310 ಜನ ಅಧಿಕಾರಿಗಳು, 43 ಸ್ಥಳಗಳು, ನವರತ್ನಗಳ ಲೆಕ್ಕಾಚಾರ..!

ಕರ್ನಾಟದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ ಎನ್ನುವುದನ್ನು ಸ್ವತಃ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಭ್ರಷ್ಟಾಚಾರ ನಿಗ್ರಹ ದಳದ (ACB) 310 ಜನ ಅಧಿಕಾರಿಗಳು ನಿನ್ನೆ ದಿನಪೂರ್ತಿ ದಾಳಿ ನಡೆಸಿ ಭ್ರಷ್ಟರ ಬೇಟೆಯಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ 43 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ರಾಜ್ಯದ ಪ್ರಮುಖ ಅಧಿಕಾರಿ ವರ್ಗದ 9 ಮಂದಿ ಅಧಿಕಾರಿಗಳ ಆಸ್ತಿಪಾಸ್ತಿಯನ್ನು ಜಾಲಾಡಿದ್ದಾರೆ.

ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ ಸಿಕ್ಕಿದೆ..?

 1. ಜಿ ಶ್ರೀಧರ್, ಕಾರ್ಯಪಾಲಕ ಅಭಿಯಂತರ
  ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು

ಆಸ್ತಿ
ಮೈಸೂರಿನಲ್ಲಿ ಒಂದು ಮನೆ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಒಂದು ಮನೆ
ವಿವಿಧ ನಗರಗಳಲ್ಲಿ ನಾಲ್ಕು ನಿವೇಶನಗಳು, ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್,
ಇನ್ಶೂರೆನ್ಸ್, ಡೆಪಾಸಿಟ್ ಬಾಂಡ್​ಗಳು ಪತ್ತೆ, ಒಂದು ಕಾರು, ಎರಡು ದ್ವಿಚಕ್ರ,
ಚಿನ್ನ ಬೆಳ್ಳಿ ಆಭರಣಗಳು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ

 1. ಸುರೇಶ್, JE ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗ
  ಬಸವ ಕಲ್ಯಾಣ, ಬೀದರ್ ಜಿಲ್ಲೆ

ಆಸ್ತಿ
ಬಸವ ಕಲ್ಯಾಣದಲ್ಲಿ ಒಂದು ಮನೆ
ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಒಂದು ಪೆಟ್ರೋಲ್ ಬಂಕ್
ನಾಲ್ಕು‌ ನಿವೇಶನ, ವಿವಿಧ ಬ್ಯಾಂಕ್ ಗಳಲ್ಲಿ ಎಫ್​ಡಿ,
ಬೆಲೆ ಬಾಳುವ ಚಿನ್ನಾಭರಣ, ಒಂದು‌ ದ್ವಿಚಕ್ರ ವಾಹನ

 1. ಆರ್.ಪಿ ಕುಲಕರ್ಣಿ, ಪ್ರಧಾನ ಎಂಜಿನಿಯರ್
  ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು

ಆಸ್ತಿ:
ಬೆಂಗಳೂರಲ್ಲಿ ಒಂದು ಮನೆ, ನಾಲ್ಕು ಫ್ಲಾಟ್, ವಿವಿಧ ಕಡೆ 3 ನಿವೇಶನ
ಎರಡು ಕಾರು, ಒಂದು‌ ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು
ಬ್ಯಾಂಕ್‌ ಖಾತೆಗಳಲ್ಲಿ ಠೇವಣಿಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತು

 1. ಎ. ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕ
  ಕೋರಮಂಗಲ, ಆರ್​ಟಿಒ ಕಚೇರಿ, ಬೆಂಗಳೂರು.

ಆಸ್ತಿ:
ಬೆಂಗಳೂರಿನ ಹಂಪಿನಗರದಲ್ಲಿ ಒಂದು ಮನೆ
ದೊಮ್ಮಲೂರಿನಲ್ಲಿ ಒಂದು‌ ಮನೆ
ಬೆಂಗಳೂರಿನಲ್ಲಿ ಒಂದು ಶಾಲಾ ಕಟ್ಟಡ
ತುಮಕೂರಿನ ಕೊರಟಗೆರೆಯಲ್ಲಿ ಫಾರ್ಮ್ ಹೌಸ್
ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 30 ಸೈಟ್
ಚಿನ್ನ ಬೆಳ್ಳಿ ಆಭರಣಗಳು, ವಿವಿಧ ಕಡೆ 82 ಎಕರೆ ಕೃಷಿ ಭೂಮಿ
ನಾಲ್ಕು ದ್ವಿಚಕ್ರ ವಾಹನ, ಮೂರು‌ ಕಾರುಗಳು,
ಒಂದು ಟೆಂಪೋ ಮ್ಯಾಕ್ಸ್ ಕ್ಯಾಬ್ ಪತ್ತೆ

 1. ಕೃಷ್ಣ ಎಸ್ ಹೆಬ್ಬೂರು, ಕಾರ್ಯ ನಿರ್ವಾಹಕ ಅಭಿಯಂತರ
  ಕೆಆರ್​ಐಡಿಎಲ್, ಉಡುಪಿ ಜಿಲ್ಲೆ‌

  ಆಸ್ತಿ:
  ಉಡುಪಿಯಲ್ಲಿ ಒಂದು ಮನೆ, ಬೆಂಗಳೂರಿನ ಜಿಗಣಿಯಲ್ಲಿ ಒಂದು ಮನೆ
  ಹುಬ್ಬಳ್ಳಿಯಲ್ಲಿ ಒಂದು ಮನೆ‌
  ಉಡುಪಿ ಜಿಲ್ಲೆ ಶಿವಳ್ಳಿ ಗ್ರಾಮದಲ್ಲಿ 15.66 ಸೆಂಟ್ಸ್ ನಿವೇಶನ
  ಎರಡು ದ್ವಿಚಕ್ರ ವಾಹನ, ಒಂದು ‌ಕಾರು, ಚಿನ್ನ, ಬೆಳ್ಳಿ ಆಭರಣಗಳು
  ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

6. ಟಿ. ವೆಂಕಟೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಸಾಮಾಜಿಕ ಅರಣ್ಯ, ಮಂಡ್ಯ ಜಿಲ್ಲೆ

ಆಸ್ತಿ:
ಮೈಸೂರು ನಗರದಲ್ಲಿ ಎರಡು ಮನೆ
ವಿವಿಧ ನಗರಗಳಲ್ಲಿ 9 ನಿವೇಶನ
12 ಎಕರೆ ಕೃಷಿ ಜಮೀನು, ಒಂದು ಕಾರು
ಮೂರು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು
ನಗದು ಹಣ, ಬೆಲೆ ಬಾಳುವ ಗೃಹೋಪಯೋಗಿ ವಸ್ತು

 1. ಹೆಚ್.ಆರ್ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕರು
  ಮಾಲೂರು ಟೌನ್ ಫ್ಲಾನಿಂಗ್ ಅಥಾರಿಟಿ, ಕೋಲಾರ‌ ಜಿಲ್ಲೆ

  ಆಸ್ತಿ:
  ಬೆಂಗಳೂರು, ಶಿವಮೊಗ್ಗ, ದಾವಣಗೆರೆಯಲ್ಲಿ ಒಂದೊಂದು ಮನೆ
  ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ನಾಲ್ಕು ನಿವೇಶನ
  ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು
  ಎರಡು ದ್ವಿಚಕ್ರ ವಾಹನ, ಒಂದು ಕಾರು
  ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತು
 1. ಸಿದ್ದರಾಮ ಮಲ್ಲಿಕಾರ್ಜುನ ಬೀರದಾರ
  AEE, ಒನ್ 10 ಕೆವಿ ನೋಡಲ್ ಅಧಿಕಾರಿ
  ಕೆಪಿಟಿಸಿಎಲ್, ಪ್ರಭಾರಿ EE – ವಿಜಯಪುರ

ಆಸ್ತಿ:
ವಿಜಯಪುರದಲ್ಲಿ ಮೂರು ವಾಸದ ಮನೆ
ರಾಜ್ಯದ ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನ
35 ಎಕರೆ ಕೃಷಿ ಜಮೀನು
ಒಂದು ಕಾರು, ಎರಡು ದ್ವಿಚಕ್ರ ವಾಹನ,
ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತು

 1. ಎ. ಎನ್‌. ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್
  ಜೆಸ್ಕಾಂ, ಬಳ್ಳಾರಿ

ಆಸ್ತಿ:
ಬೆಂಗಳೂರು, ಬಳ್ಳಾರಿಯಲ್ಲಿ ತಲಾ ಒಂದರಂತೆ ಮನೆ
ವಿವಿಧ ನಗರಗಳಲ್ಲಿ ಎಂಟು ನಿವೇಶನ
ಎರಡು ಕಾರು, ಒಂದು ದ್ವಿಚಕ್ರ ವಾಹನ
ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತು

Related Posts

Don't Miss it !