ಡಿ ಮಗಳಿಗೆ ಪ್ರಣಯದ ಪಾಠ ಹೇಳಿಕೊಡಲು ಶುರು ಮಾಡಿದ್ದ.

Related story;

ಹಣದ ಜೊತೆಗೆ ದೇಹ ಸುಖವೇ ಮುಖ್ಯ ಎಂದವಳಿಗೆ ಮಗಳೇ ಮುಳ್ಳು..!

ಫಸ್ಟ್​​ ಇಯರ್​ ಬಿಕಾಂ ಓಡುತ್ತಿದ್ದ ಯುವಿಕಾ ರೆಡ್ಡಿ ಜಿಮ್​ ಟ್ರೈನರ್​​ ಗಟ್ಟಿ ದೇಹಕ್ಕೆ ಮರುಳಾದಳು. ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ವಾಸ್ತವ್ಯ ಶುರುಮಾಡಿದ್ದರು. ಅಮ್ಮ ಕೈಕೊಟ್ಟರೂ ಮಗಳು ತೋಳ್​ಗೆ ಸಿಕ್ಕಳು ಎನ್ನುವ ಖುಷಿಯಲ್ಲಿದ್ದ ನವೀನ್​ ಸುಖದ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ. ಆದರೆ ನವೀನ್​ ಮಾಡಿದ ಖತರ್ನಾಕ್​​ ಕೆಲಸ ಅರ್ಚನಾ ರೆಡ್ಡಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ನವೀನ್​ ಜಯಕರ್ನಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಜೊತೆಗೆ ರೌಡಿ ರೋಹಿತ್​ ಜೊತೆಯಲ್ಲೂ ಓಡಾಡುತ್ತಿದ್ದ. ಇದನ್ನು ಅರಿತಿದ್ದ ಕಿಲಾಡಿ ಲೇಡಿ ಅರ್ಚನಾ ರೆಡ್ಡಿ ರೋಹಿತ್​​ ಸ್ನೇಹ ಸಂಪಾದಿಸಿದ್ಲು. ನನ್ನ ಮಗಳನ್ನು ವಾಪಸ್​ ನನಗೆ ಕೊಡಿಸು ಎಂದು ಬೆನ್ನು ಬಿದ್ದಿದ್ಲು. ರೋಹಿತ್​ ಕೂಡ ಅರ್ಚನಾ ರೆಡ್ಡಿಯ ಜೊತೆಗೆ ಪಲ್ಲಂಗದಾಟ ಆಡಲು ಅನುವು ಮಾಡಿಕೊಳ್ಳಲು ನವೀನ್​ಗೆ ಕರೆ ಮಾಡಿ ಧಮ್ಕಿ ಹಾಕಿದ್ದ. ನಮ್ಮ ಮಗಳನ್ನು ವಾಪಸ್​ ಕಳುಹಿಸಿಕೊಡು ಎಂದು ಅವಾಜ್​ ಹಾಕಿದ್ದ. ಇಷ್ಟೆಲ್ಲಾ ಆಗ್ತಿದ್ದ ಹಾಗೆ ಕೊಲೆ ಮಾಡಿಯೇ ಆಸ್ತಿ ವಾಪಸ್​ ಪಡೆಯಬೇಕು ಎನ್ನುವ ನಿರ್ಧಾರವನ್ನು ನವೀನ್​ ಹಾಗೂ ಯುವಿಕಾ ರೆಡ್ಡಿ ಮಾಡಿದ್ದರು. ಕೋಟಿ ಕೋಟಿ ಹಣವಿದ್ದರೂ ಹಣ ಕೊಡದೆ ಆಟವಾಡಿಸಿದ ಹೆಂಗಸು ಬೀದಿ ಹೆಣವಾಗಿ ಕೋಟಿ ಕೋಟಿಯನ್ನೂ ಬಿಟ್ಟು ಹೋದಳು. ಅದೇ ಕೋಟಿ ಕೋಟಿ ಆಸೆಗೆ ಕೊಂದವರು ಜೈಲು ಸೇರಿದರು. ಎಲ್ಲದಕ್ಕೂ ಅತಿಯಾಸೆಯೇ ಕಾರಣ ಎನ್ನುವುದು ಖಚಿತವಾಯ್ತು.

Related Posts

Don't Miss it !