ಅಕ್ರಮ ಸಂಬಂಧಕ್ಕೆ ತೃಪ್ತಿ ಪಡದೆ ಜೈಲು ಸೇರಿದ ಆ್ಯಸಿಡ್​ ಆರೋಪಿ..!

ಕಳೆದ ಕೆಲವು ತಿಂಗಳ ಹಿಂದಷ್ಟೇ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಆ್ಯಸಿಡ್​ ದಾಳಿ ನಡೆದಿತ್ತು. ಇತ್ತೀಚಿಗೆ ಆ್ಯಸಿಡ್​ ಹಾಕಿದ್ದ ಆರೋಪಿ ನಾಗನನ್ನು ಅರೆಸ್ಟ್​ ಮಾಡಿ ಗುಂಡು ಹೊಡೆದು ಜೈಲಿಗೆ ಹಾಕಿದ್ರು. ಆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್​ ಪ್ರಕರಣ ನಡೆದಿದೆ. ಸಾಕಷ್ಟು ವರ್ಷಗಳಿಂದ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ ಆರೋಪಿ, ಮದುವೆ ಮಾಡಿಕೊಳ್ಳಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಆ್ಯಸಿಡ್​ ಎರಚಿದ್ದಾರೆ. ಆ್ಯಸಿಡ್​ ಹಾಕಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್​ ಪೊಲೀಸ್ರು, ಕಂಬಿ ಎಣಿಸುವಂತೆ ಮಾಡಿದ್ದಾರೆ. ಇದ್ರಲ್ಲಿ ಮತ್ತೊಂದು ವಿಶೇಷ ಅಂದ್ರೆ ಇಬ್ಬರಿಗೂ ಈಗಾಗಲೇ ಮದುವೆ ಆಗಿದೆ.

ಬಂಧಿತ ಆರೋಪಿ

ಮಾತನಾಡುವ ನೆಪದಲ್ಲಿ ಕರೆತಂದು ಆ್ಯಸಿಡ್ ದಾಳಿ..!

ಆ್ಯಸಿಡ್​ ದಾಳಿಗೆ ಒಳಗಾಗಿರುವ ಸಂತ್ರಸ್ತೆಗೆ ಈಗಾಗಲೇ ಮದುವೆ ಆಗಿತ್ತು ಅನ್ನೋದು ಗೊತ್ತಾಗಿದೆ. ಆದರೆ ಕಾರಣಾಂತರಗಳಿಂದ ಗಂಡನಿಂದ ಡಿವೋರ್ಸ್​ ಪಡೆದಿದ್ದ ಮಹಿಳೆಗೆ ಆರೋಪಿ ಮಹಮದ್​ ಜೊತೆಗೆ ಸ್ನೇಹ ಬೆಳೆದಿತ್ತು. ಗಂಡು ಆಸರೆ ಇಲ್ಲದ ಜೀವ ಅನ್ನೋದನ್ನು ಚೆನ್ನಾಗಿ ತಿಳಿದಿದ್ದ. ಇದೇ ಕಾರಣದಿಂದ ನಾಲ್ಕೈದು ವರ್ಷಗಳಿಂದ ಆಕೆಯ ಜೊತೆಗೆ ಮಂಚವನ್ನೂ ಹಂಚಿಕೊಂಡು ಸುಖ ಅನುಭವಿಸಿದ್ದ. ಆದರೆ ಅಷ್ಟಕ್ಕೇ ಆತನ ಕಾಮತೃಷೆ ನಿಂತಿರಲಿಲ್ಲ. ತನ್ನ ಸ್ವಂತ ಹೆಂಡತಿ ಆಗ್ಬೇಕು ಅನ್ನೋ ಹಂಬಲ ವ್ಯಕ್ತಪಡಿಸಿದ್ದ. ಈತನ ಕಾಟ ತಾಳಲಾರದೆ ಬೇರೊಂದು ಫ್ಯಾಕ್ಟರಿಗೆ ಕೆಲಸ ಬದಲಾಯಿಸಿದ್ದರೂ ಬಿಡದೆ ಶುಕ್ರವಾರ ಬೆಳಗ್ಗೆ ಮಾತನಾಡುವ ಅಂತಾ ಕರೆದುಕೊಂಡು ಬಂದು ಮದುವೆ ಪ್ರಸ್ತಾಪ ಇರಿಸಿದ್ದ. ನನಗೆ ಈಗಾಗಲೇ ಮದುವೆ ಆಗಿ ಮೂರು ಮಕ್ಕಳಿದ್ದಾರೆ. ದೊಡ್ಡವರಾಗಿದ್ದಾರೆ, ಮದುವೆ ಬೇಡ ಅಂದಿದ್ದಕ್ಕೆ ಆ್ಯಸಿಡ್​ ಹಾಕಿಬಿಟ್ಟ. ಆಕೆ ಮದುವೆ ಬೇಡ ಅನ್ನೋದಕ್ಕೆ ಮತ್ತೊಂದು ಕಾರಣವೂ ಇತ್ತು.

ಇದನ್ನೂ ಓದಿ: ಪೊಲೀಸರೇ ನೀವ್ಯಾಕೆ ಹೀಗೆ..? ಸಮಾಜಕ್ಕೆ ಕೆಟ್ಟ ಸಂದೇಶ ಕೊಡೋದು ಸರೀನಾ..?

ಅಗರ್​ ಬತ್ತಿ ಫ್ಯಾಕ್ಟರಿಯಲ್ಲಿ ಶುರುವಾಯ್ತು ಲವ್ವಿ ಡವ್ವಿ..!

ಒಂದೇ ಸ್ಥಳದಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗೋದು ಕಾಮನ್​. ಅದೇ ರೀತಿ ಸಂತ್ರಸ್ತೆ ಜೊತೆಗೆ ಗೋರಿಪಾಳ್ಯ ನಿವಾಸಿ ಮಹಮದ್​ ಸ್ನೇಹ ಸಂಪಾದಿಸಿದ್ದ. ಗಂಡನಿಂದ ಡಿವೋರ್ಸ್​ ಪಡೆದಿರುವುದು ಗೊತ್ತಾದ ಬಳಿಕ ಸ್ವಂತ ಗಂಡನ ಹಾಗೆಯೇ ಜೊತೆಯಲ್ಲಿದ್ದ. ಆ ಬಳಿಕ ಆತನಿಗೂ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ ಅನ್ನೋ ವಿಚಾರ ಸಂತ್ರಸ್ತೆಗೆ ತಿಳಿಯುವುದಕ್ಕೆ ಹೆಚ್ಚಿನ ಸಮಯ ಬೇಕಿರಲಿಲ್ಲ. ಇಲಿಯಾಸ್​ ನಗರದಲ್ಲಿ ಮಕ್ಕಳ ಜೊತೆಗೆ ವಾಸವಾಗಿದ್ದ ಸಂತ್ರಸ್ತೆ, ಈತನ ಜೊತೆಗೂ ಸ್ನೇಹ ಉಳಿಸಿಕೊಂಡಿದ್ದಳು. ಆದರೆ ಮೊದಲ ಪತ್ನಿಗೆ ಡಿವೋರ್ಸ್​ ಕೊಡದೆ ನಿನ್ನನ್ನು ಮದುವೆ ಆಗುವುದು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಳು. ಆ ಬಳಿಕ ಅಗರ್ ಬತ್ತಿ ಫ್ಯಾಕ್ಟರಿ ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಹುಡುಕಿ ಹೋಗುತ್ತಿದ್ದಳು. ಆದರೆ ಚಪಲ ಮಾತ್ರ ಮತ್ತೆ ಆಕೆಯ ಬೆನ್ನು ಬೀಳುವಂತೆ ಮಾಡಿತ್ತು.

ದನ್ನೂ ಓದಿ: ರಾಜ್ಯಸಭೆ ರಣರಂಗ, ಅವಕಾಶ ಕಳೆದುಕೊಂಡ ಕಾಂಗ್ರೆಸ್

ಅಕ್ರಮ ಸಂಬಂಧದಲ್ಲೇ ತೃಪ್ತಿ ಇಲ್ಲದ್ದಕ್ಕೆ ದುರಂತ..!

ನಾಲ್ಕೈದು ವರ್ಷದಿಂದ ಇಬ್ಬರು ಗಂಡ ಹೆಂಡತಿ ರೀತಿಯಲ್ಲೇ ಬದುಕು ನಡೆಸುತ್ತಿದ್ದರು. ಆದರೆ ಅಕ್ರಮ ಸಂಬಂಧವನ್ನು ಸಕ್ರಮ ಸಂಬಂಧ ಮಾಡಿಕೊಳ್ಳಲು ಮುಂದಾಗಿದ್ದ ಮಹಮದ್​, ತನ್ನ ಕುಟುಂ.ಬ ಸೇರಿದಂತೆ ಇಡೀ ಜಗತ್ತಿಗೆ ಅಕ್ರಮ ಸಂಬಂಧದ ಬಗ್ಗೆ ಜಗಜ್ಜಾಹೀರು ಮಾಡಿದ್ದಾರೆ. ಈಗ ಸ್ವಂತ ಪತ್ನಿಯೂ ಇಲ್ಲ, ಗೆಳತಿಯೂ ಇಲ್ಲ ಎನ್ನುವಂತೆ ಕಂಬಿ ಹಿಂದೆ ಸೇರಿದ್ದಾನೆ. ಇನ್ನೂ ಆ್ಯಸಿಡ್​ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರದಿ ಕೇಳಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆ್ಯಸಿಡ್​ ಬ್ಯಾನ್​ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಪ್ರತಿ ಏರಿಯಾಗಳಲ್ಲೂ ಆ್ಯಸಿಡ್​​ ಸರಳವಾಗಿ ಎಲ್ಲರಿಗೂ ಸಿಗುತ್ತಿದೆ. ಸಿಕ್ಕ ಸಿಕ್ಕವರು ಆ್ಯಸಿಡ್​​ ದಾಳಿ ಮಾಡ್ತೇನೆ ಎಂದು ಬೆದರಿಕೆ ಹಾಕುವ ಪ್ರಕರಣಗಳೂ ಹೆಚ್ಚಾಗುತ್ತಿವೆ ಅನ್ನೋದು ಮಾತ್ರ ಸತ್ಯ.

Related Posts

Don't Miss it !